ವೈರಲ್ ಸುದ್ದಿ

ಉಡುಪಿ: ಫುಡ್ ಡೆಲಿವರಿ‌ ಬಾಯ್‌ ವೇಷದಲ್ಲಿ ಗಾಂಜಾ ಮಾರಾಟ, ಮೂವರ ಬಂಧನ

ಉಡುಪಿ: ಫುಡ್‌ ಡೆಲಿವರಿ ಬಾಯ್‌ ವೇಷದಲ್ಲಿ ಗಾಂಜಾ ಇಟ್ಟುಕೊಂಡು ಮಾರಾಟಕ್ಕೆ ಯತ್ನಿಸುತಿದ್ದ ಮೂವರು ಆರೋಪಿಗಳನ್ನು ಉಡುಪಿ ಅಪರಾಧ ಠಾಣಾ ಪೊಲೀಸರು ಬಂಧಿಸಿದ್ದಾರೆ.ಆರೋಪಿಗಳಾದ ರವಿ ಶಂಕರ್‌, ಅಂಜಲ್‌ ಬೈಜು ಹಾಗೂ ದೇವಿಪ್ರಸಾದ್‌ ಇವರನ್ನು ಇಂದ್ರಾಳಿಯಿಂದ ಮಂಚಿಗೆ ಹೋಗುವ ರಸ್ತೆಯಲ್ಲಿ ಬಂಧಿಸಲಾಗಿದ್ದು ಬಂಧಿತ ಆರೋಪಿಗಳಿಂದ 1 ಕೆಜಿ 277 ಗ್ರಾಂ ತೂಕದ ಗಾಂಜಾ, ಎರಡು ಬೈಕ್‌, ಫುಡ್‌ ಡೆಲಿವರಿ ಬ್ಯಾಗ್‌, 4 ಮೊಬೈಲ್‌ ಫೋನ್‌ಗಳು ಮತ್ತು ಮೂವತ್ತು ಸಾವಿರ ಮೌಲ್ಯದ ಗಾಂಜಾ ಸೇರಿದಂತೆ ಒಟ್ಟು ರೂ.1.37 ಲಕ್ಷ ಮೌಲ್ಯಗಳ ಸ್ವತ್ತನ್ನು …

ಉಡುಪಿ: ಫುಡ್ ಡೆಲಿವರಿ‌ ಬಾಯ್‌ ವೇಷದಲ್ಲಿ ಗಾಂಜಾ ಮಾರಾಟ, ಮೂವರ ಬಂಧನ Read More »

ಶಿರೂರು ಟೋಲ್ ನಲ್ಲಿ ಪಲ್ಟಿಯಾದ ಆ್ಯಂಬುಲನ್ಸ್ : ಮೂವರ ಸಾವು

ಶಿರೂರು : ಅತಿವೇಗದಿಂದ ಬಂದ ಆ್ಯಂಬುಲನ್ಸ್ ಟೋಲ್‌ ಕಂಬಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿ ಮೂವರು ಸಾವನ್ನಪ್ಪಿರುವ ಘಟನೆ ಶಿರೂರು ಟೋಲ್‌ನಲ್ಲಿ ಬುಧವಾರ ಸಂಭವಿಸಿದೆ. ಹೊನ್ನಾವರದಿಂದ ಕುಂದಾಪುರ ಆಸ್ಪತ್ರೆಗೆ ರೋಗಿಯನ್ನು ಕರೆ ತರುವ ವೇಳೆ ಚಾಲಕನ ನಿಯಂತ್ರಣ ತಪ್ಪಿ ಟೋಲ್ ಕಂಬಕ್ಕೆ‌ ರಭಸವಾಗಿ ಡಿಕ್ಕಿಯಾಗಿದೆ. ಗಂಭೀರವಾಗಿ ಗಾಯಗೊಂಡು ಮೂವರು ಸಾವನ್ನಪ್ಪಿರುವುದು ತಿಳಿದುಬಂದಿದೆ. ಭಯಾನಕ ವಿಡಿಯೋಗಾಗಿ

