ಕಾರ್ಕಳ : ಡಾ. ದಿ. ಸುನೇತ್ರ ಶೆಟ್ಟಿ ಅವರ ಪತ್ನಿ ವಿನೋದಾ ಎಸ್. ಶೆಟ್ಟಿ (81) ಮೇ 25ರ ರಾತ್ರಿ ಸ್ವಗೃಹ ತೆಳ್ಳಾರು ರಸ್ತೆ ಮನೆಯಲ್ಲಿ ನಿಧನ ಹೊಂದಿದರು. ಮೃತರು ಮೂವರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. ಬಡವರ ಬಂಧು ಕಾರ್ಯಕ್ರಮದ ಮೂಲಕ ಅನೇಕ ಬಡ ಹೆಣ್ಣು ಮಕ್ಕಳ ಮದುವೆಗೆ ಸಹಕಾರ ನೀಡಿರುತ್ತಾರೆ. ಮೃತರ ಅಂತ್ಯ ಸಂಸ್ಕಾರ ಮಧ್ಯಾಹ್ನ 12 ಗಂಟೆಗೆ ಕೌಡೂರು ವಿಠಲ ಸದನದಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ವಿನೋದಾ ಎಸ್. ಶೆಟ್ಟಿ ನಿಧನ












