Author name: Newskarkala Desk

ಹೆಬ್ರಿ: ಗೃಹಿಣಿ ಅನುಮಾನಾಸ್ಪದ ಸಾವು, ತಾಯಿಯಿಂದ ದೂರು ದಾಖಲು

ಹೆಬ್ರಿ: ಅಮಾಸೆಬೈಲಿನ ಶೇಡಿಮನೆ ಎಂಬಲ್ಲಿ ಜಲಜಾ ಪೂಜಾರಿ ಎಂಬವರ ಪುತ್ರಿ ಮಾಲಿನಿ (27) ಎಂಬವರು ಸೆ.29ರಂದು ಮನೆಯಲ್ಲಿ ಸಾವಿಗೀಡಾಗಿದ್ದು, ಈ ಸಾವಿನ ಬಗ್ಗೆ ಸಂಶಯ ಇದೆ ಎಂಬುದಾಗಿ ಜಲಜಾ ಪೂಜಾರಿ ಅಮಾಸೆಬೈಲು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಜಲಜಾ ಪೂಜಾರಿ ಸೀತಾನದಿ ಗೇರುಬೀಜ ಕಾರ್ಖಾನೆಯಲ್ಲಿ ನೌಕರಿ ಮಾಡುತ್ತಿದ್ದು, ಮಾಲಿನಿ, ಮಾಲಿನಿಯವರ ಗಂಡ ಸಂತೋಷ ಮತ್ತು ಈ ದಂಪತಿಯ ಮಕ್ಕಳಾದ ಮಾನ್ವಿ, ಸನ್ವಿತಾ, ಮನ್ವಿತಾ ಜೊತೆಗೆ ಶೇಡಿಮನೆಯಲ್ಲಿ ವಾಸವಾಗಿದ್ದರು. ಸೆ.29ರಂದು ಜಲಜಾ ಪೂಜಾರಿ ನೌಕರಿ ಮಾಡುವ ಗೇರುಬೀಜ ಕಾರ್ಖಾನೆಗೆ

ಹೆಬ್ರಿ: ಗೃಹಿಣಿ ಅನುಮಾನಾಸ್ಪದ ಸಾವು, ತಾಯಿಯಿಂದ ದೂರು ದಾಖಲು Read More »

ಸಿಎಂ ಸೂಚನೆ ಮೇರೆಗೆ ಗೃಹಲಕ್ಷ್ಮಿ 33ನೇ ಕಂತಿನ ದುಡ್ಡು ರಿಲೀಸ್‌ಗೆ ಆರ್ಥಿಕ ಇಲಾಖೆ ಗ್ರೀನ್ ಸಿಗ್ನಲ್

ಬೆಂಗಳೂರು: ನವರಾತ್ರಿ ಹಬ್ಬಕ್ಕೆ ಗೃಹಲಕ್ಷ್ಮಿಯರಿಗೆ ಗುಡ್‌ ನ್ಯೂಸ್‌ ಸಿಕ್ಕಿದೆ. ಹಬ್ಬಕ್ಕೆ ಫಲಾನುಭವಿಗಳ ಅಕೌಂಟ್‌ಗಳಿಗೆ ಹಣ ಜಮೆ ಆಗಲಿದೆ. ಗೃಹಲಕ್ಷ್ಮಿ ಪರಿಷ್ಕರಣೆಯ ಕಸರತ್ತಿನ ಮಧ್ಯೆಯೂ ಸಿಎಂ ಸೂಚನೆ ಮೇರೆಗೆ 33ನೇ ಕಂತಿನ ದುಡ್ಡು ರಿಲೀಸ್‌ಗೆ ಆರ್ಥಿಕ ಇಲಾಖೆ ಗ್ರೀನ್ ಸಿಗ್ನಲ್ ಕೊಟ್ಟಿದೆ. ಈಗಾಗಲೇ ಗೃಹಲಕ್ಷ್ಮಿ ಪರಿಷ್ಕರಣೆಗೆ ಸರ್ಕಾರ ಮುಂದಾಗಿದೆ. ಪರಿಷ್ಕರಣೆ ವೇಳೆಯಲ್ಲೂ ದುಡ್ಡು ಜಮೆಗೆ ಸಿಎಂ ಸೂಚನೆ ನೀಡಿದ್ದಾರೆ. ಪರಿಷ್ಕರಣೆ ಸಂದರ್ಭದಲ್ಲಿ ಗೃಹಲಕ್ಷ್ಮಿ ದುಡ್ಡು ತಡೆಯೋದು ಬೇಡ ಎಂದು ಸಿಎಂ ಡಿ.ಕೆ.ಶಿವಕುಮಾರ್‌ ಅವರು ಸೂಚನೆ ನೀಡಿದ್ದಾರೆ.

