ಜಡ್ಡುಗಟ್ಟಿರುವ ಶಿಕ್ಷಣಕ್ಕೆ ಕಾಯಕಲ್ಪ ಕೊಡುವ ನೀತಿ

2020ರ ರಾಷ್ಟ್ರೀಯ ಶಿಕ್ಷಣ ನೀತಿ ಭಾರತದ ಶೆೈಕ್ಷಣಿಕ ವಲಯದಲ್ಲಿ ಹೊಸ ಅಲೆಯನ್ನು ಎಬ್ಬಿಸುವುದರಲ್ಲಿ ಯಾವುದೇ ಸಂಶಯವಿಲ್ಲ.ಜಡ್ಡು ಕಟ್ಟಿದ ಶಿಕ್ಷಣ ವ್ಯವಸ್ಥೆಗೆ ಹೊಸ ಹುರುಪು  ತಂದಿದೆ.ಪ್ರಾಥಮಿಕ ಹಂತದಲ್ಲಿ ಶಿಕ್ಷಣ ಒಂದು ಹೊರೆಯಾಗಬಾರದು ಅನ್ನುವುದು ಉತ್ತಮ ಕ್ರಮ.ಐದನೇ ತರಗತಿಯ ತನಕ ಆಯಾಯ ಸ್ಥಳೀಯ ಮಾತೃಭಾಷೆಯಲ್ಲಿ ಶಿಕ್ಷಣ ನೀಡ ಬೇಕು ಅನ್ನುವುದು ಮಗುವಿನ ಗ್ರಹಿಕಾ ಶಕ್ತಿ, ಸೃಜನಶೀಲತೆಯನ್ನು ಉದ್ದೀಪನಗೊಳಿಸುತ್ತದೆ.

ಮಕ್ಕಳ ಪಾಸು-ಫೆೈಲುಗಳನ್ನು ಬರೇ ಅವರು ಗಳಿಸುವ ಅಂಕಗಳಿಂದ ನಿಧ೯ರಿಸದೆ ಅವರ ಇನ್ನಿತರ ಪಠ್ಯೇತರ ಚಟುವಟಿಕೆಗಳಿಂದ ನಿಧ೯ರಿಸುವ ವಿಧಾನ ಶ್ಲಾಘನೀಯ.

ವೃತ್ತಿ ಆಧರಿಸಿದ ಶಿಕ್ಷಣ ಕ್ರಮ ಇಂದಿನ ಅಗತ್ಯ ಕೂಡ.ಇದಕ್ಕೆ ಹೊಸ ಶಿಕ್ಷಣ ನೀತಿಯಲ್ಲಿ ಒತ್ತು ನೀಡಲಾಗಿದೆ.

ಪದವಿ ಹಂತದಲ್ಲಿ ವಿಷಯಗಳ ಆಯ್ಕೆಯಲ್ಲಿ ಮುಕ್ತತೆ ಕಾಪಾಡಿಕೊಂಡು ಬಂದಿರುವುದು ಜಡ್ಡು ಕಟ್ಟಿದ ಶಿಕ್ಷಣ ವ್ಯವಸ್ಥೆಗೆ ಹೊಸ ದಿಗಂತ ನೀಡಿದೆ.

ಅಂತರ ಶಾಸ್ತ್ರೀಯ ಅಧ್ಯಯನ ಇಂದಿನ ಸ್ಫಧಾ೯ತ್ಮಕ ಜಗತ್ತಿನ ಅಗತ್ಯ ಕೂಡಾ.ಇದರ  ಅನುಷ್ಠಾನಕ್ಕೆ ನೀತಿಯಲ್ಲಿ ಅವಕಾಶ ಕಲ್ಪಿಸಲಾಗಿದೆ, ಸಂಗೀತ ಕಲೆ, ಕ್ರೀಡೆ, ಯೋಗ ಮತ್ತುಕೌಶಲದ ಜೊತೆಗೆ 21ನೇ ಶತಮಾನದ ಸವಾಲುಗಳನ್ನು ಸಮಥ೯ವಾಗಿ ಎದುರಿಸಲು ತಂತ್ರಜ್ಞಾನದ ಮೂಲ ಅರಿವು ಪ್ರತಿ ವಿದ್ಯಾರ್ಥಿಯಲ್ಲಿ ಮೈಗೂ್ಡಿಸುವ ಶಿಕ್ಷಣ ಸಮಯೋಚಿತ ಕ್ರಮ.

ಸಂಶೋಧನೆಗಳು ಕೇವಲ ಬಡ್ತಿಗೆ ಅನ್ವಯಿಸದೇ ಸಂಶೋಧನೆಯ ಫಲ ಸಾಮಾನ್ಯ ಜನರ ಬದುಕಿಗೂ ತಲುಪುವ ರೀತಿಯಲ್ಲಿ ನಡೆಯ ಬೇಕೆಂಬ ಆಶಯ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಅಡಗಿದೆ.

ಶಿಕ್ಷಣ ನಮ್ಮ ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯ ಕೇಂದ್ರ ಪಟ್ಟಿಯಲ್ಲಿ ಸೇರಿರುವ ಕಾರಣ ಅನುಷ್ಠಾನದ ಹಂತದಲ್ಲಿ ಸಾಕಷ್ಟು ಸವಾಲುಗಳು, ಸಮಸ್ಯೆ ಗಳು ಎದುರಾಗುವ ಸಾಧ್ಯತೆಯೂ ಇದೆ.ಇದಕ್ಕಿನ್ನು ಜಾತಿ, ಧಮ೯, ಪ್ರಾದೇಶಿಕತೆಯ ಲೇಪನ ಹಚ್ಚುವವರು ಹುಟ್ಟಿ ಕೊಳ್ಳ ಬಹುದು.ಅನುದಾನದ ವಿಚಾದಲ್ಲೂ ಪ್ರಶ್ನೆಗಳು  ಹುಟ್ಟಿಕೊಳ್ಳುವ ಸಾಧ್ಯತೆ ತಳ್ಳಿಹಾಕಲಾರದು.ಇದನ್ನೆಲ್ಲಾ ಸರಿದಾರಿಗೆ ತರಲು ಕೆಲವು ವಷ೯ ತಗಲಬಹುದು.ಒಟ್ಟಾರೆ ಇದೊಂದು ಉತ್ತಮ ರಾಷ್ಟ್ರೀಯ ಶಿಕ್ಷಣ ನೀತಿ ಅನ್ನುವುದರಲ್ಲಿ ಎರಡು ಮಾತಿಲ್ಲ.:

ಪ್ರೊ.ಕೊಕ್ಕಣೆ೯ ಸುರೇಂದ್ರನಾಥ ಶೆಟ್ಟಿ

(ಶಿಕ್ಷಣ ಅಂಕಣಕಾರರು)





































error: Content is protected !!
Scroll to Top