• All
  • ನಿಧನ
  • ನಮ್ಮೂರ ಸಾಧಕರು
  • ಸಿನೆಮಾ
  • ಸಂತಾಪ
  • ಸಂಪಾದಕೀಯ
  • ಸಂವಾದ
  • ಸುದ್ದಿ
  • ಅಂಕಣ
  • ಅಪಘಾತ
  • ಧಾರ್ಮಿಕ
  • ಶೈಕ್ಷಣಿಕ
  • ಶುಭವಿವಾಹ
  • ಮಾರುಕಟ್ಟೆ ದರ
  • ಉದ್ಯೋಗ ಮಾಹಿತಿ-ಅರ್ಜಿ
  • ಆರೋಗ್ಯಧಾರಾ
  • ಆರ್ಥಿಕತೆ
  • ಆತ್ಮಹತ್ಯೆ
  • ಇ-ಪೇಪರ್
  • ಇತರ ಸುದ್ದಿ
  • ಕರಾವಳಿ
  • ಕಾನೂನು ಕಣಜ
  • ಕಾರ್ಕಳ ಸುದ್ದಿ
  • ಕಾರ್ಕಳ ಮಾರುಕಟ್ಟೆ ದರ
  • ಕ್ಷೇತ್ರ ದರ್ಶನ
  • ಕ್ರೈಂ
  • ಕ್ರೀಡೆ
  • ಕ್ಲಾಸಿಫ್ಲೈಡ್ಸ್
  • ರಾಜಕೀಯ
  • ರಾಜ್ಯ
  • ರಾಜʼಪಥ (ರಾಜೇಂದ್ರ ಭಟ್‌ ಬರಹ)
  • ಬರಹ
  • ದಕ್ಷಿನ ಕನ್ನಡ
  • ದಕ್ಷಿಣ ಕನ್ನಡ
  • ದೇಶ
  • ತಂತ್ರಜ್ಞಾನ
  • ಹೆಬ್ರಿ ಸುದ್ದಿ
  • ಹೊರನಾಡ ಕಾರ್ಕಳದವರು
  • ಲೇಖನ
  • ಲೈವ್ ಲಿಂಕ್
  • ಪೇಟೆ ಧಾರಣೆ
  • ಜಿಲ್ಲಾ
  • ಚುನಾವಣೆ
  • ವಿಡಿಯೋ
  • ವಿದೇಶ
  • ವಾರ ಭವಿಷ್ಯ
  • ವಾರದ ವ್ಯಕ್ತಿ
  • ವಾಣಿಜ್ಯ
  • ವೈರಲ್ ಸುದ್ದಿ
  • Karkala Utsava
  • Uncategorized

ಸಂಪಾದಕೀಯ

ಮಾದಕ ವಸ್ತು ಪೂರೈಕೆ – ಕಾರ್ಕಳದಲ್ಲಿ ಬೀಳಲಿ ಕಡಿವಾಣ

ರಾಜ್ಯಾದ್ಯಂತ ಸಂಚಲವನ್ನುಂಟು ಮಾಡಿದ ಕಾರ್ಕಳದ ಗ್ಯಾಂಗ್‌ ರೇಪ್‌ ಕೇಸಿನಲ್ಲಿ ಪ್ರಮುಖವಾಗಿ ವ್ಯಕ್ತವಾದ ಅಂಶ ಆರೋಪಿಗಳು ಯುವತಿಗೆ ಬಿಯರ್‌ನಲ್ಲಿ ಮಾದಕ ವಸ್ತು ಬೆರೆಸಿ ಕುಡಿಸಿದ್ದರು ಎನ್ನುವುದು. ಆಕೆ ಮಾದಕ ವಸ್ತುವಿನ ಅಮಲಿನಲ್ಲಿ ಅರೆ ಪ್ರಜ್ಞಾವಸ್ಥೆಗೆ ಜಾರಿದಾಗ ಕೃತ್ಯ ಎಸಗಲಾಗಿದೆ ಎನ್ನುವುದು ವ್ಯಾಪಕವಾಗಿ ಚರ್ಚೆಯಾದ ವಿಷಯ. ಹಾಗೆಂದು ಮಾದಕ ವಸ್ತು ನೀಡಿ ಅತ್ಯಾಚಾರ ಎಸಗುವ ಸುದ್ದಿ ಹೊಸದೇನೂ ಅಲ್ಲ. ಡ್ರಗ್‌ ನೀಡಿ ಅತ್ಯಾಚಾರ ಎಸಗಿದ ಸಾವಿರಾರು ಕೃತ್ಯಗಳು ಈ ಹಿಂದೆಯೂ ಸಂಭವಿಸಿವೆ. ಆಘಾತ ಉಂಟು ಮಾಡಿದ್ದು ಸುಸಂಸ್ಕೃತ ಊರು ಎನಿಸಿಕೊಂಡಿರುವ

