ಶೈಕ್ಷಣಿಕ

ವಾಲಿಬಾಲ್‌ : ಕ್ರೈಸ್ಟ್‌ಕಿಂಗ್‌ನ ಸುದೀಕ್ಷಾ ಶೆಟ್ಟಿ ರಾಜ್ಯಮಟ್ಟಕ್ಕೆ

ಕಾರ್ಕಳ : ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ ಕಾಲೇಜು) ಹಾಗೂ ಬೈಂದೂರು ನಾವುಂದ ಸರಕಾರಿ ಪದವಿ ಪೂರ್ವ ಕಾಲೇಜಿನ ಜಂಟಿ ಆಶ್ರಯದಲ್ಲಿ ನಡೆದ ಉಡುಪಿ ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಕಾರ್ಕಳ ಕ್ರೈಸ್ಟ್‌ಕಿಂಗ್ ಪದವಿಪೂರ್ವ ಕಾಲೇಜಿನ ಪ್ರಥಮ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಸುದೀಕ್ಷಾ ಶೆಟ್ಟಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಜಿಲ್ಲಾಮಟ್ಟದ ಪಂದ್ಯಾಟದಲ್ಲಿ ಕಾರ್ಕಳ ತಾಲೂಕು ತಂಡವನ್ನು ಪ್ರತಿನಿಧಿಸಿದ್ದ ಸುದೀಕ್ಷಾ ಅಲ್ಲಿ ತನ್ನ ತಂಡ ಪ್ರಥಮ ಸ್ಥಾನ ಪಡೆದು ಕೊಳ್ಳುವುದರ ಮೂಲಕ ರಾಜ್ಯ ಮಟ್ಟದ ವಾಲಿಬಾಲ್ ಪಂದ್ಯಾಟಕ್ಕೆ ಆಯ್ಕೆಯಾಗಿದ್ದು, …

ವಾಲಿಬಾಲ್‌ : ಕ್ರೈಸ್ಟ್‌ಕಿಂಗ್‌ನ ಸುದೀಕ್ಷಾ ಶೆಟ್ಟಿ ರಾಜ್ಯಮಟ್ಟಕ್ಕೆ Read More »

ದತ್ತ ಕುಮಾರ್ ಅವರಿಗೆ ಪಿಎಚ್‌ಡಿ ಪದವಿ

ಕಾರ್ಕಳ : ಮುನಿಯಾಲು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ದತ್ತ ಕುಮಾರ್ ಅವರು ರೂರಲ್ ಇನ್ಫ್ರಾಸ್ಟ್ರಕ್ಚರ್ ಫಂಡಿಂಗ್- ಎ ಸ್ಟಡಿ ಆನ್ ಯುಟಿಲೈಜೇಷನ್ ಅಂಡ್ ಡೆವಲಪ್ಮೆಂಟ್ ಇನ್ ಉಡುಪಿ ಡಿಸ್ಟ್ರಿಕ್ಟ್ ಆಫ್ ಕರ್ನಾಟಕ ಎಂಬ ವಿಷಯದ ಕುರಿತಾಗಿ ಮಂಡಿಸಿದ ಸಂಶೋಧನಾ ಮಹಾ ಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾನಿಲಯ ಪಿಎಚ್‌ಡಿ ಪದವಿ ನೀಡಿ ಗೌರವಿಸಿದೆ. ಇವರು ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ಪ್ರಾಧ್ಯಾಪಕ ಪ್ರೊ. ಎ. ಸಿದ್ದಿಕ್ ಅವರ ಮಾರ್ಗದರ್ಶನದಲ್ಲಿ ಪ್ರಬಂಧವನ್ನು ಸಿದ್ಧಪಡಿಸಿದ್ದರು. ದತ್ತ ಕುಮಾರ್ …

ದತ್ತ ಕುಮಾರ್ ಅವರಿಗೆ ಪಿಎಚ್‌ಡಿ ಪದವಿ Read More »

