ಚಿಕ್ಕಮಗಳೂರಿನಲ್ಲಿ ಕಂಡುಬಂತು ಮನಕಲಕುವ ದೃಶ್ಯ
ಚಿಕ್ಕಮಗಳೂರು : ಭದ್ರಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಮೃತಪಟ್ಟಿದ್ದ ಆನೆಯ ಮೃತದೇಹ ನೋಡಲು ಗಜಪಡೆ ಬಂದಿದ್ದ ದೃಶ್ಯ ಅರಣ್ಯ ಇಲಾಖೆ ಇರಿಸಿದ್ದ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಇತ್ತೀಚೆಗೆ ಆನೆಯೊಂದು ಸಹಜವಾಗಿ ಮೃತಪಟ್ಟಿತ್ತು. ಅದರ ಮೃತದೇಹ ಹೇಗೆ ಕೊಳೆಯಲಿದೆ, ಯಾವ ಯಾವ ಪ್ರಾಣಿ, ಪಕ್ಷಿಗಳು ಭಕ್ಷಣೆ ಮಾಡಲಿವೆ ಎಂಬುದನ್ನು ತಿಳಿಯಲು ಅಧ್ಯಯನದ ದೃಷ್ಟಿಯಿಂದ ವನ್ಯಜೀವಿ ವಿಭಾಗದ ಅಧಿಕಾರಿಗಳು ಕ್ಯಾಮೆರಾ ಅಳವಡಿಕೆ ಮಾಡಿದ್ದರು. 17 ಆನೆಗಳ ಹಿಂಡು ಬಂದು ಮೃತದೇಹದ ಬಳಿ ಸಂತಾಪ ಸೂಚಿಸುವ ರೀತಿಯಲ್ಲಿ ನಿಂತಿರುವ ಮನಕಲಕುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಬಳಿಕ ಚಿರತೆ, ಕಾಡುಹಂದಿ ಕೂಡ ಆನೆಯ ಮೃತದೇಹ ತಿಂದಿರುವುದು ಸೆರೆಯಾಗಿದೆ. ಈ ರೀತಿಯ ಹಲವು ವೈಜ್ಞಾನಿಕ ಅಧ್ಯಯನಗಳನ್ನು ಭದ್ರಾ ವನ್ಯಜೀವಿ ವಿಭಾಗದಲ್ಲಿ ಮಾಡಲಾಗುತ್ತಿದೆ ಎಂದು ಭದ್ರಾ ಹುಲಿ ಸಂರಕ್ಷಿತ ಪ್ರದೇಶದ ಕ್ಷೇತ್ರ ನಿರ್ದೇಶಕ ಯಶಪಾಲ್ ಕ್ಷೀರಸಾಗರ ತಿಳಿಸಿದರು.

