ಸಿಎಂ ಸೂಚನೆ ಮೇರೆಗೆ ಗೃಹಲಕ್ಷ್ಮಿ 33ನೇ ಕಂತಿನ ದುಡ್ಡು ರಿಲೀಸ್‌ಗೆ ಆರ್ಥಿಕ ಇಲಾಖೆ ಗ್ರೀನ್ ಸಿಗ್ನಲ್ Read More »

ಮದ್ಯಪಾನ ಮಾಡಿ ಜಗಳವಾಡುತ್ತಿದ್ದ ಮಗನಿಗೆ ಕತ್ತಿಯಿಂದ ಹಲ್ಲೆ ಮಾಡಿದ ತಂದೆ: ಪ್ರಕರಣ ದಾಖಲು

ಕಾರ್ಕಳ: ಕೌಟುಂಬಿಕ ಕಲಹದಲ್ಲಿ ‌ತಂದೆಯೇ ಮಗನಿಗೆ ಕತ್ತಿಯಿಂದ ‌ಕಡಿದು ಗಾಯಗೊಳಿಸಿದ ಘಟನೆ ತೆಳ್ಳಾರಿನಲ್ಲಿ ನಡೆದಿದೆ. ಗಾಯಾಳುವನ್ನು ಚಾಲ್ಸ್ ‌ಎಂದು ಗುರುತಿಸಲಾಗಿದೆ. ಪಿರ್ಯಾದಿದಾರರಾದ ತ್ರೆಸಿಯಾಮ್‌ (65), ತೆಳ್ಳಾರ್‌ ದುರ್ಗಾ ಗ್ರಾಮ, ಕಾರ್ಕಳ ಇವರು ಕೇರಳ ರಾಜ್ಯದವರಾಗಿದ್ದು ಪ್ರಸ್ತುತ ಕಾರ್ಕಳ ತಾಲೂಕು ತೆಳ್ಳಾರ್‌ ದುರ್ಗಾ ಗ್ರಾಮದ ಪುಲ್ಲಾಟ್‌ ಎಂಬಲ್ಲಿ ಗಂಡ ಮಥಾಯ್‌ ಮಗ ಚಾಲ್ಸ್‌ ಮೊಮ್ಮಗಳು ಸಾನ್ವಿ ಯೊಂದಿಗೆ 17 ವರ್ಷಗಳಿಂದ ವಾಸವಾಗಿದ್ದಾರೆ. ದೊಡ್ಡ ಮಗ ಚೆಂಚಲ್ ಬಿ.ಎಸ್.ಎಫ್‌ ನಲ್ಲಿ ನಿವೃತ್ತಿ ಹೊಂದಿ ಮಂಗಳೂರಿನಲ್ಲಿ ಸೆಕ್ಯೂರಿಟಿ ಕೆಲಸ ಮಾಡಿಕೊಂಡಿರುತ್ತಾರೆ. ಪಿರ್ಯಾದುದಾರರ

ಮದ್ಯಪಾನ ಮಾಡಿ ಜಗಳವಾಡುತ್ತಿದ್ದ ಮಗನಿಗೆ ಕತ್ತಿಯಿಂದ ಹಲ್ಲೆ ಮಾಡಿದ ತಂದೆ: ಪ್ರಕರಣ ದಾಖಲು Read More »

ಪರಶುರಾಮನ ನಕಲಿ ಪ್ರತಿಮೆ ವಿಚಾರ- ಹೈಕೋರ್ಟ್ ಅಭಿಪ್ರಾಯ ಶಾಸಕ, ಸಮರ್ಥಕರ ಕಣ್ಣು ತೆರೆಸಲಿ: ಶುಭದ ರಾವ್

