ಯೋಗಾಸನ ಸ್ಪರ್ಧೆ: ಸರ್ಕಾರಿ ಪ್ರೌಢಶಾಲೆ ನಕ್ರೆಯ ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆ

ಕಾರ್ಕಳ: ಸರ್ಕಾರಿ ಪ್ರೌಢಶಾಲೆ ನಕ್ರೆ ಕಾರ್ಕಳ ಇಲ್ಲಿನ ವಿದ್ಯಾರ್ಥಿಗಳಿಬ್ಬರು ಶ್ರೀ ಆದಿಚುಂಚನ ಗಿರಿ ಮಹಾ ಸಂಸ್ಥಾನ ಮಠ ನಾಗಮಂಗಲ ಮಂಡ್ಯ ಇಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಶಾಲಾ ಶಿಕ್ಷಣ ಇಲಾಖೆ ನಾಗಮಂಗಲ ಜಿಲ್ಲೆ ,ಕರ್ನಾಟಕ ಸರಕಾರ ಇವರ ಸಹಯೋಗದಲ್ಲಿ ನಡೆದ ವಿಭಾಗ ಮಟ್ಟ ಹಾಗೂ ರಾಜ್ಯ ಮಟ್ಟದ 17 ರೊಳಗಿನ ವಯೋಮಿತಿಯ ಆರ್ಟಿಸ್ಟಿಕ್ ಪೆಯರ್ ( ARTISTIC PAIR) ಯೋಗಾಸನ ಸ್ಪರ್ಧೆಯಲ್ಲಿ ಭಾಗವಹಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

10 ನೆ ತರಗತಿ ವಿದ್ಯಾರ್ಥಿಗಳಾದ ಸಂಪ್ರಿತ್ ನಾಯ್ಕ್ ಮತ್ತು ಪ್ರಣೇಶ್ ವಿಜೇತ ವಿದ್ಯಾರ್ಥಿಗಳು.

ಸಂಪ್ರೀತ್ ಆರ್. ನಾಯ್ಕ ಹಾಗೂ ಪ್ರಣೇಶ್ ಮಂಡ್ಯದಲ್ಲಿ ನಡೆದ ವಿಭಾಗ ಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು, ನಂತರ ನಡೆದ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ, ತೃತೀಯ ಸ್ಥಾನ ಪಡೆದಿರುತ್ತಾರೆ. ಇವರಿಗೆ ಯೋಗ ಅಶೋಕ್ ರವರ ಮಾರ್ಗದರ್ಶನದಲ್ಲಿ, ದೈಹಿಕ ಶಿಕ್ಷಣ ಶಿಕ್ಷಕಿ ರೇಣುಕಾ ತರಬೇತಿ ನೀಡಿರುತ್ತಾರೆ.

ಈ ವಿದ್ಯಾರ್ಥಿಗಳನ್ನು ಶಾಲಾ ಮುಖ್ಯ ಶಿಕ್ಷಕರು, ಸಹಶಿಕ್ಷಕರು, SDMC ಅಧ್ಯಕ್ಷ ರು & ಸರ್ವ ಸದಸ್ಯರು, ಪೋಷಕರು ಅಭಿನಂದಿಸಿದ್ದಾರೆ.

























































































































error: Content is protected !!
Scroll to Top