ರಾಜʼಪಥ (ರಾಜೇಂದ್ರ ಭಟ್‌ ಬರಹ)

ಗಣಿತ ಕಲಿಸುವ ಜೀವನದ ಪಾಠ – ಎಲ್ಲ ಸಮಸ್ಯೆಗಳಿಗೂ ಪರಿಹಾರ ಇದೆ

ಸಮಸ್ಯೆಗಳನ್ನು ಎದುರಿಸುವ ಶಕ್ತಿ ನಮ್ಮ ಒಳಗೆ ಇರುತ್ತದೆ ನಾನೊಬ್ಬ ಗಣಿತ ಅಧ್ಯಾಪಕ. ಗಣಿತ ಜೀವನಕ್ಕೆ ಹಲವು ಪಾಠಗಳನ್ನು ಕೊಡುತ್ತದೆ. ಅದರಲ್ಲಿ ಒಂದು ಪ್ರಮುಖ ಪಾಠ ಎಂದರೆ-ಎಲ್ಲ ಸಮಸ್ಯೆಗಳಿಗೂ ಪರಿಹಾರ ಇದೆ ಎನ್ನುವುದು.ಜೀವನದಲ್ಲಿ ಕೆಲವು ಸಮಸ್ಯೆಗಳು ನಮಗೆ ಹೇಳಿ ಬರುತ್ತವೆ. ಕೆಲವು ಹೇಳದೇ ಬರುತ್ತವೆ. ಕೆಲವು ಅದರಷ್ಟಕ್ಕೆ ಬರುತ್ತವೆ. ಇನ್ನೂ ಕೆಲವನ್ನು ನಾವು ನಮ್ಮದೇ ತಪ್ಪುಗಳಿಂದ ಮೈಮೇಲೆ ಎಳೆದುಕೊಳ್ಳುತ್ತೇವೆ.ಆದರೆ ಸ್ವಲ್ಪ ತಾಳ್ಮೆಯಿಂದ ಯೋಚನೆ ಮಾಡಿ ನೋಡಿದರೆ ಹೆಚ್ಚಿನ ಸಮಸ್ಯೆ ಅದರಷ್ಟಕ್ಕೆ ಪರಿಹಾರ ಆಗುತ್ತದೆ. ಹೇಳದೇ ಬರುವ ಸಮಸ್ಯೆಗಳಿಗೆ ನಾವು …

ಗಣಿತ ಕಲಿಸುವ ಜೀವನದ ಪಾಠ – ಎಲ್ಲ ಸಮಸ್ಯೆಗಳಿಗೂ ಪರಿಹಾರ ಇದೆ Read More »

ತೋಚಿದ್ದನ್ನು ಗೀಚಿ ಮಹಾನ್ ಸಾಹಿತಿ ಆದ ಬೀಚಿ

ಕನ್ನಡ ಸಾಹಿತ್ಯಲೋಕದ ಹಾಸ್ಯ ಬ್ರಹ್ಮ ನನ್ನ ಬಾಲ್ಯದಲ್ಲಿ ಕಾರ್ಕಳದ ಕೇಂದ್ರ ಗ್ರಂಥಾಲಯದಲ್ಲಿ ವಾರಗಳ ಕಾಲ ಕುಳಿತು ಓದಿದ ಅತಿ ಹೆಚ್ಚು ಪುಸ್ತಕ ಖಂಡಿತವಾಗಿಯೂ ಬೀಚಿ ಅವರದ್ದು. ಅವರ ಪ್ರಭಾವವೇ ಅದ್ಭುತ.ಬೀಚಿಯವರ ಸಂಪೂರ್ಣ ಹೆಸರು ರಾಯಸಂ ಭೀಮಸೇನ ರಾವ್. ಹುಟ್ಟಿದ್ದು ಅಂದಿನ ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಸಂಪ್ರದಾಯಸ್ಥರ ಕುಟುಂಬದಲ್ಲಿ. ಹುಟ್ಟಿದ ಕೆಲವೇ ದಿನಗಳಲ್ಲಿ ಅಪ್ಪ ತೀರಿದರು. ಆಗ ಹಿರಿಯರು ‘ಅಪಶಕುನದ ಮಗು’ ಎಂದು ಭಾವಿಸಿ ಸತ್ತರೆ ಸಾಯಲಿ ಎಂದು ಭಾವಿಸಿ ಮೂರು ದಿನ ಹೊರಗೆ ಬಿಸಿಲಲ್ಲಿ ಮಲಗಿಸಿದರಂತೆ. …

