SIR : ಜಿಲ್ಲೆಯಲ್ಲಿ 107,614 ಗಣತಿ ನಮೂನೆ ವಿತರಣೆ

ಉಡುಪಿ : ಜಿಲ್ಲೆಯಲ್ಲಿ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆಯು ವ್ಯವಸ್ಥಿತವಾಗಿ ನಡೆಯುತ್ತಿದ್ದು, ಮತದಾರರಿಗೆ ಎನ್ಯೂಮರೇಶನ್ ಫಾರ್ಮ್‌ಗಳನ್ನು (EF) ವಿತರಿಸಲು ಬೂತ್ ಮಟ್ಟದ ಅಧಿಕಾರಿಗಳು (BLO) ಮನೆ ಮನೆಗೆ ಭೇಟಿ ನೀಡುತ್ತಿದ್ದಾರೆ. ಜುಲೈ 2ರ ಹೊತ್ತಿಗೆ ಉಡುಪಿ ಜಿಲ್ಲೆಯಲ್ಲಿ ಒಟ್ಟು 10,63,876 ಎನ್ಯೂಮರೇಶನ್ ಫಾರ್ಮ್‌ಗಳನ್ನು ಮುದ್ರಿಸಲಾಗಿದ್ದು, ಈವರೆಗೆ 107,614 ಫಾರ್ಮ್‌ಗಳನ್ನು ಮತದಾರರಿಗೆ ವಿತರಿಸಿ, ಶೇ.10.12% ಪ್ರಗತಿಯನ್ನು ಸಾಧಿಸಲಾಗಿರುತ್ತದೆ.

ಪ್ರತಿ ಬೂತ್ ಮಟ್ಟದ ಅಧಿಕಾರಿಯು ಸರಾಸರಿ 97 ಫಾರ್ಮ್‌ಗಳನ್ನು ವಿತರಿಸಿದ್ದಾರೆ. ಒಟ್ಟು 8703 ಎನ್ಯೂಮರೇಶನ್ ಫಾರ್ಮ್ಗಳನ್ನು ಡಿಜಿಟಲೀಕರಣಗೊಳಿಸಲಾಗಿದ್ದು, ಇದು 0.82% ಸಾಧನೆಯಾಗಿದೆ. ಒಟ್ಟು 8,167 ಫಾರ್ಮ್ಗಳನ್ನು ಬೂತ್ ಮಟ್ಟದ ಅಧಿಕಾರಿಗಳು ಅಧಿಕೃತವಾಗಿ ಪರಿಶೀಲಿಸಿದ್ದಾರೆ.
ಹೆಚ್ಚುವರಿಯಾಗಿ, 4,354 ಫಾರ್ಮ್‌ಗಳನ್ನು ಸ್ವಯಂ (Self) ಎಂದು ಮತ್ತು 3,789 ಫಾರ್ಮ್‌ಗಳನ್ನು ಸಂತತಿ (Progeny) ಎಂದು ಮ್ಯಾಪಿಂಗ್ ಮಾಡಲಾಗಿರುತ್ತದೆ. 535 ಎನ್ಯೂಮರೇಶನ್ ಫಾರ್ಮ್ಗಳನ್ನು ಮತದಾರರು ನೇರವಾಗಿ ಆನ್‌ಲೈನ್ ಮೂಲಕ ಸಲ್ಲಿಸಿದ್ದಾರೆ.

ಮನೆ ಮನೆಗೆ ಭೇಟಿ ನೀಡುವ ಎನ್ಯೂಮರೇಶನ್ ಪ್ರಕ್ರಿಯೆ ಮತ್ತು ಡಿಜಿಟಲೀಕರಣವು ಜು. 29 ರಂದು ಪೂರ್ಣಗೊಳ್ಳಲಿದೆ. ಮತದಾರರ ಪಟ್ಟಿಯ ನಿಖರತೆ ಮತ್ತು ಸಮಗ್ರತೆಯನ್ನು ಕಾಪಾಡಿಕೊಳ್ಳಲು, ಬೂತ್ ಮಟ್ಟದ ಅಧಿಕಾರಿಗಳು ಮನೆಗೆ ಭೇಟಿ ನೀಡಿದಾಗ ಸಾರ್ವಜನಿಕರು ಸಹಕರಿಸಬೇಕೆಂದು ಜಿಲ್ಲಾಡಳಿತವು ಕೋರಿದೆ

ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯದಲ್ಲಿ ಪಾಲ್ಗೊಳ್ಳುತ್ತಿರುವ ಮತ್ತು ಕ್ಷೇತ್ರ ಮಟ್ಟದಲ್ಲಿ ವ್ಯಾಪಕವಾಗಿ ಮನೆ ಮನೆಗೆ ಭೇಟಿ ನೀಡುತ್ತಿರುವ ಬೂತ್ ಮಟ್ಟದ ಅಧಿಕಾರಿಗಳ (BLO) ಕಲ್ಯಾಣ ಹಾಗೂ ಅನುಕೂಲಕ್ಕಾಗಿ ಸರ್ಕಾರವು ಸಿ.ಆ.ಸು.ಇ (ಇ-ಆಡಳಿತ) ಇಲಾಖೆಯು ಕರ್ತವ್ಯ (Kartavya) ಮೊಬೈಲ್ ಆಪ್ಲಿಕೇಶನ್ ಅಡಿಯಲ್ಲಿ ಸೌಲಭ್ಯವನ್ನು ಒದಗಿಸಿದೆ. ಕ್ಷೇತ್ರ ಕರ್ತವ್ಯದಲ್ಲಿರುವ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಕೇವಲ ಹಾಜರಾತಿ ದಾಖಲಿಸುವ ಉದ್ದೇಶಕ್ಕಾಗಿ ತಮ್ಮ ನಿಯಮಿತ ಕಚೇರಿಗಳಿಗೆ ಭೌತಿಕವಾಗಿ ಹಾಜರಾಗುವ ಅಗತ್ಯವಿರುವುದಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಕರ್ತವ್ಯ ಆಪ್‌ನಲ್ಲಿ ಲಭ್ಯವಿರುವ OOD ಆಯ್ಕೆಯನ್ನು ಬಳಸಿಕೊಂಡು ತಮ್ಮ ಹಾಜರಾತಿಯನ್ನು ಸುಲಭವಾಗಿ ದಾಖಲಿಸಬಹುದಾಗಿದೆ. ಎಲ್ಲಾ ಬೂತ್ ಮಟ್ಟದ ಅಧಿಕಾರಿಗಳು ಇದರ ಸೌಲಭ್ಯವನ್ನು ಪಡೆದುಕೊಳ್ಳಲು ಮಾನ್ಯ ಮುಖ್ಯ ಚುನಾವಣಾಧಿಕಾರಿಗಳು ನಿರ್ದೇಶಿಸಿರುವುದಾಗಿ ಜಿಲ್ಲಾ ಚುನಾವಣಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ಸ್ವರೂಪ ಟಿ. ಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.































error: Content is protected !!
Scroll to Top