ಡಿಸಿ ಕಚೇರಿ ಬಳಿ ಮಾವು ಕೊಯ್ಯುವ ವೇಳೆ ವಿದ್ಯುತ್‌ ಸ್ಪರ್ಶ – ಸಿಬ್ಬಂದಿ ಮೃತ್ಯು

ಉಡುಪಿ : ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ಮಾವಿನ ಮರದಿಂದ ಮಾವಿನ ಕಾಯಿ ಕೊಯ್ಯುವ ವೇಳೆ ವಿದ್ಯುತ್‌ ತಂತಿ ಸ್ಪರ್ಶಿಸಿ ಜಿಲ್ಲಾಧಿಕಾರಿ ಕಚೇರಿ ಗ್ರಾಮ ಸಹಾಯಕ ಅಲೆವೂರು ನಿವಾಸಿ ಸದಾನಂದ ದೇವಾಡಿಗ (55) ಮೃತಪಟ್ಟಿರುತ್ತಾರೆ. ಎ, 24ರಂದು ಬೆಳಗ್ಗೆ ಮಾವಿನ ಕಾಯಿ ಕೊಯ್ಯುತ್ತಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ವಿದ್ಯುತ್ ತಂತಿ ಸ್ಪರ್ಶಿಸಿದೆ. ಸ್ಥಳಕ್ಕೆ ಅಗ್ನಿ ಶಾಮಕದಳದ ಸಿಬಂದಿ ಆಗಮಿಸಿ ಮೃತದೇಹ ತೆರವುಗೊಳಿಸಲು ನೆರವಾದರು. ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.









































































error: Content is protected !!
Scroll to Top