ತೋಚಿದ್ದನ್ನು ಗೀಚಿ ಮಹಾನ್ ಸಾಹಿತಿ ಆದ ಬೀಚಿ Read More »

ಯುಟ್ಯೂಬ್ ಸೆನ್ಸೇಷನ್ ನೇಹಾ ಕಕ್ಕರ್

ಈ ಪಾಪ್ ಗಾಯಕಿಗೆ ಜಗತ್ತಿನಾದ್ಯಂತ ಎರಡು ಬಿಲಿಯನ್ ವೀಕ್ಷಕರು ಇದ್ದಾರೆ ಆಧುನಿಕ ಸಂಗೀತವನ್ನು ಆಪೋಶನ ಮಾಡಿಕೊಂಡಿರುವ ಈ ಪಾಪ್ ಗಾಯಕಿ ಜಗತ್ತಿನ ಯಾವ ಸಂಗೀತದ ವೇದಿಕೆಯಲ್ಲಿ ಹಾಡಲು ನಿಂತರೂ ಸಾವಿರಾರು ಜನ ಕಿಕ್ಕಿರಿದು ಸೇರುತ್ತಾರೆ. ಆಕೆಯೊಂದಿಗೆ ಹಾಡುತ್ತಾರೆ, ಕುಣಿಯುತ್ತಾರೆ, ಫೀಲ್ ಮಾಡಿಕೊಳ್ಳುತ್ತಾರೆ. ಆಕೆಯ ಸೌಂದರ್ಯಕ್ಕೆ ಫಿದಾ ಆಗುತ್ತಾರೆ. ಇಡೀ ಸಭಾಂಗಣ ಆಕೆಯ ಸಂಗೀತಕ್ಕೆ ಸಂವಾದಿ ಆಗುತ್ತದೆ. ಹೌದು, ಆಕೆ ಇಂದಿನ ಬೇಬಿ ಡಾಲ್ ಗಾಯಕಿ ನೇಹಾ ಕಕ್ಕರ್. ಆಕೆ ಪಂಜಾಬಿ ಕುಡಿ ನೇಹಾ ಹುಟ್ಟಿದ್ದು ಉತ್ತರ ಪ್ರದೇಶದ …

ಯುಟ್ಯೂಬ್ ಸೆನ್ಸೇಷನ್ ನೇಹಾ ಕಕ್ಕರ್ Read More »

ಪರಿಸರವನ್ನು ಹೀಗಿಟ್ಟುಕೊಂಡು ದಿನಾಚರಣೆ ಮಾಡುವುದರಲ್ಲಿ ಅರ್ಥ ಇದೆಯೇ?

ಜೂನ್ 5-ವಿಶ್ವ ಪರಿಸರ ದಿನ ಗಮನಿಸಿ,ಇವುಗಳು ಬೆಚ್ಚಿ ಬೀಳಿಸುವ ಅಂಶಗಳು ಈಗ ಎಚ್ಚರ ಆಗದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ! -ಜಗತ್ತಿನ ಮೊದಲ ಹತ್ತು ಅತಿ ಪರಿಸರ ಮಾಲಿನ್ಯ ನಗರಗಳ ಪಟ್ಟಿಯಲ್ಲಿ ಭಾರತದ ಏಳು ನಗರಗಳು ಇವೆ. -ರಾಜಧಾನಿ ದಿಲ್ಲಿ ವಾಸಿಸಲು ಯೋಗ್ಯವಲ್ಲದ ನಗರ ಎಂದು ವಿಶ್ವ ಆರೋಗ್ಯ ಸಂಸ್ಥೆಯು ಘೋಷಣೆ ಮಾಡಿದೆ. -ಭಾರತದ ಹತ್ತು ಮಂದಿಯಲ್ಲಿ ಕನಿಷ್ಠ ನಾಲ್ಕು ಮಂದಿಗೆ ಉಸಿರಾಟದ ತೀವ್ರ ಸಮಸ್ಯೆ ಇದೆ. -ಪರಿಸರ ಹಾನಿಯ ಕಾರಣದಿಂದ ಮನುಷ್ಯನ ಒಟ್ಟಾಯುಷ್ಯ ಎರಡೂವರೆ ವರ್ಷ ಕಡಿಮೆ …

ಪರಿಸರವನ್ನು ಹೀಗಿಟ್ಟುಕೊಂಡು ದಿನಾಚರಣೆ ಮಾಡುವುದರಲ್ಲಿ ಅರ್ಥ ಇದೆಯೇ? Read More »