ಮಾದಕ ವಸ್ತು ಪೂರೈಕೆ – ಕಾರ್ಕಳದಲ್ಲಿ ಬೀಳಲಿ ಕಡಿವಾಣ Read More »

ಸಂಪಾದಕೀಯ- ಅಧಿಕಾರದ ಅಮಲಿನಲ್ಲಿ ಕೊಚ್ಚಿಹೋದ ರಾಜಕೀಯ ನೈತಿಕತೆ

ಯುವಜನತೆಯ ಕನಸುಗಳನ್ನು ನುಚ್ಚುನೂರು ಮಾಡಿದ ಕೇಜ್ರಿವಾಲ್‌ ಭ್ರಷ್ಟಾಚಾರ ಪ್ರಕರಣಗಳಿಗೆ ಸಂಬಂಧಿಸಿ ರಾಜಕೀಯ ನಾಯಕರ ಬಂಧನವಾಗುವುದರಲ್ಲಿ ಅಚ್ಚರಿಯೇನೂ ಇಲ್ಲ. ಸ್ವಾತಂತ್ರ್ಯ ಲಭಿಸಿ ನಮ್ಮನ್ನು ನಾವೇ ಆಳಲು ತೊಡಗಿದ ಬಳಿಕ ನಮ್ಮ ಆಡಳಿತ ವ್ಯವಸ್ಥೆಯಲ್ಲಿ ಭ್ರಷ್ಟಾಚಾರವೆಂಬುದು ಜತೆಜತೆಗೆ ಬೆಳೆದು ಬಂದಿದೆ. ಮನಮೋಹನ್‌ ಸಿಂಗ್‌ ಪ್ರಧಾನಿಯಾಗಿದ್ದ ಕಾಂಗ್ರೆಸ್‌ ನೇತೃತ್ವದ ಯುಪಿಎ ಸರಕಾರದ ಅವಧಿಯಲ್ಲಿ ಭ್ರಷ್ಟಾಚಾರ ಪರಾಕಾಷ್ಠೆಯನ್ನು ತಲುಪಿತ್ತು. ಈ ಸಂದರ್ಭದಲ್ಲೇ ಭ್ರಷ್ಟಾಚಾರದ ವಿರುದ್ಧ ಅಣ್ಣಾ ಹಜಾರೆ, ಬಾಬಾ ರಾಮ್‌ದೇವ್‌ ಮುಂತಾದವರು ಚಳವಳಿ ಮಾಡಿದ್ದು. ಇದರಲ್ಲಿ ಇಡೀ ದೇಶದ ಗಮನ ಸೆಳೆದದ್ದು ಮತ್ತು

ಸಂಪಾದಕೀಯ- ಅಧಿಕಾರದ ಅಮಲಿನಲ್ಲಿ ಕೊಚ್ಚಿಹೋದ ರಾಜಕೀಯ ನೈತಿಕತೆ Read More »

