ಶುಭವಿವಾಹ

ನ್ಯೂಸ್‌ ಕಾರ್ಕಳ.ಕಾಂನ ಶುಭ-ವಿವಾಹ ಅಂಕಣಕ್ಕೆ ಇತ್ತೀಚಿಗೆ ಗೃಹಸ್ಥ ಜೀವನಕ್ಕೆ ಕಾಲಿಟ್ಟ ದಂಪತಿಗಳ ಚಿತ್ರವನ್ನು ಸೂಕ್ತ ವಿವರಗಳೊಂದಿಗೆ nk.newskarkala@gmail.com  ಇಮೇಲ್‌ ವಿಳಾಸಕ್ಕೆ ಕಳುಹಿಸಿಕೊಡಿ.

ಉಡುಪಿ ಅದಮಾರು ಮಠದ ಸಂಪ್ರದಾಯದ ಪ್ರಕಾರ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಪುತ್ರಿ ವಿವಾಹ

ಬೆಂಗಳೂರು : ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಪುತ್ರಿ ವಾಙ್ಮಯಿ ಅವರ ವಿವಾಹ ಪ್ರತೀಕ್ ಎಂಬವರ ಜೊತೆ ಉಡುಪಿಯ ಅದಮಾರು ಮಠದ ಬ್ರಾಹ್ಮಣ ಸಂಪ್ರದಾಯ ಪ್ರಕಾರ ವಿವಾಹ ಮತ್ತು ಆರತಕ್ಷತೆ ಬೆಂಗಳೂರಿನಲ್ಲಿ ನೆರವೇರಿತು. ಅದಮಾರು ಮಠದ ವಿಶ್ವಪ್ರಿಯ ತೀರ್ಥ ಶ್ರೀಪಾದರು ಮತ್ತು ಈಶಪ್ರಿಯ ತೀರ್ಥ ಶ್ರೀಪಾದರು ವಧು – ವರರನ್ನು ಹರಸಿ ಕಳುಹಿಸಿದ ಮಧುಪರ್ಕ, ಸೀರೆ, ಶಾಲು, ಗಂಧ ಪ್ರಸಾದವನ್ನು ಮಠದ ವ್ಯವಸ್ಥಾಪಕ ಗೋವಿಂದ ರಾಜರು ಮತ್ತು ಶಿಷ್ಯರು ಮಂತ್ರಘೋಷದ ಮೂಲಕ ನೀಡಿ ಹರಸಿದರು. …

ಉಡುಪಿ ಅದಮಾರು ಮಠದ ಸಂಪ್ರದಾಯದ ಪ್ರಕಾರ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಪುತ್ರಿ ವಿವಾಹ Read More »

ಮೇ 3 ರಂದು ಧರ್ಮಸ್ಥಳದಲ್ಲಿ ಉಚಿತ ಸಾಮೂಹಿಕ ವಿವಾಹ

ಉಜಿರೆ : ಧರ್ಮಸ್ಥಳದಲ್ಲಿ ಮೇ 3 ರಂದು ಸಂಜೆ ಗಂಟೆ 6.40ಕ್ಕೆ ಗೋಧೂಳಿ ಲಗ್ನ ಸುಮುಹೂರ್ತದಲ್ಲಿ 51ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭ ನಡೆಯಲಿದೆ. ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನದ ಎದುರು ಇರುವ ಪ್ರವಚನ ಮಂಟಪದಲ್ಲಿ ಶನಿವಾರ ವಿವಾಹ ನೋಂದಣಿ ಕಾರ್ಯಾಲಯವನ್ನು ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆಯವರ ಆಪ್ತ ಕಾರ್ಯದರ್ಶಿ ಎ.ವಿ. ಶೆಟ್ಟಿ ಉದ್ಘಾಟಿಸಿ ಶುಭ ಹಾರೈಸಿದರು. ವರನಿಗೆ ಧೋತಿ ಮತ್ತು ಶಾಲು ಹಾಗೂ ವಧುವಿಗೆ ಸೀರೆ, ರವಿಕೆಕಣ, ಮಂಗಳಸೂತ್ರ ನೀಡಲಾಗುವುದು. ಎರಡನೇ ವಿವಾಹಕ್ಕೆ ಅವಕಾಶ ಇರುವುದಿಲ್ಲ. …

ಮೇ 3 ರಂದು ಧರ್ಮಸ್ಥಳದಲ್ಲಿ ಉಚಿತ ಸಾಮೂಹಿಕ ವಿವಾಹ Read More »

