ಕಾರ್ಕಳ: ಶಾಲಾ ಶಿಕ್ಷಣ ಇಲಾಖೆ ಮತ್ತು ಶ್ರೀವಿದ್ಯಾನಿಕೇತನ ಪಿ.ಯು. ಕಾಲೇಜು ಕೊಪ್ಪಳ ಇವರ ಸಹಯೋಗದಲ್ಲಿ ರಾಜ್ಯಮಟ್ಟದಲ್ಲಿ ನಡೆದ ನೆಟ್‌ಬಾಲ್ ಪಂದ್ಯಾಟದಲ್ಲಿ ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳು ರಾಷ್ಟ್ರಮಟ್ಟಕ್ಕೆ ಆಯ್ಕೆಗೊಂಡಿದ್ದು, ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಲಿದ್ದಾರೆ.
ಹಾಸನದ ಡಾ.ವೇಣು ಬಿ. ಎಂ. – ಸುಮಾ ವೇಣು ದಂಪತಿ ಪುತ್ರ ಆಯುಶ್ ಎಚ್. ವಿ. ಹಾಗೂ ಬಾಬು ಎಸ್. ಎ. – ಸುಜಾತ ಟಿ.ಆರ್. ದಂಪತಿ ಪುತ್ರ ಪೂರ್ವಿಕ್ ಎಸ್ .ಬಾಬು ಸಾಧಕ ವಿದ್ಯಾರ್ಥಿಗಳು.
ವಿದ್ಯಾರ್ಥಿಗಳನ್ನು ಅಜೆಕಾರು ಪದ್ಮಗೋಪಾಲ್ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಡಾ, ಸುಧಾಕರ ಶೆಟ್ಟಿ ಅಭಿನಂದಿಸಿದ್ದಾರೆ.






























































