ಸಿನೆಮಾ

ಪುತ್ರಿಯ ಸಂಸಾರ ಉಳಿಸಲು ನಟಿಗೆ ರಜನಿಕಾಂತ್‌ ಧಮ್ಕಿ

ಭಾರಿ ಚರ್ಚೆಯಾಗುತ್ತಿದೆ ಪತ್ರಕರ್ತ ಬಹಿರಂಗಪಡಿಸಿದ ರಹಸ್ಯ ಚೆನ್ನೈ : ರಜನಿಕಾಂತ್‌ ಪುತ್ರಿ ಐಶ್ವರ್ಯಾ ಮತ್ತು ನಟ ಧನುಷ್‌ ಕೌಟುಂಬಿಕ ಜೀವನದಲ್ಲಿ ಬಿರುಕು ಮೂಡಲು ಕಾರಣವಾದ ನಟಿಯೊಬ್ಬರಿಗೆ ರಜನಿಕಾಂತ್‌ ಸ್ವತಹ ಹೋಗಿ ಧಮಕಿ ಹಾಕಿದ್ದರು ಎಂಬ ವಿಚಾರ ಚಿತ್ರರಂಗದಲ್ಲೀಗ ಭಾರಿ ಚರ್ಚೆಯಾಗುತ್ತಿದೆ.ಕಳೆದ ವರ್ಷ ಜನವರಿಯಲ್ಲಿ ರಜನಿಕಾಂತ್‌ ಪುತ್ರಿ ಐಶ್ವರ್ಯ ಹಾಗೂ ಅಳಿಯ ಧನುಷ್‌ ತಾವು ಬೇರಾಗುತ್ತಿರುವುದಾಗಿ ಅನೌನ್ಸ್‌ ಮಾಡಿದ್ದರು.18 ವರ್ಷಗಳ ದಾಂಪತ್ಯ ಜೀವನದ ಬಳಿಕ ಇಬ್ಬರೂ ಹೀಗೆ ಡಿವೋರ್ಸ್‌ ಪಡೆಯುತ್ತಿರುವುದಕ್ಕೆ ಅಭಿಮಾನಿಗಳು ಆಘಾತ ವ್ಯಕ್ತಪಡಿಸಿದ್ದರು. ರಜನಿಕಾಂತ್‌ ಹಾಗೂ ಧನುಷ್‌ …

ಪುತ್ರಿಯ ಸಂಸಾರ ಉಳಿಸಲು ನಟಿಗೆ ರಜನಿಕಾಂತ್‌ ಧಮ್ಕಿ Read More »

ಜೂ. 9 ರಂದು ಓಮನ್ ಮಸ್ಕತ್ ನಲ್ಲಿ ಸರ್ಕಸ್ ಮೂವಿ ಪ್ರೀಮಿಯರ್‌

ಕಾರ್ಕಳ : ಬಿಗ್ ಬಾಸ್ – 9 ಸೀಸನ್ ವಿನ್ನರ್ ರೂಪೇಶ್ ಶೆಟ್ಟಿ ನಿರ್ದೇಶನ ಮತ್ತು ನಟನೆಯ ಸರ್ಕಸ್ ತುಳು ಸಿನೆಮಾದ ಪ್ರೀಮಿಯರ್ ಜೂ. 9 ರಂದು ಓಮನ್ ಮಸ್ಕತ್ ನ ವೋಕ್ಸ್ ಸಿನೆಮಾ ಕ್ವಾರಂ ಸಿಟಿ ಸೆಂಟರ್ ನಲ್ಲಿ ಸಂಜೆ 4 ರಿಂದ 4-30 ವರಗೆ ಪ್ರದರ್ಶನಗೊಳ್ಳಲಿದೆ.‌ ಶೂಲಿನ್ ಫಿಲಂಸ್, ಮಂಜುನಾಥ್ ಅತ್ತಾವರ ಮತ್ತು ಮುಗ್ರೋಡಿ ಪ್ರೋಡಕ್ಷನ್ ನಿರ್ಮಾಣದಲ್ಲಿ, ಲಾಯ್ ವ್ಯಾಲೆಂಟೈನ್ ಸಲ್ಡಾನ್ಹಾ ಸಂಗೀತ ಸಂಯೋಜನೆ‌ ಹಾಗೂ ಪ್ರಸನ್ನ ಶೆಟ್ಟಿ ಬೈಲೂರು ಸಂಭಾಷಣೆ ಬರೆದಿದ್ದಾರೆ. ನವೀನ್ …

