ಕ್ರೈಂ

ರಾಜಧಾನಿಯ 15 ಕ್ಕೂ ಹೆಚ್ಚು ಖಾಸಗಿ ಶಾಲೆಗಳಿಗೆ ಬಾಂಬ್ ಬೆದರಿಕೆ

ಸ್ಥಳಕ್ಕೆ ಡಿಸಿಎಂ ಡಿಕೆಶಿ, ಪೊಲೀಸರ ಭೇಟಿ ಬೆಂಗಳೂರು : ರಾಜಧಾನಿ ಬೆಂಗಳೂರಿನ 15 ಕ್ಕೂ ಹೆಚ್ಚು ಖಾಸಗಿ ಶಾಲೆಗಳಿಗೆ ಬಾಂಬ್ ಬೆದರಿಕೆ ಹಾಕಲಾಗಿದೆ. ಬಸವೇಶ್ವರ ನಗರ ಹಾಗೂ ಯಲಹಂಕ ಪೊಲೀಸ್ ಠಾಣಾ ವ್ಯಾಪ್ತಿಯ ಶಾಲೆಗಳಿಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಹಾಕಲಾಗಿದೆ. ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದಾರೆ. ಮಕ್ಕಳನ್ನು ಮನೆಗೆ ಕಳಿಸಲಾಗಿದೆ. ಪೋಷಕರೂ ಆತಂಕಗೊಂಡು ಶಾಲೆ ಬಳಿಗೆ ಓಡೋಡಿ ಬರುತ್ತಿದ್ದಾರೆ. ಬಾಂಬ್ ಬೆದರಿಕೆ ಸುದ್ದಿ ಹಬ್ಬುತ್ತಿದ್ದಂತೇ ಡಿಸಿಎಂ ಡಿಕೆ ಶಿವಕುಮಾರ್ ಸದಾಶಿವನಗರದ ನ್ಯೂ ಅಕಾಡೆಮಿ ಶಾಲೆಗೆ ಭೇಟಿ ನೀಡಿದ್ದಾರೆ. …

ರಾಜಧಾನಿಯ 15 ಕ್ಕೂ ಹೆಚ್ಚು ಖಾಸಗಿ ಶಾಲೆಗಳಿಗೆ ಬಾಂಬ್ ಬೆದರಿಕೆ Read More »

ಕಲುಷಿತ ಸಿರಪ್‌ ಸೇವಿಸಿ 5 ಮಂದಿ ಸಾವು

ಆಯುರ್ವೇದ ಸಿರಪ್‌ಗೆ ರಾಸಾಯನಿಕ ಬೆರೆಸಿರುವ ಶಂಕೆ ಅಹ್ಮದಾಬಾದ್‌ : ಗುಜರಾತಿನ ಖೇಡಾ ಜಿಲ್ಲೆಯಲ್ಲಿ ಮಿಥೈಲ್ ಆಲ್ಕೋಹಾಲ್ ಹೊಂದಿರುವ ಕಲುಷಿತ ಆಯುರ್ವೇದಿಕ್ ಸಿರಪ್ ಸೇವಿಸಿ ಕಳೆದ ಎರಡು ದಿನದಲ್ಲಿ ಕನಿಷ್ಠ ಐದು ಜನರು ಮೃತಪಟ್ಟಿದ್ದಾರೆ. ಇಬ್ಬರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಕಲ್ಮೇಘಸವ್- ಅಸವ ಅರಿಷ್ಟ ಎಂಬ ಹೆಸರಿನ ಆಯುರ್ವೇದಿಕ್ ಸಿರಪ್ ಅನ್ನು ಬಿಲೋದರ ಗ್ರಾಮದ ಅಂಗಡಿಯೊಂದರಲ್ಲಿ ಸುಮಾರು 50 ಜನರಿಗೆ ಮಾರಾಟ ಮಾಡಲಾಗಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.ಗ್ರಾಮಸ್ಥರೊಬ್ಬರ ರಕ್ತದ ಮಾದರಿ ವರದಿ ಸಿರಪ್‌ಗೆ ಮಿಥೈಲ್ ಆಲ್ಕೋಹಾಲ್ …

ಕಲುಷಿತ ಸಿರಪ್‌ ಸೇವಿಸಿ 5 ಮಂದಿ ಸಾವು Read More »

