ಶಿಲ್ಪಕಲೆ ಕಾರ್ಕಳದ ಜೀವಾಳ

ಶಿಲ್ಪಕಲೆಗೆ ಕಾರ್ಲದ ಕೊಡುಗೆ
✏:

ಬರಹ : ರಾಮಚಂದ್ರ ಬರೆಪ್ಪಾಡಿ

ಶಿಲೆಗೆ ಕಾರ್ಕಳ ಲೋಕಪ್ರಸಿದ್ಧಿ ಪಡೆದ ಊರು. 1982ರಲ್ಲಿ ಪ್ರತಿಷ್ಠಾಪನೆಯಾದ ಧರ್ಮಸ್ಥಳದ ಶ್ರೀ ಬಾಹುಬಲಿ ಮೂರ್ತಿ ಕಾರ್ಕಳದಲ್ಲಿ ಕೆತ್ತನೆಗೊಂಡಿತ್ತು. ಅದನ್ನು ಕೆತ್ತಿದ ಹಿರಿಮೆ ಕಾರ್ಕಳ ತಾಲೂಕು ರೆಂಜಾಳ ಗ್ರಾಮದ ಗೋಪಾಲ ಶೆಣೈ ಅವರದ್ದು. ಜಪಾನ್‍ನಲ್ಲಿ ಪ್ರತಿಷ್ಠಾಪನೆಗೊಂಡಿರುವ ಬುದ್ಧನ ಪ್ರತಿಮೆಯನ್ನೂ ಕೆತ್ತಿರುವ ಹೆಗ್ಗಳಿಕೆಯೂ ಅವರಿಗಿದೆ. ಗೋಪಾಲ ಶೆಣೈ ಅವರ ಶಿಲ್ಪಾಕಲಾ ಕ್ಷೇತ್ರದ ಸಾಧನೆಗಾಗಿ ರಾಷ್ಟ್ರ ಪ್ರಶಸ್ತಿ ಅರಸಿ ಬಂದಿದ್ದು, 1969ರಲ್ಲಿ ಅಂದಿನ ರಾಷ್ಟ್ರಪತಿ ಜಾಕೀರ್ ಹುಸೇನ್ ಅವರಿಂದ ಪ್ರಶಸ್ತಿ ಸ್ವೀಕರಿಸಿದ್ದರು. ಅವರ ಶಿಷ್ಯ ಶ್ಯಾಮರಾಯ ಆಚಾರ್ಯರೂ ಶಿಲ್ಪಕಲೆಯಲ್ಲಿ ಅಗ್ರಮಾನ್ಯ ಸಾಧನೆ ಮಾಡಿದ್ದು, ಅವರೂ ರಾಷ್ಟ್ರ ಪ್ರಶಸ್ತಿಯಿಂದ ಪುರಸ್ಕೃತರಾದವರು. ಶ್ಯಾಮರಾಯರ ಪುತ್ರ ಸತೀಶ್ ಆಚಾರ್ಯರೂ ಶಿಲ್ಪಕಲೆಯ ಪರಂಪರೆ ಮುಂದುವರಿಸಿಕೊಂಡು ಬಂದಿರುತ್ತಾರೆ.

#ರಾಷ್ಟ್ರಪತಿಭವನ#ಅಲಂಕರಿಸಿದ#ಶಿಲಾಮೂರ್ತಿಗಳುಇಲ್ಲಿನ ಶಿಲ್ಪಗ್ರಾಮದ ವಿಜಯಾ ಶಿಲ್ಪಶಾಲೆಯಲ್ಲಿ ನಿರ್ಮಾಣಗೊಂಡ 10 ಶಿಲಾಮೂರ್ತಿಗಳು ರಾಷ್ಟ್ರಪತಿ ಭವನದ ಮ್ಯೂಸಿಯಂ ಅಲಂಕರಿಸಿದೆ. 2020ರ ಜನವರಿಯಲ್ಲಿ ಈ ಶಿಲಾಮೂರ್ತಿಗಳನ್ನು ಹಸ್ತಾಂತರಿಸಲಾಗಿತ್ತು.

