ಕಾರು-ಬೈಕ್ ಅಪಘಾತ; ಸವಾರನಿಗೆ ಗಂಭೀರ ಗಾಯ

ಕಾರ್ಕಳ: ಇಲ್ಲಿನ ಕಸಬಾ ಗ್ರಾಮದ ಮೂರುಮಾರ್ಗ ಜಂಕ್ಷನ್ ಬಳಿ ಗುರುವಾರ ಮಧ್ಯಾಹ್ನ ಸಂಭವಿಸಿದ ರಸ್ತೆ ಅಪಘಾತದಲ್ಲಿ ಬೈಕ್ ಸವಾರರೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ತೆಳ್ಳಾರ್ ದುರ್ಗಾ ಗ್ರಾಮದ ನಿವಾಸಿ ಜನಾರ್ಧನ ಆಚಾರ್ (65) ಗಾಯಗೊಂಡ ವ್ಯಕ್ತಿಯಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
​ಜನಾರ್ಧನ ಆಚಾರ್ ಅವರು ಮಧ್ಯಾಹ್ನದ ವೇಳೆ ತಮ್ಮ ದ್ವಿಚಕ್ರ ವಾಹನದಲ್ಲಿ ಮೂರು ಮಾರ್ಗದಿಂದ ಗಾಂಧಿ ಮೈದಾನದ ಕಡೆಗೆ ತಿರುಗುತ್ತಿದ್ದಾಗ ಈ ಘಟನೆ ನಡೆದಿದೆ. ಇದೇ ವೇಳೆ ಆನೆಕೆರೆ ಕಡೆಯಿಂದ ಬಂದ ಕಾರೊಂದು ಅತಿ ವೇಗ ಹಾಗೂ ಅಜಾಗರೂಕತೆಯಿಂದ ಚಲಿಸಿ ಇವರ ವಾಹನಕ್ಕೆ ನೇರವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಸವಾರ ರಸ್ತೆಯ ಮೇಲೆ ಬಿದ್ದಿದ್ದು ಅಪಘಾತದ ತೀವ್ರತೆಗೆ ಅವರ ಬಲಗಾಲಿನ ಮೂಳೆ ಮುರಿತವಾಗಿದೆ.
​ಘಟನೆಯ ಬಳಿಕ ಗಾಯಾಳುವನ್ನು ತಕ್ಷಣವೇ ಕಾರ್ಕಳದ ಟಿ.ಎಂ.ಎ ಪೈ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಅವರು ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಅಪಘಾತದ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಅತಿವೇಗ ಮತ್ತು ಅಜಾಗರೂಕ ಚಾಲನೆಯ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ









































































































error: Content is protected !!
Scroll to Top