ಕುಂದಾಪುರ: ಎಂ ಕೋಡಿ ಕಡಲ ತೀರದಲ್ಲಿ ಇಂದು ಬೆಳಗ್ಗೆ ಬೈಗೆ (ಬೂತಾಯಿ) ಮೀನುಗಳ ರಾಶಿಯೇ ಬಂದು ಬಿದ್ದಿದ್ದು, ಅದನ್ನು ಹೆಕ್ಕಲು ನೂರಾರು ಮಂದಿ ಸೇರಿದ್ದರು.
ರಾಶಿ ರಾಶಿ ಬೂತಾಯಿ ಮೀನುಗಳು ಸಮುದ್ರದ ಅಲೆಗಳ ಜೊತೆಗೆ ತಟಕ್ಕೆ ಬಂದು ಬಿದ್ದಿದ್ದು, ಸಾರ್ವಜನಿಕರು ಮುಗಿಬಿದ್ದು ಅವುಗಳನ್ನು ಆರಿಸಿಕೊಳ್ಳುತ್ತಿರುವ ದೃಶ್ಯ ಕಂಡು ಬಂತು.







