ಭಾವಿ ಪತಿಯನ್ನೇ ಜೈಲಿಗೆ ಕಳುಹಿಸಿದ ಪೊಲೀಸ್ ಸಬ್ಇನ್‌ಸ್ಪೆಕ್ಟರ್

ಗುವಾಹಟಿ : ತೈಲ ಮತ್ತು ನೈಸರ್ಗಿಕ ಅನಿಲ ನಿಗಮದಲ್ಲಿ ಕೆಲಸ ಕೊಡಿಸುವ ಭರವಸೆ ನೀಡಿ ಅನೇಕರಿಗೆ ವಂಚನೆ ಮಾಡಿದ್ದ ಕಿರಾತಕನೊಬ್ಬನನ್ನು ಅಸ್ಸಾಂ ಪೊಲೀಸರು ಗುರುವಾರ ಬಂಧಿಸಿದ್ದಾರೆ. ಅಸ್ಸಾಂನ ನಾಗಾನ್‌ನ ಪೊಲೀಸ್ ಅಧಿಕಾರಿ ಜುನ್ಮೋನಿ ರಭಾ ಅವರು ದಾಖಲಿಸಿದ ಎಫ್‌ಐಆರ್ ಅನುಗುಣವಾಗಿ ಅವರ ಭಾವಿ ಪತಿ ರಾಣಾ ಪೊಗಾಗ್ ಎಂಬಾತನನ್ನು ಬಂಧಿಸಲಾಗಿದೆ.ತಾನು ಅಸ್ಸಾಂನಲ್ಲಿನ ಒಎನ್‌ಜಿಸಿಯಲ್ಲಿ ಕೆಲಸ ಮಾಡುತ್ತಿರುವುದಾಗಿ ಪೊಗಾಗ್ ಸುಳ್ಳು ಹೇಳಿಕೊಂಡಿದ್ದ. ಕಂಪೆನಿಯಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಜನರಿಂದ ಹಣ ವಸೂಲಿ ಮಾಡುತ್ತಿದ್ದ. ಹೀಗೆ ಆತ ಜನರಿಂದ ಕೋಟ್ಯಂತರ …

ಭಾವಿ ಪತಿಯನ್ನೇ ಜೈಲಿಗೆ ಕಳುಹಿಸಿದ ಪೊಲೀಸ್ ಸಬ್ಇನ್‌ಸ್ಪೆಕ್ಟರ್ Read More »

ದೇವಸ್ಥಾನದ ಆಭರಣ ಕದ್ದು ಪರಾರಿಯಾಗುವಾಗ ತಾನೇ ಕೊರೆದ ರಂಧ್ರದಲ್ಲಿ ಸಿಲುಕಿದ ಕಳ್ಳ

ಶ್ರೀಕಾಕುಳಂ : ತಾನು ತೋಡಿದ ಖೆಡ್ಡಾಗೆ ಕಳ್ಳನೋರ್ವ ಸಿಲುಕಿ ಪೊಲೀಸರ ಅತಿಥಿಯಾಗಿದ್ದಾನೆ. ಕದ್ದ ಮಾಲುಗಳೊಂದಿಗೆ ಪಾರಾರಿಯಾಗುವಾಗ ತಾನೇ ತೋಡಿದ ಹಳ್ಳಕ್ಕೆ ಬಿದ್ದಿದ್ದಾನೆ.ಈ ಘಟನೆ ನಡೆದಿದ್ದು, ಆಂಧ್ರಪ್ರದೇಶದ ಶ್ರೀಕಾಕುಳಂ ಎಂಬಲ್ಲಿ. ಕಳ್ಳನೊಬ್ಬ ದೇವಾಲಯವೊಂದರಿಂದ ಆಭರಣಗಳನ್ನು ಕದಿಯಲು ದೇವಸ್ಥಾನದ ಗೋಡೆಯಲ್ಲಿ ರಂಧ್ರ ಕೊರೆದಿದ್ದಾನೆ. ದೇಗುಲವನ್ನು ದೋಚಿ ಹೊರ ಬರುವಾಗ, ರಂಧ್ರದಲ್ಲಿ ಸಿಲುಕಿ ಹೊರ ಬರಲು ಆಗದೇ ಪೊಲೀಸರ ಅತಿಥಿಯಾಗಿದ್ದಾನೆ. ಕಳ್ಳನನ್ನು 30 ವರ್ಷದ ಪಾಪ ರಾವ್ ಎಂದು ಗುರುತಿಸಲಾಗಿದೆ. ದೇವಸ್ಥಾನದ ಕಿಟಕಿ ಒಡೆದು ಒಳಗೆ ನುಗ್ಗಿದ್ದ ಕಳ್ಳ, ದೇವರ ಆಭರಣ …

