ಸ್ವಚ್ಛ ಕಾರ್ಕಳ ಪರಿಕಲ್ಪನೆಗೆ ಬೇಕಿದೆ ಸಾಥ್
ಕಾರ್ಕಳ : ನಗರದ ಬಸ್ ನಿಲ್ದಾಣದ ಬಳಿಯಲ್ಲಿ ಕಸದ ತೊಟ್ಟಿಯಿಲ್ಲದ ಕಾರಣ ನಿಲ್ದಾಣದ ಅಲ್ಲಲ್ಲಿ ಕಸ ಹರಡಿಕೊಂಡಿರುವುದು ಕಂಡುಬರುತ್ತಿದೆ. ಕಸದ ತೊಟ್ಟಿಯಿಲ್ಲದ ಕಾರಣ ಜನರು ಎಲ್ಲೆಂದರಲ್ಲಿ ಕಸ ಎಸೆದು ಸ್ವಚ್ಛ ಕಾರ್ಕಳ ಪರಿಕಲ್ಪನೆಗೆ ಧಕ್ಕೆ ತರುತ್ತಿದ್ದಾರೆ. ಕೆಲ ಅಂಗಡಿಯವರು ಕಸದ ತೊಟ್ಟೆಯನ್ನು ಅಂಗಡಿ ಬಳಿಯಲ್ಲಿಡುತ್ತಿದ್ದು, ಅದರಲ್ಲಿರುವ ಕಸವನ್ನು ಬೀದಿನಾಯಿಗಳು ನಿಲ್ದಾಣದೆಲ್ಲೆಡೆ ಹರಡಿ ಪೇಟೆಯನ್ನು ನರಕಗೊಳಿಸುತ್ತಿವೆ.

ಬೀದಿನಾಯಿಗಳ ಕಾಟ
ಕಾರ್ಕಳ ನಗರದಲ್ಲಿ ಬೀದಿನಾಯಿಗಳ ಕಾಟ ಅತಿಯಾಗಿದೆ. ಸ್ವರಾಜ್ ಮೈದಾನ, ಗಾಂಧಿ ಮೈದಾನ, ಬಂಡಿಮಠ, ಮಾರ್ಕೆಟ್ ರಸ್ತೆ, ಕಾರ್ಕಳ ಬಸ್ ನಿಲ್ದಾಣದಲ್ಲಿ ಹೆಚ್ಚಾಗಿ ಬೀದಿನಾಯಿಗಳ ಕಾಟ ಅತಿಯಾಗಿದೆ. ಶಾಲಾ ಮಕ್ಕಳಿಗೆ ಕಚ್ಚಿದ ಉದಾಹಣೆಯೂ ಇದೆ. ಪುರಸಭಾ ಸಾಮಾನ್ಯ ಸಭೆಯಲ್ಲಿ ಈ ಕುರಿತು ವಿಷಯ ಪ್ರಸ್ತಾಪವಾಗಿ ಬೀದಿನಾಯಿಗಳಿಗೆ ಕಡಿವಾಣ ಹಾಕುವಂತೆ ಹಲವು ಸದಸ್ಯರು ಒತ್ತಾಯಿಸಿದ್ದಾರೆ. ಆದರೆ ಇಷ್ಟರ ತನಕ ಯಾವುದೇ ಕ್ರಮಕೈಗೊಂಡಿಲ್ಲ.


ಕಾರ್ಕಳ ಬಸ್ ನಿಲ್ದಾಣದಲ್ಲೊಂದು ಕಸದ ತೊಟ್ಟಿ ತುರ್ತಾಗಿ ಅಳವಡಿಸಬೇಕಿದೆ. ಅಂತೆಯೇ ಬೀದಿನಾಯಿಗಳಿಗೂ ಕಡಿವಾಣ ಹಾಕಬೇಕಿದೆ.
.ಪುರಸಭೆಯ ಕಸದ ವಾಹನ ಸೀಯಾಳದ ಚಿಪ್ಪು ಕೊಂಡೊಯ್ಯದೆ ಸಮಸ್ಯೆಯಾಗುತ್ತಿದೆ. ಇದು ಬಹಳ ಸಮಯದಿಂದ ಇರುವ ಸಮಸ್ಯೆಯಾದರೂ ಇನ್ನೂ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಿಲ್ಲ.
ಇಕ್ಬಾಲ್ ಅಹಮ್ಮದ್
ಸಾಮಾಜಿಕ ಕಾರ್ಯಕರ್ತ



































































