ಕಾರ್ಕಳ: ತೆಳ್ಳಾರು ಹಿಕ್ಕಿನಡ್ಕ ಬರ್ಕೆಯ ಗುರಿಕಾರರು, ಧಾರ್ಮಿಕ ಮುಂದಾಳು, ಕೃಷಿಕ ಹಾಗೂ ಬ್ರಹ್ಮ ಬೈದರ್ಕಳ ದರ್ಶನ ಪಾತ್ರಿಯಾಗಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ತಬುರ ಪೂಜಾರಿ (92) ಅವರು ಇಂದು ಬೆಳಿಗ್ಗೆ ನಿಧನರಾದರು.
ಧಾರ್ಮಿಕ ಕ್ಷೇತ್ರದಲ್ಲಿ ಅಪಾರ ಅನುಭವ ಹೊಂದಿದ್ದ ಇವರು ತೆಳ್ಳಾರು ಶ್ರೀ ಬ್ರಹ್ಮ ಬೈದರ್ಕಳ ಗರಡಿಯಲ್ಲಿ ಗರಡಿ ಪೂಜಾರಿಯಾಗಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಅಲ್ಲದೆ ಪತ್ತೊಂಜಿಕಟ್ಟೆ ಶ್ರೀ ಬ್ರಹ್ಮ ಬೈದರ್ಕಳ ಗರಡಿಯಲ್ಲಿಯೂ ಹಲವು ವರ್ಷಗಳ ಕಾಲ ಗರಡಿ ಪೂಜಾರಿಯಾಗಿ ಸೇವೆ ಸಲ್ಲಿಸಿ ಧಾರ್ಮಿಕ ಪರಂಪರೆಯ ಉಳಿವಿಗೆ ತಮ್ಮದೇ ಆದ ಕೊಡುಗೆ ನೀಡಿದ್ದರು.
ಧಾರ್ಮಿಕ ಆಚರಣೆಗಳು, ದೈವದರ್ಶನದ ಸೇವೆ ಹಾಗೂ ಕೃಷಿ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.

ಮೃತರು ಪತ್ನಿ, ಇಬ್ಬರು ಪುತ್ರರು, ಮೂವರು ಪುತ್ರಿಯರು ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.
ಮೃತರ ಅಂತಿಮ ದರ್ಶನ ಅವರ ಸ್ವಗೃಹ ಹಿಕ್ಕಿನಡ್ಕ ಬರ್ಕೆ ಮನೆಯಲ್ಲಿ 12.30 ಕ್ಕೆ ನಡೆಯಲಿದೆ ಎಂದು ಕುಟುಂಬಸ್ಥರ ತಿಳಿಸಿದ್ದಾರೆ.





























