ವಾಲಿಬಾಲ್ : ಜ್ಞಾನಸುಧಾದ ಸನ್ನಿಧಿ ರಾಜ್ಯಮಟ್ಟಕ್ಕೆ

ಕಾರ್ಕಳ : ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ನಾವುಂದ ಸರಕಾರಿ ಪದವಿ ಪೂರ್ವ ಕಾಲೇಜಿನ ಆಶ್ರಯದಲ್ಲಿ ನಡೆದ ಉಡುಪಿ ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಕಾರ್ಕಳ ತಾಲೂಕಿನ ಬಾಲಕಿಯರ ತಂಡ ಪ್ರಥಮ ಸ್ಥಾನ ಗಳಿಸಿದ್ದು, ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿಯ ಸನ್ನಿಧಿ ( ವಾಣಿಜ್ಯ ವಿಭಾಗ) ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.ರಾಜ್ಯಮಟ್ಟಕ್ಕೆ ಆಯ್ಕೆಗೊಂಡ ಕಾರ್ಕಳ ತಾಲೂಕು ವಾಲಿಬಾಲ್ ತಂಡದ ಎಲ್ಲಾ ವಿದ್ಯಾರ್ಥಿಗಳಿಗೆ ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟಿನ ಅಧ್ಯಕ್ಷ ಡಾ. ಸುಧಾಕರ್ ಶೆಟ್ಟಿ ಅಭಿನಂದಿಸಿದ್ದಾರೆ.

ರಾಜ್ಯಮಟ್ಟದ ಟೇಬಲ್ ಟೆನ್ನಿಸ್ ಪಂದ್ಯಾಟಕ್ಕೆ ಎಕ್ಸಲೆಂಟ್ ಕಾಲೇಜಿನ ವಿದ್ಯಾರ್ಥಿಗಳು ಆಯ್ಕೆ

ಮೂಡುಬಿದಿರೆ : ಗೋವಿಂದದಾಸ ಪದವಿ ಪೂರ್ವ ಕಾಲೇಜು ಸುರತ್ಕಲ್ ಇಲ್ಲಿ ನಡೆದ ಕಾಲೇಜು ವಿಭಾಗದ ಜಿಲ್ಲಾ ಮಟ್ಟದ ಟೇಬಲ್ ಟೆನ್ನಿಸ್ ಪಂದ್ಯಾಟದಲ್ಲಿ ಮೂಡಬಿದಿರೆಯ ಕಲ್ಲಬೆಟ್ಟುವಿನಲ್ಲಿರುವ ಎಕ್ಸಲೆಂಟ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಾದ ಪ್ರಧಾನ್ ಹಾಗೂ ಶ್ರಾವ್ಯ ಡೋಂಗ್ರೆ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.ವಿದ್ಯಾರ್ಥಿಗಳ ಸಾಧನೆಗೆ ಎಕ್ಸಲೆಂಟ್ ವಿದ್ಯಾಸಂಸ್ಥೆಗಳ ಅಧ್ಯಕ್ಷ ಯುವರಾಜ್ ಜೈನ್, ಕಾರ್ಯದರ್ಶಿ ರಶ್ಮಿತಾ ಜೈನ್, ಪ್ರಾಂಶುಪಾಲ ಪ್ರದೀಪ್ ಕುಮಾರ್ ಶೆಟ್ಟಿ ಹರ್ಷವ್ಯಕ್ತಪಡಿಸಿದ್ದಾರೆ ಮತ್ತು ವಿದ್ಯಾರ್ಥಗಳು ಹೆಚ್ಚಿನ ಸಾಧನೆಗೈಯ್ಯಲಿ ಎಂದು ಶುಭ ಹಾರೈಸಿದ್ದಾರೆ.

ಕ್ರಿಯೇಟಿವ್‌ ರಾಷ್ಟ್ರೀಯ ಸೇವಾ ಯೋಜನೆ ಮತ್ತು ಜನಜಾಗೃತಿ ವೇದಿಕೆಯ ಆಶ್ರಯದಲ್ಲಿ ಸ್ವಾಸ್ಥ್ಯ ಸಂಕಲ್ಪ ಮಾಹಿತಿ ಕಾರ್ಯಕ್ರಮ