ದೇವಸ್ಥಾನದ ಆಭರಣ ಕದ್ದು ಪರಾರಿಯಾಗುವಾಗ ತಾನೇ ಕೊರೆದ ರಂಧ್ರದಲ್ಲಿ ಸಿಲುಕಿದ ಕಳ್ಳ Read More »

ಮನುಷ್ಯರಂತೆ ಹಲ್ಲುಗಳಿರುವ ಮೀನು ಪತ್ತೆ

ಮಾನವರ ಮುಖವನ್ನೇ ಹೋಲುವ ವಿಚಿತ್ರ ಮೀನೊಂದು ಕರ್ನಾಟಕದಲ್ಲಿ ಪತ್ತೆಯಾಗಿದೆ. ಕೊಪ್ಪಳದ ವಿರುಪಾಪುರ ಗಡ್ಡೆಯ ನದಿ ಪಾತ್ರದಲ್ಲಿ ಪತ್ತೆಯಾಗಿರುವ ಮೀನು ಎಲ್ಲರ ಅಚ್ಚರಿಗೆ ಕಾರಣವಾಗಿದೆ.  ಈ ಮೀನಿನ ವಿಶೇಷತೆ ಎಲ್ಲರನ್ನೂ ಅಚ್ಚರಿಗೊಳ್ಳುವಂತೆ ಮಾಡಿದೆ. ಇದೇ ಕಾರಣದಿಂದ ಈ ಫೋಟೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ ಹಂಪಿ ಮತ್ತು ವಿರುಪಾಪುರ ಗಡ್ಡೆ ಮಧ್ಯೆ ಹರಿಯುವ ನದಿಯಲ್ಲಿ ಪತ್ತೆಯಾಗಿರುವ ಮೀನಿನ ಬಾಯಿಯಲ್ಲಿ ಮನುಷ್ಯನಂತೆ ಹಲ್ಲುಗಳು ಇವೆ. ಮೀನನ್ನು ನೋಡಿ ಸ್ಥಳೀಯರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ರಫಿ ಎನ್ನುವ ವ್ಯಕ್ತಿ ಮೀನು ಹಿಡಿಯುವಾಗ …

ಮನುಷ್ಯರಂತೆ ಹಲ್ಲುಗಳಿರುವ ಮೀನು ಪತ್ತೆ Read More »

ಮದುವೆ ಸಮಾರಂಭದಲ್ಲಿ ಬೆಂಕಿ ಬಿದ್ದರೂ, ಊಟ ಬಿಟ್ಟು ಕದಲಲಿಲ್ಲ !

