ದೇಶ

ರಾಜ್ಯಕ್ಕೆ ಕೇಂದ್ರದ ಎಲ್ಲ ಹಣ ನೀಡಲಾಗಿದೆ : ನಿರ್ಮಲಾ ಸೀತಾರಾಮನ್‌

ಬೆಂಗಳೂರು: ಕೇಂದ್ರ ಸರ್ಕಾರದಿಂದ ಕರ್ನಾಟಕಕ್ಕೆ ಯಾವುದೇ ಬಾಕಿ ಉಳಿದಿಲ್ಲ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸ್ಪಷ್ಟಪಡಿಸಿದ್ದಾರೆ. ಕೇಂದ್ರ ಕರ್ನಾಟಕಕ್ಕೆ ತಾರತಮ್ಯ ಮಾಡುತ್ತಿದೆ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಯನ್ನು ತಿರಸ್ಕರಿಸಿರುವ ಸಚಿವೆ ರಾಜ್ಯಕ್ಕೆ ಬರ ಪರಿಹಾರವಾಗಿ ಬರಬೇಕಾದ ಎನ್‌ಡಿಆರ್‌ಎಫ್ ಹಣ ಬಿಡುಗಡೆಗೆ ಒಂದು ಕಮಿಟಿ ಇದೆ. ಅದು ನಿರ್ಧಾರ ಮಾಡುತ್ತದೆ ಎಂದು ತಿಳಿಸಿದರು. ನರೇಂದ್ರ ಮೋದಿಯವರು ಪ್ರಧಾನಿ ಆಗುವ ಮುನ್ನ 10 ವರ್ಷ ಗುಜರಾತ್ ಮುಖ್ಯಮಂತ್ರಿ ಆಗಿದ್ದವರು. ಹೀಗಾಗಿ ಅವರಿಗೆ ಕೇಂದ್ರದಿಂದ ಹಣವನ್ನು ಸೂಕ್ತ ಕಾಲಕ್ಕೆ …

ರಾಜ್ಯಕ್ಕೆ ಕೇಂದ್ರದ ಎಲ್ಲ ಹಣ ನೀಡಲಾಗಿದೆ : ನಿರ್ಮಲಾ ಸೀತಾರಾಮನ್‌ Read More »

ಶಬರಿಮಲೆಯಲ್ಲಿ ಶೌಚಾಲಯದ ನೀರಿನಲ್ಲಿ ಅಡುಗೆ ತಯಾರಿಸಿದ ಹೋಟೆಲ್‌

ಭಕ್ತರಿಗೆ ಎರಡು ವಾರದಿಂದ ಕೊಳಕು ನೀರಿನ ತಿಂಡಿ ತಿನಿಸು ಶಬರಿಮಲೆ : ಶಬರಿಮಲೆಯ ಹಾದಿಯಲ್ಲಿರುವ ಹೋಟೆಲೊಂದರಲ್ಲಿ ಶೌಚಾಲಯದ ನೀರು ಬಳಸಿ ಅಡುಗೆ ಮಾಡುತ್ತಿರುವುದು ಪತ್ತೆಯಗಿದ್ದು, ಇದು ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.ಎರುಮೇಲಿಯಲ್ಲಿರುವ ಹೋಟೆಲೊಂದರಲ್ಲಿ ಶೌಚಾಲಯದ ನೀರು ಬಳಸಿ ಶಬರಿಮಲೆ ಯಾತ್ರೆ ಶುರುವಾದ ಎರಡು ವಾರದಿಂದ ಅಡುಗೆ ಮಾಡಲಾಗುತ್ತಿತ್ತು. ನಿನ್ನೆ ಅಯ್ಯಪ್ಪ ಸೇವಾ ಸಂಘದವರು ಹೋಟೆಲುಗಳ ಆಹಾರದ ಗುಣಮಟ್ಟ ಮತ್ತು ನೈರ್ಮಲ್ಯವನ್ನು ಪರಿಶಿಲಿಸುತ್ತಿದ್ದಾಗ ಎರುಮೇಲಿಯಲ್ಲಿರುವ ಒಂದು ಹೋಟೆಲ್‌ ನೇರವಾಗಿ ಶೌಚಾಲಯದ ನೀರು ಬಳಸುತ್ತಿರುವುದು ಪತ್ತೆಯಾಗಿದೆ.ಡಿವೈಎಫ್‌ಐಯ ಎರುಮೇಲಿ ವಲಯ ಕಾರ್ಯದರ್ಶಿಯಾಗಿರುವ ಅಬ್ದುಲ್‌ …