ಜನಾಗ್ರಹ ಸಭೆಯು ಕಳೆದುಹೋದ ಮಾನ ಉಳಿಸಿಕೊಳ್ಳುವ ಪ್ರಯತ್ನವಾಗಿದೆ ಕಾರ್ಕಳ: ಬೈಲೂರು ಉಮಿಕಲ್ ಬೆಟ್ಟದ ಮೇಲೆ ಪರಶುರಾಮನ ಪ್ರತಿಮೆ ಮರು ಸ್ಥಾಪನೆಗೆ ಉದಯ್ ಕುಮಾರ್ ಶೆಟ್ಟಿಯವರು ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನು ನಡೆಸಿದ ಹೈಕೊರ್ಟ್ ವಿಭಾಗೀಯ ಪೀಠ ವಿಷಯವನ್ನು ರಾಜ್ಯ ಸರಕಾರದ ಅಂಗಳಕ್ಕೆ ವರ್ಗಾಯಿಸಿದೆ. ಪರಶುರಾಮನ ಪ್ರತಿಮೆಯ ಮರುಸ್ಥಾಪನೆಗೆ ಕೋರಿ ಅರ್ಜಿದಾರರ ಉದಯ್ ಶೆಟ್ಟಿಯವರು ಸರಕಾರಕ್ಕೆ ಮನವಿಯನ್ನು ಸಲ್ಲಿಸಿದ್ದಾರೆ. ವಿಷಯವು ಸಂಪೂರ್ಣ ವಾಸ್ತವಾಂಶಗಳಿಗೆ ಸಂಬಂಧಿಸಿರುವುದರಿಂದ ಅರ್ಜಿದಾರ ಉದಯ್ ಶೆಟ್ಟಿಯವರು ಜುಲೈ 24, 2024 ರಂದು ಸಲ್ಲಿಸಿರುವ ಮನವಿಯ ಕುರಿತು ಸೂಕ್ತ

ಪರಶುರಾಮನ ನಕಲಿ ಪ್ರತಿಮೆ ವಿಚಾರ- ಹೈಕೋರ್ಟ್ ಅಭಿಪ್ರಾಯ ಶಾಸಕ, ಸಮರ್ಥಕರ ಕಣ್ಣು ತೆರೆಸಲಿ: ಶುಭದ ರಾವ್ Read More »

‘ಕರುನಾಡ ಸಿರಿ’ ಪ್ರಶಸ್ತಿಗೆ ಅರ್ಜಿ ಆಹ್ವಾನ

ಕಾರ್ಕಳ: ಕಾರ್ಕಳ ತಾಲೂಕಿನ ಉತ್ತಮ ಕನ್ನಡ ಮಾಧ್ಯಮ ಶಾಲೆಗೆ ಡಾ. ರವೀಂದ್ರ ಶೆಟ್ಟಿ ಬಜಗೋಳಿ ಅವರ ಪ್ರಾಯೋಜಕತ್ವದಲ್ಲಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪ್ರದಾನಿಸುವ ‘ಕರುನಾಡ ಸಿರಿ-2026’ ಪುರಸ್ಕಾರಕ್ಕೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಪ್ರಶಸ್ತಿಯು ಹತ್ತು ಸಾವಿರ ರೂಪಾಯಿ ನಗದು ಹಾಗೂ ಶಾಶ್ವತ ಫಲಕವನ್ನು ಒಳಗೊಂಡಿದೆ. ಶಾಲೆಯ ಸಂಪೂರ್ಣ ಮಾಹಿತಿಯನ್ನು ಒಳಗೊಂಡ ಅರ್ಜಿಯನ್ನು ದೇವದಾಸ್ ಕೆರೆಮನೆ, ಗೌರವ ಕಾರ್ಯದರ್ಶಿಗಳು ಕನ್ನಡ ಸಾಹಿತ್ಯ ಪರಿಷತ್ತು ಕಾರ್ಕಳC/o ‘ವಂದ್ಯುಕ್ತ’ ನಿಸರ್ಗನಗರ, ಶ್ಯಾಮಲಾ ಕಾಂಪೌಂಡ್, ಮಿಯ್ಯಾರು, ಮುಡಾರು, ಬಜಗೋಳಿ ಅಂಚೆ, ಕಾರ್ಕಳ –

