ಇತರ ಸುದ್ದಿ

ಸೆ. 24 ರಂದು ಪಡುಕುತ್ಯಾರು ಮಹಾಸಂಸ್ಥಾನಕ್ಕೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಭೇಟಿ

ಉಡುಪಿ : ಪಡುಕುತ್ಯಾರಿನಲ್ಲಿ ಚಾತುರ್ಮಾಸ್ಯ ವ್ರತಾನುಷ್ಠರಾಗಿರುವ ಜಗದ್ಗುರುಗಳವರಿಂದ ಅನುಗ್ರಹ ಮಂತ್ರಾಕ್ಷತೆ ಸ್ವೀಕರಿಸಲು ಸೆ. 24ರಂದು ಮಧ್ಯಾಹ್ನ 1.00 ಗಂಟೆಗೆ ಭಾರತ ಸರಕಾರದ ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರು ಆಗಮಿಸಲಿದ್ದಾರೆ. ಮಹಾಸಂಸ್ಥಾನದ ಮುಂದಿನ ಯೋಜನೆಗಳು ಹಾಗೂ ಪಿ. ಎಂ. ವಿಶ್ವಕರ್ಮ ಯೋಜನೆಯಲ್ಲಿ ವಿಶ್ವಕರ್ಮ ಸಮಾಜದ ಬೇಡಿಕೆಗಳ ಬಗ್ಗೆ ಆನೆಗುಂದಿ ಪ್ರತಿಷ್ಠಾನದ ವತಿಯಿಂದ ಸಚಿವರಿಗೆ ಮನವಿಯನ್ನು ಸಲ್ಲಿಸಲಾಗುವುದು. ಈ ಸಂದರ್ಭದಲ್ಲಿ ಪೂರ್ವಾಹ್ನ 12 ಗಂಟೆಗೆ ನೆಕ್ಲಾಜೆ ಶ್ರೀ ವಿಶ್ವಕರ್ಮ ಮಹಿಳಾ ತಾಳಮದ್ದಲೆ …

ಸೆ. 24 ರಂದು ಪಡುಕುತ್ಯಾರು ಮಹಾಸಂಸ್ಥಾನಕ್ಕೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಭೇಟಿ Read More »

ಇಂದು ಶಿಕ್ಷಣ ತಜ್ಞರ ವಿಶೇಷ ಸಭೆ

ರಾಷ್ಟ್ರೀಯ ಶಿಕ್ಷಣ ನೀತಿ ಕುರಿತು ವಿಷಯ ಮಂಡನೆ, ಸಂವಾದ ಉಡುಪಿ : ಪೀಪಲ್ಸ್ ಫೋರಮ್ ಫಾರ್ ಕರ್ನಾಟಕ ಎಜುಕೇಷನ್ ಉಡುಪಿ ವತಿಯಿಂದ ುಡುಪಿಯ ಕಿದಿಯೂರು ಹೋಟೆಲಿನ ಅನಂತಶಯನ ಹಾಲ್‌ನಲ್ಲಿ ಸೆ,23ರಂದು ಸಂಜೆ 4 ಗಂಟೆಗೆ ‘ಶಿಕ್ಷಣ ತಜ್ಞರ ವಿಶೇಷ ಸಭೆ’ ನಡೆಯಲಿದೆ. ರಾಷ್ಟೀಯ ಶಿಕ್ಷಣ ನೀತಿ-2020ರ ಕುರಿತು ಪ್ರಮುಖ ಶಿಕ್ಷಣ ಕ್ಷೇತ್ರದ ವಕ್ತಾರರು ವಿಷಯ ಮಂಡನೆ ಮಾಡಿ ಸಂವಾದ ನಡೆಸಲಿದ್ದಾರೆ.ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ತೆಗಳ ಸಂಸ್ಥಾಪಕ ಡಾ.ಸುಧಾಕರ್‌ ಶೆಟ್ಟಿ, ಬೆಂಗಳೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ವೇಣುಗೋಪಾಲ್‌ ಕೆ.ಆರ್‌. …

ಇಂದು ಶಿಕ್ಷಣ ತಜ್ಞರ ವಿಶೇಷ ಸಭೆ Read More »

ಕೇರಳದ ಕೋಯಿಕ್ಕೋಡ್‌ನಲ್ಲಿ ನಿಪಾ ವೈರಸ್‌ನಿಂದ ಇಬ್ಬರು ಸಾವು; ರಾಜ್ಯದ ಗಡಿ ಜಿಲ್ಲೆಗಳಲ್ಲಿ ಕಚ್ಚೆಚ್ಚರ!

