ಇರಾನ್​ನ ಟೆಹ್ರಾನ್​ನಲ್ಲಿ ಗ್ಯಾಸ್​ ಸೋರಿಕೆಯಿಂದ ಭಾರೀ ಸ್ಫೋಟ; 19 ಜನ ಸಾವು

ನಿನ್ನೆ ರಾತ್ರಿ 9 ಗಂಟೆಗೆ ಇರಾನ್​ನ ರಾಜಧಾನಿ ಟೆಹ್ರಾನ್​ನಲ್ಲಿ ಸ್ಫೋಟ ಸಂಭವಿಸಿದೆ. ಆ ಕಟ್ಟಡದ ಬೇಸ್​ಮೆಂಟ್​ನಲ್ಲಿ ಆಕ್ಸಿಜನ್ ಟ್ಯಾಂಕ್ ಸ್ಫೋಟಗೊಂಡ ಕಾರಣಕ್ಕೆ ಈ ದುರಂತ ಸಂಭವಿಸಿದೆ ಎನ್ನಲಾಗಿದೆ.

ಟೆಹ್ರಾನ್‌ : ಇರಾನ್​ನ ಟೆಹ್ರಾನ್​ನಲ್ಲಿರುವ ಮೆಡಿಕಲ್ ಕ್ಲಿನಿಕ್​ನಲ್ಲಿ ಮಂಗಳವಾರ ರಾತ್ರಿ ಭಾರೀ ಸ್ಫೋಟ ಸಂಭವಿಸಿದೆ. ಸ್ಫೋಟದಿಂದಾಗಿ ಇಡೀ ಕಟ್ಟಡವೇ ಹೊತ್ತಿ ಉರಿದಿದ್ದು, 19 ಜನರು ಸಾವನ್ನಪ್ಪಿದ್ದಾರೆ. ಬಹುಮಹಡಿಯ ಕಟ್ಟಡ ಹೊತ್ತಿ ಉರಿಯುತ್ತಿರುವ ವಿಡಿಯೋ ಟ್ವಿಟ್ಟರ್​ನಲ್ಲಿ ವೈರಲ್ ಆಗಿದೆ. ಟೆಹ್ರಾನ್​ನ ಮೆಡಿಕಲ್ ಕ್ಲಿನಿಕ್​ನಲ್ಲಿ ಉಂಟಾದ ಸ್ಫೋಟಕ್ಕೆ ಗ್ಯಾಸ್ ಸೋರಿಕೆಯೇ ಕಾರಣ ಎಂದು ಅಂದಾಜಿಸಲಾಗಿದೆ. ಇಂದು ಬೆಳಗಿನ ಜಾವದವರೆಗೂ ಬೆಂಕಿ ಆರಿಸುವ ಕಾರ್ಯಾಚರಣೆ ನಡೆದಿದೆ. ಘಟನೆಯಲ್ಲಿ 19 ಜನರು ಸಾವನ್ನಪ್ಪಿದ್ದು, ಹತ್ತಾರು ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಎಎನ್​ಐ ವರದಿ ಮಾಡಿದೆ.
ಟೆಹ್ರಾನ್​ನ ಸಿನಾ ಅಟ್ಟರ್ ಮೆಡಿಕಲ್ ಕೇಂದ್ರದಲ್ಲಿ ಈ ಪ್ರಬಲ ಸ್ಫೋಟ ಸಂಭವಿಸಿದ್ದು, ಅಕ್ಕಪಕ್ಕದ ಕಟ್ಟಡಗಳಿಗೂ ಹಾನಿಯಾಗಿದೆ. ನಿನ್ನೆ ರಾತ್ರಿ 9 ಗಂಟೆಗೆ ಸಿನಾ ಅಟ್ಟರ್ ಕ್ಲಿನಿಕ್ ನಲ್ಲಿ ಸ್ಫೋಟ ಸಂಭವಿಸಿತ್ತು. ಆ ಕಟ್ಟಡದ ಬೇಸ್​ಮೆಂಟ್​ನಲ್ಲಿ ಆಕ್ಸಿಜನ್ ಟ್ಯಾಂಕ್ ಸ್ಫೋಟಗೊಂಡ ಕಾರಣಕ್ಕೆ ಈ ದುರಂತ ಸಂಭವಿಸಿದೆ ಎನ್ನಲಾಗಿದೆ. ತಕ್ಷಣ ಅಲ್ಲಿದ್ದ ವೈದ್ಯಕೀಯ ಉಪಕರಣಗಳನ್ನು ಹೊರಹಾಕಲಾಗಿದೆ.ಸಾವನ್ನಪ್ಪಿರುವ 19 ಜನರಲ್ಲಿ 15 ಜನ ಪುರುಷರು ಮತ್ತು 4 ಮಹಿಳೆಯರಿದ್ದಾರೆ. ಆರಂಭದಲ್ಲಿ 13 ಜನರು ಸಾವನ್ನಪ್ಪಿದ್ದರು. ಆದರೆ, ಅಗ್ನಿ ಶಾಮಕ ಸಿಬ್ಬಂದಿ ಮತ್ತೆ 6 ಮಂದಿಯ ಶವಗಳನ್ನು ಹೊರತೆಗೆದಿದ್ದು, ಸಾವನ್ನಪ್ಪಿದವರ ಸಂಖ್ಯೆ 19ಕ್ಕೆ ಏರಿಕೆಯಾಗಿದೆ.

















































error: Content is protected !!
Scroll to Top