ಕೊಹ್ಲಿ ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಆದಾಯ ಪಡೆದ ಆಟಗಾರ

ದೆಹಲಿ : ಐಪಿಎಲ್ ಟೂರ್ನಿಯ 19 ವರ್ಷಗಳ ಇತಿಹಾಸದಲ್ಲಿ ಅತಿ ಹೆಚ್ಚು ಆದಾಯ ಪಡೆದ ಆಟಗಾರರ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಅಗ್ರ ಸ್ಥಾನ ಪಡೆದಿದ್ದಾರೆ ಎಂದು ವರದಿಯಾಗಿದೆ.

ಫೆನಾಟಿಕ್ ಸ್ಪೋರ್ಟ್ಸ್ ಮತ್ತು ಹುರುನ್ ನೀಡಿರುವ ವರದಿ ಪ್ರಕಾರ ಐಪಿಎಲ್‌ನ 19 ಆವೃತ್ತಿಗಳಲ್ಲೂ ಆರ್‌ಸಿಬಿ ತಂಡವನ್ನು ಪ್ರತಿನಿಧಿಸಿರುವ ವಿರಾಟ್ ಕೊಹ್ಲಿ ಒಟ್ಟು 230 ಕೋಟಿ ಆದಾಯ ಪಡೆದು ಟೀಂ ಇಂಡಿಯಾ ಮಾಜಿ ನಾಯಕ ರೋಹಿತ್ ಶರ್ಮಾ ಹಾಗೂ ಎಂಎಸ್ ಧೋನಿ ಅವರನ್ನು ಹಿಂದಿಕ್ಕಿದ್ದಾರೆ. ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ 227.2 ಕೋಟಿ ರೂ., ಮಹೇಂದ್ರ ಸಿಂಗ್ ಧೋನಿ 200 ಕೋಟಿ ರೂ. ಗಳಿಕೆ ಮಾಡಿದ್ದಾರೆ. ಮಹಿಳಾ ಆಟಗಾರ್ತಿಯರಲ್ಲಿ ಸ್ಮೃತಿ ಮಂದಾನ ಅಗ್ರಸ್ಥಾನದಲ್ಲಿದ್ದಾರೆ. ಡಬ್ಲ್ಯೂಪಿಎಲ್‌ನಿಂದ ಸ್ಮೃತಿ 13.7 ಕೋಟಿ ಆದಾಯ ಪಡೆದಿದ್ದಾರೆ.













error: Content is protected !!
Scroll to Top