ಬೆಂಗಳೂರು: ಕನ್ನಡದ ಹಿರಿಯ ಪೋಷಕ ನಟ ಹುಲಿವಾನ್ ಗಂಗಾಧರಯ್ಯ (70) ನಿನ್ನೆ ರಾತ್ರಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟು, ಚಿಕಿತ್ಸೆ ಪಡೆಯುತ್ತಿದ್ದರು.
ಕಿರುತೆರೆಯ ಪ್ರೇಮಲೋಕ ಧಾರವಾಹಿಯಲ್ಲಿ ಅವರು ನಟಿಸುತ್ತಾ ಇದ್ದರು. ಇತ್ತೀಚೆಗೆ ಧಾರಾವಾಹಿಯ ಶೂಟಿಂಗ್ನಲ್ಲೂ ಅವರು ಭಾಗಿಯಾಗಿದ್ದರು. ಹಲವಾರು ಸಿನಿಮಾ, ಧಾರವಾಹಿಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸಿ ತಮ್ಮದೇ ಆದ ಛಾಪು ಮೂಡಿಸಿದ್ದರು.
ರಂಗಭೂಮಿ, ಸಿನಿಮಾ, ಧಾರಾವಾಹಿ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿದ್ದ ಹುಲಿವಾನ್ ಗಂಗಾಧರಯ್ಯ ತೆಂಗುಬೆಳೆಗಾರರೂ ಆಗಿದ್ದರು.