ನಾಳೆಯಿಂದ ಸಿಮ್‌ ಖರೀದಿಗೆ ಕಠಿಣ ನಿಯಮ

ಸೈಬರ್‌ ವಂಚನೆ, ದೇಶ ವಿರೋಧಿ ಕೃತ್ಯ ತಡೆಯಲು ಕ್ರಮ ಹೊಸದಿಲ್ಲಿ: ಹೆಚ್ಚುತ್ತಿರುವ ಸೈಬರ್ ವಂಚನೆ ಮತ್ತು ದೇಶ ವಿರೋಧಿ ಕೃತ್ಯಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಬೇಕಾಬಿಟ್ಟಿ ಸಿಮ್‌ ಖರೀದಿಯನ್ನು ನಿಯಂತ್ರಿಸಲು ಕೇಂದ್ರ ಸರಕಾರ ಮುಂದಾಗಿದೆ. ಸಿಮ್ ಖರೀದಿಸಿ ಕಾನೂನು ಬಾಹಿರ ಚಟುವಟಿಕೆಗಳಿಗೆ ದಾರಿ ಮಾಡಿಕೊಡುತ್ತಿದ್ದ ಡೀಲರ್‌ಗಳಿಗೆ ಬಿಸಿ ಮುಟ್ಟಿಸಲು ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.ಡಿ.1ರಿಂದ ಸಿಮ್ ಮಾರಾಟದ ನಿಯಮಗಳಲ್ಲಿ ಬದಲಾವಣೆಯಾಗಲಿದ್ದು, ಇದರ ಅಡಿಯಲ್ಲಿ, ಸಿಮ್‌ಗಳನ್ನು ಮಾರಾಟ ಮಾಡುವ ಎಲ್ಲ ಡೀಲರ್‌ಗಳು ಪರಿಶೀಲನೆಯನ್ನು ಹೊಂದಿರುವುದು ಕಡ್ಡಾಯವಾಗಿರುತ್ತದೆ. ಅಷ್ಟೇ ಅಲ್ಲದೆ ಡೀಲರ್‌ಗಳು …

ನಾಳೆಯಿಂದ ಸಿಮ್‌ ಖರೀದಿಗೆ ಕಠಿಣ ನಿಯಮ Read More »

ಮಂಗಳೂರು ಕುಕ್ಕರ್‌ ಬಾಂಬ್‌ ಸ್ಫೋಟ : ಇಬ್ಬರು ಶಂಕಿತ ಉಗ್ರರ ವಿರುದ್ಧ ಚಾರ್ಜ್‌ಶೀಟ್‌

ಕದ್ರಿ ಮಂಜುನಾಥ ದೇವಸ್ಥಾನ ಸ್ಫೋಟಕ್ಕೆ ಸಂಚು ರೂಪಿಸಿದ ಆರೋಪ ಬೆಂಗಳೂರು : ಮಂಗಳೂರಿನ ಕದ್ರಿ ಮಂಜುನಾಥ ದೇವಸ್ಥಾನ ಸ್ಫೋಟಕ್ಕೆ ಸಂಚು ರೂಪಿಸಿದ ಪ್ರಕರಣದಲ್ಲಿ ಸಿಕ್ಕಿಬಿದ್ದಿರುವ ಇಬ್ಬರು ಶಂಕಿತ ಉಗ್ರರ ವಿರುದ್ಧ ರಾಷ್ಟ್ರೀಯ ತನಿಖಾ ದಳ(ಎನ್‌ಐಎ) ನಗರದ ಎನ್‌ಐಎ ವಿಶೇಷ ಕೋರ್ಟಿಗೆ ಆರೋಪ ಪಟ್ಟಿ ಸಲ್ಲಿಸಿದೆ. ಶಿವಮೊಗ್ಗದ ಮೊಹಮ್ಮದ್ ಶಾರೀಕ್ ಮತ್ತು ಸೈಯದ್ ಶಾರೀಕ್ ಬಂಧಿತರು. ಉಗ್ರ ಸಂಘಟನೆ ಮುಖಂಡರ ಜತೆ ಆನ್‌ಲೈನ್‌ನಲ್ಲಿ ಸಂಪರ್ಕ ಹೊಂದಿದ್ದ ಇವರ ವಿರುದ್ಧ ಪ್ರತ್ಯೇಕ ಪ್ರಕರಣ ದಾಖಲಿಸಲಾಗಿತ್ತು ಎಂದು ಎನ್‌ಐಎ ಅಧಿಕಾರಿಗಳು ತಿಳಿಸಿದ್ದಾರೆ. …

