ಕ್ರೈಸ್ಟ್‌ಕಿಂಗ್ ಶಿಕ್ಷಣ ಸಂಸ್ಥೆಯಲ್ಲಿ ವಾರ್ಷಿಕ ಕ್ರೀಡಾಕೂಟ

ಕಾರ್ಕಳ: ಇಲ್ಲಿನ ಕ್ರೆೈಸ್ಟ್‌ಕಿಂಗ್ ಶಿಕ್ಷಣ ಸಂಸ್ಥೆಗಳ ವಾರ್ಷಿಕ ಕ್ರೀಡಾಕೂಟ ಸ್ಥಳೀಯ ಗಾಂಧೀ ಮೈದಾನದಲ್ಲಿ ಅದ್ದೂರಿಯಾಗಿ ನಡೆಯಿತು.

ಅತಿಥಿಗಳಾಗಿ ಆಗಮಿಸಿದ್ದ ಕಾರ್ಕಳ ನಗರ ಠಾಣೆಯ ಪ್ರೊಬೇಷನರಿ ಪೊಲೀಸ್ ಉಪ ನಿರೀಕ್ಷಕರಾದ ಮೊಹಮ್ಮದ್ ಶಿಫಾಝ್ ಅವರು ಕ್ರೀಡಾಪಟುಗಳಿಂದ ಗೌರವ ವಂದನೆ ಸ್ವೀಕರಿಸಿದರು.

ಮುಖ್ಯ ಅತಿಥಿಗಳಾದ ಕರ್ನಾಟಕ ಸಹಕಾರ ಭಾರತಿ ಇದರ ರಾಜ್ಯ ಪ್ರಧಾನ ಕಾರ್ಯದರ್ಶಿ ಸಾಣೂರು ನರಸಿಂಹ ಕಾಮತ್ ಅವರು ಕ್ರೀಡಾ ಜ್ಯೋತಿ ಬೆಳಗಿದರು.

ಕಾರ್ಕಳದ ಖ್ಯಾತ ನ್ಯಾಯವಾದಿ ಹಾಗೂ ಕೆಎಸ್‌ಎಸ್‌ಐಡಿಸಿ ಇದರ ನಿರ್ದೇಶಕರಾದ ಶೇಖರ ಮಡಿವಾಳ ಅವರು ಕ್ರೀಡಾ ಧ್ವಜಾರೋಹಣ ನೆರವೇರಿಸಿದರು.

ಶ್ರೀಮದ್ ಭುವನೇಂದ್ರ ಪ್ರೌಢಶಾಲೆ ಕಾರ್ಕಳ ಇಲ್ಲಿನ ದೈಹಿಕ ಶಿಕ್ಷಣ ಶಿಕ್ಷಕರಾದ ಸಂಜಯ್ ಕುಮಾರ್ ಅವರು ಕ್ರೀಡಾಳುಗಳ ಪರಿಚಯ ಸ್ವೀಕರಿಸಿದರು.

ನಂತರ ನಡೆದ ಸಭಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಮುಖ್ಯ ಅತಿಥಿಗಳಾದ ಸಾಣೂರು ನರಸಿಂಹ ಕಾಮತ್ ಅವರು “ದೈಹಿಕ ದೃಢತೆ ಸಾಧಿಸಲು ಕ್ರೀಡೆ ಸುಲಭ ದಾರಿ, ಆದ್ದರಿಂದ ಪ್ರತಿಯೊಬ್ಬ ವಿದ್ಯಾರ್ಥಿಯೂ ಯಾವುದಾದರೂ ಒಂದು ಕ್ರೀಡೆಯಲ್ಲಿ ತೊಡಗಿಸಿಕೊಳ್ಳಬೇಕು. ಜೀವನ ಪೂರ್ತಿ ಸ್ಪೂರ್ತಿಯಿಂದ ಬದುಕಲು ಕ್ರೀಡೆ ಸಹಕಾರಿ, ಕ್ರೆöÊಸ್ಟ್ಕಿಂಗ್ ಸಂಸ್ಥೆಯ ವಿದ್ಯಾರ್ಥಿಗಳು ರಾಜ್ಯ, ರಾಷ್ಟçಮಟ್ಟದಲ್ಲಿ ಸಾಧನೆ ಮಾಡಿದ್ದು ಈ ಕಾರಣದಿಂದ ಈ ಸಂಸ್ಥೆಯು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಪಾಲಿಗೆ ಹೆಮ್ಮೆಯ ಕೊಡುಗೆಯಾಗಿದೆ” ಎಂದು ಹೇಳಿದರು.