ಗಂಗಾಧರ – ಕೃತಿಕಾ

ಕರಿಂಜೆಯ ದಿ. ವಸಂತ ಪೂಜಾರಿ ಮತ್ತು ನಿಟ್ಟೆ ನಡಿಮನೆ ಸುಜಾತಾ ವಿ. ಪೂಜಾರಿ ಪುತ್ರ ಗಂಗಾಧರ ಅವರ ವಿವಾಹವು ಮೂಡುಕುದ್ರು ಕಲ್ಯಾಣ್ ಪುರ ಕೇಶವ ಜತ್ತನ್ ರವರ ಪುತ್ರಿ ಕೃತಿಕಾ ಅವರೊಂದಿಗೆ ನ. 19 ರಂದು ಉಡುಪಿಯ ಕರಾವಳಿ ಬೈಪಾಸಿನ ಶಾರದಾ ಇಂಟರ್ ನ್ಯಾಶನಲ್ ಹೊಟೇಲ್ ನಲ್ಲಿ ಜರಗಿತು.

ವಿಶಾಲ್‌ -ಸ್ವಪ್ನ

ಕಾರ್ಕಳ : ಬೋಳ ಗ್ರಾಮದ ಜಯರಾಮ ಸಾಲಿಯಾನ್‌ ಅವರ ಪುತ್ರ ವಿಶಾಲ್‌ ಸಾಲಿಯಾನ್ ವಿವಾಹವು ಸುರತ್ಕಲ್‌ ಕೃಷ್ಣಪುರ ಪದ್ಮನಾಭ ಪೂಜಾರಿಯವರ ಪುತ್ರಿ ಸ್ವಪ್ನರವರೊಂದಿಗೆ ನ. 4ರಂದು ಕಾರ್ಕಳ ಬಾಹುಬಲಿ ಪ್ರವಚನ ಮಂದಿರದಲ್ಲಿ ನಡೆಯಿತು.

ಸಂಪತ್‌ ಕುಮಾರ್-ಸೌಮ್ಯಾ

ಶಿರ್ಲಾಲು ದಿ. ಉದಯಕುಮಾರ್‌ ಅವರ ಪುತ್ರಿ ಸೌಮ್ಯಾ ಅವರ ವಿವಾಹವು ಶಿವಮೊಗ್ಗದ ಸುಕುಮಾರ್‌ ಜೈನ್‌ ಅವರ ಪುತ್ರ ಸಂಪತ್‌ ಕುಮಾರ್‌ ಅವರೊಂದಿಗೆ ಜೂ. 29ರಂದು ಶಿರ್ಲಾಲು ಸಿದ್ಧಲಕ್ಷ್ಮಿ ಸಭಾಭವನದಲ್ಲಿ ನೆರವೇರಿತು.

ಸಂದೀಪ್‌-ಅಕ್ಷತಾ

ಕಾರ್ಕಳದ  ನೂರಾಲ್ ಬೆಟ್ಟು ದಿ. ಕುಮಾರಯ್ಯ ಕಡಂಬ ಅವರ ಪುತ್ರ ಸಂದೀಪ್ ಅವರ ವಿವಾಹವು ಹಾವೇರಿ ದಿ. ಶೇಖಪ್ಪ  ಅವರ ಪುತ್ರಿ ಅಕ್ಷತಾ ಅವರೊಂದಿಗೆ ನಲ್ಲೂರು ಬಸದಿಯಲ್ಲಿ ಜು. 8ರಂದು ನೆರವೇರಿತು.

ಪ್ರಶಾಂತ-ಚಿತ್ರ

ಹೆಬ್ರಿ ತಾ. ಮುದ್ರಬೆಟ್ಟು ರಾಮ ಪೂಜಾರಿಯವರ ಪುತ್ರ ಪ್ರಶಾಂತ ಅವರ ವಿವಾಹವು ಹೆಬ್ರಿ ವಿಠಲ ಪೂಜಾರಿ ಅವರ ಪುತ್ರಿ ಚಿತ್ರಾರವರೊಂದಿಗೆ ಹೆಬ್ರಿ ಅನಂತಪದ್ಮನಾಭ ದೇಗುಲದಲ್ಲಿ ಜೂ. 24ರಂದು ನೆರವೇರಿತು.

ರಾಜೇಶ್‌-ಅಪೂರ್ವ

ಕಾರ್ಕಳ ದಾನಶಾಲೆ ಡಾ. ಭರತೇಶ್‌ ಅವರ ಪುತ್ರಿ ಅಪೂರ್ವಾ ಅವರ ವಿವಾಹವು ಉಜಿರೆ ಧರ್ಮಪಾಲ ಸೇಮಿತ ಅವರ ಪುತ್ರ ಪಿ.ರಾಜೇಶ್‌ ಅವರೊಂದಿಗೆ  ಜು. 12 ರಂದು ವಧುವಿನ ಮನೆಯಲ್ಲಿ ನೆರವೇರಿತು.

error: Content is protected !!
Scroll to Top