ಕಾರ್ಕಳ : ಹೆಂಡತಿ ಗಂಡನಿಗೆ ಚೂರಿಯಿಂದ ಇರಿದ ಘಟನೆ ಮೇ 18ರಂದು ಕಸಬಾ ಗ್ರಾಮದ ಮಟನ್‌ಸ್ಟಾಲ್ ಬಳಿಯಿರುವ ಮನೆಯಲ್ಲಿ ನಡೆದಿದೆ.
ಆಪಾದಿತಳಾದ ನಾಗಮ್ಮ ತನ್ನ ಗಂಡ ಧನಪಾಲ ಅವರಿಗೆ ʼನೀನು ಕೆಲಸ ಮಾಡುವುದಿಲ್ಲ, ನನ್ನ ಸಂಬಳದಲ್ಲಿ ನಾನು ನಿನ್ನನ್ನು ಸಾಕುವುದು, ನನಗೆ ವಿಚ್ಚೇಧನ ನೀಡು, ನಿನ್ನ ಮಕ್ಕಳನ್ನು ಕರೆದುಕೊಂಡು ಮನೆ ಬಿಟ್ಟು ಹೋಗುʻ ಎಂದು ಹೇಳಿ ಚೂರಿಯಿಂದ ಕುತ್ತಿಗೆ ಹಾಗೂ ಕೆನ್ನೆಗೆ ತಿವಿದಿದ್ದಾಳೆ. ಅಲ್ಲದೆ ಆಕೆಯ ತಮ್ಮ ಆಪಾದಿತ ಗಣೇಶನು ಧನಪಾಲರಿಗೆ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ಮಾಡಿದ್ದಾನೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಂಡತಿಯಿಂದ ಗಂಡನಿಗೆ ಚೂರಿ ಇರಿತ















