ಐತಿಹಾಸಿಕ ಸ್ಥಳ

ಬರಹ : ರಾಮಚಂದ್ರ ಬರೆಪ್ಪಾಡಿ

ರಾಮಸಮುದ್ರ

ಕಾರ್ಕಳ ನಗರದಲ್ಲೊಂದು ಪ್ರಕೃತಿ ಸೌಂದರ್ಯದಿಂದ ಕೂಡಿದ ಸರೋವರವಿದೆ. ಅದುವೇ ನಗರಕ್ಕೆ ನೀರಿನ ಮೂಲಗಳಲ್ಲಿ ಒಂದಾಗಿರುವ ರಾಮಸಮುದ್ರ. ಸುಮಾರು 47 ಎಕ್ರೆಯಷ್ಟು ವಿಸ್ತಾರವಾಗಿರುವ ಬೃಹತ್ ಕೆರೆಯಿದು. ಸರ್ವೆ ನಂಬರ್ 540/1ರಲ್ಲಿ 4. 18 ಎಕ್ರೆ, 542/1ರಲ್ಲಿ 20.11 ಎಕ್ರೆ, 551/1ಎಯಲ್ಲಿ 22.56 ಎಕ್ರೆ ಹೊಂದಿದ್ದು, ಇಲ್ಲಿ ಸಮೃದ್ಧವಾಗಿ ನೀರು ತುಂಬಿದೆ. ಈ ಕೆರೆಯ ಹೂಳು ತೆಗೆದಲ್ಲಿ ಕಾರ್ಕಳಕ್ಕೆ ನೀರಿನ ಬರ ಬಂದೊದಗದು. ಸರಕಾರ ರಾಮಸಮದ್ರವನ್ನು ಅಭಿವೃದ್ಧಿಪಡಿಸಬೇಕೆನ್ನುವುದು ಹಲವು ದಶಕಗಳ ಕನಸು. ನಗರಕೇಂದ್ರದಿಂದ ದೂರ: 2 ಕಿ.ಮೀ.

ಪಕ್ಷಿಧಾಮವಾಗಿ#ಅಭಿವೃದ್ಧಿಯಾಗಲಿ#ಆನೆಕೆರೆ

ಕಾರ್ಕಳ ನಗರ ಕೇಂದ್ರದಲ್ಲಿರುವ ಆನೆಕೆರೆ ಸುಮಾರು 24.66 ಎಕ್ರೆ ಜಾಗದಲ್ಲಿ ವಿಸ್ತರಿಸಿದೆ. ಸರ್ವೆ ನಂಬರ್ 72/2ಎ1ಯಲ್ಲಿ ಆನೆಕೆರೆಯಿದೆ. ಇಲ್ಲಿ ಗೆ ಅದೆಷ್ಟೋ ಬಗೆಯ ಪಕ್ಷಿಗಳು ವಲಸೆ ಬರುತ್ತವೆ. ನಿರ್ದಿಷ್ಟ ಸಮಯದಲ್ಲಿ ಆನೆಕೆರೆಯ ತುಂಬಾ ಸಾವಿರಾರು ಕೊಕ್ಕರೆಗಳು ಕಾಣುಸಿಗುತ್ತಿವೆ. ಆನೆಕೆರೆ ಪಕ್ಷಿಧಾಮವಾಗಿ ಗುರುತಿಸುವಂತಾಗಲಿ. ಬೋಟಿಂಗ್ ವ್ಯವಸ್ಥೆ ಕಲ್ಪಿಸಿ, ಪ್ರವಾಸಿ ತಾಣವಾಗಿ ಅಭಿವೃದ್ಧಿಗೊಳ್ಳಲಿ ಎಂಬ ಆಶಯ ಇಲ್ಲಿನ ನಾಗರಿಕರದ್ದು. ನಗರಕೇಂದ್ರದಿಂದ ದೂರ: 1 ಕಿ.ಮೀ. #ಸಿಗಡಿಕೆರೆಆನೆಕೆರೆಯ ಬಳಿ ಸರ್ವೆ ನಂಬರ್ 65/2ರಲ್ಲಿ 5.99 ಎಕ್ರೆಯಲ್ಲಿ ಸಿಗಡಿಕೆರೆಯಿದೆ. 2017ರಲ್ಲಿ ಶಾಸಕ ವಿ. ಸುನಿಲ್ ಕುಮಾರ್ ಅವರ ನೇತೃತ್ವದಲ್ಲಿ ಸಾರ್ವಜನಿಕರ ಹಾಗೂ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ನಿರಂತರವಾಗಿ 22 ದಿನಗಳ ಕಾಲ ಸಿಗಡಿಕೆರೆ ಹೂಳು ತೆಗೆಯುವ ಕಾರ್ಯ ಮಾಡಲಾಗಿತ್ತು. ಅಂದು ಸಾಲುಮರದ ತಿಮ್ಮಕ್ಕ ಸಿಗಡಿಕೆರೆಗೆ ಭೇಟಿ ನೀಡಿ, ಇಲ್ಲಿನ ಪ್ರಕೃತಿ ಸೌಂದರ್ಯ ಕಂಡು ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಕೋಟಿ ಚೆನ್ನಯ ಥೀಮ್‌ ಪಾರ್ಕ್‌

