ಪ್ರೀತಿಯ ತೋಟದಲ್ಲಿ ಅರಳುವ ಸುಂದರ ಹೂವುಗಳು ಮಕ್ಕಳು
ಇಂದು ನೆಹರೂ ಜನ್ಮದಿನ-ಮಕ್ಕಳ ದಿನಾಚರಣೆ ಇಂದು ನವಂಬರ್ 14. ನಮ್ಮ ಬಾಲ್ಯದ ದಿನಗಳನ್ನು ಮೆಲುಕು ಹಾಕುವ ಸಮಯ. ಬಾಲ್ಯವೆಂದರೆ ಅದು ಏನೂ ತಿಳಿಯದ ಮುಗ್ಧ ಸ್ಥಿತಿ. ಗಂಡು ಹೆಣ್ಣು ಭೇದವಿಲ್ಲದೆ, ಮಣ್ಣಿನಲ್ಲಿ ಮನೆ ಮಾಡಿ ಬಅಡುಗೆಯಾಟವಾಡುತ್ತ ಶಾಲೆಗೆ ಹೋಗುವ, ಪಾಠ ಮಾಡುವ, ಟೀಚರ್‌ನಂತೆ ವರ್ತಿಸಿ ಆಟವಾಡಿದ ಆ ದಿನಗಳು. ಬಹುಶಃ ಮತ್ತೆ ಮತ್ತೆ ನೆನೆದರೆ ಮನದಲ್ಲಿ ಮಂದಹಾಸ ಮೂಡಲೇಬೇಕು. ನೆನಪುಗಳು ಮಧುರ, ಸುಂದರ. ಬೆಳೆದಂತೆ ನಮ್ಮ ಬುದ್ಧಿ ವಿಕಸನ ಹೊಂದಿ ನೆನಪುಗಳ ವ್ಯೂಹದಲ್ಲಿ ಬಾಲ್ಯವು ಅವಿಸ್ಮರಣೀಯವಾದ ಇತಿಹಾಸವಾಗಿ …