ಉಡುಪಿ – ಚಿಕ್ಕಮಗಳೂರಿನಲ್ಲಿ ಸಮಬಲದ ಹೋರಾಟಕ್ಕೆ ವೇದಿಕೆ ಸಿದ್ಧ

ಕೋಟಗೆ ಟಿಕೆಟ್‌ ನೀಡುವ ಮೂಲಕ ಲೆಕ್ಕಾಚಾರ ಬದಲಾಯಿಸಿದ ಬಿಜೆಪಿ ಕಾರ್ಕಳ : ಭಾರತೀಯ ಜನತಾ ಪಕ್ಷ ಕಳೆದ ವಿಧಾನಸಭೆಯಲ್ಲಿ ಮಾಡಿದಂಥ ಕೆಲವು ಪ್ರಯೋಗಗಳನ್ನು ಲೋಕಸಭೆ ಚುನಾವಣೆಯಲ್ಲೂ ಮುಂದುವರಿಸಿದೆ. ಬಿಜೆಪಿ ಎರಡನೇ ಪಟ್ಟಿಯಲ್ಲಿ ರಾಜ್ಯದ 28 ಕ್ಷೇತ್ರಗಳ ಪೈಕಿ 20 ಕ್ಷೇತ್ರಗಳ ಅಭ್ಯರ್ಥಿಗಳನ್ನು ಮಾ. 14ರಂದು ಬಿಡುಗಡೆ ಮಾಡಿದ್ದು, ಇದರಲ್ಲಿ ಕರ್ನಾಟಕದ ಮಟ್ಟಿಗೆ ಕೆಲವು ಅಚ್ಚರಿಗಳಿವೆ. ಈ ಪೈಕಿ ಬಹಳ ಕುತೂಹಲ ಮೂಡಿಸಿರುವುದು ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಅಭ್ಯರ್ಥಿ.ಈ ಕ್ಷೇತ್ರದಲ್ಲಿ ಹಾಲಿ ಸಂಸದೆ, ಕೇಂದ್ರದಲ್ಲಿ ಸಚಿವೆಯೂ ಆಗಿರುವ ಶೋಭಾ ಕರಂದ್ಲಾಜೆಗೆ

ಉಡುಪಿ – ಚಿಕ್ಕಮಗಳೂರಿನಲ್ಲಿ ಸಮಬಲದ ಹೋರಾಟಕ್ಕೆ ವೇದಿಕೆ ಸಿದ್ಧ Read More »

ಸಂಪಾದಕೀಯ-ವಿಜಯೇಂದ್ರ ನಡೆಯಬೇಕಾದ ಹಾದಿ ಬಲುದುರ್ಗಮ

ಲೋಕಸಭೆ ಚುನಾವಣೆಯೇ ಮೊದಲ ಸವಾಲು ಕಾರ್ಕಳ : ಬಿಜೆಪಿ ಹೈಕಮಾಂಡ್‌ ಅಳೆದೂ ಸುರಿದೂ ಕೊನೆಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್.‌ ಯಡಿಯೂರಪ್ಪನವರ ಪುತ್ರ ಬಿ.ವೈ.ವಿಜಯೇಂದ್ರ ಅವರಿಗೆ ಕರ್ನಾಟಕ ಬಿಜೆಪಿಯನ್ನು ಮುನ್ನಡೆಸುವ ಚುಕ್ಕಾಣಿ ನೀಡಿದೆ. ಈ ಮೂಲಕ ರಾಜ್ಯಾಧ್ಯಕ್ಷ ಮತ್ತು ವಿಪಕ್ಷ ನಾಯಕನನ್ನು ಆರಿಸದ ಪಕ್ಷ ಎಂಬ ಟೀಕಾಕಾರರ ಬಾಯಿ ಮುಚ್ಚಿಸಿದೆ. ಮಗನಿಗೆ ಪಕ್ಷದಲ್ಲಿ ಆಯಕಟ್ಟಿನ ಹುದ್ದೆ ಕೊಡಿಸಬೇಕೆನ್ನುವ ಯಡಿಯೂರಪ್ಪನವರ ಆಶೆಯೂ ಈ ಮೂಲಕ ಈಡೇರಿದೆ.ಹಾಗೆಂದು ವಿಜಯೇಂದ್ರ ಮುಂದಿರುವುದು ಮುಳ್ಳಿನ ಹಾದಿ ಎನ್ನುವುದು ನೆನಪಿಟ್ಟುಕೊಳ್ಳಬೇಕು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನ

ಸಂಪಾದಕೀಯ-ವಿಜಯೇಂದ್ರ ನಡೆಯಬೇಕಾದ ಹಾದಿ ಬಲುದುರ್ಗಮ Read More »