ಶಬರಿಮಲೆಯಲ್ಲಿ ಶೌಚಾಲಯದ ನೀರಿನಲ್ಲಿ ಅಡುಗೆ ತಯಾರಿಸಿದ ಹೋಟೆಲ್‌ Read More »

ಸುರಂಗದಲ್ಲಿ ಸಿಲುಕಿದ್ದ 41 ಕಾರ್ಮಿಕರ ರಕ್ಷಣೆ ದೇಶಕ್ಕೆ ಭಾವುಕ ಕ್ಷಣ : ಮೋದಿ

ಕಾರ್ಮಿಕರ ಜತೆ ಫೋನಿನಲ್ಲಿ ಮಾತನಾಡಿದ ಪ್ರಧಾನಿ ಹೊಸದಿಲ್ಲಿ : ಉತ್ತರಾಖಂಡದ ಸಿಲ್ಕ್ಯಾರಾ ಸುರಂಗದಲ್ಲಿ ಸಿಲುಕಿದ್ದ 41 ಕಾರ್ಮಿಕರನ್ನು ಯಶಸ್ವಿಯಾಗಿ ರಕ್ಷಣೆ ಮಾಡಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹರ್ಷ ವ್ಯಕ್ತಪಡಿಸಿದ್ದಾರೆ. ಸುರಂಗದೊಳಗೆ ಸಿಲುಕಿದ್ದ ಕಾರ್ಮಿಕರ ತಾಳ್ಮೆ, ಧೈರ್ಯವನ್ನು ಕೊಂಡಾಡಿ ಟ್ವೀಟ್‌ ಮಾಡಿರುವ ಮೋದಿ, ಇದೊಂದು ಭಾವುಕ ಕ್ಷಣ ಎಂದು ಬಣ್ಣಿಸಿದ್ದಾರೆ. ಅಲ್ಲದೆ, 17 ದಿನಗಳ ನಂತರ ತಮ್ಮವರನ್ನು ಕಾಣುತ್ತಿರುವ ಕಾರ್ಮಿಕರಿಗೆ ಶುಭ ಕೋರಿದ್ದಾರೆ.ಉತ್ತರಕಾಶಿಯ ಸಿಲ್ಕ್ಯಾರಾ-ಬರ್ಕೋಟ್ ಸುರಂಗದಲ್ಲಿ …

ಸುರಂಗದಲ್ಲಿ ಸಿಲುಕಿದ್ದ 41 ಕಾರ್ಮಿಕರ ರಕ್ಷಣೆ ದೇಶಕ್ಕೆ ಭಾವುಕ ಕ್ಷಣ : ಮೋದಿ Read More »

ಕೊನೆಗೂ ಸುರಂಗದಲ್ಲಿ ಸಿಲುಕಿದ್ದ 41 ಕಾರ್ಮಿಕರ ರಕ್ಷಣೆ

ದೇಶದ ಇತಿಹಾಸದಲ್ಲೇ‌ ಬಹುದೊಡ್ಡ ಕಾರ್ಯಾಚರಣೆ ಉತ್ತರಕಾಶಿ  : ಉತ್ತರಾಖಂಡ ಸಿಲ್ಕ್ಯಾರಾ ಸುರಂಗದಲ್ಲಿ ಸಿಲುಕಿದ್ದ 41 ಕಾರ್ಮಿಕರಿಗಾಗಿ 17 ದಿನಗಳ ಸುದೀರ್ಘ ಕಾಯುವಿಕೆ ಇಂದು ಕೊನೆಗೊಂಡಿತು. ಸಂಜೆ 7.50ಕ್ಕೆ ಮೊದಲ ಕಾರ್ಮಿಕ ಹೊರಗೆ ಬಂದಿದ್ದು, ಇತ್ತ ಕಾರ್ಮಿಕರ ಕುಟುಂಬಗಳಲ್ಲಿ ಸಂಭ್ರಮ ಮುಗಿಲುಮುಟ್ಟಿದೆ. ಅವಶೇಷಗಳ ನಡುವೆ ಸಾಗಿಸಿದ್ದ ಪೈಪ್ ಮೂಲಕ ಮೊದಲ ಕಾರ್ಮಿಕನನ್ನು ಹೊರಗೆ ಕರೆತರಲಾಗಿದೆ. ಸುರಂಗದ ಒಳಗಿನ ಕತ್ತಲಿನಲ್ಲಿ ಹಾಗೂ ಚಿಕ್ಕ ಜಾಗದಲ್ಲಿ, ಕುಟುಂಬದವರಿಂದ ದೂರವಿದ್ದು, ಆತಂಕದಲ್ಲಿಯೇ 17 ದಿನಗಳನ್ನು ಕಳೆದ ಕಾರ್ಮಿಕರ ಮಾನಸಿಕ ಸಾಮರ್ಥ್ಯವನ್ನು ಉಳಿಸಿಕೊಂಡಿರುವುದು ಪವಾಡದಂತಿದೆ. …