ಮುಖವೇ ಇಲ್ಲದ ಆಕೆಗೆ ತನ್ನ ಹೆಸರು ಮರೆತು ಹೋಗಿದೆ

ಆಕೆಯನ್ನು ಕಾಡುವ ಒಂದೇ ಪ್ರಶ್ನೆ-ನಾನು ಯಾರು? ಮನೆಯೊಳಗೆ ಆಕೆಯನ್ನು ಎಲ್ಲರೂ ಅತ್ತಿಗೆ, ಮಾಮಿ, ಅಕ್ಕ ಎಂದೆಲ್ಲ ಕರೆಯುತ್ತಾರೆ. ಆಕೆಯ ಮಕ್ಕಳು ಅಮ್ಮ ಎಂದು ಕರೆಯುತ್ತಾರೆ. ಮೊಮ್ಮಕ್ಕಳು ಅಜ್ಜಿ ಎನ್ನುತ್ತಾರೆ. ಮೊಮ್ಮಕ್ಕಳ ಗೆಳೆಯರು ಮನೆಗೆ ಬಂದರೆ ಅವರೂ ಕೂಡ ಅಜ್ಜಿ ಎನ್ನುತ್ತಾರೆ. ಹೊರಗಿಂದ ಯಾರು ಬಂದರೂ ಆಕೆಯನ್ನು ಆಂಟಿ ಎಂದೇ ಕರೆಯುತ್ತಾರೆ. ಕೈ ಹಿಡಿದ ಗಂಡ ಆಕೆಯನ್ನು ‘ಓ ಇವಳೇ’ ಎಂದು ಕರೆಯುತ್ತಾನೆ. ಮನೆಯ ಹೊರಗೆ ಬಂದರೆ ಅಲ್ಲಿ ಕೂಡ ಆಕೆಯು ಇಂತವನ ಹೆಂಡತಿ ಎಂದೇ ರಿಜಿಸ್ಟ್ರರ್ ಆಗಿದ್ದಾಳೆ. …

ಮುಖವೇ ಇಲ್ಲದ ಆಕೆಗೆ ತನ್ನ ಹೆಸರು ಮರೆತು ಹೋಗಿದೆ Read More »

ಕೊಂಕಣ್ ರೈಲ್ವೆ ಪಿತಾಮಹ ಜಾರ್ಜ್ ಫರ್ನಾಂಡಿಸ್

ಇಂದು ಕರಾವಳಿಯ ಈ ಪ್ರಗತಿ ಪುರುಷನ ಹುಟ್ಟಿದ ಹಬ್ಬ 1989ರ ಇಸವಿಯಲ್ಲಿ ಪ್ರಧಾನಿ ವಿ.ಪಿ.ಸಿಂಗ್‌ ಅವರ ಕ್ಯಾಬಿನೆಟ್‌ನಲ್ಲಿ ರೈಲ್ವೇ ಮಂತ್ರಿ ಆಗಿ ಪ್ರತಿಜ್ಞೆ ಸ್ವೀಕರಿಸಿದ ತಕ್ಷಣ ಜಾರ್ಜ್ ಫರ್ನಾಂಡಿಸ್ ರೈಲ್ವೇ ಅಧಿಕಾರಿಗಳ ಸಭೆಯನ್ನು ಕರೆದಿದ್ದರು.ಜಾರ್ಜ್ ಫರ್ನಾಂಡಿಸ್ ಅಂದು ಹೇಳಿದ್ದು ಎರಡೇ ಮಾತು, ನನ್ನ ಮನಸಿನಲ್ಲಿ ಎರಡು ಯೋಜನೆಗಳು ಇವೆ. ಒಂದು ಬಿಹಾರದಲ್ಲಿ ಚಿಟ್ಟೌನಿ ಮತ್ತೊಂದು ಕರ್ನಾಟಕದಲ್ಲಿ ಕೊಂಕಣ ರೈಲ್ವೆ. ಮುಂದಿನ ಬಜೆಟ್ಟಿನಲ್ಲಿ ಅವುಗಳಿಗೆ ನಾನು ಹಣವನ್ನು ಮೀಸಲು ಇಡುತ್ತೇನೆ. ಅವೆರಡೂ ಪೂರ್ತಿ ಆಗಬೇಕು.ಆಗ ಪತ್ರಕರ್ತರು ಅವೆರಡು ಯೋಜನೆಗಳು …

ಕೊಂಕಣ್ ರೈಲ್ವೆ ಪಿತಾಮಹ ಜಾರ್ಜ್ ಫರ್ನಾಂಡಿಸ್ Read More »