ತುಳುನಾಡ ವೀರ ಪುರುಷರಾದ ಕೋಟಿ ಚೆನ್ನಯರ ಹೆಸರಲ್ಲಿ ಕಾರ್ಕಳದಲ್ಲಿ ಕೋಟಿ ಚೆನ್ನಯ ಥೀಮ್ ಪಾರ್ಕ್ ನಿರ್ಮಾಣವಾಗಿದೆ. ನಗರದಿಂದ 3 ಕಿ.ಮೀ. ದೂರದ ತಾಲೂಕು ಕ್ರೀಡಾಂಗಣದ ಅನತಿ ದೂರದಲ್ಲಿ 10 ಎಕ್ರೆ ವಿಶಾಲ ಪ್ರದೇಶದಲ್ಲಿ ಪಾರ್ಕ್ ಇದ್ದು, ಅಲ್ಲಿ ವೀರಪುರುಷರ ಶಿಲಾಮೂರ್ತಿ, ಕೋಟಿ ಚೆನ್ನಯರ ಜೀವನ ಚರಿತ್ರೆಯ ಚಿತ್ರ ಮಾಲಿಕೆ, ತುಳುನಾಡಿನ ಹಳೆಯ ಅಪರೂಪದ ವಸ್ತುಗಳ ಪ್ರದರ್ಶನ, ಕಚೇರಿಯನ್ನೊಳಗೊಂಡತೆ ಈಗಾಗಲೇ ಸುಮಾರು 2 ಕೋಟಿ ರೂ. ವೆಚ್ಚದಲ್ಲಿ ಮೊದಲ ಹಂತದ ಅಭಿವೃದ್ಧಿ ಕಾಮಗಾರಿ ನಡೆದಿದೆ. ಎರಡನೇ ಹಂತವಾಗಿ 2 ಕೋಟಿ ರೂ. ವೆಚ್ಚದಲ್ಲಿ ತುಳುನಾಡ ವೈಭವ ಸಾರುವ ಕಲಾಕೃತಿಗಳ ನಿರ್ಮಾಣ, ತೆರೆದ ಸಭಾಂಗಣ, ಉಪಾಹಾರ ಮಂದಿರ, ವಸತಿ ಗೃಹ, ಗ್ರಂಥಾಲಯ ನಿರ್ಮಾಣವಾಗಲಿದೆ. ಕಾರ್ಕಳದಲ್ಲಿನ ಧಾರ್ಮಿಕ, ಐತಿಹಾಸಿಕ, ಜಲಪಾತಗಳನ್ನು ಒಳಗೊಂಡಂತೆ ಪ್ರವಾಸಿಗರಿಗೆ ಒಂದೆರಡು ದಿನ ಖುಷಿಯಿಂದ ಕಳೆಯುವಂತೆ ಮಾಡುವಲ್ಲಿ ಯೋಜನೆಗಳನ್ನು ರೂಪಿಸಲಾಗಿದೆ ಎಂದು ಶಾಸಕ ವಿ. ಸುನಿಲ್ ಕುಮಾರ್ ತಿಳಿಸಿದರು. ಸಂಪರ್ಕ: 9535668147ನಗರ ಕೇಂದ್ರದಿಂದ ದೂರ: 3 ಕಿ.ಮೀ.

#ಈಜು#ಕೊಳಕೋಟಿ ಚೆನ್ನಯ ಥೀಮ್ ಪಾರ್ಕ್ ಬಳಿಯಿರುವ ತಾಲೂಕು ಕ್ರೀಡಾಂಗಣದಲ್ಲಿ 1.5 ಕೋಟಿ ರೂ. ವೆಚ್ಚದಲ್ಲಿ ಸರಕಾರದ ವತಿಯಿಂದ ಈಜು ಕೊಳ ನಿರ್ಮಾಣವಾಗಿದೆ. ಕೊಳವು 54 ಅಡಿ ಅಗಲ, 82 ಅಡಿ ಉದ್ದದೊಂದಿಗೆ 3-5 ಅಡಿ ಆಳ ಹೊಂದಿದೆ. ಮಕ್ಕಳಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಇದೇ ಪರಿಸರದಲ್ಲಿ 2 ಅಡಿ ಅಗಲ ಹಾಗೂ 20 ಅಡಿ ಉದ್ದದಲ್ಲಿ ಬೇಬಿ ಪೂಲ್ ನಿರ್ಮಾಣವಾಗಿದೆ. ಬೆಳಗ್ಗೆ 6ರಿಂದ 11 ಹಾಗೂ ಸಂಜೆ 3ರಿಂದ 7 ಸಾರ್ವಜನಿಕರ ಉಪಯೋಗಕ್ಕೆ ಲಭ್ಯವಿದೆ. ಸಂಪರ್ಕ: 9380807348ನಗರ ಕೇಂದ್ರದಿಂದ ದೂರ: 3 ಕಿ.ಮೀ.

