ಉಡುಪಿ: ಈಗಿನ ಪ್ರಸಕ್ತ ತಂತ್ರಾಂಶದಿಂದ ಹೊಸ ತಂತ್ರಾಂಶಕ್ಕೆ ಬದಲಾಗುವ ಹಿನ್ನೆಲೆಯಲ್ಲಿ ಅಂಚೆ ಜೀವ ವಿಮೆ ಮತ್ತು ಗ್ರಾಮೀಣ ಅಂಚೆ ಜೀವ ವಿಮೆಗಳಿಗೆ ಸಂಬಂಧಿಸಿದ ಯಾವುದೇ ವ್ಯವಹಾರಗಳು ನವೆಂಬರ್ 16ರಿಂದ 24ರವರೆಗೆ ಅಂಚೆ ಕಚೇರಿಗಳಲ್ಲಿ ಇರುವುದಿಲ್ಲ.
ನ.25ರಿಂದ ಎಲ್ಲಾ ಸೇವೆಗಳು ಎಂದಿನಂತೆ ಲಭ್ಯವಿರಲಿದ್ದು, ಗ್ರಾಹಕರು ಸಹಕರಿಸುವಂತೆ ಉಡುಪಿ ವಿಭಾಗದ ಅಂಚೆ ಅಧೀಕ್ಷಕರ ಪ್ರಕಟಣೆ ತಿಳಿಸಿದೆ.




























