ಉಪ ನಿರೀಕ್ಷಕರಾದ ಮೊಹಮ್ಮದ್ ಶಿಫಾಝ್ ಅವರು ಮಾತನಾಡಿ “ಶಿಕ್ಷಣದ ಸಂದರ್ಭದಲ್ಲಿ ಕೇವಲ ಕಲಿಕೆಗೆ ಮಾತ್ರ ಒತ್ತುಕೊಡದೆ ಕ್ರೀಡೆಗೂ ಮಹತ್ವ ನೀಡಬೇಕು, ಕ್ರೀಡೆಯಿಂದ ಆರೋಗ್ಯ ವೃದ್ಧಿ ಮಾತ್ರವಲ್ಲದೆ ಮುಂದೆ ಸರ್ಕಾರಿ ಉದ್ಯೋಗಗಳಿಗೆ ನೇಮಕಗೊಳ್ಳಲು ಇದು ಸಹಕಾರಿ” ಎಂದು ಹೇಳಿದರು. ನ್ಯಾಯವಾದಿ ಶೇಖರ ಮಡಿವಾಳ ಅವರು ಮಾತನಾಡಿ “ಕ್ರೀಡೆಯಿಂದ ಮನೋಸ್ಥೆೈರ್ಯ ಹೆಚ್ಚಾಗುವುದರಿಂದ ಮುಂದೆ ಜೀವನದಲ್ಲಿ ಯಾವ ಸವಾಲು ಎದುರಾದರೂ ಎದುರಿಸಬಹುದು. ಆಟದ ಮೈದಾನದ ಉಪಯೋಗ ಜಾಸ್ತಿಯಾದರೆ ಆಸ್ಪತ್ರೆಗಳ ಉಪಯೋಗ ಕಡಿಮೆಯಾಗುತ್ತದೆ. ಕ್ರೆöÊಸ್ಟ್ಕಿಂಗ್ ಶಿಕ್ಷಣ ಸಂಸ್ಥೆಯ ಒಳ ಹೊಕ್ಕು ನೋಡಿದರೆ ಶೈಕ್ಷಣಿಕ ಕ್ಷೇತ್ರದ ವಿಶ್ವರೂಪ ದರ್ಶನವಾಗುತ್ತದೆ” ಎಂದು ಹೇಳಿದರು.

ದೈಹಿಕ ಶಿಕ್ಷಣ ಶಿಕ್ಷಕ ಸಂಜಯ್ ಕುಮಾರ್ ಅವರು ಮಾತನಾಡಿ “ಮಕ್ಕಳು ಕಲಿಕೆಯಷ್ಟೇ ಕ್ರೀಡೆಗೂ ಆದ್ಯತೆ ನೀಡಬೇಕು, ಎಲ್ಲಾ ಮಕ್ಕಳು ಕ್ರೀಡೆಯಲ್ಲಿ ಕ್ರೀಡಾ ಮನೋಭಾವದೊಂದಿಗೆ ಭಾಗವಹಿಸಿ” ಎಂದು ಹೇಳಿದರು. ಕ್ರೆೈಸ್ಟ್ ಕಿಂಗ್ ಎಜುಕೇಷನ್ ಟ್ರಸ್ಟ್ನ ಸದಸ್ಯರಾದ ಡಾ.ಪೀಟರ್ ಫೆರ್ನಾಂಡಿಸ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಂದ ಸ್ಕೂಲ್ ಬ್ಯಾಂಡ್ ಹಾಗೂ ಚೆಂಡೆ ವಾದನದ ಹಿನ್ನೆಲೆಯೊಂದಿಗೆಆಕರ್ಷಕ ಕ್ರೀಡಾ ಪಥಸಂಚಲನ ಹಾಗೂ ಕ್ರೀಡಾಜ್ಯೋತಿ ಮೆರವಣಿಗೆ ನಡೆಯಿತು.

ಸಂಸ್ಥೆಯ ಪದವಿಪೂರ್ವ ವಿಭಾಗದ ಪ್ರಾಚಾರ್ಯ ಲಕ್ಷ್ಮೀನಾರಾಯಣ ಕಾಮತ್, ಉಪ ಪ್ರಾಚಾರ್ಯ ಡಾ.ಪ್ರಕಾಶ್ ಭಟ್, ಪ್ರೌಢಶಾಲಾ ಮುಖ್ಯ ಶಿಕ್ಷಕಿ ಜೋಸ್ನಾ ಸ್ನೇಹಲತಾ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಐ.ಕ್ರಿಸ್ಟೋಫರ್ ಕೋಟ್ಯಾನ್, ಕಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಸಿಸ್ಟರ್ ಜಾಲಿ ಜೇಕಬ್, ಆಡಳಿತಾಧಿಕಾರಿ ಜೀವನ್ ಪಿಂಟೋ, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷರುಗಳಾದ ಕಾಲೇಜು ವಿಭಾಗದ ನಿತೇಶ್ ಶೆಟ್ಟಿ, ಪ್ರೌಢಶಾಲಾ ವಿಭಾಗದ ವಿಶ್ವನಾಥ ಪೂಜಾರಿ, ಪ್ರಾಥಮಿಕ ವಿಭಾಗದ ವನಿತಾ ಶೆಟ್ಟಿ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ವಿದ್ಯಾರ್ಥಿಗಳಾದ ದ್ವಿತೀಯ ವಿಜ್ಞಾನ ವಿಭಾಗದ ಸ್ಲೀಟಾ ಡಿಸೋಜ ಸ್ವಾಗತಿಸಿ, ಪ್ರೌಢಶಾಲಾ ಶಿಕ್ಷಕಿ ಶ್ರುತಿರಾಜ್ ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ದೈಹಿಕ ಶಿಕ್ಷಣ ನಿರ್ದೇಶಕರಾದ ಕೃಷ್ಣ ಪ್ರಸಾದ್, ಪ್ರಕಾಶ್ ನಾಯ್ಕ್, ಕೀರ್ತನಾ ಕ್ರೀಡಾಕೂಟ ಸಂಘಟಿಸಿದ್ದರು. ಪ್ರಥಮ ವಾಣಿಜ್ಯ ವಿಭಾಗದ ಲೆನಿಶಾ ಮೆಂಡೋನ್ಸಾ ವಂದಿಸಿದರು.

























































































































error: Content is protected !!
Scroll to Top