ಕಾರ್ಕಳ ಸುದ್ದಿ

ಸೂರಾಲು : 31ನೇ ಸಾರ್ವಜನಿಕ ಗಣೇಶೋತ್ಸವ

ಮಕ್ಕಳಲ್ಲಿ ಧಾರ್ಮಿಕ ಪ್ರಜ್ಞೆ ಮೂಡಿಸುವುದು ಅವಶ್ಯ – ಉದಯ ಶೆಟ್ಟಿ ಮುನಿಯಾಲು ಕಾರ್ಕಳ : ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣದೊಂದಿಗೆ ಸಂಸ್ಕಾರ, ಧಾರ್ಮಿಕ ಪ್ರಜ್ಞೆ ಮೂಡಿಸುವುದು ಕೂಡ ಅವಶ್ಯ. ಸಾರ್ವಜನಿಕ ಗಣೇಶೋತ್ಸವದಂತಹ ಕಾರ್ಯಕ್ರಮಗಳು ಈ ನಿಟ್ಟಿನಲ್ಲಿ ಪೂರಕವೆಂದು ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಮುನಿಯಾಲು ಉದಯ ಕುಮಾರ್ ಶೆಟ್ಟಿ ಹೇಳಿದರು.ಅವರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಸೂರಾಲು ಇದರ ವತಿಯಿಂದ ನಡೆದ 31 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಅರ್ಚಕ …

ಸೂರಾಲು : 31ನೇ ಸಾರ್ವಜನಿಕ ಗಣೇಶೋತ್ಸವ Read More »

ಈದು : ಶಿವಾನಿ ಜ್ಞಾನ ವಿಕಾಸ ಕೇಂದ್ರದ ವಾರ್ಷಿಕೋತ್ಸವ

ಕಾರ್ಕಳ : ಶ್ರೀ.ಕ್ಷೇ.ಧ.ಗ್ರಾ.ಯೋಜನೆಯ ಹೋಸ್ಮರು ವಲಯದ ಈದು ಸಿ ಕಾರ್ಯಕ್ಷೇತ್ರದಲ್ಲಿ ಶಿವಾನಿ ಜ್ಞಾನ ವಿಕಾಸ ಕೇಂದ್ರದ ವಾರ್ಷಿಕೋತ್ಸವ ಕಾರ್ಯಕ್ರಮ ಸೆ. 24 ರಂದು ಜರುಗಿತು. ಆಂಬುಲೆನ್ಸ್ ಆರೋಗ್ಯ ಸಹಾಯಕಿ ಪೂರ್ಣಿಮಾ ಕಾರ್ಯಕ್ರಮ ಉದ್ಘಾಟಿಸಿ ಶುಭಹಾರೈಸಿದರು. ಪರಸ್ಪರ ಯುವಕ ಮಂಡಳಿಯ ಅಧ್ಯಕ್ಷ ಜಗದೀಶ್ ಅಂಚನ್ ಅಧ್ಯಕ್ಷತೆ ವಹಿಸಿದ್ದರು. ಹೊಸ್ಮಾರು ವಲಯದ ಮೇಲ್ವಿಚಾರಕ ಮನೋಜ್ ಹೆಗ್ಡೆ, ಬ್ರಹ್ಮ ಮೊಗೇರ ದೇವಸ್ಥಾನದ ಮಹಿಳಾ ಮಂಡಳಿ ಅಧ್ಯಕ್ಷೆ ಲೀಲಾವತಿ ಉಪಸ್ಥಿತರಿದ್ದರು. ಸಂಯೋಜಕಿ ಗೀತಾ ಸ್ವಾಗತಿಸಿ, ಸೇವಾ ಪ್ರತಿನಿಧಿ ಶುಭ ಕೇಂದ್ರದ ವರದಿ ಮಂಡನೆ …

ಈದು : ಶಿವಾನಿ ಜ್ಞಾನ ವಿಕಾಸ ಕೇಂದ್ರದ ವಾರ್ಷಿಕೋತ್ಸವ Read More »

