ISSF ಗೆ ಭಾರತದ ಶೂಟರ್ ಮನು ಭಾಕರ್ ಆಯ್ಕೆ

ನವದೆಹಲಿ: ಅಂತಾರಾಷ್ಟ್ರೀಯ ಶೂಟಿಂಗ್ ಸ್ಪೋರ್ಟ್ ಫೆಡರೇಶನ್ (ISSF) ಅಥೀಟ್ಸ್ ಸಮಿತಿಗೆ ಎರಡು ಬಾರಿಯ ಒಲಿಂಪಿಕ್ ಪದಕ ವಿಜೇತೆ ಮತ್ತು ಪಿಸ್ತೂಲ್ ಶೂಟರ್ ಮನು ಭಾಕ‌ರ್ ಅವರು 2026-2030ರ ಅವಧಿಗೆ ಆಯ್ಕೆಯಾಗಿದ್ದಾರೆ.

ಪಿಸ್ತೂಲ್ ವಿಭಾಗದಲ್ಲಿ ಎರಡು ಸ್ಥಾನಗಳಿಗಾಗಿ ಸ್ಪರ್ಧಿಸಿದ್ದ 10 ಅಭ್ಯರ್ಥಿಗಳಲ್ಲಿ ಭಾಕರ್ ಕೂಡ ಒಬ್ಬರಾಗಿದ್ದರು. ಈ ತಿಂಗಳ ಆರಂಭದಲ್ಲಿ ತಮ್ಮ ನಾಮಪತ್ರ ಸಲ್ಲಿಕೆಯ ವೇಳೆ ಮಾತನಾಡಿದ್ದ ಭಾಕರ್, ಕ್ರೀಡೆಯನ್ನು ಬಲಪಡಿಸುವುದು ಮತ್ತು ವಿಶ್ವದಾದ್ಯಂತ ಇರುವ ಶೂಟರ್‌ಗಳಿಗೆ ಹೆಚ್ಚು ಪೂರಕ, ಸುಸ್ಥಿರ ಹಾಗೂ ಪ್ರಗತಿಪರ ವಾತಾವರಣವನ್ನು ನಿರ್ಮಿಸುವ ಕ್ರೀಡಾಪಟು-ಕೇಂದ್ರಿತ ದೃಷ್ಟಿಕೋನವನ್ನು ಹಂಚಿಕೊಂಡಿದ್ದರು. ಒಲಿಂಪಿಕ್ ಕಾರ್ಯಕ್ರಮದಲ್ಲಿ ಪುರುಷರ 25 ಮೀಟರ್ ರಾಪಿಡ್-ಫೈರ್ ಪಿಸ್ತೂಲ್ ಸ್ಪರ್ಧೆಯನ್ನು ಉಳಿಸಿಕೊಳ್ಳುವುದು, ಅದರ ದೀರ್ಘಕಾಲೀನ ಭವಿಷ್ಯವನ್ನು ಭದ್ರಪಡಿಸುವುದು ಮತ್ತು ಐಎಸ್‌ಎಸ್‌ಎಫ್ ವಿಶ್ವಕಪ್‌ಗಳಲ್ಲಿ ಹೆಚ್ಚಿನ ಬಹುಮಾನದ ಮೊತ್ತವನ್ನು ಪಡೆಯಲು ಪ್ರಯತ್ನಿಸುವುದು ಅವರ ಪ್ರಮುಖ ಆದ್ಯತೆಗಳಾಗಿವೆ.

ಇದಕ್ಕೂ ಮುನ್ನ, ಒಲಿಂಪಿಕ್ ಚಿನ್ನದ ಪದಕ ವಿಜೇತ ಅಭಿನವ್ ಬಿಂದ್ರಾ ಅವರು 2010 ರಿಂದ 2020 ರವರೆಗೆ ಐಎಸ್‌ಎಸ್‌ಎಫ್ ಅಥೀಟ್ಸ್ ಸಮಿತಿಯಲ್ಲಿ ಸೇವೆ ಸಲ್ಲಿಸಿದ್ದರು. ಇದರಲ್ಲಿ 2014 ರಿಂದ 2018 ರವರೆಗೆ ಸಮಿತಿಯ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದು, ಈ ಹುದ್ದೆಯನ್ನು ಅಲಂಕರಿಸಿದ ಮೊದಲ ಭಾರತೀಯ ಎನಿಸಿಕೊಂಡಿದ್ದರು. ಕ್ರೀಡೆಗೆ ಅವರು ನೀಡಿದ ಕೊಡುಗೆಯನ್ನು ಗುರುತಿಸಿ ಬಿಂದ್ರಾ ಅವರಿಗೆ ನಂತರ ಐಎಸ್‌ಎಸ್‌ಎಫ್ ಬ್ಲೂ ಕ್ರಾಸ್ ಗೌರವವನ್ನು ನೀಡಿ ಸನ್ಮಾನಿಸಲಾಯಿತು.

























































































































error: Content is protected !!
Scroll to Top