ಜೂ. 9 ರಂದು ಓಮನ್ ಮಸ್ಕತ್ ನಲ್ಲಿ ಸರ್ಕಸ್ ಮೂವಿ ಪ್ರೀಮಿಯರ್‌ Read More »

ಅಮೃತವರ್ಷಿಣಿ ಖ್ಯಾತಿಯ ನಟ ಶರತ್ ಬಾಬು ನಿಧನ

ಹೈದರಾಬಾದ್‌ : ಕನ್ನಡದ ಅಮೃತವರ್ಷಿಣಿ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿರುವ ಜನಪ್ರಿಯ ನಟ ಶರತ್ ಬಾಬು(71) ಮೇ 22ರಂದು ಹೈದರಾಬಾದ್​ನಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರಿಗೆ 71 ವರ್ಷ ವಯಸ್ಸಾಗಿತ್ತು. ಹಲವು ದಿನಗಳಿಂದಲೂ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಅವರನ್ನು ಹೈದರಾಬಾದ್​ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರು ಚಿಕಿತ್ಸೆಗೆ ಸ್ಪಂದಿಸದೆ ಮೇ 22ರಂದು ನಿಧನ ಹೊಂದಿದ್ದಾರೆ. ಶರತ್ ಬಾಬು ಅವರನ್ನು ಏಪ್ರಿಲ್​ನ ಮೊದಲ ವಾರದಲ್ಲಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಚೇತರಿಸಿಕೊಂಡ ಬಳಿಕ ಅವರನ್ನು ಹೈದರಾಬಾದ್​ಗೆ ಕರೆದೊಯ್ಯಲಾಗಿತ್ತು. ಅದಾದ ಬಳಿಕ ಅಲ್ಲಿ ಮತ್ತೆ …

ಅಮೃತವರ್ಷಿಣಿ ಖ್ಯಾತಿಯ ನಟ ಶರತ್ ಬಾಬು ನಿಧನ Read More »

ದಿ ಕೇರಳ ಸ್ಟೋರಿ ಸಿನೆಮಾ ಉಚಿತ‌ ವೀಕ್ಷಣೆಗೆ ಹಿಂಜಾವೇ ಅವಕಾಶ

ಕಾರ್ಕಳ : ಹಿಂದೂ ಜಾಗರಣ ವೇದಿಕೆ ವತಿಯಿಂದ ಮೇ21-22ರಂದು ಮುಂಜಾನೆ 10ಗಂಟೆಗೆ ದಿ ಕೇರಳ ಸ್ಟೋರಿ ಸಿನೆಮಾದ ಉಚಿತ ಪ್ರದರ್ಶನವನ್ನು ಕಾರ್ಕಳದ ಮೂವಿ ಪ್ಲಾನೆಟ್‌ ಚಿತ್ರಮಂದಿರದಲ್ಲಿ 18 ವರ್ಷ ಮೇಲ್ಪಟ್ಟ ಹಿಂದೂ ಸಹೋದರ-ಸಹೋದರಿಯರಿಗೆ ವೀಕ್ಷಿಸಲು ಅವಕಾಶವನ್ನು ಕಲ್ಪಿಸಲಾಗಿದ್ದು, ಇಂದು ಕಾರ್ಕಳ ಶಾಸಕ ವಿ.‌ ಸುನಿಲ್ ಕುಮಾರ್ ಹಿಂದೂ ಜಾಗರಣ ವೇದಿಕೆಯ ಪ್ರಮುಖರೊಂದಿಗೆ ಚಲನಚಿತ್ರವನ್ನು ವೀಕ್ಷಿಸಿದರು. ಹಿಂಜಾವೇ. ವಿಭಾಗ ಕಾರ್ಯದರ್ಶಿ ಮಹೇಶ್ ಬೈಲೂರು, ಜಿಲ್ಲಾ ಸಂಯೋಜಕ ಉಮೇಶ್ ನಾಯ್ಕ್ ಸೂಡ, ತಾಲೂಕು ಯುವವಾಹಿನಿ ಸಂಯೋಜಕ ಸುಜಿತ್ ಕುಂದರ್ ಮತ್ತು …

ದಿ ಕೇರಳ ಸ್ಟೋರಿ ಸಿನೆಮಾ ಉಚಿತ‌ ವೀಕ್ಷಣೆಗೆ ಹಿಂಜಾವೇ ಅವಕಾಶ Read More »

