ಗುರಿ ತೋರಬೇಕಾದ ಗುರುವಿನಿಂದಲೇ ದೌರ್ಜನ್ಯದ ನಡೆದ ಬಗ್ಗೆ ದಾಖಲಾಗಿತ್ತು ಪೋಕ್ಸೋ ಪ್ರಕರಣ
ಮಂಗಳೂರು: ಗುರುವಿನ ಸ್ಥಾನದಲ್ಲಿದ್ದು ಬಾಲಕರಿಗೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ ಮಂಗಳೂರಿನ ಚರ್ಚೊಂದರ ಫಾದರ್ ಸಿಪ್ರಿಯನ್ ಪಿಂಟೋನನ್ನು ಪೊಲೀಸರು ಬಂಧಿಸಿದ್ದಾರೆ.
ಸಂಬಂಧಿಕರೊಬ್ಬರ ಮನೆಯಿಂದ ಪೊಲೀಸರು ಅವನನ್ನು ವಶಕ್ಕೆ ಪಡೆದಿರುವುದಾಗಿದೆ. ಎಲ್ಲಾ ಕಾನೂನು ಪ್ರಕ್ರಿಯೆಗಳನ್ನು ಮುಗಿಸಿದ ಬಳಿಕ ಆತನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುತ್ತದೆ ಎಂದು ಪೊಲೀಸ್ ಮೂಲಗಳು ಹೇಳಿವೆ.

ಈತನ ವಿರುದ್ಧ ಅಪ್ರಾಪ್ತ ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದಲ್ಲಿ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿತ್ತು.
ಆರೋಪಿ ಫಾದರ್ ಅಪ್ರಾಪ್ತ ವಯಸ್ಸಿನ ಬಾಲಕನಿಗೆ ಚಾಕೆಟ್ ನೀಡಿ, ‘ಯು ಆರ್ ಎ ಸ್ವೀಟ್ ಬಾಯ್’, ‘ನಿನ್ನ ನಗು ಚೆನ್ನಾಗಿದೆ’, ‘ಐ ಲವ್ ಯು’ ಎಂದೆಲ್ಲ ಹೇಳಿ ಪುಸಲಾಯಿಸಿ, ಚರ್ಚ್ ನ ಕೊಠಡಿಯೊಂದಕ್ಕೆ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ಎಸಗಿರುವುದಾಗಿ ಆರೋಪಿಸಲಾಗಿತ್ತು. ಮಾತ್ರವಲ್ಲದೆ ಆಗಸ್ಟ್ 14ರಂದು ಸಂಜೆ 6.30ಕ್ಕೆ ಬಾಲಕ ಚರ್ಚಿಗೆ ಪ್ರಾರ್ಥನೆಗೆ ಹೋದಾಗಲೂ ಕೊಠಡಿಯೊಂದಕ್ಕೆ ಕರೆದು ಕೊಂಡು ಹೋಗಿ ಲೈಂಗಿಕ ದೌರ್ಜನ್ಯ ಎಸಗಿರುವುದಾಗಿ ಉಲ್ಲೇಖಿಸಲಾಗಿದೆ. ಈ ವಿಚಾರವನ್ನು ಸ್ನೇಹಿತರಲ್ಲಿ ತಿಳಿಸಿದಾಗ ಅವರಿಗೂ ಇದೇ ರೀತಿ ನಿರಂತರವಾಗಿ ದೌರ್ಜನ್ಯ ಎಸಗಿರುವುದಾಗಿ ತಿಳಿಸಿರುವುದಾಗಿ ಎಂದು ಎಫ್ಐಆರ್ ನಲ್ಲಿ ದಾಖಲಾಗಿದೆ.







































