ನಗರದ ರಸ್ತೆ ಬದಿ ವ್ಯಾಪಾರ – ಸಾರ್ವಜನಿಕರಿಗೆ ತೊಂದರೆ
ಸಾಮಾಜಿಕ ಕಾರ್ಯಕರ್ತರಿಂದ ಪೊಲೀಸ್ ಠಾಣೆಗೆ ದೂರು ಕಾರ್ಕಳ : ನಗರದ ಅನಂತಶಯನ ರಸ್ತೆ ಬದಿ ವ್ಯಾಪಾರಿಗಳು ವ್ಯಾಪಾರ ನಡೆಸುವುದರಿಂದ ವಾಹನ ಪಾರ್ಕಿಂಗ್ ಗೆ ತೊಂದರೆಯಾಗುತ್ತಿದೆ. ಹೀಗಾಗಿ ಈ ಕುರಿತು ಸೂಕ್ತ ಕ್ರಮ ವಹಿಸುವಂತೆ ಸಾಮಾಜಿಕ ಕಾರ್ಯಕರ್ತರೊರ್ವರು ಕಾರ್ಕಳ ನಗರ ಪೊಲೀಸ್ ಠಾಣೆಗೆ ದೂರು ನೀಡಿರುತ್ತಾರೆ. ನಗರದಲ್ಲಿ ವಾಹನ, ದ್ವಿಚಕ್ರ ಪಾರ್ಕಿಂಗ್ಗೆ ಸರಿಯಾದ ವ್ಯವಸ್ಥೆಯಿಲ್ಲ. ಇದರ ನಡುವೆ ರಸ್ತೆ ಬದಿ ತಾತ್ಕಾಲಿಕ ನೆಲೆಯಲ್ಲಿ ಅಂಗಡಿಗಳು ತೆರೆದುಕೊಳ್ಳುತ್ತಿದೆ. ಅಂಚೆ ಕಚೇರಿ, ಅನಂತಶಯನ ಸುತ್ತಮುತ್ತ ಪರವಾನಿಗೆ ಇಲ್ಲದೇ ಅಂಗಡಿ ಮುಂಗಟ್ಟುಗಳು ಕಾರ್ಯಾಚರಿಸುತ್ತಿದೆ …