ಮಂಗಳೂರು ಕುಕ್ಕರ್‌ ಬಾಂಬ್‌ ಸ್ಫೋಟ : ಇಬ್ಬರು ಶಂಕಿತ ಉಗ್ರರ ವಿರುದ್ಧ ಚಾರ್ಜ್‌ಶೀಟ್‌ Read More »

ಈದು : ಅಸ್ವಸ್ಥ ಮಹಿಳೆ ಸಾವು

ಕಾರ್ಕಳ : ಈದು ಗ್ರಾಮದ ಜಗದೀಶ್‌ ಎಂಬವರ ಸಹೋದರಿ ರೇವತಿ (36) ಎಂಬವರು ಕಾಯಿಲೆ ಉಲ್ಬಣಿಸಿ ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ತೀರಿಕೊಂಡಿದ್ದಾರೆ. 7 ವರ್ಷಗಳಿಂದ ಈದುವಿನಲ್ಲಿರುವ ತಾಯಿ ಮನೆಯಲ್ಲಿ ಇಬ್ಬರು ಮಕ್ಕಳ ಜತೆಗೆ ವಾಸವಾಗಿದ್ದ ರೇವತಿ ಉಸಿರಾಟದ ತೊಂದರೆ, ರಕ್ತದೊತ್ತಡ ಸಮಸ್ಯೆ ಹಾಗೂ ನಿಶ್ಯಕ್ತಿಯಿಂದ ಬಳಲುತ್ತಿದ್ದರು. ಕಾರ್ಕಳ ಸರಕಾರಿ ಆಸ್ಪತ್ರೆ, ಬಜಗೋಳಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ನ.29ರಂದು ಅವರು ತೀವ್ರ ಅಸ್ವಸ್ಥರಾಗಿದ್ದು, ಕಾರ್ಕಳ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಅಲ್ಲಿ ಮಧ್ಯಾಹ್ನ ತೀರಿಕೊಂಡಿದ್ದಾರೆ. ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ …

ಈದು : ಅಸ್ವಸ್ಥ ಮಹಿಳೆ ಸಾವು Read More »

ಕಾಸರಗೋಡಿನಿಂದ ನಾಪತ್ತೆಯಾಗಿದ್ದ ನಾಲ್ಕು ಮಕ್ಕಳು ಉಡುಪಿಯಲ್ಲಿ ಪತ್ತೆ

ಗೋವಾಕ್ಕೆ ಹೊರಟಿದ್ದರು ಅಪ್ರಾಪ್ತ ವಯಸ್ಸಿನ ಬಾಲಕರು ಉಡುಪಿ : ಕಾಸರಗೋಡಿನಿಂದ ನಾಪತ್ತೆಯಾಗಿದ್ದ ನಾಲ್ವರು ಬಾಲಕರು ಉಡುಪಿಯಲ್ಲಿ ಪತ್ತೆಯಾಗಿದ್ದಾರೆ. ಈ ನಾಲ್ಕು ಬಾಲಕರ ಪೈಕಿ ಮೂವರು ಮಕ್ಕಳು ನ.27ರಂದು ಸಂಜೆ ಶಾಲೆಯಿಂದ ಮನೆಗೆ ಬಂದಿದ್ದು, ಬಳಿಕ ಆಟ ಆಡಲೆಂದು ಮನೆಯಿಂದ ಹೊರಗೆ ತೆರಳಿದ್ದರು. ಈ ಮೂವರು ಬಾಲಕರೊಂದಿಗೆ ಇದೇ ಪ್ರದೇಶದ ಇನ್ನೋರ್ವ ಬಾಲಕನೂ ತೆರಳಿದ್ದು, ನಾಲ್ವರು ತಡವಾದರೂ ಇನ್ನೂ ಮನೆಗೆ ಬಂದಿರಲಿಲ್ಲ. ಎಲ್ಲರೂ 15 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾದ್ದರಿಂದ ಆತಂಕಗೊಂಡ ಬಾಲಕರ ಪೋಷಕರು ಕಾಸರಗೋಡು ಪೊಲೀಸರಿಗೆ ದೂರು ನೀಡಿದ್ದರು.ಬಳಿಕ …

ಕಾಸರಗೋಡಿನಿಂದ ನಾಪತ್ತೆಯಾಗಿದ್ದ ನಾಲ್ಕು ಮಕ್ಕಳು ಉಡುಪಿಯಲ್ಲಿ ಪತ್ತೆ Read More »

