ಸಂಪಾದಕೀಯ-ವಿಜಯೇಂದ್ರ ನಡೆಯಬೇಕಾದ ಹಾದಿ ಬಲುದುರ್ಗಮ
ಲೋಕಸಭೆ ಚುನಾವಣೆಯೇ ಮೊದಲ ಸವಾಲು ಕಾರ್ಕಳ : ಬಿಜೆಪಿ ಹೈಕಮಾಂಡ್ ಅಳೆದೂ ಸುರಿದೂ ಕೊನೆಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಪುತ್ರ ಬಿ.ವೈ.ವಿಜಯೇಂದ್ರ ಅವರಿಗೆ ಕರ್ನಾಟಕ ಬಿಜೆಪಿಯನ್ನು ಮುನ್ನಡೆಸುವ ಚುಕ್ಕಾಣಿ ನೀಡಿದೆ. ಈ ಮೂಲಕ ರಾಜ್ಯಾಧ್ಯಕ್ಷ ಮತ್ತು ವಿಪಕ್ಷ ನಾಯಕನನ್ನು ಆರಿಸದ ಪಕ್ಷ ಎಂಬ ಟೀಕಾಕಾರರ ಬಾಯಿ ಮುಚ್ಚಿಸಿದೆ. ಮಗನಿಗೆ ಪಕ್ಷದಲ್ಲಿ ಆಯಕಟ್ಟಿನ ಹುದ್ದೆ ಕೊಡಿಸಬೇಕೆನ್ನುವ ಯಡಿಯೂರಪ್ಪನವರ ಆಶೆಯೂ ಈ ಮೂಲಕ ಈಡೇರಿದೆ.ಹಾಗೆಂದು ವಿಜಯೇಂದ್ರ ಮುಂದಿರುವುದು ಮುಳ್ಳಿನ ಹಾದಿ ಎನ್ನುವುದು ನೆನಪಿಟ್ಟುಕೊಳ್ಳಬೇಕು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನ …