ಸಹಕಾರಿ ಸಂಘಗಳಿಂದ ಉತ್ಕೃಷ್ಟ ಸೇವೆ – ಡಾ. ಮಂಜುನಾಥ ಕೋಟ್ಯಾನ್‌

ಕಾರ್ಕಳ : ಗ್ರಾಹಕರಿಗೆ ಉತ್ಕೃಷ್ಟ ಸೇವೆ ನೀಡುತ್ತಿರುವ ಸಹಕಾರಿ ಸಂಸ್ಥೆಗಳ ಸಾಧನೆ ಶ್ಲಾಘನೀಯ. ಪರಸ್ಪರ ನಂಬಿಕೆ ಮತ್ತು ಪ್ರೀತಿಯೇ ಇಂತಹ ಬ್ಯಾಂಕಿಂಗ್ ವ್ಯವಹಾರಕ್ಕೆ ಭದ್ರ ಬುನಾದಿ ಎಂದು ಶ್ರೀ ಭುವನೇಂದ್ರ ಕಾಲೇಜಿನ ಪ್ರಾಂಶುಪಾಲ ಮಂಜುನಾಥ್ ಕೋಟ್ಯಾನ್ ಹೇಳಿದರು.
​ಅವರು ಪ್ರೈಮ್ ಸಿಟಿ ಸೆಂಟರ್‌ ನ ‘ಶ್ರೀ ವಿಜಯ’ಕ್ಕೆ ಸ್ಥಳಾಂತರಗೊಂಡಿರುವ ಆಶಯ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಹಿತೈಷಿಗಳು ಮತ್ತು ಗ್ರಾಹಕರ ಸಮ್ಮಿಲನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು. ್

ಅಧ್ಯಕ್ಷತೆ ವಹಿಸಿ ಮಾತನಾಡಿದ ಆಶಯ ವಿವಿದ್ಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಎಂ.ಕೆ. ಸುವ್ರತ್ ಕುಮಾರ್‌, ಸಮಾಜಮುಖಿ ಉದಾತ್ತ ಉದ್ದೇಶದಿಂದ ಕೆಲ ಸದಸ್ಯರರೊಂದಿಗೆ ಆರಂಭಗೊಂಡ ಆಶಯ ಸಂಸ್ಥೆಯು ಪ್ರಸ್ತುತ 3 ಸಾವಿರಕ್ಕೂ ಅಧಿಕ ಸದಸ್ಯರನ್ನು ಹೊಂದಿದೆ. 1 ಕೋಟಿ ರೂ. ವ್ಯವಹಾರದಿಂದ ಪ್ರಾರಂಭಗೊಂಡು ಇಂದು 300 ಕೋಟಿ ರೂ.ಗೆ ಏರಿಕೆ ಕಂಡಿರುವುದು ನಿಜಕ್ಕೂ ಹೆಮ್ಮೆಯ ವಿಚಾರವೆಂದರು.

ಜ್ಞಾನಸುಧಾ ಸಮೂಹ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ. ಸುಧಾಕರ್‌ ಶೆಟ್ಟಿ ಮಾತನಾಡಿ, ಸಮಾಜದಲ್ಲಿ ಸಹಕಾರಿ ತತ್ವ ಪ್ರಮುಖವಾದುದು. ಇಂತಹ ತತ್ವದೊಂದಿಗೆ ಆಶಯ ಸಂಸ್ಥೆಯು ಹೆಸರಿನಂತೆಯೇ ಎಲ್ಲರ ಆಶಯ ಈಡೇರಿಸುವ ಸಂಸ್ಥೆಯಾಗಿ ಬೆಳೆದಿದೆ ಎಂದರು.
ಉದ್ಯಮಿ ಬೋಳ ಪ್ರಭಾಕರ್‌ ಕಾಮತ್ ಮಾತನಾಡಿ, ಕಳೆದ 12 ವರ್ಷಗಳಲ್ಲಿ ಆಶಯ ಸೊಸೈಟಿಯೂ ಅಮೂಲಾಗ್ರ ಅಭಿವೃದ್ಧಿ ಕಂಡಿದೆ. ಇದಕ್ಕೆ ಗ್ರಾಹಕರ ವಿಶ್ವಾಸ, ಪ್ರೀತಿಯೇ ಕಾರಣವೆಂದರು.

ಕಾರ್ಯಕ್ರಮದಲ್ಲಿ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ, ಸೊಸೈಟಿ ಉಪಾಧ್ಯಕ್ಷ ರಾಬರ್ಟ್ ರೊನಾಲ್ಡ್ ಫೆರ್ನಾಂಡಿಸ್, ವೀಣಾ ಡಿʼ ಸೋಜಾ, ನಿರ್ದೇಶಕರಾದ ಮೋಹನ್ ಪಡಿವಾಳ್, ನಿರ್ದೇಶಕರು ಉಪಸ್ಥಿತರಿದ್ದರು. ಮೋಹನ್ ಪಡಿವಾಳ್ ಸ್ವಾಗತಿಸಿ, ಆರ್. ಜೆ. ಪ್ರಸನ್ನ ನಿರೂಪಿಸಿ, ವಂದಿಸಿದರು.







































































































error: Content is protected !!
Scroll to Top