ಕೊನೆಗೂ ಸುರಂಗದಲ್ಲಿ ಸಿಲುಕಿದ್ದ 41 ಕಾರ್ಮಿಕರ ರಕ್ಷಣೆ
ದೇಶದ ಇತಿಹಾಸದಲ್ಲೇ ಬಹುದೊಡ್ಡ ಕಾರ್ಯಾಚರಣೆ ಉತ್ತರಕಾಶಿ : ಉತ್ತರಾಖಂಡ ಸಿಲ್ಕ್ಯಾರಾ ಸುರಂಗದಲ್ಲಿ ಸಿಲುಕಿದ್ದ 41 ಕಾರ್ಮಿಕರಿಗಾಗಿ 17 ದಿನಗಳ ಸುದೀರ್ಘ ಕಾಯುವಿಕೆ ಇಂದು ಕೊನೆಗೊಂಡಿತು. ಸಂಜೆ 7.50ಕ್ಕೆ ಮೊದಲ ಕಾರ್ಮಿಕ ಹೊರಗೆ ಬಂದಿದ್ದು, ಇತ್ತ ಕಾರ್ಮಿಕರ ಕುಟುಂಬಗಳಲ್ಲಿ ಸಂಭ್ರಮ ಮುಗಿಲುಮುಟ್ಟಿದೆ. ಅವಶೇಷಗಳ ನಡುವೆ ಸಾಗಿಸಿದ್ದ ಪೈಪ್ ಮೂಲಕ ಮೊದಲ ಕಾರ್ಮಿಕನನ್ನು ಹೊರಗೆ ಕರೆತರಲಾಗಿದೆ. ಸುರಂಗದ ಒಳಗಿನ ಕತ್ತಲಿನಲ್ಲಿ ಹಾಗೂ ಚಿಕ್ಕ ಜಾಗದಲ್ಲಿ, ಕುಟುಂಬದವರಿಂದ ದೂರವಿದ್ದು, ಆತಂಕದಲ್ಲಿಯೇ 17 ದಿನಗಳನ್ನು ಕಳೆದ ಕಾರ್ಮಿಕರ ಮಾನಸಿಕ ಸಾಮರ್ಥ್ಯವನ್ನು ಉಳಿಸಿಕೊಂಡಿರುವುದು ಪವಾಡದಂತಿದೆ. …