ಶ್ರೀ ಸರಸ್ವತೀ ಹೌಸಿಂಗ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷರಾಗಿ ಸೂರ್ಯಕುಮಾರ್ ಆಯ್ಕೆ

ಪಡುಕುತ್ಯಾರು : ನೂತನವಾಗಿ ಅಸ್ವಿತ್ವಕ್ಕೆ ಬಂದಿರುವ ಶ್ರೀ ಸರಸ್ವತಿ ಹೌಸಿಂಗ್ ಕೋ ಆಪರೇಟಿವ್ ಸೊಸೈಟಿ ಲಿ. ಪಡುಕುತ್ಯಾರು ಇದರ ಅಧ್ಯಕ್ಷರಾಗಿ ಬಿ. ಸೂರ್ಯಕುಮಾರ್ ಹಳೆಯಂಗಡಿ ಹಾಗೂ ಉಪಾಧ್ಯಕ್ಷರಾಗಿ ಡಾ. ಎಸ್. ಆರ್. ಹರೀಶ್ ಆಚಾರ್ಯ ಮಂಗಳೂರು ಚುನಾಯಿತರಾಗಿರುತ್ತಾರೆ. ಶ್ರೀಮದ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತಿ ಪೀಠಾಧೀಶ್ವರ ಅನಂತ ಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮಿಗಳ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು. ನೂತನ ನಿರ್ದೇಶಕರಾಗಿ ಅರವಿಂದ ವೈ ಆಚಾರ್ಯ ಬೆಳುವಾಯಿ, ಪ್ರಕಾಶ್ ಆಚಾರ್ಯ ಕುಂಟಾಡಿ, ಎಂ.ಪಿ. ಮೋಹನ ಆಚಾರ್ಯ ಉಡುಪಿ, ಕೃಷ್ಣ ಎನ್. ಆಚಾರ್ಯ ಉದ್ಯಾವರ, ನಾಗರಾಜ ಆಚಾರ್ಯ ಕಿನ್ನಿಗೋಳಿ, ಭರತ್ ಆರ್. ಆಚಾರ್ಯ, ಬಿ. ಕೆ. ಹರ್ಷರಾಜ್ ಆಚಾರ್ಯ ಎಲ್ಲೂರು, ಸಂಧ್ಯಾ ಲಕ್ಷ್ಮಣ ಆಚಾರ್ಯ ಉಡುಪಿ, ತ್ರಿವೇಣಿ ವಿಶ್ವೇಶ್ವರ ಪುರೋಹಿತ್ ಬಾಳಿಲ ಆಯ್ಕೆಯಾಗಿರುತ್ತಾರೆ.
ಪ್ರತಿಷ್ಠಾನದ ಅಧ್ಯಕ್ಷರಾದ ವಿ. ಶ್ರೀಧರ ಆಚಾರ್ಯ ಒಡೆಯರ ಹೋಬಳಿ ಹಾಗೂ ಪ್ರಧಾನ ಕಾರ್ಯದರ್ಶಿ ಲೋಕೇಶ್ ಎಂ.ಬಿ. ಆಚಾರ್ ಕಂಬಾರು ಅವರ ಮಾರ್ಗದರ್ಶನದಲ್ಲಿ ಚುನಾವಣಾ ಪ್ರಕ್ರಿಯೆ ನಡೆಯಿತು.
ಮೇ 12ರಂದು ಲೋಕಾರ್ಪಣೆ
ಮೇ 12 ರಂದು ಪಡುಕುತ್ಯಾರಿನಲ್ಲಿ ಆನೆಗುಂದಿ ಶ್ರೀಗಳವರ ಪಟ್ಟಾಭಿಷೇಕ ವರ್ಧಂತಿಯ ದಿನದಂದು ಶ್ರೀ ಸರಸ್ವತೀ ಹೌಸಿಂಗ್ ಕಾರ್ಪೊರೇಟಿವ್ ಸೊಸೈಟಿ ಲೋಕಾರ್ಪಣೆಗೊಳ್ಳಲಿದೆ. ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಹಾಗೂ ಬಡಗುಬೆಟ್ಟು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.









































































































error: Content is protected !!
Scroll to Top