ಮರಣದ ದವಡೆಯಲ್ಲೂ ವಿಷಾದಿಸದೆ ನಡೆದ

ದೇವರೇ ಹೀಗೇಕೆ ಮಾಡಿದೆ ಎಂದು ನಾನು ಕೇಳುವುದಿಲ್ಲ ಎಂದಿದ್ದರು ಟೆನ್ನಿಸ್ ಆಟಗಾರ ಆರ್ಥರ್ ಆಶ್ ಅಮೆರಿಕದ ಈ ಲೆಜೆಂಡರಿ ದೈತ್ಯ ಟೆನ್ನಿಸ್ ಆಟಗಾರನ ರೋಮಾಂಚನ ಉಂಟುಮಾಡುವ ಬದುಕಿನ ಹೋರಾಟದ ಕತೆಯನ್ನು ನನ್ನ ತರಬೇತಿಯ ಸಂದರ್ಭ ನೂರಾರು ಬಾರಿ ಹೇಳಿದ್ದೇನೆ. ಈಗ ನಿಮ್ಮ ಜೊತೆ ಹಂಚಿಕೊಳ್ಳುತ್ತಿರುವೆ. ಆತನ ಹೆಸರು ಆರ್ಥರ್ ಆಶ್ ಆತ ಒಬ್ಬ ಕರಿಯ ಟೆನ್ನಿಸ್ ಆಟಗಾರ. ತುಳಿತಕ್ಕೆ ಒಳಗಾದ ಸಮುದಾಯದಿಂದ ಎದ್ದು ಬಂದವನು. ಅಮೆರಿಕದ ಡೇವಿಸ್ ಕಪ್ ತಂಡಕ್ಕೆ ಆಯ್ಕೆ ಆದ ಮೊದಲ ಬ್ಲಾಕ್ ಟೆನ್ನಿಸ್ …

ಮರಣದ ದವಡೆಯಲ್ಲೂ ವಿಷಾದಿಸದೆ ನಡೆದ Read More »

ಅಂಗನವಾಡಿಗಳಿಗೆ ಆಧುನಿಕತೆಯ ಸ್ಪರ್ಶ ಕೊಟ್ಟ ಆದಿತ್ಯರಂಜನ್ ಐಎಎಸ್‌

ಇಚ್ಛಾಶಕ್ತಿಯ ಒಬ್ಬ ಜಿಲ್ಲಾಧಿಕಾರಿ ಶಿಕ್ಷಣ ವ್ಯವಸ್ಥೆಯಲ್ಲಿ ಮಾಡಿದ ಕ್ರಾಂತಿ ಕೇವಲ ಸಂಕಲ್ಪ ಶಕ್ತಿ ಮತ್ತು ಸಮಾಜ ಸೇವೆಯ ಕಾಳಜಿಯಿಂದ IAS ಪರೀಕ್ಷೆ ಬರೆದು ಜಿಲ್ಲಾಧಿಕಾರಿ ಆದ ಒಬ್ಬ ಉತ್ಸಾಹಿ ಯುವಕ ಇಂದು ಜಾರ್ಖಂಡ್ ರಾಜ್ಯದ ಒಂದು ಜಿಲ್ಲೆಯ ಚಿತ್ರಣವನ್ನೇ ಬದಲಾವಣೆ ಮಾಡಿರುವುದು ಬಹಳ ದೊಡ್ಡ ಸುದ್ದಿ. ಅದು ಕೂಡ ಶೈಕ್ಷಣಿಕ ಕ್ರಾಂತಿಯ ಮೂಲಕ ಅನ್ನುವಾಗ ಇನ್ನೂ ಹೆಚ್ಚು ರೋಮಾಂಚನ ಆಗ್ತದೆ. ಅದಕ್ಕೆ ಕಾರಣರಾದವರು ಆದಿತ್ಯ ರಂಜನ್. ಸರಕಾರಿ ಶಾಲೆಗಳಲ್ಲಿ ಓದಿ ಐಎಎಸ್ ಬರೆದರು ಅವರು ಮೂಲತಃ ಕೈಗಾರಿಕಾ …

ಅಂಗನವಾಡಿಗಳಿಗೆ ಆಧುನಿಕತೆಯ ಸ್ಪರ್ಶ ಕೊಟ್ಟ ಆದಿತ್ಯರಂಜನ್ ಐಎಎಸ್‌ Read More »

