ಮೊದಲ ರಾತ್ರಿಯೇ ನವದಂಪತಿ ಹೃದಯಾಘಾತಕ್ಕೆ ಬಲಿ
ಯುವಕ-ಯುವತಿ ಸಾವಿನಿಂದ ಊರಿಡೀ ಆಘಾತ ಲಖನೌ: ನವದಂಪತಿ ಮೊದಲ ರಾತ್ರಿಯೇ ಹೃದಯಾಘಾತಕ್ಕೆ ಬಲಿಯಾದ ಆಘಾತಕಾರಿ ಘಟನೆಯೊಂದು ಉತ್ತರ ಪ್ರದೇಶದ ಬಹ್ರೈಚ್ ಜಿಲ್ಲೆಯಲ್ಲಿ ನಡೆದಿದೆ. ಶೋಭನಕ್ಕೆಂದು ಕೊಠಡಿ ಸೇರಿದ್ದ ನವ ವಿವಾಹಿತರು ಮರದಿನ ಹೊರಬಂದದ್ದು ಶವಗಳಾಗಿ.ಅವರ ದಿಢೀರ್ ಸಾವು ಹಲವು ಅನುಮಾನಗಳಿಗೆ ಕಾರಣವಾಗಿದ್ದವು. ಆದರೆ ಮದುಮಗ ಮತ್ತು ಮದುಮಗಳು ಇಬ್ಬರೂ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಮರಣೋತ್ತರ ಪರೀಕ್ಷೆ ವರದಿ ಹೇಳಿದೆ.22 ವರ್ಷದ ಪ್ರತಾಪ್ ಯಾದವ್ ಹಾಗೂ 20 ವರ್ಷದ ಪುಷ್ಪಾ ಅವರ ಮದುವೆ ಮೇ 30ರಂದು ನಡೆದಿತ್ತು. ಮದುವೆ …