ವಾಲಿಬಾಲ್‌ : ಕ್ರೈಸ್ಟ್‌ಕಿಂಗ್‌ನ ಸುದೀಕ್ಷಾ ಶೆಟ್ಟಿ ರಾಜ್ಯಮಟ್ಟಕ್ಕೆ

ಕಾರ್ಕಳ : ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ ಕಾಲೇಜು) ಹಾಗೂ ಬೈಂದೂರು ನಾವುಂದ ಸರಕಾರಿ ಪದವಿ ಪೂರ್ವ ಕಾಲೇಜಿನ ಜಂಟಿ ಆಶ್ರಯದಲ್ಲಿ ನಡೆದ ಉಡುಪಿ ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಕಾರ್ಕಳ ಕ್ರೈಸ್ಟ್‌ಕಿಂಗ್ ಪದವಿಪೂರ್ವ ಕಾಲೇಜಿನ ಪ್ರಥಮ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಸುದೀಕ್ಷಾ ಶೆಟ್ಟಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಜಿಲ್ಲಾಮಟ್ಟದ ಪಂದ್ಯಾಟದಲ್ಲಿ ಕಾರ್ಕಳ ತಾಲೂಕು ತಂಡವನ್ನು ಪ್ರತಿನಿಧಿಸಿದ್ದ ಸುದೀಕ್ಷಾ ಅಲ್ಲಿ ತನ್ನ ತಂಡ ಪ್ರಥಮ ಸ್ಥಾನ ಪಡೆದು ಕೊಳ್ಳುವುದರ ಮೂಲಕ ರಾಜ್ಯ ಮಟ್ಟದ ವಾಲಿಬಾಲ್ ಪಂದ್ಯಾಟಕ್ಕೆ ಆಯ್ಕೆಯಾಗಿದ್ದು, …

ವಾಲಿಬಾಲ್‌ : ಕ್ರೈಸ್ಟ್‌ಕಿಂಗ್‌ನ ಸುದೀಕ್ಷಾ ಶೆಟ್ಟಿ ರಾಜ್ಯಮಟ್ಟಕ್ಕೆ Read More »

ಅ. 1 : ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ವಿಶೇಷ ಸಭೆ

ಕಾರ್ಕಳ : ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ವಿಶೇಷ ಸಭೆ ಅ. 1 ರಂದು ಕೊಪ್ಪಳದ ಹಿರೇಸಿಂದೋಗಿ ರಸ್ತೆಯ ಮಹಾವೀರ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ. ಸಂಘದ ಬೈಲಾ ಉಪವಿಧಿಗಳು 2022-ಉಪವಿಧಿಗಳಿಗೆ ತಿದ್ದುಪಡಿ ತರಲು ಸಂಘದ ಮಹಾಸಭೆ ವರ್ಚುವಲ್‌ ವಿಧಾನದ ಮೂಲಕ ರಾಜ್ಯಾಧ್ಯಕ್ಷ ಸಿ. ಎಸ್‌. ಷಡಾಕ್ಷರಿ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಸಭೆಯಲ್ಲಿ ಕಾರ್ಕಳ ತಾಲೂಕಿನ ಸದಸ್ಯರು ಭಾಗಿಯಾಗುವಂತೆ ಕರ್ನಾಟಕ ರಾಜ್ಯ ಸರಕಾರಿ ನೌಕರ ಸಂಘ ತಾಲೂಕು ಶಾಖೆಯ ಅಧ್ಯಕ್ಷ ಬಾಲಕೃಷ್ಣ ಎನ್.‌ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಕಾರ್ಕಳದಲ್ಲಿ ಬ್ಯಾನರ್‌ ವಾರ್‌

ಅನುಮತಿ ರಹಿತ ಫ್ಲೆಕ್ಸ್‌ ತೆರವು – ದೂರು ದಾಖಲು ಕಾರ್ಕಳ : ಕುಕ್ಕುಂದೂರು ಪಂಚಾಯತ್ ಮೈದಾನದಲ್ಲಿ ನಡೆದ ಕು. ಸೌಜನ್ಯ ಪರ ಪ್ರತಿಭಟನೆ ಕಾರ್ಯಕ್ರಮಕ್ಕೆ ವಿರುದ್ಧವಾಗಿ ಪುರಸಭಾ ವ್ಯಾಪ್ತಿಯಲ್ಲಿ ಅನುಮತಿ ರಹಿತ ಬ್ಯಾನರ್‌ ಅಳವಡಿಕೆ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.ನಗರದ ಆನೆಕೆರೆ ಉದ್ಯಾನವನ ಬದಿ, ದಾನಶಾಲೆ, ಆನೆಕೆರೆ ಶ್ರೀ ಕೃಷ್ಣ ಕ್ಷೇತ್ರದ ಬಳಿ ಪುರಸಭೆಯಿಂದ ಅನುಮತಿ ಪಡೆಯದೇ ಸೆ. 23ರ ರಾತ್ರಿ ಫ್ಲೆಕ್ಸ್ ಗಳನ್ನು ಅಳವಡಿಸಿ ಸಾರ್ವಜನಿಕ ಸ್ಥಳ ವಿರೂಪಗೊಳಿಸಲಾಗಿದೆ ಎಂದು ಪುರಸಭಾ …

ಕಾರ್ಕಳದಲ್ಲಿ ಬ್ಯಾನರ್‌ ವಾರ್‌ Read More »