ದೀಪಾ ಮಲಿಕ್‌ ಎಂಬ ಕೆಚ್ಚೆದೆಯ ಕ್ರೀಡಾಪಟು

ಈಕೆಯ ಸಾಧನೆ ಸ್ಫೂರ್ತಿಯ ಚಿಲುಮೆ 21 ವರ್ಷಗಳಿಂದ ಉಸಿರುಗಟ್ಟಿಸುವ ವೀಲ್ ಚೇರ್ ಮೇಲಿನ ಪರಾವಲಂಬನೆಯ ಬದುಕು. ಎದೆಯ ಕೆಳಗಿನ ದೇಹದ ಭಾಗ ಪೂರ್ತಿಯಾಗಿ ಜೀವರಹಿತ. ಮಲ, ಮೂತ್ರಗಳ ವಿಸರ್ಜನೆಯ ಮೇಲೆ ನಿಯಂತ್ರಣ ಇಲ್ಲ. ಮನೆಯಲ್ಲಿ ಇರುವ ಒಬ್ಬಳು ಮಗಳು ಅಪಘಾತಕ್ಕೆ ಒಳಗಾಗಿ ದೇಹದ ಎಡಭಾಗ ಪೂರ್ತಿ ವೈಕಲ್ಯ.ಇಷ್ಟೆಲ್ಲಾ ಕ್ಲಿಷ್ಟ ಸಮಸ್ಯೆಗಳ ನಡುವೆ ಇರುವ ಒಬ್ಬಳು ಹೆಣ್ಣು ಮಗಳು ವಿಶ್ವಮಟ್ಟದ ಪಾರಾ ಒಲಿಂಪಿಕ್ಸ್ ಕೂಟದಲ್ಲಿ ಒಂದು ಪದಕವನ್ನು ಗೆಲ್ಲುವ ಕನಸನ್ನು ಕಾಣುವುದು ಸಾಧ್ಯವೇ? ಅದರ ಬಗ್ಗೆ ಯೋಚನೆ ಕೂಡ …

ದೀಪಾ ಮಲಿಕ್‌ ಎಂಬ ಕೆಚ್ಚೆದೆಯ ಕ್ರೀಡಾಪಟು Read More »

ಜಗದ ಬೆಳಕು ಕಾಣುವ ಮುನ್ನ ಕೊಂದು ಹಾಕುವ ಕ್ರೌರ್ಯ…

ಹೆಚ್ಚುತ್ತಿರುವ ಅಬಾರ್ಷನ್ ಕೇಸ್‌-ಎತ್ತ ಸಾಗುತ್ತಿದೆ ಯುವಜನತೆಯ ನೈತಿಕತೆ? ಇತ್ತೀಚೆಗೆ ಇಂಟರ್ನೆಟ್‌ ಮೂಲಕ ಮಾನವ ಅಂಡಗಳನ್ನು ಮಾರಾಟ ಮಾಡುವ ಸಂಗತಿಗಳು ಹೆಚ್ಚುತ್ತಿವೆ. ಅದರಲ್ಲಿಯೂ ಸೂಪರ್ ಮಾಡೆಲ್‌ಗಳ ಅಂಡಗಳಿಗೆ ಭಾರಿ ಬೇಡಿಕೆ ಇದೆ. ಈಗಾಗಲೇ ರಕ್ತ ಬ್ಯಾಂಕ್‌ಗಳು ಇರುವ ಹಾಗೆ ಮಾನವರ ವೀರ್ಯ ಬ್ಯಾಂಕುಗಳು ಜನಪ್ರಿಯ ಆಗ್ತಾ ಇವೆ. ಮಕ್ಕಳಿಲ್ಲದ ದಂಪತಿಗಳಿಗೆ ಮಗುವನ್ನು ಪಡೆಯಲು ಇಂದು ಹತ್ತಾರು ಕಾನೂನುಬದ್ಧವಾದ ದಾರಿಗಳು ಇವೆ. ದುಃಖ ಪಡುತ್ತಾ ಮೂಲೆ ಸೇರುವ ಕಾಲವು ಇನ್ನಿಲ್ಲ ಎಂದೇ ಹೇಳಬಹುದು.ವೀರ್ಯದಾನ ಮಾಡಿ ಸಾವಿರಾರು ಮಕ್ಕಳ ಜನನಕ್ಕೆ ಕಾರಣ …

ಜಗದ ಬೆಳಕು ಕಾಣುವ ಮುನ್ನ ಕೊಂದು ಹಾಕುವ ಕ್ರೌರ್ಯ… Read More »

error: Content is protected !!
Scroll to Top