ಕಾರ್ಕಳ : ಕ್ರಿಯೇಟಿವ್‌ ರಾಷ್ಟ್ರೀಯ ಸೇವಾ ಯೋಜನೆ ಮತ್ತು ಜನಜಾಗೃತಿ ವೇದಿಕೆಯ ಆಶ್ರಯದಲ್ಲಿ ಸ್ವಾಸ್ಥ್ಯ ಸಂಕಲ್ಪ ಮಾಹಿತಿ ಕಾರ್ಯಕ್ರಮ ಸೆ. 20ರಂದು ನಡೆಯಿತು. ಸಭೆಯ ಮುಖ್ಯ ಅತಿಥಿ ಉದಯ ಕುಮಾರ್ ಹೆಗ್ಡೆ ಮಾತನಾಡುತ್ತಾ, ಸ್ವಾಸ್ಥ್ಯ ಸಮಾಜವನ್ನು ಸಮೃದ್ಧವಾಗಿರಿಸಲು ವಿದ್ಯಾರ್ಥಿಗಳು ಪಣತೊಡಬೇಕು, ಹಾಗೂ ಪ್ರಥಮವಾಗಿ ಅದರ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದರು. ಹಿರ್ಗಾನ ಗ್ರಾ. ಪಂ. ಮಾಜಿ ಅಧ್ಯಕ್ಷ ಸಂತೋಷ್‌ ಶೆಟ್ಟಿ ಮಾತನಾಡುತ್ತಾ ಮೌಲ್ಯಯುತ ಶಿಕ್ಷಣ, ಸಂಸ್ಕಾರಯುತ ಬದುಕು ಮತ್ತು ದುಶ್ಚಟ ರಹಿತ ಜೀವನ ಶೈಲಿಯು ಪ್ರತಿಯೊಬ್ಬನು ಅಳವಡಿಸಿಕೊಂಡರೆ ಬದುಕು …

ಕ್ರಿಯೇಟಿವ್‌ ರಾಷ್ಟ್ರೀಯ ಸೇವಾ ಯೋಜನೆ ಮತ್ತು ಜನಜಾಗೃತಿ ವೇದಿಕೆಯ ಆಶ್ರಯದಲ್ಲಿ ಸ್ವಾಸ್ಥ್ಯ ಸಂಕಲ್ಪ ಮಾಹಿತಿ ಕಾರ್ಯಕ್ರಮ Read More »

ಮಂಥನ್ ವ್ಯವಹಾರ ಯೋಜನೆ ಸ್ಪರ್ಧೆ – ನಿಟ್ಟೆ ವಿದ್ಯಾರ್ಥಿಗಳ ಯಕ್ಷಮಿತ್ರಕ್ಕೆ ಆಪ್ ಗೆ ದ್ವಿತೀಯ ಬಹುಮಾನ

ವಿವಿಧ ವಲಯಗಳ 272 ತಂಡಗಳು ಭಾಗಿ ಕಾರ್ಕಳ : ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್ಕೆಸಿಸಿಐ) ಆಯೋಜಿಸಿದ್ದ ಪ್ರತಿಷ್ಠಿತ ಮಂಥನ್ ವ್ಯವಹಾರ ಯೋಜನೆ ಸ್ಪರ್ಧೆಯಲ್ಲಿ ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಕಾಲೇಜಿನ ಯಕ್ಷಮಿತ್ರ ಆಪ್ ತಂಡವು ದ್ವಿತೀಯ ಸ್ಥಾನವನ್ನು ತಮ್ಮದಾಗಿಸಿಕೊಂಡಿದೆ.ವಿವಿಧ ವಲಯಗಳ 272 ತಂಡಗಳನ್ನು ಒಳಗೊಂಡ ಈ ಸ್ಪರ್ಧೆಯಲ್ಲಿ ಯಕ್ಷಮಿತ್ರ ಈ ಗಮನಾರ್ಹ ಸಾಧನೆಯನ್ನು ಸಾಧಿಸಿದೆ. ಮಂಥನ್ ವ್ಯವಹಾರ ಯೋಜನೆ ಸ್ಪರ್ಧೆಯನ್ನು ಆಟೋ ಮೊಬೈಲ್ / ಮೊಬಿಲಿಟಿ / ಹೆಲ್ತ್ಕೇರ್, ಕೃಷಿ, ಎಫ್ಎಂಸಿಜಿ, ಐಟಿ …

