ಜನಾಗ್ರಹ ಸಭೆಯು ಕಳೆದುಹೋದ ಮಾನ ಉಳಿಸಿಕೊಳ್ಳುವ ಪ್ರಯತ್ನವಾಗಿದೆ
ಕಾರ್ಕಳ: ಬೈಲೂರು ಉಮಿಕಲ್ ಬೆಟ್ಟದ ಮೇಲೆ ಪರಶುರಾಮನ ಪ್ರತಿಮೆ ಮರು ಸ್ಥಾಪನೆಗೆ ಉದಯ್ ಕುಮಾರ್ ಶೆಟ್ಟಿಯವರು ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನು ನಡೆಸಿದ ಹೈಕೊರ್ಟ್ ವಿಭಾಗೀಯ ಪೀಠ ವಿಷಯವನ್ನು ರಾಜ್ಯ ಸರಕಾರದ ಅಂಗಳಕ್ಕೆ ವರ್ಗಾಯಿಸಿದೆ.
ಪರಶುರಾಮನ ಪ್ರತಿಮೆಯ ಮರುಸ್ಥಾಪನೆಗೆ ಕೋರಿ ಅರ್ಜಿದಾರರ ಉದಯ್ ಶೆಟ್ಟಿಯವರು ಸರಕಾರಕ್ಕೆ ಮನವಿಯನ್ನು ಸಲ್ಲಿಸಿದ್ದಾರೆ. ವಿಷಯವು ಸಂಪೂರ್ಣ ವಾಸ್ತವಾಂಶಗಳಿಗೆ ಸಂಬಂಧಿಸಿರುವುದರಿಂದ ಅರ್ಜಿದಾರ ಉದಯ್ ಶೆಟ್ಟಿಯವರು ಜುಲೈ 24, 2024 ರಂದು ಸಲ್ಲಿಸಿರುವ ಮನವಿಯ ಕುರಿತು ಸೂಕ್ತ ನಿರ್ಧಾರ ಕೈಗೊಳ್ಳುವುದು ಸರ್ಕಾರದ(ಪ್ರವಾಸೋದ್ಯಮ ಇಲಾಖೆ) ಕರ್ತವ್ಯವಾಗಿದೆ, ಮನವಿಯನ್ನು ಪರಿಗಣಿಸುವಾಗ ನಿರ್ಮಿತಿ ಕೇಂದ್ರಕ್ಕೆ ನೋಟೀಸ್ ನೀಡಿ ಅವರ ವಾದನವನ್ನೂ ಆಲಿಸಬೇಕು ಎಂದು ನಿರ್ದೇಶನ ನೀಡಿ ಅರ್ಜಿಯನ್ನು ಇತ್ಯರ್ಥಪಡಿಸಿದ್ದು ಇದು ಮೊದಲಿನಿಂದಲೂ ಅಸಲಿ ಪ್ರತಿಮೆ ನಿರ್ಮಾಣವಾಗಬೇಕು ಎಂದು ಹೋರಾಡುತ್ತಿದ್ದ ಕಾಂಗ್ರೆಸ್ ಪಕ್ಷ ಮತ್ತು ಮುಖಂಡ ಉದಯ್ ಶೆಟ್ಟಿಯವರ ಪ್ರಯತ್ನಕ್ಕೆ ಮುನ್ನಡೆಯಾಗಿದೆ.

ಹೈಕೋರ್ಟ್ ಈ ಅಭಿಪ್ರಾಯವು ಅಸಲಿ ಪ್ರತಿಮೆಯ ನಿರ್ಮಾಣದ ವಿಚಾರವಾಗಿ ನಾವು ಯಾವ ಆಶಯವನ್ನು ಮೊದಲಿನಿಂದಲೂ ವ್ಯಕ್ತಪಡಿಸುತ್ತಾ ಬಂದಿದ್ದೇವೆಯೋ ಅದಕ್ಕೆ ಶಕ್ತಿ ತುಂಬಿದೆ. ಹಾಗಾಗಿ ಹೈಕೋರ್ಟಿನ ಈ ಅಭಿಪ್ರಾಯ ನಕಲಿ ಪ್ರತಿಮೆ ನಿರ್ಮಾಣ ಮಾಡಿರುವ ಶಾಸಕರನ್ನು ಸಮರ್ಥಿಸುವವರ ಮತ್ತು ಕಾಂಗ್ರೆಸ್ ಪಕ್ಷ ಹಾಗೂ ನಾಯಕರ ಮೇಲೆ ಗೂಬೆಕೂರಿಸಲು ಪ್ರಯತ್ನಿಸವವರ ಕಣ್ಣನ್ನು ಇನ್ನಾದರೂ ತೆರೆಸಲಿ ಎನ್ನುವುದು ನಮ್ಮ ಆಶಯವಾಗಿದೆ.