6 ದಿನಗಳಲ್ಲಿ ದಿ ಕೇರಳ ಸ್ಟೋರಿ ಸಿನಿಮಾ 68.86 ಕೋ. ರೂ. ಕಲೆಕ್ಷನ್‌

2023ರ ಯಶಸ್ವಿ ಸಿನಿಮಾಗಳ ಪಟ್ಟಿಗೆ ದಿ ಕೇರಳ ಸ್ಟೋರಿ ಚಿತ್ರ ಕೂಡ ಸೇರ್ಪಡೆ ಆಗಿದೆ. ಮೇ 5ರಂದು ಈ ಚಿತ್ರ ಬಿಡುಗಡೆ ಆಯಿತು. ಅಂದಿನಿಂದ ಇಂದಿನವರೆಗೆ ಉತ್ತಮವಾಗಿ ಪ್ರದರ್ಶನ ಮುಂದುವರಿಸಿದೆ. ಇನ್ನೂ ಒಂದಷ್ಟು ದಿನಗಳ ಕಾಲ ಈ ಸಿನಿಮಾದ ಅಬ್ಬರ ಮುಂದುವರಿಯುವುದು ಗ್ಯಾರಂಟಿ ಆಗಿದೆ. ದಿನದಿಂದ ದಿನಕ್ಕೆ ದಿ ಕೇರಳ ಸ್ಟೋರಿ ಸಿನಿಮಾದ ಕಲೆಕ್ಷನ್​ ಹೆಚ್ಚಾಗುತ್ತಲೇ ಇದೆ. ಈ ಸಿನಿಮಾದಲ್ಲಿ ನಟಿ ಅದಾ ಶರ್ಮಾ ಮುಖ್ಯಭೂಮಿಕೆ ನಿಭಾಯಿಸಿದ್ದಾರೆ. ಅವರ ವೃತ್ತಿಜೀವನಕ್ಕೆ ಈ ಸಿನಿಮಾದಿಂದ ಸಖತ್​ ಮೈಲೇಜ್​ ಸಿಕ್ಕಿದೆ. …

6 ದಿನಗಳಲ್ಲಿ ದಿ ಕೇರಳ ಸ್ಟೋರಿ ಸಿನಿಮಾ 68.86 ಕೋ. ರೂ. ಕಲೆಕ್ಷನ್‌ Read More »

ದಿ ಕೇರಳ ಸ್ಟೋರಿ ಸಿನಿಮಾಗೆ 12 ಕೋಟಿ ರೂಪಾಯಿ ಕಲೆಕ್ಷನ್

ಬೆಂಗಳೂರು : ಮೇ 5ರಂದು ಬಿಡುಗಡೆಯಾದ ದಿ ಕೇರಳ ಸ್ಟೋರಿ ಸಿನಿಮಾಗೆ ಜನಮೆಚ್ಚುಗೆ ಸಿಕ್ಕಿದೆ. ಹಲವು ಕಾರಣಗಳಿಗಾಗಿ ಈ ಸಿನಿಮಾ ಚರ್ಚೆ ಹುಟ್ಟುಹಾಕಿದೆ. ಅದೇ ರೀತಿ ಬಾಕ್ಸ್​ ಆಫೀಸ್​ನಲ್ಲಿ ಸಖತ್​ ಸದ್ದು ಮಾಡುತ್ತಿದೆ. ಮೊದಲ ದಿನ ದಿ ಕೇರಳ ಸ್ಟೋರಿ ಚಿತ್ರಕ್ಕೆ 8 ಕೋಟಿ ರೂಪಾಯಿ ಕಲೆಕ್ಷನ್​ ಆಗಿತ್ತು. ಎರಡನೇ ದಿನ ಕಲೆಕ್ಷನ್​ನಲ್ಲಿ ಗಣನೀಯ ಏರಿಕೆ ಕಂಡಿದೆ. ದಿನದಿಂದ ದಿನಕ್ಕೆ ಕಲೆಕ್ಷನ್​ ಹೆಚ್ಚುತ್ತಿರುವುದರಿಂದ ಅಂತಿಮವಾಗಿ ಈ ಚಿತ್ರದ ಗಳಿಕೆ ಎಷ್ಟಾಗಲಿದೆ ಎಂಬ ಕೌತುಕ ಮೂಡಿದೆ. ಎರಡನೇ ದಿನವಾದ …

ದಿ ಕೇರಳ ಸ್ಟೋರಿ ಸಿನಿಮಾಗೆ 12 ಕೋಟಿ ರೂಪಾಯಿ ಕಲೆಕ್ಷನ್ Read More »