ಸಂಪಾದಕೀಯ-ಕಾನೂನು v/s ಮಾನವೀಯತೆಯ ನಡುವಿನ ಸಂಘರ್ಷ

ಮುಷ್ಕರದಿಂದ ಅತಂತ್ರರಾಗಿದ್ದಾರೆ ಸಾವಿರಾರು ಕಾರ್ಮಿಕರು ಕಾರ್ಕಳ : ಮರಳು, ಕೆಂಪುಕಲ್ಲು, ಜಲ್ಲಿಕಲ್ಲು ಮತ್ತಿತರ ಕಟ್ಟಡ ಸಾಮಗ್ರಿಗಳನ್ನು ಸಾಗಿಸುವ ಲಾರಿಗಳನ್ನು ತಡೆದು ಪೊಲೀಸರು ಕೇಸು ದಾಖಲಿಸಿಕೊಳ್ಳುತ್ತಿರುವ ಕ್ರಮವನ್ನು ಖಂಡಿಸಿ ಲಾರಿ ಟೆಂಪೊ ಮಾಲೀಕರು ಮತ್ತು ಚಾಲಕರು ನಡೆಸುತ್ತಿರುವ ಹೋರಾಟ ತೀವ್ರಗೊಂಡಿದೆ. ಉಡುಪಿಗೆ ಡಾ.ಅರುಣ್‌ ಎಸ್‌ಪಿಯಾಗಿ ಬಂದ ಬಳಿಕ ಅಕ್ರಮ ಗಣಿಗಾರಿಕೆ ವಿರುದ್ಧ ಪೊಲೀಸರು ಮುಗಿಬಿದ್ದ ಪರಿಣಾಮವಾಗಿ ಸಮಸ್ಯೆ ಉಂಟಾಗಿದೆ.ಕಾನೂನುಬದ್ಧವಾಗಿ ಮಾಡುವ ಗಣಿಗಾರಿಕೆಗೆ ಅಡ್ಡಿಯಿಲ್ಲ. ಆದರೆ ಅಕ್ರಮವಾಗಿ ಯಾವುದೇ ಚಟುವಟಿಕೆ ನಡೆಸಲು ಬಿಡುವುದಿಲ್ಲ ಎನ್ನುವುದು ಪೊಲೀಸರ ವಾದ. ಆದರೆ ಲಾಗಾಯ್ತಿನಿಂದ

ಸಂಪಾದಕೀಯ-ಕಾನೂನು v/s ಮಾನವೀಯತೆಯ ನಡುವಿನ ಸಂಘರ್ಷ Read More »

ಸಂಪಾದಕೀಯ

ಕಾರ್ಕಳದಲ್ಲಿ ನಿಲ್ಲದ ರಾಜಕೀಯ ಕೆಸರೆರಚಾಟ – ಅಭಿವೃದ್ಧಿಯತ್ತ ಚಿತ್ತ ಹರಿಸಲಿ ರಾಜಕೀಯ ಪಕ್ಷ ಕರಾವಳಿಯ ಕೊನೆಯಂತಿರುವ, ಮಲೆನಾಡಿನ ಮೊನೆಯಂತಿರುವ ಕಾರ್ಕಳ ಬಹುಷಃ ರಾಜ್ಯದಲ್ಲೇ ಅತ್ಯಂತ ಸುರಕ್ಷಿತ, ಸಾಮರಸ್ಯದ ನಾಡು. ಶಿಲ್ಪಕಲೆ, ಸಾಹಿತ್ಯ, ಭೌಗೋಳಿಕವಾಗಿಯೂ ಸಮೃದ್ಧವಾಗಿರುವ ನೆಲ. ಉದ್ಯಮ ಕ್ಷೇತ್ರದಲ್ಲಿ ಪ್ರಸಿದ್ದಿ ಪಡೆದಿರುವ ಕಾರ್ಕಳ ರಾಜಕೀಯ ಕ್ಷೇತ್ರದಲ್ಲೂ ರಾಜ್ಯ, ರಾಷ್ಟ್ರಮಟ್ಟದ ನಾಯಕರನ್ನು ಬೆಳೆಸಿದ ಊರು. ಚುನಾವಣೆ ಸಂದರ್ಭ ರಾಜಕೀಯ ಬೆಳವಣಿಗೆಗಳು ಗರಿಗೆದರಿದರೂ ಅನಂತರ ಮೌನವಾಗುವುದು ಇಲ್ಲಿನ ಸಂಪ್ರದಾಯ. ಚುನಾವಣೆ ಅನಂತರ ರಾಜಕೀಯ ದ್ವೇಷ, ಆರೋಪ – ಪ್ರತ್ಯಾರೋಪ ಅನ್ನುವುದು

ಸಂಪಾದಕೀಯ Read More »

