ಬಿಪಿಎಲ್‌ ಪಡಿತರ ಕಾರ್ಡ್‌ದಾರರಿಗೆ ಅನ್ನ ಭಾಗ್ಯ ಯೋಜನೆಯಡಿ ಅಕ್ಕಿ ಜತೆ 2 ಕೆ.ಜಿ. ರಾಗಿ ವಿತರಣೆ

ಬೆಂಗಳೂರು : ಅನ್ನಭಾಗ್ಯ ಯೋಜನೆಯಡಿ ಬಿಪಿಎಲ್‌ ಪಡಿತರ ಕಾರ್ಡ್‌ದಾರರಿಗೆ ಈ ತಿಂಗಳಿಂದ ಅಕ್ಕಿ ಜತೆಗೆ ರಾಗಿಯೂ ದೊರೆಯಲಿದೆ. ರಾಜ್ಯ ಹಾಗೂ ಕೇಂದ್ರ ಸರಕಾರದ್ದು ಸೇರಿ ಸದ್ಯ ಓರ್ವರಿಗೆ 10 ಕೆ.ಜಿ. ಅಕ್ಕಿ ವಿತರಿಸಲಾಗುತ್ತಿದ್ದು, ಮೇ ತಿಂಗಳಿನಿಂದ ಗ್ರಾಹಕರಿಗೆ 2 ಕೆ. ಜಿ. ರಾಗಿ ನೀಡಲು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ನಿರ್ಧರಿಸಿದೆ.
ರಾಜ್ಯದಲ್ಲಿ ಈಗ 1.14 ಕೋಟಿಗೂ ಹೆಚ್ಚು ಬಿಪಿಎಲ್‌ ಕಾರ್ಡ್‌ಗಳಿದ್ದು, 4.01 ಕೋಟಿಗೂ ಹೆಚ್ಚು ಸದಸ್ಯರಿದ್ದಾರೆ. ಅವರಿಗೆ ಪ್ರತಿ ತಿಂಗಳು 57 ಸಾವಿರ ಮೆಟ್ರಿಕ್‌ ಟನ್‌ ರಾಗಿ ಅಗತ್ಯವಿದ್ದು, 10 ತಿಂಗಳಿಗೆ ನೀಡಲು ಅಗತ್ಯವಿರುವಷ್ಟು ಸಂಗ್ರಹಿಸಲಾಗಿದೆ. ಇದರ ಜತೆಗೆ, ಉಳಿದ ಸುಮಾರು 20-30 ಸಾವಿರ ಮೆಟ್ರಿಕ್‌ ಟನ್‌ನಷ್ಟು ರಾಗಿಯನ್ನು ಅನ್ಯ ರಾಜ್ಯಗಳಿಗೆ ನೀಡಲು ನಿಗಮ ನಿರ್ಧರಿಸಿದೆ. ಕರ್ನಾಟಕ ಆಹಾರ ಮತ್ತು ನಾಗರಿಕ ಪೂರೈಕೆ ನಿಗಮವು 5.2 ಲಕ್ಷ ಮೆಟ್ರಿಕ್‌ ಟನ್‌ ರಾಗಿಯನ್ನು ಬೆಂಬಲ ಬೆಲೆಯಡಿ ರೈತರಿಂದ ಖರೀದಿಸಿ ದಾಸ್ತಾನು ಮಾಡಿದೆ. ರಾಗಿ ಮಾರಾಟ ಮಾಡಲು ಮೇ 15ರವರೆಗೆ ನೋಂದಾಯಿತ ರೈತರಿಗೆ ಅವಕಾಶ ನೀಡಲಾಗಿದೆ. 6 ಲಕ್ಷ ಮೆಟ್ರಿಕ್‌ ಟನ್‌ಗೂ ಅಧಿಕ ರಾಗಿ ಸಂಗ್ರಹ ಗುರಿ ಹೊಂದಿದ್ದು, ಮೇ ತಿಂಗಳವರೆಗೆ ಖರೀದಿ ನಡೆಯುತ್ತದೆ. ಹತ್ತು ತಿಂಗಳಿಗೆ ವಿತರಣೆ ಮಾಡುವಷ್ಟು ರಾಗಿ-ಜೋಳ ಖರೀದಿಸಿ ಸಂಗ್ರಹಿಸಿಡಲಾಗುವುದು. ಈ ಸಂಬಂಧ ಕೇಂದ್ರ ಸರಕಾರದಿಂದ ಅನುಮೋದನೆ ಪಡೆದು ವಿತರಿಸಲು ಉದ್ದೇಶಿಸಲಾಗಿದೆ.
ರಾಜ್ಯದಲ್ಲಿ ಸುಮಾರು 8-10 ಜಿಲ್ಲೆಗಳನ್ನು ಹೊರತುಪಡಿಸಿದರೆ ಮಾಸಿಕ 57 ಸಾವಿರ ಮೆಟ್ರಿಕ್‌ ಟನ್‌ ರಾಗಿ ಬೇಕಾಗುತ್ತದೆ. 8-9 ಸಾವಿರ ಮೆಟ್ರಿಕ್‌ ಟನ್‌ ಜೋಳ ಬೇಕಾಗುತ್ತದೆ ಎಂದು ಇಲಾಖೆ ಅಂದಾಜಿಸಿದೆ. ಹಳೇ ಮೈಸೂರು ಭಾಗದವರಿಗೆ 2 ಕೆ. ಜಿ. ರಾಗಿ ಹಾಗೂ ಹೈದರಾಬಾದ್‌ ಕರ್ನಾಟಕ ಹಾಗೂ ಮುಂಬಯಿ ಕರ್ನಾಟಕ ಭಾಗದ ಪಡಿತರದಾರರಿಗೆ 2 ಕೆ. ಜಿ. ಜೋಳ ನೀಡಲು ನಿಗಮ ನಿರ್ಧರಿಸಿದೆ.
ಹಳೇ ಮೈಸೂರು ಭಾಗದವರಿಗೆ 2 ಕೆ. ಜಿ. ರಾಗಿ ಹಾಗೂ ಹೈದರಾಬಾದ್‌ ಕರ್ನಾಟಕ ಹಾಗೂ ಮುಂಬಯಿ ಕರ್ನಾಟಕ ಭಾಗದ ಪಡಿತರದಾರರಿಗೆ 2 ಕೆ. ಜಿ. ಜೋಳ ನೀಡಲು ನಿಗಮ ನಿರ್ಧರಿಸಿದೆ. ರಾಗಿ ಮಾರಾಟ ಮಾಡಲು ಮೇ 15ರವರೆಗೆ ನೋಂದಾಯಿತ ರೈತರಿಗೆ ಅವಕಾಶ ನೀಡಲಾಗಿದೆ.









































































































error: Content is protected !!
Scroll to Top