ಬೆಂಗಳೂರು : ಕೇಂದ್ರ ಆರೋಗ್ಯ ಸಚಿವಾಲಯ ಮತ್ತು ಕೇರಳ ಆರೋಗ್ಯ ಇಲಾಖೆ ನಿಪಾ ವೈರಸ್‌ನಿಂದ ಕೋಯಿಕ್ಕೋಡ್‌ನಲ್ಲಿ ಇಬ್ಬರು ಸಾವಿಗೀಡಾಗಿರುವುದನ್ನು ದೃಢಪಡಿಸಿದ ನಂತರ, ಕರ್ನಾಟಕ ಆರೋಗ್ಯ ಇಲಾಖೆ ಇದೀಗ ಕೇರಳದ ಗಡಿ ಪ್ರದೇಶಗಳು ಮತ್ತು ಅಲ್ಲಿಂದ ಪ್ರಯಾಣಿಸುವ ಜನರನ್ನು ತಪಾಸಣೆಗೆ ಒಳಪಡಿಸಲು ಯೋಜಿಸುತ್ತಿದೆ. ಸೆ. 13 ರಂದು ಕೇರಳದ ಗಡಿಗಳಲ್ಲಿರುವ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಮತ್ತು ಆರೋಗ್ಯ ಅಧಿಕಾರಿಗಳೊಂದಿಗೆ ರಾಜ್ಯವು ವಿಡಿಯೋ ಕಾನ್ಫರೆನ್ಸ್ ನಡೆಸಲಿದೆ. ಇವುಗಳಲ್ಲಿ ಕೊಡಗು, ಚಾಮರಾಜನಗರ, ಮೈಸೂರು ಮತ್ತು ದಕ್ಷಿಣ ಕನ್ನಡ ಸೇರಿವೆ. ಕರ್ನಾಟಕ ಆರೋಗ್ಯ ಮತ್ತು …

ಕೇರಳದ ಕೋಯಿಕ್ಕೋಡ್‌ನಲ್ಲಿ ನಿಪಾ ವೈರಸ್‌ನಿಂದ ಇಬ್ಬರು ಸಾವು; ರಾಜ್ಯದ ಗಡಿ ಜಿಲ್ಲೆಗಳಲ್ಲಿ ಕಚ್ಚೆಚ್ಚರ! Read More »

ರಾಜ್ಯದ 195 ತಾಲ್ಲೂಕುಗಳಲ್ಲಿ ಬರಗಾಲ : ಶೀಘ್ರದಲ್ಲೇ ಅಧಿಸೂಚನೆ ಹೊರಡಿಸಿ ಕೇಂದ್ರಕ್ಕೆ ವರದಿ : ಸಚಿವ ಕೃಷ್ಣ ಭೈರೇಗೌಡ

ಬೆಂಗಳೂರು : ರಾಜ್ಯದಲ್ಲಿ ಈ ವರ್ಷ ಮುಂಗಾರು ಮಳೆ ಕೈಕೊಟ್ಟಿರುವುದರಿಂದ ಕಳೆದ 10 ವರ್ಷಗಳ ಬಳಿಕ ತೀವ್ರ ಬರ ಎದುರಾಗಿದ್ದು ರಾಜ್ಯಾದ್ಯಂತ ಒಟ್ಟು 195 ತಾಲೂಕುಗಳಲ್ಲಿ ಬರ ಆವರಿಸಿದೆ ಎಂದು ಶಿಫಾರಸು ಮಾಡುತ್ತೇವೆ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಸೆ. 13ರಂದು ಬೆಂಗಳೂರಿನಲ್ಲಿ ಘೋಷಿಸಿದ್ದಾರೆ. ಸಂಪುಟ ಉಪಸಮಿತಿ ಸಭೆ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿಗಳು ಇವತ್ತು ಸಂಜೆಯೊಳಗೆ ಅಧಿಕೃತವಾಗಿ ಬರ ಪೀಡಿತ ತಾಲೂಕುಗಳ ಘೋಷಣೆಗೆ ಸಹಿ ಹಾಕಲಿದ್ದಾರೆ. ಶೀಘ್ರದಲ್ಲೇ ಬರಪೀಡಿತ ತಾಲೂಕುಗಳ …

ರಾಜ್ಯದ 195 ತಾಲ್ಲೂಕುಗಳಲ್ಲಿ ಬರಗಾಲ : ಶೀಘ್ರದಲ್ಲೇ ಅಧಿಸೂಚನೆ ಹೊರಡಿಸಿ ಕೇಂದ್ರಕ್ಕೆ ವರದಿ : ಸಚಿವ ಕೃಷ್ಣ ಭೈರೇಗೌಡ Read More »

