ಸೌಜನ್ಯ ಪ್ರಕರಣ: ಮೆಡಿಕಲ್ ಬೋರ್ಡ್ ರಚಿಸಿದ SIT

ಧರ್ಮಸ್ಥಳ: 2012ರಲ್ಲಿ ನಡೆದಿದ್ದ ವಿದ್ಯಾರ್ಥಿನಿ ಸೌಜನ್ಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಎಸ್‌ಐಟಿಯಿಂದ ಮರು ತನಿಖೆ ತೀವ್ರವಾಗಿ ನಡೆಯುತ್ತಿದ್ದು, ತನಿಖೆಗೆ ಈಗ ಮೆಡಿಕಲ್ ಬೋರ್ಡ್ ರಚನೆ ಮಾಡಲಾಗಿದೆ.

ಎಸ್‌ಐಟಿ ಮುಖ್ಯಸ್ಥ ಚೇತನ್ ಸಿಂಗ್ ರಾಥೋಡ್ ನೇತೃತ್ವದ ತಂಡ ಮೂರು ಮಂದಿ ನುರಿತ ಎಫ್‌ಎಸ್ಎಲ್ ವೈದ್ಯರಿರುವ ತಂಡ ರಚಿಸಿದೆ. ಈ ತಂಡದಲ್ಲಿ ಓರ್ವ ಮಹಿಳಾ ವೈದ್ಯೆ ಸೇರಿದಂತೆ ಬೆಂಗಳೂರು, ಹಾವೇರಿ ಮತ್ತು ಬೆಳಗಾವಿಯ ವೈದ್ಯರಿದ್ದಾರೆ.

ಚೇತನ್ ಸಿಂಗ್ ರಾಥೋಡ್ ನೇತೃತ್ವದಲ್ಲಿ ಕಳೆದ 18 ದಿನಗಳಿಂದ ವಿವಿಧ ಆಯಾಮಗಳಲ್ಲಿ ತನಿಖೆ ನಡೆಯುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಹಲವು ಮಂದಿಯ ವಿಚಾರಣೆಯೂ ನಡೆದಿದ್ದು, ಮಹತ್ವದ ಅಂಶಗಳನ್ನು ಎಸ್‌ಐಟಿ ತಂಡ ಕಲೆ ಹಾಕುತ್ತಿದೆ.

























































































































error: Content is protected !!
Scroll to Top