ಅನೇಕರು ಮದುವೆ `ಸಮಾರಂಭಗಳನ್ನು ನಮ್ಮಲ್ಲಿ ನೋಡುವುದಕ್ಕಿಂತಲೂ ಹೆಚ್ಚಾಗಿ ಮದುವೆ ಸಮಾರಂಭಗಳಲ್ಲಿ ಮಾಡಿದಂತಹ ಊಟದ ರುಚಿ ಸವಿಯಲು ಹೋಗುವುದುಂಟು. ಇದರಲ್ಲೇನೂ ತಪ್ಪಿಲ್ಲ ಬಿಡಿ ಅವರವರ ಇಷ್ಟಾರ್ಥಗಳು ಅವರವರಿಗೆ ಬಿಟ್ಟಿದ್ದು . ಆದರೆ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ವಿಡಿಯೋದಲ್ಲಿ ಮದುವೆಯ ಸಮಾರಂಭದಲ್ಲಿ ಅತಿಥಿಗಳು ಭೋಜನ ಆನಂದಿಸುತ್ತಿದ್ದರೆ, ಹಿಂಬದಿಯಲ್ಲಿ ಭಾರಿ ಬೆಂಕಿ ಹತ್ತಿಕೊಂಡು ಉರಿಯುತ್ತಿದ್ದದ್ದನ್ನು ನೋಡಬಹುದು. ಹೌದು, ಮುಂಬೈ ಖಬರ್ 9 ಟ್ವಿಟ್ಟರ್ ಹ್ಯಾಂಡಲ್‌ನಲ್ಲಿ ಹಂಚಿಕೊಂಡಿರುವ 24 ಸೆಕೆಂಡಿನ ವಿಡಿಯೋ ತುಣುಕಿನಲ್ಲಿ ಥಾಣೆಯ ಭವಾಂಡಿಯ ಅನ್ಸಾರಿ ಮ್ಯಾರೇಜ್ ಹಾಲ್‌ನಲ್ಲಿ ಭಾನುವಾರ ಸಂಜೆ …

ಮದುವೆ ಸಮಾರಂಭದಲ್ಲಿ ಬೆಂಕಿ ಬಿದ್ದರೂ, ಊಟ ಬಿಟ್ಟು ಕದಲಲಿಲ್ಲ ! Read More »

ಹುಲಿಗಳೊಂದಿಗೆ ಸೆಣಸಿದ ಬೆಕ್ಕಿನ ಮರಿ ! ಇದು ಅಚ್ಚರಿಯಾದರೂ ಸತ್ಯ

ಯುನೈಟೆಡ್ ಅರಬ್ ಎಮಿರೆಟ್ಸ್ ಪ್ರಮುಖ ನಗರಗಳಲ್ಲಿ ಒಂದಾದ ದುಬೈನ ಆಡಳಿತಗಾರ ಮೊಹಮ್ಮದ್ ಬಿನ್ ರಶೀದ್ ಆಲ್ ಮಕಮ್, ಪುತ್ರಿಯರಲ್ಲಿ ಒಬ್ಬರಾದ ಶೇಖ್ ಲತೀಫಾ ಅವರು, ಮೂರು ಹುಲಿಗಳೊಂದಿಗೆ ಬೆಕ್ಕಿನ ಮರಿಯೊಂದು ಸೆಣಸಾಡುವ ಮೈನವಿರೇಳಿಸುವ ವಿಡಿಯೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಲತೀಫಾ ಅವರು ಶೇರ್ ಮಾಡಿರುವುದು ಸಿಟಿಟಿವಿ ವಿಡಿಯೋಗಳಾಗಿವೆ. ಹುಲಿಗಳಿರುವ ಜಾಗಕ್ಕೆ ಆಕಸ್ಮಿಕವಾಗಿ ಹೋಗುವ ಬೆಕ್ಕಿನ ಮರಿಯನ್ನು ನೋಡಿ ಮೂರು ಹುಲಿಗಳು ಏಕಾಮಿಕ ದಾಳಿ ಮಾಡಿವೆ. ಯಾವುದಕ್ಕೂ ಹೆದರದ ಮರಿ, ಮೂರು ಹುಲಿಗಳೊಂದಿಗೆ ಸೆಣಸಾಡಿ ಕೊನೆಗೆ ಇಬ್ಬರು ಕಾವಲುಗಾರರ ರಕ್ಷಣೆಯಿಂದ …

ಹುಲಿಗಳೊಂದಿಗೆ ಸೆಣಸಿದ ಬೆಕ್ಕಿನ ಮರಿ ! ಇದು ಅಚ್ಚರಿಯಾದರೂ ಸತ್ಯ Read More »

ಹುತಾತ್ಮ ಯೋಧನ ಪತ್ನಿ ಸೇನೆಗೆ ಅಧಿಕೃತವಾಗಿ ಸೇರ್ಪಡೆ , 11 ತಿಂಗಳ ತರಬೇತಿ ಮುಗಿಸಿದ ದಿ.ಮೇಜರ್ ದೀಪಕ್ ನೈನಾವಾಲ್ ಪತ್ನಿ ಜ್ಯೋತಿ