ಚುಂಬನ ಪ್ರಕರಣ : 16 ವರ್ಷದ ಬಳಿಕ ಶಿಲ್ಪಾ ಶೆಟ್ಟಿ ದೋಷಮುಕ್ತಿ

2007ರಲ್ಲಿ ರಾಜಸ್ಥಾನದಲ್ಲಿ ನಡೆದ ಘಟನೆ ಮುಂಬಯಿ : ಸಾರ್ವಜನಿಕ ವೇದಿಕೆಯಲ್ಲಿ ಹಾಲಿವುಡ್‌ ನಟ ರಿಚರ್ಡ್‌ ಗೇರ್‌ ಅವರನ್ನು ಚುಂಬಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಶಿಲ್ಪಾ ಶೆಟ್ಟಿ 16 ವರ್ಷದ ಬಳಿಕ ನಿರ್ದೋಷಿ ಎಂದು ಸಾಬೀತಾಗಿದ್ದಾರೆ.ಈ ಪ್ರಕರಣದಲ್ಲಿ ಶಿಲ್ಪಾ ಶೆಟ್ಟಿ ನಿರ್ದೋಷಿ ಎಂದು ಹೇಳಿ ಖುಲಾಸೆಗೊಳಿಸಿದ್ದ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದ ತೀರ್ಪನ್ನು ಮುಂಬಯಿಯ ಸೆಷನ್ಸ್‌ ಕೋರ್ಟ್‌ ಎತ್ತಿ ಹಿಡಿದಿದೆ.2007ರಲ್ಲಿ ರಾಜಸ್ಥಾನದಲ್ಲಿ ಏಡ್ಸ್‌ ಜಾಗೃತಿ ಕಾರ್ಯಕ್ರಮವೊಂದರ ವೇದಿಕೆಯಲ್ಲಿ ನಟ ರಿವರ್ಡ್‌ ಗೇರ್‌ ಅವರು ಶಿಲ್ಪಾ ಶೆಟ್ಟಿಯನ್ನು ಬರಸೆಳೆದು ಅಪ್ಪಿ ಹಿಡಿದು ಚುಂಬಿಸಿದ್ದರು. …

ಚುಂಬನ ಪ್ರಕರಣ : 16 ವರ್ಷದ ಬಳಿಕ ಶಿಲ್ಪಾ ಶೆಟ್ಟಿ ದೋಷಮುಕ್ತಿ Read More »

ಹೆಂಡತಿ ವಿರುದ್ಧ 100 ಕೋ. ರೂ. ಮಾನನಷ್ಟ ಮೊಕದ್ದಮೆ ದಾಖಲಿಸಿದ ನಟ

ಪತ್ನಿಯ ಆರೋಪಗಳಿಂದ ಬೇಸತ್ತು ನ್ಯಾಯಾಲಯದ ಮೊರೆ ಹೋದ ನವಾಜುದ್ದಿನ್‌ ಸಿದ್ದಿಕಿ ಮುಂಬಯಿ : ಬಾಲಿವುಡ್‌ನ ಜನಪ್ರಿಯ ನಟ ನವಾಜುದ್ದೀನ್‌ ಸಿದ್ದಿಕಿ ತನ್ನ ಸಹೋದರ ಶಮ್ಸುದ್ದೀನ್‌ ಮತ್ತು ಮಾಜಿ ಪತ್ನಿ ಅಂಜನಾ ಪಾಂಡೆ ವಿರುದ್ಧ 100 ಕೋ. ರೂ. ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.ಮಾಧ್ಯಮಗಳಲ್ಲಿ ಸುಳ್ಳು ಆರೋಪಗಳನ್ನು ಮಾಡಿ ಮಾನಸಿಕ ಕಿರುಕುಳ ನೀಡಿರುವುದರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿರುವುದಾಗಿ ನಟ ಹೇಳಿಕೊಂಡಿದ್ದಾರೆ. ಮಾ.30ರಂದು ಅವರ ಅರ್ಜಿ ನ್ಯಾಯಾಲಯದಲ್ಲಿ ವಿಚಾರಣೆಗೆ ಬರಲಿದೆ.ನವಾಜುದ್ದೀನ್‌ ಸಿದ್ದಿಕಿ ಮತ್ತು ಹೆಂಡತಿ ನಡುವಿನ ಸಂಬಂಧ ಹಳಸಿ ಅವರೀಗ …

ಹೆಂಡತಿ ವಿರುದ್ಧ 100 ಕೋ. ರೂ. ಮಾನನಷ್ಟ ಮೊಕದ್ದಮೆ ದಾಖಲಿಸಿದ ನಟ Read More »