ಮಾನ ಉಳಿಸಿಕೊಳ್ಳುವ ಸಭೆ
ಪ್ರತಿಮೆ ನಿರ್ಮಾಣದ ಬಗ್ಗೆ ಸಾರ್ವಜನಿಕ ಜನಾಗ್ರಹ ಸಭೆಯನ್ನು ಬೈಲೂರಿನ ಮಾರಿಗುಡಿಯಲ್ಲಿ ಹಮ್ಮಿಕೊಳ್ಳಲಾಗಿತ್ತು ಆ ಸಭೆಯನ್ನು ಬಿಜೆಪಿ ಅಥವಾ ಬಿಜೆಪಿಯ ಯಾವುದೇ ಪಧಾದಿಕಾರಿಗಳು ಆಯೋಜಿಸಿದ್ದರೆ ನಾವು ಹೋಗುತ್ತಿರಲಿಲ್ಲ ನಮಗೆ ಹೋಗುವ ಅಗತ್ಯವೂ ಇಲ್ಲ ಆದರೆ ಸಾರ್ವಜನಿಕ ಸಮಿತಿ ಎಂದ ಕಾರಣ ನಮ್ಮ ಅಭಿಪ್ರಾಯ ನೀಡಲು ಹೋಗಿದ್ದೆವು. ಆದರೆ ಅಲ್ಲಿ ಹೋದ ನಂತರ ಗೊತ್ತಾಯಿತು ಅದು ಶಾಸಕ ಸುನೀಲ್ ಕುಮಾರ್ ಪ್ರಯೋಜಿತ ಸಭೆಯಾಗಿತ್ತು ಮತ್ತು ಅವರ ಉದ್ದೇಶ ಶಾಸಕರ ತಪ್ಪನ್ನು ಸಮರ್ಥಿಸುವುದೇ ಆಗಿತ್ತು. ಹಾಗಾಗಿ ನಮಗೆ ಅವಕಾಶ ನೀಡಲಿಲ್ಲ ಆದರೂ ನಾವು ದೇವಸ್ಥಾನ ಒಳಗೆ ಹೋಗಿ ಪ್ರತಿಮೆ ನೈಜ್ಯತೆಯ ಬಗ್ಗೆ ನಮ್ಮ ಪ್ರಮಾಣ ಮತ್ತು ಪ್ರಾರ್ಥನೆಯನ್ನು ಸಲ್ಲಿಸಿ ಬಂದಿದ್ದೇವೆ.
ಜನಾಗ್ರಹ ಸಭೆಯು ಪ್ರತಿಮೆ ವಿಚಾರವಾಗಿ ಕಳೆದು ಹೋದ ಮಾನವನ್ನು ಮತ್ತೆ ಗಳಿಸಲು ಮತ್ತು ಇನ್ನು ಮುಂದೆ ಹೋಗಬಹುದಾದ ಮಾನವನ್ನು ಉಳಿಸಿಕೊಳ್ಳಲು ಆಯೋಜಿಸಿರುವ ಸಭೆಯಾಗಿತ್ತೇ ವಿನಃ ಸರ್ವರ ಅಭಿಪ್ರಾಯವನ್ನು ಪಡೆಯುವ ಸಾರ್ವಜನಿಕ ಸಭೆಯಾಗಿರಲಿಲ್ಲ.
ಕಾಂಗ್ರೆಸ್ ಬದ್ಧತೆ
ಥೀಮ್ ಪಾರ್ಕ್ ವಿಚಾರವಾಗಿ ನಮ್ಮ ಪಕ್ಷದ ನಿಲುವು ಸ್ಪಷ್ಟವಾಗಿದೆ. ಪಾರ್ಕ್ ನಿರ್ಮಾಣಗೊಂಡ ಜಮೀನು ಗೋಮಾಳವಾಗಿರುವುದರಿಂದ ಮೊದಲು ಅದು ಪಾರ್ಕ್ ಹೆಸರಿಗೆ ವರ್ಗಾವಣೆಯಾಗಬೇಕು. ಬೆಟ್ಟದ ಮೇಲೆ ಅಸಲಿ ಕಂಚಿನ ಪ್ರತಿಮೆ ನಿರ್ಮಾಣವಾಗಬೇಕು. ಪ್ರತಿಮೆಯ ಪ್ರಸ್ತುತ ಪರಿಸ್ಥಿತಿಗೆ ಕಾರಣಕರ್ತರಾದ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎನ್ನುವ ಕಾಂಗ್ರೆಸ್ ಪಕ್ಷದ ಧ್ವನಿ ಗಟ್ಟಿಯಾಗಿದೆ ಎಂದು ಶುಭದರಾವ್ (ಅಧ್ಯಕ್ಷರು ಬ್ಲಾಕ್ ಕಾಂಗ್ರೆಸ್ ಸಮಿತಿ), ವಿವೇಕ್ ಶೆಣೈ (ಬ್ಲಾಕ್ ಪ್ರಧಾನ ಕಾರ್ಯದರ್ಶಿ), ಅಂತೋನಿ ಮಿರಾಂದ (ಕಾಂಗ್ರೆಸ್ ಮುಖಂಡರು ರಂಗನಪಲ್ಕೆ) ತಿಳಿಸಿದ್ದಾರೆ.


















