ಕಾರ್ಕಳ: ಕಾರ್ಕಳ ತಾಲೂಕಿನ ಉತ್ತಮ ಕನ್ನಡ ಮಾಧ್ಯಮ ಶಾಲೆಗೆ ಡಾ. ರವೀಂದ್ರ ಶೆಟ್ಟಿ ಬಜಗೋಳಿ ಅವರ ಪ್ರಾಯೋಜಕತ್ವದಲ್ಲಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪ್ರದಾನಿಸುವ ‘ಕರುನಾಡ ಸಿರಿ-2026’ ಪುರಸ್ಕಾರಕ್ಕೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಪ್ರಶಸ್ತಿಯು ಹತ್ತು ಸಾವಿರ ರೂಪಾಯಿ ನಗದು ಹಾಗೂ ಶಾಶ್ವತ ಫಲಕವನ್ನು ಒಳಗೊಂಡಿದೆ.
ಶಾಲೆಯ ಸಂಪೂರ್ಣ ಮಾಹಿತಿಯನ್ನು ಒಳಗೊಂಡ ಅರ್ಜಿಯನ್ನು ದೇವದಾಸ್ ಕೆರೆಮನೆ, ಗೌರವ ಕಾರ್ಯದರ್ಶಿಗಳು ಕನ್ನಡ ಸಾಹಿತ್ಯ ಪರಿಷತ್ತು ಕಾರ್ಕಳ
C/o ‘ವಂದ್ಯುಕ್ತ’ ನಿಸರ್ಗನಗರ, ಶ್ಯಾಮಲಾ ಕಾಂಪೌಂಡ್, ಮಿಯ್ಯಾರು, ಮುಡಾರು, ಬಜಗೋಳಿ ಅಂಚೆ, ಕಾರ್ಕಳ – 574122 ಈ ವಿಳಾಸಕ್ಕೆ ಅಕ್ಟೋಬರ್ 15 ರ ಒಳಗೆ ತಲುಪುವಂತೆ ಕಳುಹಿಸಿ ಕೊಡುವಂತೆ ವಿನಂತಿಸಲಾಗಿದೆ.



