ಪಡುಕುತ್ಯಾರು ಮಠದಲ್ಲಿ ವಿಶ್ವಕರ್ಮ ಐಕ್ಯತೆಯ ಧ್ವಜ ಬಿಡುಗಡೆ

ಪಡುಕುತ್ಯಾರು : ವಿಶ್ವಕರ್ಮ ಸಮಾಜದ ಐಕ್ಯತೆಯ ಮತ್ತು ಸಂಘಟನೆ ಪ್ರತೀಕವಾಗಿ ವಿಶ್ವಕರ್ಮ ಧ್ವಜವು ಮೂಡಿಬರಲಿ ಎಂದು ವಿಶ್ವಬ್ರಾಹ್ಮಣ ಕುಲಗುರು ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠಾಧೀಶ್ವರ ಅನಂತಶ್ರೀವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮೀಜಿ ಆಶೀರ್ವಚನ ನೀಡಿದರು. ಪಡುಕುತ್ಯಾರು ಶ್ರೀ ಸರಸ್ವತೀ ಸತ್ಸಂಗ ಮಂದಿರದಲ್ಲಿ ಆನೆಗುಂದಿ ಪ್ರತಿಷ್ಠಾನದ ಅಧ್ಯಕ್ಷ ವಿ. ಶ್ರೀಧರ ಆಚಾರ್ಯ ವಡೇರಹೋಬಳಿ ಅವರಿಗೆ ಹಸ್ತಾಂತರಿಸುವುದರ ಮೂಲಕ ವಿಶ್ವಕರ್ಮ ಸಮಾಜದ ಧ್ವಜ ಬಿಡುಗಡೆ ಮಾಡಿ ಆಶೀರ್ವಚನ ನೀಡಿದರು. ದೇವಸ್ಥಾನದ ಧರ್ಮದರ್ಶಿಗಳು, ವಿದ್ವಾಂಸರುಗಳು, ವೈದಿಕ ಮುಖಂಡರು, ವಿವಿಧ ಸಂಘಟನೆಯ …

ಪಡುಕುತ್ಯಾರು ಮಠದಲ್ಲಿ ವಿಶ್ವಕರ್ಮ ಐಕ್ಯತೆಯ ಧ್ವಜ ಬಿಡುಗಡೆ Read More »

ಬಲೆಗೆ ಬಿತ್ತು ರಾಶಿ ರಾಶಿ ಬೊಂಡಾಸ್‌ ಮೀನು

ಬೆಲೆ ಕುಸಿದು ಮೀನುಗಾರರಿಗೆ ನಿರಾಶೆ ಉಡುಪಿ : ಆಳ ಸಮುದ್ರ ಮೀನುಗಾರಿಕೆ ಆರಂಭವಾದ ಬೆನ್ನಿಗೆ ಮೀನುಗಾರರಿಗೆ ರಾಶಿ ರಾಶಿ ಮೀನುಗಳು ಸಿಗುತ್ತಿವೆ. ಕೆಲ ದಿನಗಳ ಹಿಂದೆಯಷ್ಟೇ ಬಂಗುಡೆ ಮತ್ತು ಬೂತಾಯಿ ಮೀನು ಯಥೇಚ್ಛವಾಗಿ ಸಿಕ್ಕಿದ್ದವು. ಇದೀಗ ಬೊಂಡಾಸ್‌ ಮೀನಿನ ಸುಗ್ಗಿ ಶುರುವಾಗಿದೆ. ಮೀನುಗಾರರಿಗೆ ಬಂಪರ್ ಹೊಡೆದಿದೆ. ಆದರೆ ಬೆಲೆ ಕಡಿಮೆಯಾಗಿರುವುದರಿಂದ ಮೀನುಗಾರರಿಗೆ ನಿರೀಕ್ಷಿತ ಲಾಭ ಮಾತ್ರ ಸಿಗುತ್ತಿಲ್ಲ. ಬೋಟ್‌ಗಳು ಅಕ್ಟೋಪಸ್ ತಳಿಯ ಬೊಂಡಾಸ್ ಹೊತ್ತು ತರುತ್ತಿವೆ. ಮಲ್ಪೆ ಬಂದರಿನ ಹರಾಜು ಕೇಂದ್ರಗಳಲ್ಲಿ ಬೊಂಡಾಸ್ ರಾಶಿಯೇ ಕಾಣ‌‌ಸಿಗುತ್ತದೆ. ಸಾಮಾನ್ಯ …

