ಕಾರ್ಕಳ: ವಿಜಯ ಶೆಟ್ಟಿ ಕಾರ್ಕಳ ಸಾರ್ಥ್ಯದ ರಾಜ್ಯ ಪ್ರಶಸ್ತಿ ವಿಜೇತ ಸಿಂಧೂರ ಕಲಾವಿದೆರ್ ಕಾರ್ಲ ತಂಡ ಹತ್ತು ವರ್ಷ ಪೂರೈಸಿದೆ.
ಈ ಹಿನ್ನೆಲೆ ಅ. 31 ರಂದು ಸಂಜೆ 6.30 ಕ್ಕೆ ಕಾರ್ಕಳದ ಗಾಂಧಿ ಮೈದಾನದಲ್ಲಿ ಸಿಂಧೂರ ದಶಸಂಭ್ರಮ ಸಮಾರಂಭ ನಡೆಯಲಿದೆ.
ಕಾರ್ಯಕ್ರಮದಲ್ಲಿ ವಿಶೇಷ ದೃಶ್ಯ ಸಂಯೋಜನೆಯ, ವಿಭಿನ್ನ ಮಾದರಿಯ ನಾಟಕ ‘ಒಂಜಿ ಗುಜ್ಜೆದ ಕಥೆ’ ಪ್ರದರ್ಶನಗೊಳ್ಳಲಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.










