ಆನ್‌ಲೈನ್‌ನಲ್ಲಿ ಪಾರ್ಟ್‌ಟೈಮ್‌ ನೌಕರಿಯ ಆಮಿಷವೊಡ್ಡಿ 40 ಕೋ. ರೂ. ವಂಚನೆ : ನಾಲ್ವರ ಸೆರೆ

ಐದು ತಿಂಗಳಲ್ಲಿ 300ಕ್ಕೂ ಅಧಿಕ ಜನರಿಂದ ಹಣ ಲಪಟಾಯಿಸಿದ್ದ ಖದೀಮರು ಬೆಂಗಳೂರು : ಆನ್‌ಲೈನ್‌ನಲ್ಲಿ ಪಾರ್ಟ್‌ಟೈಮ್‌ ಕೆಲಸ ಕೊಡಿಸುವುದಾಗಿ ನಂಬಿಸಿ ನೂರಾರು ಜನರಿಂದ 40 ಕೋಟಿ ರೂ.ಗೂ ಅಧಿಕ ಮೊತ್ತ ವಸೂಲಿ ಮಾಡಿ ವಂಚಿಸಿದ್ದ ನಾಲ್ವರು ಖದೀಮರನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.ಆರ್‌.ಟಿ.ನಗರದ ಸೈಯದ್‌ ಯೂನಸ್‌ ಫಾಜಿಲ್ ಅಲಿಯಾಸ್ ಮುದಾಸಿರ್‌, ಭಾರತಿನಗರದ ಮೊಹಮ್ಮದ್‌ ಕಲೀಮುಲ್ಲಾ, ಬನಶಂಕರಿ ಹತ್ತಿರದ ಕಾವೇರಿನಗರದ ಸೈಯದ್‌ ಅರ್ಬಾಜ್‌ ಹಾಗೂ ಫ್ರೇಜರ್‌ ಟೌನ್‌ನ ಇಬ್ರಾಹಿಂ ಕರ್ನೂಲ್ ಬಂಧಿತರಾಗಿದ್ದು, ಆರೋಪಿಗಳ ವಿವಿಧ ಬ್ಯಾಂಕ್ ಖಾತೆಗಳಲ್ಲಿದ್ದ 60 ಲಕ್ಷ …

ಆನ್‌ಲೈನ್‌ನಲ್ಲಿ ಪಾರ್ಟ್‌ಟೈಮ್‌ ನೌಕರಿಯ ಆಮಿಷವೊಡ್ಡಿ 40 ಕೋ. ರೂ. ವಂಚನೆ : ನಾಲ್ವರ ಸೆರೆ Read More »

ನಾಲ್ವರ ಹತ್ಯೆ ಪ್ರಕರಣ : ಆರೋಪಿ ಬೆಂಗಳೂರು ಜೈಲಿಗೆ ಶಿಫ್ಟ್‌

ಉಡುಪಿ : ಉಡುಪಿ ಸಂತೆಕಟ್ಟೆ ಸಮೀಪ ನೇಜಾರಿನ ತೃಪ್ತಿ ನಗರದಲ್ಲಿ ನ. 12ರಂದು ಒಂದೇ ಕುಟುಂಬದ ನಾಲ್ವರ ಹತ್ಯೆಗೈದ ಪ್ರಕರಣದ ಆರೋಪಿ ಪ್ರವೀಣ್ ಚೌಗುಲೆಯನ್ನು ಬೆಂಗಳೂರಿನ ಪರಪ್ಪನ‌ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸಲಾಗಿದೆ.ನ. 22ರಿಂದ ಹಿರಿಯಡ್ಕ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಪ್ರವೀಣ್ ಚೌಗುಲೆಯನ್ನು ಗಂಭೀರ ಪ್ರಕರಣದ ಕಾರಣಕ್ಕೆ ಸುರಕ್ಷತೆಯ ಹಿನ್ನೆಲೆಯಲ್ಲಿ ಪ್ರತ್ಯೇಕ ಸೆಲ್ ಮತ್ತು ವಿಶೇಷ ಭದ್ರತೆಯೊಂದಿಗೆ ಇರಿಸಲಾಗಿತ್ತು. ಜಿಲ್ಲಾ ಕಾರಾಗೃಹದ ಭದ್ರತೆ ಕೊರತೆಯ ಹಿನ್ನೆಲೆಯಲ್ಲಿ ಆತನನ್ನು ಬೇರೆ ಜೈಲಿಗೆ ಸ್ಥಳಾಂತರಿಸುವ ಬಗ್ಗೆ ಜೈಲಾಧಿಕಾರಿಗಳು ಉಡುಪಿ ನ್ಯಾಯಾಲಯದಿಂದ …