ಚೆನ್ನೈ: 2018ರಲ್ಲಿ ಜಮ್ಮು ಕಾಶ್ಮೀರದ ಕುಲ್ಗಾಮ್‌ನಲ್ಲಿ ಉಗ್ರರೊಂದಿಗೆ ಹೋರಾಡಿ ಹುತಾತ್ಮರಾಗಿದ್ದ ಮೇಜರ್‌ ದೀಪಕ್‌ ನೈನಾವಾಲ್‌ ಅವರ ಪತ್ನಿ ಜ್ಯೋತಿ ನೈನಾವಾಲ್‌ ಅವರು ಶನಿವಾರದಂದು ಅಧಿಕೃತವಾಗಿ ಸೇನೆ ಸೇರಿದ್ದಾರೆ.ಈ ಮೂಲಕ ತಾನು ಅಂದುಕೊಂಡದ್ದನ್ನು ಸಾಧಿಸಿದ್ದಾರೆ. ಚೆನ್ನೈನ ಸೇನಾ ತರಬೇತಿ ಕೇಂದ್ರದಲ್ಲಿ 11 ತಿಂಗಳ ತರಬೇತಿ ಪೂರ್ಣ ಗೊಳಿಸಿದ 153 ಭಾರತೀಯ ಕೆಡೆಟ್‌ಗಳನ್ನು ಶನಿವಾರ ಅಧಿಕೃತವಾಗಿ ಸೇನೆಗೆ ಸೇರ್ಪಡಿಸಿ­ಕೊಳ್ಳಲಾಗಿದ್ದು, ಅದರಲ್ಲಿ ಜ್ಯೋತಿಯೂ ಸೇರಿದ್ದಾರೆ. ಜ್ಯೋತಿ ಅವರಿಗೆ ಲೆಫ್ಟಿನೆಂಟ್‌ ಕರ್ನಲ್‌ ಹುದ್ದೆಯನ್ನು ನೀಡಲಾಗಿದೆ. ಜ್ಯೋತಿಯವರ ಸೇನಾ ಸೇರ್ಪಡೆ ಅವರ ಪುತ್ರಿ ಲಾವಣ್ಯಳಿಗೂ …

ಹುತಾತ್ಮ ಯೋಧನ ಪತ್ನಿ ಸೇನೆಗೆ ಅಧಿಕೃತವಾಗಿ ಸೇರ್ಪಡೆ , 11 ತಿಂಗಳ ತರಬೇತಿ ಮುಗಿಸಿದ ದಿ.ಮೇಜರ್ ದೀಪಕ್ ನೈನಾವಾಲ್ ಪತ್ನಿ ಜ್ಯೋತಿ Read More »

ಹುಟ್ಟುವ ಮಗುವಿನ ಶೈಶವಾವಸ್ಥೆಯ ಸಂಭಾವ್ಯ ಶಸ್ತ್ರಚಿಕಿತ್ಸೆಗೆ ಇನ್ನು ಮುಂದೆ ಸಿಗಲಿದೆ ವಿಮಾ ಸುರಕ್ಷೆ

