ಹೆಬ್ರಿ : ಕೋಳಿ ಅಂಕಕ್ಕೆ ದಾಳಿ ನಡೆಸಿ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದ ಘಟನೆ ಮೇ 20ರಂದು ಹೆಬ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ನಾಲ್ಕೂರಿನಲ್ಲಿ ನಡೆದಿದೆ.
ಕೋಳಿ ಅಂಕ ನಡೆಯುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯ ಮೇರೆಗೆ ಪಿಎಸ್‌ಐ ರವಿ ಬಿ.ಕೆ. ಅವರು ಸಿಬ್ಬಂದಿಯ ಮುಖೇನ ರಾತ್ರಿ 8.30ಕ್ಕೆ ನಾಲ್ಕೂರು ಗ್ರಾಮದ ಚಂದಾಲ್ ಕಟ್ಟೆ ಗೇರು ಪ್ಲಾಂಟೇಷನ್‌ಗೆ ದಾಳಿ ನಡೆಸಿದ್ದಾರೆ. ಈ ವೇಳೆ ಅಲ್ಲಿದ್ದವರಲ್ಲಿ ಕೆಲವರು ಓಡಿ ಹೋಗಿದ್ದು, ಶೇಖರ ಪೂಜಾರಿ ಹಾಗೂ ಬಸವ ಕುಲಾಲ್ ಎಂಬವರನ್ನು ವಶಕ್ಕೆ ಪಡೆದಿದ್ದಾರೆ. ಜೂಜಾಟಕ್ಕೆ ಬಳಸಿದ ಅಂದಾಜು 2,800 ರೂ. ಬೆಲೆಯ ನಾಲ್ಕು ಹುಂಜ ಕೋಳಿ, ಕೋಳಿ ಬಾಳು-3, 1000 ರೂ. ನಗದು ಹಾಗೂ ಇನ್ನಿತರ ಪರಿಕರಗಳನ್ನು ಸ್ವಾದಿನಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.
ಕೋಳಿ ಅಂಕಕ್ಕೆ ದಾಳಿ – ಇಬ್ಬರು ಪೊಲೀಸರ ವಶಕ್ಕೆ
