ನಾಲ್ವರ ಹತ್ಯೆ ಪ್ರಕರಣ : ಆರೋಪಿ ಬೆಂಗಳೂರು ಜೈಲಿಗೆ ಶಿಫ್ಟ್‌ Read More »

ಮಂಗಳೂರಿನಲ್ಲಿ ಮತ್ತೆ ನೈತಿಕ ಪೊಲೀಸ್‌ಗಿರಿ : ಇಬ್ಬರ ಬಂಧನ

ಮಂಗಳೂರು : ಭಿನ್ನ ಕೋಮಿನ ಯುವಕ-ಯುವತಿ ಕೆಲಸ ಬಿಟ್ಟು ಜತೆಯಾಗಿ ಸ್ಕೂಟರ್‌ನಲ್ಲಿ ಹೋಗುತ್ತಿದ್ದಾಗ ಬಜರಂಗದಳ ಕಾರ್ಯಕರ್ತರು ಹಿಂಬಾಲಿಸಿ ತಡೆದು ತರಾಟೆಗೆ ತೆಗೆದುಕೊಂಡು ನೈತಿಕ ಪೊಲೀಸ್‌ಗಿರಿ ನಡೆಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರನ್ನು ಅಕ್ಷಯ್ ರಾವ್ ಮತ್ತು ಶಿಬಿನ್ ಪಡಿಕಲ್ ಎಂದು ಗುರುತಿಸಲಾಗಿದೆ. ಮಂಗಳೂರು ಮಂಕಿ ಸ್ಟ್ಯಾಂಡ್ ಬಳಿಯಿರುವ ಒಂದೇ ಮಳಿಗೆಯಲ್ಲಿ ಕೆಲಸ ಮಾಡುತ್ತಿದ್ದ ಹಿಂದು ಯುವತಿ ಮತ್ತು ಮುಸ್ಲಿಂ ಯುವಕ ಕೆಲಸ ಬಿಟ್ಟು ನ. 27ರಂದು ರಾತ್ರಿ 8 ಗಂಟೆ ವೇಳೆ ಜತೆಯಾಗಿ ಬೈಕ್‌ನಲ್ಲಿ …

ಮಂಗಳೂರಿನಲ್ಲಿ ಮತ್ತೆ ನೈತಿಕ ಪೊಲೀಸ್‌ಗಿರಿ : ಇಬ್ಬರ ಬಂಧನ Read More »

ಮಗಳ ಮೇಲೆ ಅತ್ಯಾಚಾರಕ್ಕೆ ಸಹಕರಿಸಿದ ತಾಯಿಗೆ 40 ವರ್ಷ ಜೈಲು

ತಾಯ್ತನಕ್ಕೆ ಎಸಗಿದ ಘೋರ ಅಪಚಾರ ಎಂದು ಅಭಿಪ್ರಾಯಪಟ್ಟ ನ್ಯಾಯಾಲಯ ತಿರುವನಂತಪುರಂ: ತನ್ನ 7 ವರ್ಷದ ಮಗಳ ಮೇಲೆಯೇ ಅತ್ಯಾಚಾರ ಎಸಗಲು ಪ್ರೇಮಿಗೆ ಅವಕಾಶ ಕೊಟ್ಟ ಮಹಿಳೆಗೆ ಕೇರಳ ಕೋರ್ಟ್ 40 ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ 20,000 ರೂ. ದಂಡ ವಿಧಿಸಿ ತೀರ್ಪು ನೀಡಿದೆ.ಈ ಆಘಾತಕಾರಿ ಘಟನೆಗೆ ಸಂಬಂಧಿಸಿದಂತೆ ತಿರುವನಂತಪುರಂನ ವಿಶೇಷ ಫಾಸ್ಟ್ ಟ್ರ‍್ಯಾಕ್ ಕೋರ್ಟ್ ಆರೋಪಿ ಮಹಿಳೆ ತಾಯ್ತನಕ್ಕೆ ಅವಮಾನ ಎಂದು ಪರಿಗಣಿಸಿದೆ. ಆಕೆ ಯಾವುದೇ ಕರುಣೆಗೆ ಅರ್ಹಳಲ್ಲ ಎಂದು ಅಭಿಪ್ರಾಯಪಟ್ಟು ಗರಿಷ್ಠ ಶಿಕ್ಷೆ …

ಮಗಳ ಮೇಲೆ ಅತ್ಯಾಚಾರಕ್ಕೆ ಸಹಕರಿಸಿದ ತಾಯಿಗೆ 40 ವರ್ಷ ಜೈಲು Read More »

error: Content is protected !!
Scroll to Top