ಮಗು ಹುಟ್ಟುವ ಮುನ್ನವೇ ಮಗುವಿನ ಸಂಭಾವ್ಯ ಜನ್ಮಜಾತ ದೋಷಗಳಿಗೆ ಮತ್ತು ಶೈಶವಾವಸ್ಥೆಯ ಸಂಭಾವ್ಯ ಶಸ್ತ್ರಚಿಕಿತ್ಸೆ ಸಂಬಂಧಿ ಸಮಸ್ಯೆಗಳಿಗಾಗಿ ವಿಮಾ ಸುರಕ್ಷೆ ಒದಗಿಸಲು ಪ್ರಮುಖ ವಿಮಾ ಕಂಪನಿಯೊಂದು ಒಪ್ಪಿಕೊಂಡಿದೆ. ಇಂಡಿಯನ್ ಅಕಾಡಮಿ ಆಫ್ ಪೀಡಿಯಾಟ್ರಿಕ್ ಸರ್ಜನ್ಸ್ (ಐಎಪಿಎಸ್) ಸಂಘಟನೆ ವಿಮಾ ಕಂಪೆನಿಗಳ ಜತೆ ಈ ಸಂಬಂಧ ಸುದೀರ್ಘ ಚರ್ಚೆ ನಡೆಸಿದ ಬಳಿಕ ಸ್ಟಾರ್ ಹೆಲ್ತ್ ಮತ್ತು ಅಲೈಡ್ ಇನ್ಸೂರೆನ್ಸ್ ಕಂಪೆನಿ ಈ ವಿನೂತನ ವಿಮಾ ಸುರಕ್ಷೆಗೆ ಒಪ್ಪಿಕೊಂಡಿದೆ. ಇತರ ಹಲವು ವಿಮಾ ಕಂಪೆನಿಗಳ ಜತೆ ಕೂಡಾ ಚರ್ಚೆ ನಡೆಯುತ್ತಿದೆ …

ಹುಟ್ಟುವ ಮಗುವಿನ ಶೈಶವಾವಸ್ಥೆಯ ಸಂಭಾವ್ಯ ಶಸ್ತ್ರಚಿಕಿತ್ಸೆಗೆ ಇನ್ನು ಮುಂದೆ ಸಿಗಲಿದೆ ವಿಮಾ ಸುರಕ್ಷೆ Read More »

ಹೆಬ್ರಿ : ಕಾಡು ಪ್ರದೇಶದಲ್ಲಿ ತಳಮಟ್ಟದಲ್ಲಿ ಹಾರಿದ ಹೆಲಿಕಾಪ್ಟರ್‌

ಹೆಲಿಕಾಪ್ಟರ್ ನಿಂದ ವ್ಯಕ್ತಿಗಳು ಇಳಿದರು ಎಂದ ಬಾಲಕ ಆತಂಕಕ್ಕೀಡಾದ ಸ್ಥಳೀಯರು ಕಾರ್ಕಳ : ಹೆಬ್ರಿ ತಾಲೂಕು ಬೈರಂಪಳ್ಳಿ ಪ್ರದೇಶದಲ್ಲಿ ಸೆ. 21ರ ಮಧ್ಯಾಹ್ನ 12 ರ ವೇಳೆ ಹೆಲಿಕಾಪ್ಟರೊಂದು ತಳಮಟ್ಟದಲ್ಲಿ ಹಾರಾಟ ನಡೆಸಿದ್ದು, ಸ್ಥಳೀಯರಲ್ಲೊಮ್ಮೆ ಆತಂಕಕ್ಕೀಡು ಮಾಡಿತು. ಹೆಲಿಕಾಪ್ಟರ್‌ ನೋಡಿದ 13 ವರ್ಷದ ಬಾಲಕನೋರ್ವ ಹೆಲಿಕಾಪ್ಟರ್‌ ನಿಂದ ವ್ಯಕ್ತಿಗಳು ಇಳಿದು ಹೋದರು ಎಂದು ಮನೆಯವರಲ್ಲಿ ತಿಳಿಸಿದ್ದು, ಅಪರಿಚಿತರು ಬೈರಂಪಳ್ಳಿ ಪರಿಸರದಲ್ಲಿ ಅವಿತಿದ್ದಾರೆ ಎಂಬ ಸುದ್ದಿ ಕ್ಷಣಾರ್ಧದಲ್ಲಿ ಎಲ್ಲೆಡೆ ಹರಡಿತು. ಈ ವಿಚಾರ ಸ್ಥಳೀಯರಲ್ಲಿ ಆತಂಕ ಮೂಡಿಸಿದ್ದು, ಸುದ್ದಿ …

ಹೆಬ್ರಿ : ಕಾಡು ಪ್ರದೇಶದಲ್ಲಿ ತಳಮಟ್ಟದಲ್ಲಿ ಹಾರಿದ ಹೆಲಿಕಾಪ್ಟರ್‌ Read More »

error: Content is protected !!
Scroll to Top