ಸೆ. 26 : ಕಾರ್ಕಳ- ಹೆಬ್ರಿಯ ವಿವಿಧೆಡೆ ವಿದ್ಯುತ್‌ ವ್ಯತ್ಯಯ

ಕಾರ್ಕಳ : 220 ಕೆವಿ ಕೇಮಾರ್‌ ವಿದ್ಯುತ್ ಕೇಂದ್ರದಿಂದ ಹೊರಡುವ 11ಕೆವಿ ಕಾರ್ಕಳ ಐಬಿ ಮತ್ತು ಕಾರ್ಕಳ ಎಕ್ಸ್ ಪ್ರೆಸ್ ಫೀಡರ್‌ಗಳಲ್ಲಿ ಲೈನ್ ನಿರ್ವಹಣೆ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ಸೆ. 26 ರಂದು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಹಾಗೂ 110ಕೆವಿ ಕಾರ್ಕಳ ಉಪಕೇಂದ್ರದಲ್ಲಿ ತ್ರೈಮಾಸಿಕ ಮತ್ತು ಅರ್ಧ ವಾರ್ಷಿಕ ನಿರ್ವಹಣೆ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ 11 ಕೆವಿ ದುರ್ಗಾ, ಕಾರ್ಕಳ ಟೌನ್, ಅಜೆಕಾರು, ಬೈಲೂರ್ ಎಕ್ಸ್ ಪ್ರೆಸ್, ಮುಂಡ್ಲಿ, ಜಾರ್ಕಳ, ಕೆ.ಹೆಚ್.ಬಿ, ಸಿ, ಪದವು ಮತ್ತು …

ಸೆ. 26 : ಕಾರ್ಕಳ- ಹೆಬ್ರಿಯ ವಿವಿಧೆಡೆ ವಿದ್ಯುತ್‌ ವ್ಯತ್ಯಯ Read More »

ದತ್ತ ಕುಮಾರ್ ಅವರಿಗೆ ಪಿಎಚ್‌ಡಿ ಪದವಿ

ಕಾರ್ಕಳ : ಮುನಿಯಾಲು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ದತ್ತ ಕುಮಾರ್ ಅವರು ರೂರಲ್ ಇನ್ಫ್ರಾಸ್ಟ್ರಕ್ಚರ್ ಫಂಡಿಂಗ್- ಎ ಸ್ಟಡಿ ಆನ್ ಯುಟಿಲೈಜೇಷನ್ ಅಂಡ್ ಡೆವಲಪ್ಮೆಂಟ್ ಇನ್ ಉಡುಪಿ ಡಿಸ್ಟ್ರಿಕ್ಟ್ ಆಫ್ ಕರ್ನಾಟಕ ಎಂಬ ವಿಷಯದ ಕುರಿತಾಗಿ ಮಂಡಿಸಿದ ಸಂಶೋಧನಾ ಮಹಾ ಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾನಿಲಯ ಪಿಎಚ್‌ಡಿ ಪದವಿ ನೀಡಿ ಗೌರವಿಸಿದೆ. ಇವರು ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ಪ್ರಾಧ್ಯಾಪಕ ಪ್ರೊ. ಎ. ಸಿದ್ದಿಕ್ ಅವರ ಮಾರ್ಗದರ್ಶನದಲ್ಲಿ ಪ್ರಬಂಧವನ್ನು ಸಿದ್ಧಪಡಿಸಿದ್ದರು. ದತ್ತ ಕುಮಾರ್ …

ದತ್ತ ಕುಮಾರ್ ಅವರಿಗೆ ಪಿಎಚ್‌ಡಿ ಪದವಿ Read More »

ಕಾಂಗ್ರೆಸ್‌ ಸರಕಾರದಿಂದ ಜನರ ಹಗಲು ದರೋಡೆ

ಆರ್ಥಿಕ ಚಟುವಟಿಕೆಗಳಿಗೆ ನಿರ್ಬಂಧ ಹೇರಿ ಬಡವರ ಬದುಕಿಗೆ ಬರೆ – ಬಿಜೆಪಿ ಆರೋಪ ಕಾರ್ಕಳ : ಗ್ಯಾರಂಟಿಗಳ ಆಮಿಷವೊಡ್ಡಿ ಜನರನ್ನು ದಾರಿ ತಪ್ಪಿಸಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಇದೀಗ ಆರ್ಥಿಕ ಚಟುವಟಿಕೆಗಳ ಮೇಲೆ ನಿರ್ಬಂಧ ಹೇರುವ ಮೂಲಕ ಬಡವರ, ಕೂಲಿ ಕಾರ್ಮಿಕರ ಬದುಕಿಗೆ ಬರೆ ಎಳೆದಿದೆ ಎಂದು ಕಾರ್ಕಳ ಬಿಜೆಪಿ ಆರೋಪಿಸಿದೆ. ಕಾಂಗ್ರೆಸ್ ಸರಕಾರ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದ್ದ ಉಚಿತ ವಿದ್ಯುತ್ ಯೋಜನೆಯ ನೆಪದಲ್ಲಿ ಕೈಗಾರಿಕೆ ಹಾಗೂ ವಾಣಿಜ್ಯ ಬಳಕೆಯ ವಿದ್ಯುತ್ ದರವನ್ನು ಏಕಾಏಕಿ ಏರಿಸಿದ ಪರಿಣಾಮ …