ಬಲೆಗೆ ಬಿತ್ತು ರಾಶಿ ರಾಶಿ ಬೊಂಡಾಸ್‌ ಮೀನು Read More »

ಪಂಜುರ್ಲಿ ಎಂದು ನಂಬಿ ಪೂಜಿಸುತ್ತಿದ್ದ ಹಂದಿಯ ಹತ್ಯೆ

ದುಷ್ಕರ್ಮಿಗಳ ಕೃತ್ಯಕ್ಕೆ ಜನರ ಆಕ್ರೋಶ ಕಾರವಾರ : ಜನರು ಪಂಜುರ್ಲಿ ಎಂದು ನಂಬಿ ಪೂಜಿಸುತ್ತಿದ್ದ ಕಾಡು ಹಂದಿಯನ್ನು ದುಷ್ಕರ್ಮಿಗಳು ನಾಡಬಾಂಬ್‌ ಇಟ್ಟು ಸಾಯಿಸಿದ ಘಟನೆ ಶನಿವಾರ ರಾತ್ರಿ ಉತ್ತರ ಕನ್ನಡ ಜಿಲ್ಲೆ ಕಾರವಾರ ತಾಲೂಕಿನ ಚಂಡಿಯಾ ಗ್ರಾಮದಲ್ಲಿ ನಡೆದಿದೆ.ಕೋಳಿ ಮಾಂಸದಲ್ಲಿ ನಾಡಬಾಂಬ್ ಇಟ್ಟು ಕಾಡುಹಂದಿಯನ್ನು ಹತ್ಯೆ ಮಾಡಲಾಗಿದೆ. ಊರಿನಲ್ಲಿ ಜನ ನೀಡುತ್ತಿದ್ದ ಆಹಾರ ಸೇವಿಸುತ್ತ ಜನರ ಪ್ರೀತಿ ಗಳಿಸಿದ್ದ ಕಾಡು ಹಂದಿಯನ್ನು ಜನ ಪಂಜುರ್ಲಿ ಎಂದು ನಂಬಿ ಪೂಜೆ ಮಾಡುತ್ತಿದ್ದರು. ಕಾಂತಾರ ಸಿನಿಮಾ ನಂತರ ದೈವದ ಸ್ಥಾನ …

ಪಂಜುರ್ಲಿ ಎಂದು ನಂಬಿ ಪೂಜಿಸುತ್ತಿದ್ದ ಹಂದಿಯ ಹತ್ಯೆ Read More »

ಕನ್ನಡ ನಾಮಫಲಕ ಕಡ್ಡಾಯ : ಸಚಿವೆಗೆ ಕರವೇ ಮನವಿ

ಉಡುಪಿ: ಜಿಲ್ಲೆಯ ಅಂಗಡಿ ಮುಂಗಟ್ಟುಗಳ ನಾಮಫಲಕಗಳಲ್ಲಿ ಕನ್ನಡ ಕಡ್ಡಾಯಗೊಳಿಸುವಂತೆ ಕರ್ನಾಟಕ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾಘಟಕ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ಗೆ ಮನವಿ ಸಲ್ಲಿಸಿದೆ. ಮನವಿಗೆ ಶೀಘ್ರವಾಗಿ ಸ್ಪಂದಿಸುವುದಾಗಿ ಆಶ್ವಾಸನೆ ನೀಡಿದ್ದಾರೆ.ಈ ಸಂದರ್ಭದಲ್ಲಿ ಕರವೇ ಜಿಲ್ಲಾಧ್ಯಕ್ಷ ಸುಜಯ್ ಪೂಜಾರಿ, ಸಲಹೆಗಾರ ಲಕ್ಷ್ಮೀಶ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ನಾಯಕ್, ಉಪಾಧ್ಯಕ್ಷ ಕುಶಲ್ ಅಮೀನ್ ಬೆಂಗ್ರೆ, ಮಹಿಳಾ ವಿಭಾಗದ ಜಿಲ್ಲಾಧ್ಯಕ್ಷೆ ಗೀತಾ ಪಾಂಗಾಳ, ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷ ಜಯ ಪೂಜಾರಿ, ಸಾಂಸ್ಕೃತಿಕ ಕಾರ್ಯದರ್ಶಿ ಕೃಷ್ಣ ಪಿ, ಉಪಾಧ್ಯಕ್ಷೆ …

ಕನ್ನಡ ನಾಮಫಲಕ ಕಡ್ಡಾಯ : ಸಚಿವೆಗೆ ಕರವೇ ಮನವಿ Read More »