ಕೊನೆಗೂ ಸುರಂಗದಲ್ಲಿ ಸಿಲುಕಿದ್ದ 41 ಕಾರ್ಮಿಕರ ರಕ್ಷಣೆ Read More »

ಸಲ್ಮಾನ್‌ ಖಾನ್‌ಗೆ ಆಪ್ತನಾಗಿರುವ ಗಾಯಕನ ಮನೆ ಮೇಲೆ ಗುಂಡಿನ ದಾಳಿ

ನಮ್ಮ ಗುರಿ ಸಲ್ಮಾನ್‌ ಖಾನ್‌ ಎಂದು ಎಚ್ಚರಿಕೆ ಕೊಟ್ಟ ಲಾರೆನ್ಸ್‌ ಬಿಷ್ಣೋಯ್‌ ಮುಂಬಯಿ : ನಟ ಸಲ್ಮಾನ್‌ ಖಾನ್‌ಗೆ ಆತ್ಮೀಯರಾಗಿರುವ ಗಾಯಕ ಗಿಪ್ಪಿ ಗ್ರೆವಾಲ್‌ ಅವರ ಕೆನಡಾದ ವ್ಯಾಂಕೋವರ್‌ನಲ್ಲಿರುವ ಮನೆಯ ಮೇಲೆ ಗುಂಡಿನ ದಾಳಿ ನಡೆದಿರುವುದು ಬಾಲಿವುಡ್‌ನಲ್ಲಿ ಆತಂಕ ಹುಟ್ಟಿಸಿದೆ.ಪಂಜಾಬಿ ಗಾಯಕ ಗಿಪ್ಪಿ ಗ್ರೆವಾಲ್ ಅವರ ಮನೆಯ ಮೇಲೆ ಗುಂಡಿನ ದಾಳಿ ಮಾಡಲಾಗಿದೆ. ಕುಖ್ಯಾತ ಗ್ಯಾಂಗ್​ಸ್ಟರ್​ ಲಾರೆನ್ಸ್​ ಬಿಷ್ಣೋಯಿ ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಈ ಕೃತ್ಯಕ್ಕೆ ತಾನೇ ಹೊಣೆಗಾರ ಎಂದು ಹೇಳಿಕೊಂಡಿದ್ದಾನೆ.ಬಾಲಿವುಡ್​ ನಟ ಸಲ್ಮಾನ್ ಖಾನ್ ಜೊತೆ …

ಸಲ್ಮಾನ್‌ ಖಾನ್‌ಗೆ ಆಪ್ತನಾಗಿರುವ ಗಾಯಕನ ಮನೆ ಮೇಲೆ ಗುಂಡಿನ ದಾಳಿ Read More »

ದೇಶದಲ್ಲೇ ಮದುವೆಯಾಗಿ ದೇಶದ ಹಣ ಉಳಿಸಿ

ಮನ್‌ ಕಿ ಬಾತ್‌ನಲ್ಲಿ ಪ್ರಧಾನಿ ಮೋದಿ ಮನವಿ ಹೊಸದಿಲ್ಲಿ : ಮನ್‌ ಕಿ ಬಾತ್‌ನಲ್ಲಿ ಬೇರೆ ಬೇರೆ ವಿಚಾರಗಳ ಬಗ್ಗೆ ಮಾತನಾಡುವ ಪ್ರಧಾನಿ ನರೇಂದ್ರ ಮೋದಿ ಈ ಕಂತಿನಲ್ಲಿ ಮದುವೆ ವಿಚಾರದ ಬಗ್ಗೆ ಮಾತನಾಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ವಿದೇಶಕ್ಕೆ ಹೋಗಿ ಮದುವೆಯಾಗುವವರ ಸಂಖ್ಯೆ ಹೆಚ್ಚಾಗಿದೆ. ಇದು ಅಗತ್ಯವಿದೆಯೇ? ಭಾರತದ ನೆಲದಲ್ಲಿ, ಭಾರತದ ಜನರ ನಡುವೆ ಮದುವೆ ಮಾಡಿಕೊಂಡರೆ ದೇಶದ ಹಣ ದೇಶದಲ್ಲಿ ಉಳಿಯುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.107ನೇ ಮನ್​ ಕಿ ಬಾತ್ ಕಾರ್ಯಕ್ರಮದಲ್ಲಿ ಮಾತನಾಡಿದ …