ಕಾಂಗ್ರೆಸ್‌ ಸರಕಾರದಿಂದ ಜನರ ಹಗಲು ದರೋಡೆ Read More »

ವಾಲಿಬಾಲ್ : ಜ್ಞಾನಸುಧಾದ ಸನ್ನಿಧಿ ರಾಜ್ಯಮಟ್ಟಕ್ಕೆ

ಕಾರ್ಕಳ : ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ನಾವುಂದ ಸರಕಾರಿ ಪದವಿ ಪೂರ್ವ ಕಾಲೇಜಿನ ಆಶ್ರಯದಲ್ಲಿ ನಡೆದ ಉಡುಪಿ ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಕಾರ್ಕಳ ತಾಲೂಕಿನ ಬಾಲಕಿಯರ ತಂಡ ಪ್ರಥಮ ಸ್ಥಾನ ಗಳಿಸಿದ್ದು, ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿಯ ಸನ್ನಿಧಿ ( ವಾಣಿಜ್ಯ ವಿಭಾಗ) ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.ರಾಜ್ಯಮಟ್ಟಕ್ಕೆ ಆಯ್ಕೆಗೊಂಡ ಕಾರ್ಕಳ ತಾಲೂಕು ವಾಲಿಬಾಲ್ ತಂಡದ ಎಲ್ಲಾ ವಿದ್ಯಾರ್ಥಿಗಳಿಗೆ ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟಿನ ಅಧ್ಯಕ್ಷ ಡಾ. ಸುಧಾಕರ್ ಶೆಟ್ಟಿ ಅಭಿನಂದಿಸಿದ್ದಾರೆ.

ಮಕ್ಕಳಿಗೆ ಭದ್ರ ಧಾರ್ಮಿಕ ತಳಹದಿಯನ್ನು ಹಾಕಿ ಕೊಡೋಣ : ಶೋಭಾ ಕರಂದ್ಲಾಜೆ

ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠದಲ್ಲಿ ಸಚಿವೆಗೆ ಸನ್ಮಾನ ಕಾಪು : ಪರಮಪೂಜ್ಯ ಜಗದ್ಗುರು ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮೀಜಿಯವರು ಸಮಾಜದಲ್ಲಿ ಶಕ್ತಿ ಸಂಸ್ಕಾರವನ್ನು ಕೊಡುವ ಮೂಲಕ ಸಮಾಜವನ್ನು ಜಾಗೃತಿಯನ್ನು ಮೂಡಿಸುತ್ತಿದ್ದಾರೆ. ನಮ್ಮ ಮಠ ಮಂದಿರಗಳು, ಧರ್ಮ, ಸಂಸ್ಕೃತಿ, ಗುರುಗಳು, ಸಂಸ್ಕಾರದ ಕಾರಣದಿಂದ ಉನ್ನತಿಯನ್ನು ಸಾರುತ್ತಿರುವ ನಮ್ಮ ದೇಶಕ್ಕೆ ಗೌರವ ಸಲ್ಲುತ್ತಿದೆ. ಮಕ್ಕಳಲ್ಲೂ ಧಾರ್ಮಿಕ ಶ್ರದ್ಧೆ, ಸಂಸ್ಕಾರ, ಸಂಸ್ಕೃತಿಯನ್ನು ತುಂಬುವ ಮೂಲಕ ಮುಂದಿನ ಪೀಳಿಗೆಗೆ ಭದ್ರ ಧಾರ್ಮಿಕ ತಳಹದಿಯನ್ನು ಹಾಕಿ ಕೊಡೋಣ ಎಂದು ಕೆಂದ್ರ …

ಮಕ್ಕಳಿಗೆ ಭದ್ರ ಧಾರ್ಮಿಕ ತಳಹದಿಯನ್ನು ಹಾಕಿ ಕೊಡೋಣ : ಶೋಭಾ ಕರಂದ್ಲಾಜೆ Read More »

error: Content is protected !!
Scroll to Top