ಮಂಥನ್ ವ್ಯವಹಾರ ಯೋಜನೆ ಸ್ಪರ್ಧೆ – ನಿಟ್ಟೆ ವಿದ್ಯಾರ್ಥಿಗಳ ಯಕ್ಷಮಿತ್ರಕ್ಕೆ ಆಪ್ ಗೆ ದ್ವಿತೀಯ ಬಹುಮಾನ Read More »

ಕಾರ್ಕಳ ಕ್ರಿಯೇಟಿವ್ ವಿದ್ಯಾಸಂಸ್ಥೆಯಲ್ಲಿ ದ್ವಿತೀಯ ವರ್ಷದ ಗಣೇಶೋತ್ಸವ

ಕಾರ್ಕಳ : ಹಿರ್ಗಾನದಲ್ಲಿರುವ ಕ್ರಿಯೇಟಿವ್ ವಿದ್ಯಾಸಂಸ್ಥೆಯಲ್ಲಿ ದ್ವಿತೀಯ ವರ್ಷದ ಗಣೇಶೋತ್ಸವವನ್ನು ಸಂಭ್ರಮದಲ್ಲಿ ಆಚರಿಸಲಾಯಿತು. ಕಾರ್ಕಳದ ಎಣ್ಣೆಹೊಳೆಯಿಂದ ತೆರೆದ ವಾಹನದಲ್ಲಿ ಗಣೇಶನ ಮೂರ್ತಿಯನ್ನು ಕಾಲೇಜಿಗೆ ಮೆರವಣಿಗೆ ಮುಖಾಂತರ ಕರೆತರಲಾಯಿತು. ಮೂರ್ತಿ ಪ್ರತಿಷ್ಠಾಪನೆಯೊಂದಿಗೆ ವಿಶೇಷವಾಗಿ ಗಣಹೋಮ, ವಿದ್ಯಾರ್ಥಿಗಳಿಂದ ಭಜನಾ ಕಾರ್ಯಕ್ರಮ ಜರುಗಿತು. ಕನ್ನಡ ಉಪನ್ಯಾಸಕ ರಾಮಕೃಷ್ಣ ಹೆಗಡೆ ಅವರು ಚೌತಿ ಹಬ್ಬ ಬಗ್ಗೆ ಮಾತನಾಡಿದರು.ಶ್ರೀ ದೇವಿ ಬಯಲಾಟ ಸಮಿತಿ ರಂಗನಪಲ್ಕೆ ತಂಡದಿಂದ ಅಸಹಾಯಕ ಬಡರೋಗಿಗಳ ಸಹಾಯಾರ್ಥ ಹುಲಿಕುಣಿತ ಪ್ರದರ್ಶನ ನಡೆಯಿತು. ಮಧ್ಯಾಹ್ನ ಮಹಾಪೂಜೆ ಮತ್ತು ಸಾಯಂಕಾಲ ರುದ್ರಶಿವ ಮೂಡಬಿದ್ರೆ ತಂಡದಿಂದ …

ಕಾರ್ಕಳ ಕ್ರಿಯೇಟಿವ್ ವಿದ್ಯಾಸಂಸ್ಥೆಯಲ್ಲಿ ದ್ವಿತೀಯ ವರ್ಷದ ಗಣೇಶೋತ್ಸವ Read More »