#ವಾಟರ್#ಪಾರ್ಕ್ :ಕಾರ್ಕಳದಿಂದ 2 ಕಿ.ಮೀ. ದೂರದ ಕರಿಯಕಲ್ಲು ಎಂಬಲ್ಲಿ ಜಾನ್ ಸ್ಪೋಟ್ರ್ಸ್ ಅಕಾಡಮಿ ವತಿಯಿಂದ ವಾಟರ್ ಪಾರ್ಕ್, 6 ಬ್ಯಾಡ್ಮಿಂಟನ್ ಸಿಂಥೆಟಿಕ್ ಕೋರ್ಟ್ ನಿರ್ಮಾಣವಾಗಿದೆ. ಮಿನಿ ಒಲಿಂಪಿಕ್ ಸೈಜ್ ಸ್ವಿಮ್ಮಿಂಗ್ ಪೂಲ್, ವಾಟರ್ ಪಾರ್ಕ್, ಸಭಾಂಗಣವಿದೆ. ಬೆಳಗ್ಗೆ ಗಂಟೆ 9:30ಯಿಂದ ಸಾಯಂಕಾಲ 6 ಗಂಟೆ ತನಕ ಕಾರ್ಯಚರಿಸುತ್ತಿದ್ದು, ಊಟ, ಉಪಾಹಾರದ ವ್ಯವಸ್ಥೆಯೂ ಇಲ್ಲಿದೆ. ಸಂಪರ್ಕ: 9845015793ದೂರ: 3 ಕಿ.ಮೀ.

#ಕೋಟೆ#ಕಣಿಮೈಸೂರಿನ ಸುಲ್ತಾನ್ ಟಿಪ್ಪು ಸಾಮ್ರಾಜ್ಯ ಕಾರ್ಕಳ ತನಕ ವಿಸ್ತರಿಸಿತ್ತು. ಆಂಗ್ಲರ ದಾಳಿಯಿಂದ ತನ್ನ ಸಾಮ್ರಾಜ್ಯದ ರಕ್ಷಣೆಗಾಗಿ ಕಾರ್ಕಳ ನಗರದಲ್ಲಿ ಟಿಪ್ಪು ಅಗಳು ನಿರ್ಮಿಸಿದ್ದನು. ಅದು ಈಗಲೂ ಕೋಟೆಕಣಿಯೆಂದೇ ಪ್ರಚಲಿತದಲ್ಲಿದೆ.

#ಪರ್ಪಲೆ#ಗುಹೆಕಾರ್ಕಳ ನಗರಕ್ಕೆ ಹೊಂದಿಕೊಂಡಂತೆ ಇರುವ ಪರ್ಪಲೆ ಗುಡ್ಡೆಯಲ್ಲಿ ಗುಹೆಯೊಂದಿಗೆ. ಇಂತಹ ಗುಹೆಗಳು ಬೇರೆಡೆ ಕಾಣಸಿಗುವುದು ವಿರಳ ಎನ್ನಲಾಗುತ್ತಿದೆ.

#ಸದ್ಯೋಜಾತ#ಪಾರ್ಕ್ಹುತಾತ್ಮರ ಸ್ಮಾರಕ, ಮಕ್ಕಳ ಆಟಿಕೆಗಳನ್ನು ಹೊಂದಿರುವ ಸದ್ಯೋಜಾತ ಪಾರ್ಕ್ ಆನೆಕೆರೆಯಲ್ಲಿದೆ. ಕಾರ್ಗಿಲ್ ವಿಜಯ ದಿವಸ ಸೇರಿದಂತೆ ಇನ್ನಿತರ ಸಂದರ್ಭ ವಿಶೇಷ ಕಾರ್ಯಕ್ರಮ ಇಲ್ಲಿ ಆಯೊಜನೆಯಾಗುತ್ತಿದೆ.

#ಸ್ವರಾಜ್#ಮೈದಾನ#ಗಾಂಧಿಮೈದಾನಪುರಸಭೆ ವ್ಯಾಪ್ತಿಯಲ್ಲಿ ಮಿನಿಸ್ಟ್ರೀ ಆ-ï ಡಿ-Éನ್ಸ್ ಗೊಳಪಟ್ಟ 15.94 ಎಕ್ರೆ ವಿಸ್ತಾರದಲ್ಲಿರುವ ಸ್ವರಾಜ್ ಮೈದಾನ, 4.17 ಎಕ್ರೆ ವಿಸ್ತಿರ್ಣ ಹೊಂದಿರುವ ಗಾಂ„ ಮೈದಾನ ಕಾರ್ಕಳಕ್ಕೆ ಭೂಷಣ.

error: Content is protected !!
Scroll to Top