‘ಕರುನಾಡ ಸಿರಿ’ ಪ್ರಶಸ್ತಿಗೆ ಅರ್ಜಿ ಆಹ್ವಾನ Read More »

ಕಂಬಳದ ದಾಖಲೆಗಳ ಸರದಾರ ಕೋಣ ‘ಪಾಂಡು’ ನಿಧನ

ಕಾರ್ಕಳ: ಕಂಬಳದ ಅಖಾಡದಲ್ಲಿ ತನ್ನದೇ ಛಾಪು ಮೂಡಿಸಿ, ವೇಗ ಹಾಗೂ ಸಾಧನೆಯ ಮೂಲಕ ಕಂಬಳಾಭಿಮಾನಿಗಳ ಮನಗೆದ್ದಿದ್ದ ನಂದಳಿಕೆ ಶ್ರೀಕಾಂತ್ ಭಟ್ ಅವರ ‘ಪಾಂಡು’ ಕೋಣ ನಿಧನ ಹೊಂದಿದೆ. ಕಂಬಳ ಕ್ಷೇತ್ರದಲ್ಲಿ ಹಲವು ದಾಖಲೆಗಳಿಗೆ ಪಾತ್ರವಾಗಿದ್ದ ಪಾಂಡು, ಅಖಾಡದಲ್ಲಿ ಮಿಂಚಿನ ವೇಗಕ್ಕೆ ಹೆಸರುವಾಸಿಯಾಗಿತ್ತು. ತನ್ನ ಓಟದ ಮೂಲಕ ಕಂಬಳ ಪ್ರೇಮಿಗಳಲ್ಲಿ ವಿಶೇಷ ಅಭಿಮಾನ ಮೂಡಿಸಿದ್ದ ಈ ಕೋಣದ ನಿಧನ ಕಂಬಳಾಸಕ್ತರಿಗೆ ನೋವುಂಟು ಮಾಡಿದೆ.

ಕಂಬಳದ ದಾಖಲೆಗಳ ಸರದಾರ ಕೋಣ ‘ಪಾಂಡು’ ನಿಧನ Read More »

ಕೋಳಿ ಅಂಕಕ್ಕೆ ದಾಳಿ: ಐದು ಮಂದಿ ಪೊಲೀಸ್ ವಶಕ್ಕೆ

ಕಾರ್ಕಳ: ಕೋಳಿ ಅಂಕಕ್ಕೆ ದಾಳಿ ನಡೆಸಿದ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ ಘಟನೆ ಇರ್ವತ್ತೂರಿನ ಕೆಂಪುಗುಡ್ಡೆ ಎಂಬಲ್ಲಿ ನಡೆದಿದೆ. ಆರೋಪಿಗಳನ್ನು ಮಿಯ್ಯಾರು ಗ್ರಾಮದ ಸುನಿಲ್ ಡಿಸೋಜ(39), ಹರೀಶ್ ಭಂಡಾರಿ (54), ರೆಂಜಾಳ ಗ್ರಾಮದ ಶ್ರೀನಿವಾಸ(38), ಮಂಗಳೂರು ಮಾರ್ಪಾಡಿ ಗ್ರಾಮದ ರಾಜೇಶ(31), ಅರುಣ ಇರ್ವತ್ತೂರು ಎಂದು ಗುರುತಿಸಲಾಗಿದೆ. ಸ್ಥಳದಿಂದ 1 ಹುಂಜ, 1600ರೂ., 2 ಬಾಳು ಕತ್ತಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೋಳಿ ಅಂಕಕ್ಕೆ ದಾಳಿ: ಐದು ಮಂದಿ ಪೊಲೀಸ್ ವಶಕ್ಕೆ Read More »

ಇಂದಿನಿಂದ ಮೂರು ದಿನಗಳ ಕಾಲ ನಡೆಯಬೇಕಿದ್ದ ಬ್ಯಾಂಕ್ ಮುಷ್ಕರ ಮುಂದೂಡಿಕೆ: ಎಸ್‌ಬಿಐ ಸೇವೆಗಳು ಲಭ್ಯ