ಕಾರ್ಕಳ ಕ್ರಿಯೇಟಿವ್‌ನಲ್ಲಿ ಪರೀಕ್ಷೆ ಒತ್ತಡ ನಿವಾರಣಾ ಕಾರ್ಯಾಗಾರ

ಮುಕ್ತವಾದ ಬದುಕು ಮುಖ್ಯ – ತನುಜಾ ಮಾಬೆನ್‌ ಕಾರ್ಕಳ : ನಮ್ಮ ಭವಿಷ್ಯವನ್ನು ರೂಪಿಸುವ ನಿಟ್ಟಿನಲ್ಲಿ ವಿಪರೀತ ಒತ್ತಡಕ್ಕೆ ಸಿಲುಕಬಾರದು. ಸಮತೋಲಿತ, ಸಕಾರಾತ್ಮಕ ಚಿಂತನೆ, ಸಮಚಿತ್ತವಾಗಿ ವ್ಯವಹರಿಸುವುದನ್ನು ರೂಢಿಸಿಕೊಳ್ಳುವುದು ಅಗತ್ಯ. ಅತಿಯಾದ ಒತ್ತಡ ಅನೇಕ ಅವಘಡಗಳನ್ನು ಉಂಟು ಮಾಡುವುದು. ಹಾಗಾಗಿ ಧನಾತ್ಮಕ ಅಂಶಗಳನ್ನು ಪ್ರಚೋದಿಸಿ ಒತ್ತಡದಿಂದ ಮುಕ್ತವಾಗಿ ಬದುಕನ್ನು ಕಟ್ಟಿಕೊಳ್ಳಲು ಪ್ರಯತ್ನಿಸಬೇಕೆಂದು ಜೇಸಿ ತರಬೇತಿದಾರೆ ತನುಜಾ ಮಾಬೆನ್‌ ಹೇಳಿದರು.ಅವರು ಶನಿವಾರ ಕಾರ್ಕಳದ ಕ್ರಿಯೇಟಿವ್‌ ಪ.ಪೂ. ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗಾಗಿ ನಡೆದ ಒತ್ತಡ ನಿವಾರಣಾ ಕಾರ್ಯಾಗಾರದಲ್ಲಿ ಮಾತನಾಡಿದರು.ಗುರಿಯ ಕಡೆಗೆ ಸಾಗುವಾಗ …

ಕಾರ್ಕಳ ಕ್ರಿಯೇಟಿವ್‌ನಲ್ಲಿ ಪರೀಕ್ಷೆ ಒತ್ತಡ ನಿವಾರಣಾ ಕಾರ್ಯಾಗಾರ Read More »

ದಸರಾ ಯೋಗಾಸನ ಸ್ಪರ್ಧೆ – ಕಾಬೆಟ್ಟು ಶಾಲೆಯ ನಾಲ್ವರು ವಿದ್ಯಾರ್ಥಿಗಳು ವಿಭಾಗ ಮಟ್ಟಕ್ಕೆ

ಕಾರ್ಕಳ : ಉಡುಪಿ ಜಿಲ್ಲಾ ಮಟ್ಟದ ದಸರಾ ಯೋಗಾಸನ ಸ್ಪರ್ಧೆಯಲ್ಲಿ ಕಾಬೆಟ್ಟು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಾದ ಕೌಸಲ್ಯ, ಅರುಣ್, ಧನುಷ್, ಗೌತಮಿ ಪ್ರಥಮ ಸ್ಥಾನ ಪಡೆದಿರುತ್ತಾರೆ. ಈ ಮೂಲಕ ಮೈಸೂರು ವಿಭಾಗದ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

ಕ್ರೈಸ್ಟ್‌ಕಿಂಗ್‌ ವಿದ್ಯಾರ್ಥಿಗಳ ಕ್ರೀಡಾ ಸಾಧನೆ

ಕ್ರಿಕೆಟ್ ಪಂದ್ಯಾಟ :‌ ಎಂಟು ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಕಾರ್ಕಳ : ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ಶ್ರೀಮದ್ ಭುವನೇಂದ್ರ ಪ್ರೌಢಶಾಲೆಯ ಜಂಟಿ ಆಶ್ರಯದಲ್ಲಿ ಗಾಂಧಿ ಮೈದಾನದಲ್ಲಿ ನಡೆದ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದ ತಾಲೂಕು ಮಟ್ಟದ ಕ್ರಿಕೆಟ್ ಪಂದ್ಯಾಟದಲ್ಲಿ ಕ್ರೈಸ್ಟ್‌ಕಿಂಗ್ ಶಿಕ್ಷಣ ಸಂಸ್ಥೆಯ ಎಂಟು ವಿದ್ಯಾರ್ಥಿಗಳು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ವಿನೀತ್ ಪೂಜಾರಿ (6ನೇ ತರಗತಿ), ಅರ್ಜುನ್, ತನ್ಮಯ್ (7ನೇ ತರಗತಿ), ಪಾರ್ಥಿವ್, ಗಗನ್ (8ನೇ ತರಗತಿ), ಅಶರ್, ರೀವನ್, …

ಕ್ರೈಸ್ಟ್‌ಕಿಂಗ್‌ ವಿದ್ಯಾರ್ಥಿಗಳ ಕ್ರೀಡಾ ಸಾಧನೆ Read More »

error: Content is protected !!
Scroll to Top