ದೇಶದಲ್ಲೇ ಮದುವೆಯಾಗಿ ದೇಶದ ಹಣ ಉಳಿಸಿ Read More »

ನಿಯಮಗಳ ಉಲ್ಲಂಘಣೆ : ಮೂರು ಬ್ಯಾಂಕ್‌ಗಳಿಗೆ 10 ಕೋಟಿ ರೂ. ದಂಡ ವಿಧಿಸಿದ ಆರ್‌ಬಿಐ

ದೆಹಲಿ : ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ತನ್ನ ನಿಯಮಗಳನ್ನು ಉಲ್ಲಂಘಿಸಿದ ಮೂರು ಬ್ಯಾಂಕ್‌ಗಳಿಗೆ 10 ಕೋಟಿ ರೂ. ಗೂ ಹೆಚ್ಚಿನ ಮೊತ್ತದ ಭಾರೀ ದಂಡ ವಿಧಿಸಿದೆ.ಜಾಗತಿಕ ದೈತ್ಯ ಬ್ಯಾಂಕ್‌ ಸಿಟಿ ಬ್ಯಾಂಕ್‌ಗೆ ಆರ್‌ಬಿಐ ಗರಿಷ್ಠ 5 ಕೋಟಿ ರೂ. ದಂಡ ವಿಧಿಸಿದ್ದರೆ, ಸರಕಾರಿ ಸ್ವಾಮ್ಯದ ಬ್ಯಾಂಕ್‌ಗಳಾದ ಬ್ಯಾಂಕ್ ಆಫ್ ಬರೋಡಾಕ್ಕೆ 4.34 ಕೋಟಿ ರೂ. ಮತ್ತು ಇಂಡಿಯನ್ ಓವರ್‌ಸೀಸ್ ಬ್ಯಾಂಕ್‌ಗೆ 1 ಕೋಟಿ ರೂ. ದಂಡ ವಿಧಿಸಿದೆ. ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆಯನ್ನು ಉಲ್ಲಂಘಿಸಿದ ಕಾರಣಕ್ಕೆ ಖಾಸಗಿ …

ನಿಯಮಗಳ ಉಲ್ಲಂಘಣೆ : ಮೂರು ಬ್ಯಾಂಕ್‌ಗಳಿಗೆ 10 ಕೋಟಿ ರೂ. ದಂಡ ವಿಧಿಸಿದ ಆರ್‌ಬಿಐ Read More »

ಬೆಂಗಳೂರಿನಲ್ಲಿ ಲಘು ಯುದ್ಧ ವಿಮಾನ ತೇಜಸ್‌ಗೆ ಚಾಲನೆ ನೀಡಿದ ಪ್ರಧಾನಿ ಮೋದಿ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಇಂದು (ನ.25) ಬೆಂಗಳೂರಿನಲ್ಲಿ ಸ್ವದೇಶಿ ನಿರ್ಮಿತ ಲಘು ಯುದ್ಧ ವಿಮಾನ ತೇಜಸ್‌ಗೆ ಚಾಲನೆ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಬೆಂಗಳೂರು ಮೂಲದ ರಕ್ಷಣಾ ಪಿಎಸ್‌ಯು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‌ಗೆ ಭೇಟಿ ನೀಡಿದರು ಮತ್ತು ಅದರ ಉತ್ಪಾದನಾ ಘಟಕದಲ್ಲಿ ನಡೆಯುತ್ತಿರುವ ಕೆಲಸವನ್ನು ಪರಿಶೀಲಿಸಿದ್ದಾರೆ. “ತೇಜಸ್‌ನಲ್ಲಿ ವಿಹಾರವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಅನುಭವವು ನಂಬಲಾಗದಷ್ಟು ಶ್ರೀಮಂತವಾಗಿದೆ, ನಮ್ಮ ದೇಶದ ಸ್ಥಳೀಯ ಸಾಮರ್ಥ್ಯಗಳಲ್ಲಿ ನನ್ನ ವಿಶ್ವಾಸವನ್ನು ಗಮನಾರ್ಹವಾಗಿ ಹೆಚ್ಚಿಸಿದೆ ಮತ್ತು ನಮ್ಮ ರಾಷ್ಟ್ರೀಯ …

ಬೆಂಗಳೂರಿನಲ್ಲಿ ಲಘು ಯುದ್ಧ ವಿಮಾನ ತೇಜಸ್‌ಗೆ ಚಾಲನೆ ನೀಡಿದ ಪ್ರಧಾನಿ ಮೋದಿ Read More »