ಬಾಲಿವುಡ್‌ ನಿರ್ದೇಶಕ ಪ್ರದೀಪ್‌ ಸರ್ಕಾರ್‌ ನಿಧನ

ಮೊದಲ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಪಡೆದ ನಿರ್ದೇಶಕ ಮುಂಬಯಿ : ಬಾಲಿವುಡ್‌ನ ಖ್ಯಾತ ಸಿನೆಮಾ ನಿರ್ದೇಶಕ ಪ್ರದೀಪ್‌ ಸರ್ಕಾರ್‌ (68) ಇಂದು ನಸುಕಿನ ವೇಳೆ ನಿಧನರಾಗಿದ್ದಾರೆ. ಪರಿಣಿತ, ಲಗಾ ಚುನರಿ ಮೇ ದಾಗ್‌, ಮರ್ದಾನಿ, ಹೆಲಿಕಾಪ್ಟರ್‌ ಏಲದಂಥ ಜನಪ್ರಿಯ ಚಿತ್ರಗಳನ್ನು ಅವರು ನಿರ್ದೇಶಿಸಿದ್ದರು.ಜಾಹೀರಾತು ಚಿತ್ರ ನಿರ್ದೇಶಕರಾಗಿ ಸುದೀರ್ಘ 17 ವರ್ಷ ದುಡಿದು ಬಳಿಕ ಪ್ರದೀಪ್‌ ಸರ್ಕಾರ್‌ ಬಾಲಿವುಡ್‌ಗೆ ಬಂದಿದ್ದರು. ಹಲವು ನೆನಪಿನಲ್ಲಿ ಉಳಿಯುವಂಥ ಜಾಹೀರಾತುಗಳನ್ನು ಅವರು ನಿರ್ದೇಶಿಸಿದ್ದರು. ಪರಿಣಿತ ಅವರು ನಿರ್ದೇಶಿಸಿದ ಮೊದಲ ಚಿತ್ರ. ಮೊದಲ ಚಿತ್ರವೇ …

ಬಾಲಿವುಡ್‌ ನಿರ್ದೇಶಕ ಪ್ರದೀಪ್‌ ಸರ್ಕಾರ್‌ ನಿಧನ Read More »

ಇಟಾಲಿಯನ್‌, ಸ್ಪ್ಯಾನಿಷ್‌ ಭಾಷೆಗೆ ಕಾಂತಾರ ಡಬ್‌

ತುಳುನಾಡಿನ ಚಿತ್ರಕ್ಕೆ ವಿಶ್ವಮನ್ನಣೆ ಬೆಂಗಳೂರು : ಎಲ್ಲೆಡೆಯಿಂದ ಅಪಾರ ಮೆಚ್ಚುಗೆ ಪಡೆದ ‘ಕಾಂತಾರ’ ಸಿನಿಮಾ ಇದೀಗ ವಿದೇಶದ ಭಾಷೆಗಳಿಗೆ ಡಬ್‌ ಆಗುತ್ತಿದೆ. ಈ ವಿಚಾರವನ್ನು ಚಿತ್ರತಂಡ ಅಧಿಕೃತವಾಗಿ ಘೋಷಣೆ ಮಾಡಿದೆ. ವಿಶ್ವಸಂಸ್ಥೆಯಲ್ಲಿ ಈ ಚಿತ್ರ ಪ್ರದಶನ ಕಂಡು ಅಲ್ಲಿದ್ದ ಗಣ್ಯರೂ ಮೆಚ್ಚಿಕೊಂಡಿದ್ದಾರೆ. ಇದೀಗ ಇಟಾಲಿಯನ್‌ ಮತ್ತು ಸ್ಪ್ಯಾನಿಷ್‌ ಭಾಷೆಗೆ ಚಿತ್ರವನ್ನು ಡಬ್‌ ಮಾಡಲಾಗುತ್ತಿದೆ.ಈ ಹಿಂದೆ ಇಂಗ್ಲಿಷ್‌ ಗೆ ಡಬ್‌ ಮಾಡಿ ನೆಟ್‌ಫ್ಲಿಕ್ಸ್‌ನಲ್ಲಿ ರಿಲೀಸ್‌ ಮಾಡಲಾಗಿತ್ತು. ಇದೀಗ ಇಟಾಲಿಯನ್‌ ಮತ್ತು ಸ್ಪ್ಯಾನಿಷ್‌ ಅವತರಣಿಕೆಯ ‘ಕಾಂತಾರ’ ಚಿತ್ರವನ್ನು ಅಲ್ಲಿನ ಚಿತ್ರಮಂದಿರಗಳಲ್ಲಿ …

ಇಟಾಲಿಯನ್‌, ಸ್ಪ್ಯಾನಿಷ್‌ ಭಾಷೆಗೆ ಕಾಂತಾರ ಡಬ್‌ Read More »

error: Content is protected !!
Scroll to Top