ಅರ್ಬಿ ದುರ್ಗ ಬ್ರಹ್ಮಶ್ರೀ ಮೊಗೇರ ದೈವಸ್ಥಾನದ ಜೀರ್ಣೋದ್ಧಾರ-ಬ್ರಹ್ಮಕಲಶೋತ್ಸವ ಸಮಿತಿಯ ಮಹಾ ಸಭೆ

ಕಾರ್ಕಳ : ಅರ್ಬಿ ದುರ್ಗದ ಬ್ರಹ್ಮಶ್ರೀ ಮೊಗೇರ ದೈವಸ್ಥಾನದಲ್ಲಿ ಧರ್ಮ ದೈವಗಳ ಪುನರ್ ಪ್ರತಿಷ್ಠೆ, ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವ ಹಾಗೂ ನೇಮೋತ್ಸವ ಸಮಿತಿಯ ಮಹಾ ಸಭೆ ಮೇ 17ರಂದು ನಡೆಯಿತು. ಸಮಿತಿಯ ಗೌರವಾಧ್ಯಕ್ಷರಾದ ಶಾಸಕ ವಿ. ಸುನಿಲ್ ಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಂಬೈ ಉದ್ಯಮಿ ಗಿರೀಶ್ ಶೆಟ್ಟಿ ಕುಡುಪುಲಾಜೆ ದೀಪ ಪ್ರಜ್ವಲನ ಕಾರ್ಯಕ್ರಮ ಉದ್ಘಾಟಿಸಿದರು.

ವಿಜ್ಞಾಪನಾ ಪತ್ರ ಅನಾವರಣ
ಕಾರ್ಕಳದ ಉದ್ಯಮಿ, ಯಕ್ಷ ಕಲಾರಂಗದ ಅಧ್ಯಕ್ಷ ವಿಜಯ ಶೆಟ್ಟಿ ಅವರು ಧರ್ಮ ದೈವಗಳ ಪುನರ್ ಪ್ರತಿಷ್ಠೆ ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವ ಹಾಗೂ ನೇಮೋತ್ಸವ ಸಮಿತಿಯ ವಿಜ್ಞಾಪನಾ ಪತ್ರವನ್ನು ಅನಾವರಣಗೊಳಿಸಿದರು.

ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಮುನಿಯಾಲು ಉದಯ ಕುಮಾರ್ ಶೆಟ್ಟಿ ಮುನಿಯಾಲು ಮಾತನಾಡಿ, ದೈವಸ್ಥಾನದ ಬ್ರಹ್ಮಕಲಶೋತ್ಸವ ಕಾರ್ಯವೈಖರಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು. ಅಮ್ಮನ ನೆರವು ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಅವಿನಾಶ್ ಜಿ. ಶೆಟ್ಟಿ, ದೈವಸ್ಥಾನದ ಕಾರ್ಯನಿರ್ವಾಹಕ ಮೊಕ್ತೇಸರ ಅರ್ಬಿ ಸುಬ್ರಾಯ ಪಾಠಕ್ , ಅರ್ಚಕ ವಿರೂಪಾಕ್ಷ ಮರಾಠೆ ಸಂದರ್ಭೋಚಿತವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಬರ್ಕೆ ಮನೆ ಮಿಯ್ಯಾರಿನ ಜಗದೀಶ್ ಪೂಜಾರಿ, ದುರ್ಗಾ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಮಹೇಶ್ ರಾವ್, ಮಲ್ಲಾರು ಗಣಪತಿ ಕಟ್ಟೆ ಸಿದ್ಧಿವಿನಾಯಕ ದೇವಸ್ಥಾನದ ಅಧ್ಯಕ್ಷ ಶಂಕರ್ ನಾಯ್ಕ್, ಕೆಎಂಎಫ್ ನಿರ್ದೇಶಕ ಸುಧಾಕರ ಶೆಟ್ಟಿ ಮುಡಾರು, ಶಂಕರ್ ಭಟ್ ಕೆರ್ವಾಶೆ, ಡಾ. ಪ್ರಶಾಂತ್ ಕುಮಾರ್, ಸುಕೀರ್ತಿ ಶೆಟ್ಟಿ ಮಿಯ್ಯಾರು, ರೋಹಿತ್ ಶೆಟ್ಟಿ ಮಿಯ್ಯಾರು, ಕಿಶೋರ್ ಶೆಟ್ಟಿ ಮಿಯ್ಯಾರು, ಪ್ರಶಾಂತ್ ಆಚಾರ್ಯ, ಅಶೋಕ್ ಮಡಿವಾಳ, ರಮೇಶ್ ಶೆಟ್ಟಿ ರೆಂಜಾಳ, ರಾಮಚಂದ್ರ ನಾಯ್ಕ್ ಅರ್ಬಿ, ಕರುಣಾಕರ ಶೆಟ್ಟಿ, ಕೃಷ್ಣ ಪೂಜಾರಿ ತೆಳ್ಳಾರು, ವಿಠ್ಠಲ್ ಶೆಟ್ಟಿ ಮಲೆವೆಟ್ಟು, ಭಾಸ್ಕರ್ ಕುಲಾಲ್ ಕಾರ್ಕಳ, ಬಜಗೋಳಿಯ ದೇವದಾಸ್ ಪ್ರಭು ಮತ್ತು ಸುರೇಶ್ ಶೆಟ್ಟಿ, ಸದಾಶಿವ ಪೂಜಾರಿ ಕೆರೆಮನೆ ನಾರ್ಕಟ್, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ರಮೇಶ್ ಕಾಡಂಬಳ, ದೈವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷ ರಮೇಶ್ ಅಂಬಡೆಮಾರು, ಮಹಿಳಾ ಸಮಿತಿಯ ಅಧ್ಯಕ್ಷೆ ವಸಂತಿ ಜಯ, ದೈವಸ್ಥಾನದ ಗುರಿಕಾರರಾದ ಸಂಜೀವ ಕಾಡಂಬಳ, ಸಾಧು ಅಂಬಡೆಮಾರು, ದಿನೇಶ್ ಕಾಡಂಬಳ ಉಪಸ್ಥಿತರಿದ್ದರು. ದೈವಸ್ಥಾನದ ಆಡಳಿತ ಸಮಿತಿಯ ಗೌರವಾಧ್ಯಕ್ಷ ಸಂಜೀವ ಎಸ್. ಕೆ ಸ್ವಾಗತಿಸಿದರು. ಅಧ್ಯಾಪಕ ದೇವದಾಸ್ ಕೆರೆಮನೆ ಕಾರ್ಯಕ್ರಮ ನಿರೂಪಿಸಿ, ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಉಮೇಶ್ ಜೆ. ಮಿಯ್ಯಾರು ವಂದಿಸಿದರು.





































































































error: Content is protected !!
Scroll to Top