ವಾಣಿಜ್ಯ ನ್ಯಾಯಾಲಯಗಳ ಕಾಯಿದೆ 2015 – ಕಾನೂನು ಮಾಹಿತಿ

ದೇಶದಾದ್ಯಂತ ಮೂರು ಲಕ್ಷ ರೂ.ಗಳಿಗಿಂತ ಜಾಸ್ತಿ ಮೌಲ್ಯದ ವಾಣಿಜ್ಯ ವ್ಯವಹಾರಗಳಿಗೆ ಸಂಬಂಧಪಟ್ಟಂತೆ ವಿವಾದಗಳನ್ನು ಶೀಘ್ರವಾಗಿ ತೀರ್ಮಾನಗೊಳಿಸುವ ಉದ್ದೇಶದಿಂದ 2015 ರಲ್ಲಿ ಕೇಂದ್ರ ಸರಕಾರವು ವಾಣಿಜ್ಯ ನ್ಯಾಯಾಲಯಗಳ ಕಾಯ್ದೆ 2015 ಜಾರಿಮಾಡಿದೆ. ಇದರ ಪ್ರಕಾರ ಸಿವಿಲ್ ಪ್ರೋಸೀಜರ್ ಕೋಡ್ 1908ರ ಕೆಲವು ನಿಬಂಧನೆಗಳನ್ನು ತಿದ್ದುಪಡಿ ಮಾಡಲಾಗಿರುತ್ತದೆ. ರಾಜ್ಯ ಸರಕಾರವು ಸಂಬಂಧಪಟ್ಟ ಉಚ್ಚ ನ್ಯಾಯಾಲಯ (ಹೈ ಕೋರ್ಟ್) ನೊಂದಿಗೆ ಸಮಾಲೋಚಿಸಿ ವಾಣಿಜ್ಯ ವ್ಯವಹಾರಗಳಿಗೆ ಸಂಬಂದಿಸಿದ ವಿವಿಧ ವಿವಾದಗಳನ್ನು ತೀರ್ಮಾನಿಸಲು ಅಗತ್ಯವುಳ್ಳ ವಾಣಿಜ್ಯ ನ್ಯಾಯಾಲಯಗಳನ್ನು ರಚಿಸಿ ಸೂಕ್ತ ಅಧಿಕಾರವನ್ನು ನೀಡಲಾಗಿರುತ್ತದೆ. ಈ

ವಾಣಿಜ್ಯ ನ್ಯಾಯಾಲಯಗಳ ಕಾಯಿದೆ 2015 – ಕಾನೂನು ಮಾಹಿತಿ Read More »

ಸಂಪಾದಕೀಯ -ಹಾಲಾಡಿ ಶ್ರೀನಿವಾಸ ಶೆಟ್ಟಿಯವರ ನಡೆ ಗ್ರೇಟ್‌

ಸ್ವಾರ್ಥಿ ರಾಜಕಾರಣಿಗಳ ನಡುವೆ ಭಿನ್ನವಾಗಿ ಕಾಣುವ ಹಾಲಾಡಿ ಕರಾವಳಿಯ ವಾಜಪೇಯಿ ಎಂದೇ ಖ್ಯಾತಿ ಪಡೆದಿದ್ದ ಕುಂದಾಪುರ ವಿಧಾನಸಭಾ ಕ್ಷೇತ್ರದಿಂದ ಐದು ಬಾರಿ ಶಾಸಕರಾಗಿರುವ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಈ ಬಾರಿ ಚುನಾವಣಾ ಕಣದಿಂದ ಹಿಂದೆ ಸರಿದಿದ್ದಾರೆ. 1999ರಿಂದ ಇಲ್ಲಿಯವರೆಗೆ ಸೋಲಿಲ್ಲದ ಸರದಾರ ಎನಿಸಿಕೊಂಡಿದ್ದ 72 ವರ್ಷದ ಹಾಲಾಡಿ ಶ್ರೀನಿವಾಸ್ ಶೆಟ್ಟಿ ಅವರ ಈ ನಡೆ ಅಚ್ಚರಿ ಮೂಡಿಸಿರುವುದರ ಜತೆಗೆ ನಾಡಿನಾದ್ಯಂತ ಚರ್ಚೆಗೂ ಕಾರಣವಾಗಿದೆ.ಶ್ರೀನಿವಾಸ ಶೆಟ್ಟಿಯವರು ಓರ್ವ ಮಾದರಿ ಜನನಾಯಕ ಎಂದು ಧಾರಾಳವಾಗಿ ಹೇಳಬಹುದು. ಸತತ ಐದು

ಸಂಪಾದಕೀಯ -ಹಾಲಾಡಿ ಶ್ರೀನಿವಾಸ ಶೆಟ್ಟಿಯವರ ನಡೆ ಗ್ರೇಟ್‌ Read More »