ನವದೆಹಲಿ: ಸೆ. 28 ರಿಂದ ಸೆ. 30 ರ ವರೆಗೆ ಕರೆ ನೀಡಿದ್ದ ಬ್ಯಾಂಕ್ ಮುಷ್ಕರವನ್ನು ಮುಂದೂಡಲಾಗಿದೆ ಎಂದು ಎಸ್‌ಬಿ‌ಐ ತಿಳಿಸಿದೆ. ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ ಕರೆ ನೀಡಿದ್ದ ಬ್ಯಾಂಕ್ ಮುಷ್ಕರವನ್ನು ಮುಂದೂಡಲಾಗಿದೆ. ಹೀಗಾಗಿ ಬ್ಯಾಂಕ್ ಸೇವೆಗಳಲ್ಲಿ ಯಾವುದೇ ವ್ಯತ್ಯಯ ಇರುವುದಿಲ್ಲ. ಎಲ್ಲಾ ಶಾಖೆಗಳು ಮತ್ತು ಎಲ್ಲಾ ಬ್ಯಾಂಕಿಂಗ್ ಸೇವೆಗಳು ಎಂದಿನಂತೆ ಸಾಮಾನ್ಯವಾಗಿ ಕಾರ್ಯನಿರ್ವಹಿಸುತ್ತವೆ. ಎಲ್ಲಾ ಎಸ್‌ಬಿಐ ಬ್ಯಾಂಕ್‌ಗಳು ಓಪನ್ ಇರುತ್ತವೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ಭಾನುವಾರ (ಸೆ.27) ರಾತ್ರಿ ಭಾರತೀಯ ಬ್ಯಾಂಕ್‌ಗಳ ಸಂಘ

ಇಂದಿನಿಂದ ಮೂರು ದಿನಗಳ ಕಾಲ ನಡೆಯಬೇಕಿದ್ದ ಬ್ಯಾಂಕ್ ಮುಷ್ಕರ ಮುಂದೂಡಿಕೆ: ಎಸ್‌ಬಿಐ ಸೇವೆಗಳು ಲಭ್ಯ Read More »

ಅ. 10-17 : ಕಾರ್ಕಳದ 50 ಕಡೆಗಳಲ್ಲಿ ಯೋಗ

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ ಸಹಯೋಗ ಕಾರ್ಕಳ : ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ ಶಾಂತಿವನ ಟ್ರಸ್ಟ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್, ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್, ಜನಜಾಗೃತಿ ವೇದಿಕೆ, ಶೌರ್ಯ ನಿರ್ವಹಣಾ ಘಟಕ, ಪ್ರಗತಿ ಬಂಧು – ಸ್ವಸಹಾಯ ಒಕ್ಕೂಟ ಸಹಯೋಗದಲ್ಲಿ ಕಾರ್ಕಳ ತಾಲೂಕಿನ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಅ. 11 ಭಾನುವಾರದಿಂದ ಅ. 17ರ

ಅ. 10-17 : ಕಾರ್ಕಳದ 50 ಕಡೆಗಳಲ್ಲಿ ಯೋಗ Read More »

ಅಡಿಕೆ ಮರದಿಂದ ಬಿದ್ದು ವ್ಯಕ್ತಿ ಸಾವು

ಕಾರ್ಕಳ : ಅಡಿಕೆ ತೆಗೆಯುತ್ತಿದ್ದ ವೇಳೆ ಮರದಿಂದ ಕೆಳಗೆ ಬಿದ್ದು ವ್ಯಕ್ತಿ ಸಾವಿಗೀಡಾದ ಘಟನೆ ಕಾರ್ಕಳ ತಾಲೂಕು ಕುಂಟಲ್ಪಾಡಿ ಎಂಬಲ್ಲಿ ಸೆ. 21ರಂದು ಸಂಭವಿಸಿದೆ. ನಿಟ್ಟೆ ಗ್ರಾಮದ ಜೋಸೆಫ್‌ ಡಿಸೋಜಾ (61) ಮೃತರಾದ ದುರ್ದೈವಿ. ಮೃತರು ಪತ್ನಿ ಪ್ರಮೀಳಾ ಡಿಸೋಜಾ, ಓರ್ವ ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.

ಅಡಿಕೆ ಮರದಿಂದ ಬಿದ್ದು ವ್ಯಕ್ತಿ ಸಾವು Read More »

error: Content is protected !!
Scroll to Top