ಚೀನದಲ್ಲಿ ಇನ್ನೊಂದು ವೈರಸ್‌ ಸೋಂಕು

ಮಕ್ಕಳನ್ನೆ ಬಾಧಿಸುತ್ತಿದೆ H9n2 ಎಂಬ ನಿಗೂಢ ವೈರಸ್‌ ಹೊಸದಿಲ್ಲಿ : ಕೊರೋನ ವೈರಸ್‌ ಮೂಲಕ ಇಡೀ ಜಗತ್ತನ್ನೇ ಕಂಗೆಡಿಸಿದ್ದ ಚೀನದಲ್ಲಿ ಈಗ ಹೊಸದೊಂದು ವೈರಸ್‌ ಕಾಟ ಶುರುವಾಗಿದ್ದು, ಇದರ ಹಿನ್ನೆಲೆಯಲ್ಲಿ ಭಾರತವೂ ಸೇರಿ ವಿವಿಧ ದೇಶಗಳಲ್ಲಿ ಕಟ್ಟೆಚ್ಚರ ಘೋಷಿಸಲಾಗಿದೆ.ನಿಗೂಢ ಸ್ವರೂಪದ ನ್ಯುಮೋನಿಯಾ H9n2 ಸೋಂಕು ಚೀನದಲ್ಲಿ ಕ್ಷಿಪ್ರವಾಗಿ ಹರಡುತ್ತಿದೆ. ಇದರ ಬೆನ್ನಲ್ಲೇ ಕೇಂದ್ರ ಆರೋಗ್ಯ ಸಚಿವಾಲಯ ಈ ಪ್ರಕರಣದ ಕುರಿತು ತೀವ್ರ ನಿಗಾ ವಹಿಸಲು ಸೂಚನೆ ನೀಡಿದೆ.ಭಾರತ ಯಾವುದೇ ತುರ್ತು ಪರಿಸ್ಥಿತಿಗೆ ಸಜ್ಜಾಗಿದೆ. ಆರೋಗ್ಯ ವಿಚಾರಗಳನ್ನು ಗಂಭೀರವಾಗಿ …

ಚೀನದಲ್ಲಿ ಇನ್ನೊಂದು ವೈರಸ್‌ ಸೋಂಕು Read More »

ಇಂದು ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಆಗಮನ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರು ಇಂದು ಬೆಂಗಳೂರಿಗೆ ಆಗಮಿಸಿಲಿದ್ದಾರೆ. ಎಚ್‍ಎಎಲ್ ಸಂಸ್ಥೆಯ ಕಾರ್ಯಕ್ರಮ ನಿಮಿತ್ತ ಆಗಮಿಸುತ್ತಿರುವ ಪ್ರಧಾನಿಯವರು ಬೆಳಗ್ಗೆ 9.15ಕ್ಕೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿದ್ದಾರೆ. 12 ಗಂಟೆವರೆಗೆ ಎಚ್‍ಎಎಲ್ ಆವರಣದಲ್ಲಿ ಆಯೋಜನೆಗೊಂಡಿರುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. 12.15ಕ್ಕೆ ಭಾರತೀಯ ವಾಯುಸೇನೆ ವಿಮಾನದ ಮೂಲಕ ತೆಲಂಗಾಣಕ್ಕೆ ಪ್ರಯಾಣ ಬೆಳೆಸಲಿದ್ದು, ಅಲ್ಲಿನ ವಿಧಾನಸಭಾ ಚುನಾವಣಾ ಪ್ರಚಾರದಲ್ಲಿ ತೊಡಗಿಕೊಳ್ಳಲಿದ್ದಾರೆ. ಪ್ರಧಾನಿಯವರ ಬೆಂಗಳೂರು ಭೇಟಿ ಹಿನ್ನೆಲೆಯಲ್ಲಿ ಈಗಾಗಲೇ ಅಗತ್ಯ ತಯಾರಿಗಳನ್ನು ಮಾಡಿಕೊಳ್ಳಲಾಗಿದೆ.ಇತ್ತಿಚೆಗೆ ಚಂದ್ರಯಾನ-3 ಯಶಸ್ವಿ ಹಿನ್ನೆಲೆಯಲ್ಲಿ ಬೆಂಗಳೂರಿಗೆ ಬಂದಿದ್ದ ಮೋದಿಯವರು ಇಸ್ರೊ ವಿಜ್ಞಾನಿಗಳನ್ನು …

ಇಂದು ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಆಗಮನ Read More »

error: Content is protected !!
Scroll to Top