ಕಲಾವಿದರ ಹಠಾತ್‌ ಸಾವು ಎಚ್ಚರಿಕೆ ಕರೆಗಂಟೆ

ಯಕ್ಷಗಾನ ಸಮ್ಮೇಳನದಲ್ಲಿ ನಡೆಯಲಿ ಕಲಾವಿದರ ಅಕಾಲಿಕ ಸಾವಿನ ಬಗ್ಗೆ ಮಂಥನ ಯಕ್ಷಗಾನ ಕಲಾವಿದರು ವೇದಿಕೆಯಲ್ಲೆ ಕುಸಿದು ಪ್ರಾಣ ಕಳೆದುಕೊಳ್ಳುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ನಾವು ಹರಿಪಾದ ಸೇರಿದರು, ಸ್ವಾಯುಜ್ಯ ಹೊಂದಿದರು, ಯಕ್ಷ ಸರಸ್ವತಿಯ ಪಾದ ಸೇರಿದರು ಎಂದೆಲ್ಲ ಷರಾ ಬರೆದು ಈ ಪ್ರಕರಣಗಳನ್ನು ಮುಗಿಸುತ್ತಿದ್ದೇವೆ.ಯಕ್ಷಗಾನ ಕಲಾವಿದರು ಇಂದು ಒತ್ತಡದಲ್ಲಿ ಇದ್ದಾರೆ ಅನ್ನುವುದು ಗೋಡೆ ಬರಹದಷ್ಟೆ ಸತ್ಯ. ರಾತ್ರಿ ದೇವೇಂದ್ರ, ಕುಬೇರ ಮೊದಲಾದ ಪಾತ್ರಗಳನ್ನು ಮಾಡುವ ಮಹಾನ್‌ ಕಲಾವಿದರು ಬೇರೆ ವೃತ್ತಿಗಳಿಗೆ ಮತ್ತು ಕಲಾವಿದರಿಗೆ ಹೋಲಿಕೆ ಮಾಡಿದರೆ ಇನ್ನೂ ಬಡತನದಲ್ಲಿ

ಕಲಾವಿದರ ಹಠಾತ್‌ ಸಾವು ಎಚ್ಚರಿಕೆ ಕರೆಗಂಟೆ Read More »

ಸಂಪಾದಕೀಯ

ಬೆಳ್ಳಾರೆಯಲ್ಲಿ ಅಲುಗಾಡಿದ್ದು ಕಾರು ಅಲ್ಲ – ಬಿಜೆಪಿ ಸರಕಾರ ಸುಳ್ಯದ ಬೆಳ್ಳಾರೆಯಲ್ಲಿ ಹಿಂದೂ ಕಾರ್ಯಕರ್ತ ಪ್ರವೀಣ್‌ ನೆಟ್ಟಾರು ಅವರನ್ನು ಮತಾಂಧ ದುಷ್ಕರ್ಮಿಗಳು ಕೊಲೆ ಮಾಡಿರುವುದು ಇಡೀ ದೇಶದಲ್ಲಿ ಸಂಚಲನ ಮೂಡಿಸಿದ ಘಟನೆ. ಶಿವಮೊಗ್ಗದಲ್ಲಿ ಹರ್ಷ ಎಂಬ ಹಿಂದೂ ಕಾರ್ಯಕರ್ತನ ಹತ್ಯೆಯಾಗಿ ಹರಿದ ನೆತ್ತರ ಕಲೆ ಒಣಗುವ ಮೊದಲೇ ಇನ್ನೋರ್ವ ಹಿಂದೂ ಕಾರ್ಯಕರ್ತ ಹತ್ಯೆಯಾಗಿರುವುದು ಬಿಜೆಪಿ ಮತ್ತು ಹಿಂದೂ ಸಂಘಟನೆಗಳ ಕಾರ್ಯಕರ್ತರನ್ನು ಇನ್ನಿಲ್ಲದಂತೆ ಹತಾಶೆಗೆ ತಳ್ಳಿದೆ. ಆ ಹತಾಶೆಯೇ ಈಗ ಆಕ್ರೋಶದ ರೂಪ ಪಡೆದು ಸಿಡಿಯುತ್ತಿದೆ. ಅದರ ಪ್ರತಿಫಲವೇ

ಸಂಪಾದಕೀಯ Read More »

error: Content is protected !!
Scroll to Top