ದೈವಕ್ಕೆ ದೂರು ನೀಡಿದ ಉಚ್ಚಾಟಿತ ಕಾಂಗ್ರೆಸ್‌ ಸದಸ್ಯರು

ಸುಳ್ಯದ ಕಾಂಗ್ರೆಸ್‌ ಸದಸ್ಯರಿಂದ ಮಜ್ಜಾರು ರಾಜನ್ ದೈವಕ್ಕೆ ಮೊರೆ ಮಂಗಳೂರು: ಪಕ್ಷ ವಿರೋಧಿ ಕಾರಣಕ್ಕೆ ಪಕ್ಷದಿಂದ ಉಚ್ಚಾಟಿಸಲ್ಪಟ್ಟಿರುವ ಸುಳ್ಯದ ಕಾಂಗ್ರೆಸ್‌ ಕಾರ್ಯಕರ್ತರು ದೈವದ ಎಂದು ದೂರು ಸಲ್ಲಿಸಿದ್ದಾರೆ. ವಿಧಾನಸಭಾ ಚುನಾವಣೆ ವೇಳೆ ಸುಳ್ಯ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೃಷ್ಣಪ್ಪ ಜಿ. ಅವರ ವಿರುದ್ದ ಕೆಲಸ ಮಾಡಿದ ಆರೋಪದಲ್ಲಿ ಕೆಲವರನ್ನು ಪಕ್ಷದಿಂದ ಉಚ್ಚಾಟಿಸಲಾಗಿತ್ತು.ಸುಳ್ಯದ ಕೋಡಿಂಬಾಳ ಗ್ರಾಮದ ಪ್ರಸಿದ್ಧ ಕಾರಣಿಕ ಕ್ಷೇತ್ರ ಮಜ್ಜಾರು ರಾಜನ್ ದೈವದ ಸನ್ನಿಧಿಯಲ್ಲಿ ಮಂಗಳವಾರ ಕಾಂಗ್ರೆಸ್ ಮುಖಂಡರಾದ ಬಾಲಕೃಷ್ಣ ಬಳ್ಳೇರಿ, ಸುಧೀರ್ ದೇವಾಡಿಗ, ಉಷಾ …

ದೈವಕ್ಕೆ ದೂರು ನೀಡಿದ ಉಚ್ಚಾಟಿತ ಕಾಂಗ್ರೆಸ್‌ ಸದಸ್ಯರು Read More »

ಮುಂಬೈಗೆ ಯೆಲ್ಲೋ ಅಲರ್ಟ್, ಅಸ್ಸಾಂನಲ್ಲಿ ಪ್ರವಾಹ : ಹಲವು ರಾಜ್ಯಗಳಲ್ಲಿ ಮುಂಗಾರು ಚುರುಕು

ಮುಂಬೈ : ಜೂ.24 ರಂದು ಮುಂಗಾರು ಮಳೆ ಮುಂಬೈ ನಗರಕ್ಕೆ ಆಗಮಿಸಿದೆ. ಮುಂಬೈ ನಗರಕ್ಕೆ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದ್ದು ಮುಂದಿನ 4-5 ದಿನಗಳಲ್ಲಿ ಮಹಾರಾಷ್ಟ್ರದ ಕೆಲವು ಭಾಗಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಇಲಾಖೆ ಹೇಳಿದೆ. ಭಾರತದ ಹವಾಮಾನ ಇಲಾಖೆ ನೈಋತ್ಯ ಮಾನ್ಸೂನ್ ಮುಂಬೈ ನಗರ ತಲುಪುವುದಾಗಿ ಹೇಳಿತ್ತು. ಇಂದು ಬೆಳಗ್ಗೆ ಮುಂಬೈಯ ಕೆಲವು ಭಾಗಗಳಲ್ಲಿ ಮಳೆಯಾಗಿದ್ದು ಬಿಸಿಲಿನ ಬೇಗೆ ಕಡಿಮೆಯಾಗಿದೆ. ಆದರೆ, ಮಳೆಯಿಂದಾಗಿ ನಗರದ ಹಲವು ಪ್ರದೇಶಗಳು ಜಲಾವೃತವಾಗಿತ್ತು. ಮುಂಬೈ ನಗರ …

ಮುಂಬೈಗೆ ಯೆಲ್ಲೋ ಅಲರ್ಟ್, ಅಸ್ಸಾಂನಲ್ಲಿ ಪ್ರವಾಹ : ಹಲವು ರಾಜ್ಯಗಳಲ್ಲಿ ಮುಂಗಾರು ಚುರುಕು Read More »

error: Content is protected !!
Scroll to Top