#ಮಿಯ್ಯಾರು#ಕುಶಲಕರ್ಮಿ#ತರಬೇತಿ#ಶಾಲೆ 1997ರಲ್ಲಿ ಕೆನರಾ ಬ್ಯಾಂಕ್ ಪ್ರಾಯೋಜಿತ ಸಿ.ಇ. ಕಾಮತ್ ಕುಶಲಕರ್ಮಿ ತರಬೇತಿ ಸಂಸ್ಥೆ ಕಾರ್ಕಳದಿಂದ 5 ಕಿ.ಮೀ. ದೂರದಲ್ಲಿರುವ ಮಿಯ್ಯಾರಿನಲ್ಲಿ ತೆರೆಯಿತು. ಶಿಲ್ಪ, ಮರ, ಲೋಹದ ಕೆತ್ತನೆ ತರಬೇತಿಯನ್ನಿಲ್ಲಿ ಉಚಿತವಾಗಿ ನೀಡಲಾಗುತ್ತಿದೆ. 18 ತಿಂಗಳ ಅವಧಿಯ ತರಬೇತಿ ಇದಾಗಿದ್ದು, ಕಲಿಕಾ ಸಾಮಗ್ರಿ, ಉಪಕರಣ, ಸಮವಸ್ತ್ರ, ಊಟ, ವಸತಿ ಸೇರಿದಂತೆ ವಿದ್ಯಾರ್ಥಿಗಳಿಗೆ ಎಲ್ಲವನ್ನೂ ಕೆನರಾ ಬ್ಯಾಂಕ್‍ನಿಂದ ನೀಡಲಾಗುತ್ತಿದೆ. ಈಗಾಗಲೇ ಸುಮಾರು 725 ವಿದ್ಯಾರ್ಥಿಗಳು ತರಬೇತಿ ಪಡೆದು ವಿವಿಧೆಡೆ ಉದ್ಯೋಗದಲ್ಲಿದ್ದಾರೆ. ಸಂಪರ್ಕ: 9481402895

#ಗೇರು#ಉದ್ದಿಮೆ

ಗೇರು ಉದ್ದಿಮೆಗೆ ಕಾರ್ಕಳ ಪ್ರಸಿದ್ಧಿ. ಸುಮಾರು 70ಕ್ಕಿಂತ ಹೆಚ್ಚಿನ ಸಂಖ್ಯೆಯ ಗೇರು ಕಾರ್ಖಾನೆಗಳು ಕಾರ್ಕಳದಲ್ಲಿವೆ. ಸೆನೆಗಲ್, ಜಿನಿಬಿಸವೋ, ಬೆನಿನ್ ದೇಶಗಳಿಂದ ಕಚ್ಚಾ ಗೇರುವನ್ನು ದೊಡ್ಡ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳಲಾಗುತ್ತಿದ್ದು, ಅಮೆರಿಕಾ, ಆಸ್ಟ್ರೇಲಿಯಾ, ಯುರೋಪ್, ಅರಬ್ ಹೀಗೆ ಹತ್ತಾರು ದೇಶಗಳಿಗೆ ಗೇರು ಉತ್ಪನ್ನ ರಫ್ತು ಮಾಡಲಾಗುತ್ತಿದೆ. ದೇಶದ ಗೇರು ರಫ್ತು ಪ್ರಮಾಣದಲ್ಲಿ ಶೇ. 20ರಷ್ಟು ಕಾರ್ಕಳದಿಂದಲೇ ಪೂರೈಕೆಯಾಗುತ್ತಿರುವುದು ಕಾರ್ಕಳದ ಹಿರಿಮೆ. ವರ್ಷಕ್ಕೆ ಸಾವಿರಾರು ಕೋಟಿ ರೂ. ಇದರಿಂದಲೇ ವ್ಯವಹಾರ ನಡೆಯುತ್ತಿದ್ದು, ಸ್ಥಳೀಯ ಸುಮಾರು 30 ಸಾವಿರ ಮಂದಿಗೆ ಗೇರು ಕಾರ್ಖಾನೆ ಉದ್ಯೋಗ ಕಲ್ಪಿಸಿದೆ. ಬಹುತೇಕ ಮಹಿಳೆಯರೇ ತೊಡಗಿಸಿಕೊಂಡಿದ್ದು, ಆರ್ಥಿಕವಾಗಿ ಸ್ವಾವಲಂಬಿಯಾಗಿಸುವಲ್ಲಿ ಗೇರು ಉದ್ಯಮದ ಕೊಡುಗೆಯೂ ಅಪಾರವಾಗಿದೆ.

Share

error: Content is protected !!
Scroll to Top