ಕರಾವಳಿ ಭಾಗಕ್ಕೆ ಲಾಭದಾಯಕ ಬೆಳೆ ತಾಳೆ:- ಕ್ಷಮಾ ಪಾಟೀಲ್

ಕಾರ್ಕಳ: ಕರಾವಳಿ ಭಾಗಕ್ಕೆ ಅಡಿಕೆ ತೆಂಗಿನಂತಹ ಸಾಂಪ್ರದಾಯಕ ಬೆಳೆಗಳಿಗೆ ಪರ್ಯಾಯವಾಗಿ ತಾಳೆ ಬೆಳೆ ಲಾಭದಾಯಕ ಬೆಳೆಯಾಗಿ ರೈತರಲ್ಲಿ ವಿಶ್ವಾಸ ಮೂಡಿಸಿದ್ದು, ವೈಜ್ಞಾನಿಕ ಬೇಸಾಯ ಕ್ರಮಗಳನ್ನು ಅಳವಡಿಸಿಕೊಂಡು ರೈತರು ತಾಳೆ ಬೆಳೆಯಲ್ಲಿ ಉತ್ತಮ ಆದಾಯ ಪಡೆಯಬಹುದಾಗಿದೆ ಎಂದು ಉಡುಪಿ ತೋಟಗಾರಿಕೆ ಜಂಟಿ ನಿರ್ದೇಶಕಿ ಕ್ಷಮಾ ಪಾಟೀಲ್ ಅಭಿಪ್ರಾಯಪಟ್ಟರು.

ಅವರುತೋಟಗಾರಿಕೆ ಇಲಾಖೆ, ಕಾರ್ಕಳ, 3ಎಫ್. ಆಯಿಲ್ ಪಾಮ್ ಪ್ರೈ ಲಿ ಹಾಗೂ ಶ್ರೀ ಭಾರತಿ ಎಣ್ಣೆ ತಾಳೆ ಬೆಳೆಗಾರರ ಸಹಕಾರಿ ಸಂಘ ನಿ ಕಾರ್ಕಳ ರವರ ಜಂಟಿ ಆಶ್ರಯದಲ್ಲಿ ಕಡ್ತಲ ಅರುಣ್ ಹೆಗ್ಡೆ ರವರ ತಾಳೆ ತೋಟದಲ್ಲಿ ಜರುಗಿದ ತಾಳೆ ಬೆಳೆ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತಾನಾಡಿದರು.

ಅಧ್ಯಕ್ಷತೆಯನ್ನು ಶ್ರೀ ಭಾರತಿ ಎಣ್ಣೆ ತಾಳೆ ಬೆಳೆಗಾರರ ಸಹಕಾರ ಸಂಘ ಕಾರ್ಕಳ ಸಂಸ್ಥೆಯ ಅಧ್ಯಕ್ಷ ಹಾಗೂ ಕ್ಯಾಂಪ್ಕೋ ನಿರ್ದೇಶಕ ದಯಾನಂದ ಹೆಗ್ಡೆ ಮಾತನಾಡಿ, ಒಂದೆ ಬೆಳೆಯನ್ನು ಅವಲಂಬಿಸದೆ ತಾಳೆ ಬೆಳೆಯೂ ಸೇರಿದಂತೆ ಬಹು ಬೆಳೆ ಪದ್ದತಿಯನ್ನು ಅಳವಡಿಸಿ ಕೊಳ್ಳುವುದರಿಂದ ರೈತರು ನಿಯಮಿತ ಆದಾಯ ಪಡೆಯಲು ಸಾಧ್ಯವಿದೆ ಹಾಗೂ ಕೃಷಿಯಲ್ಲಿಯೂ ಸಹ ಯುವ ರೈತರು ಉತ್ತಮ ಭವಿಷ್ಯ ಕಂಡುಕೊಳ್ಳಲು ಸಾದ್ಯವಿದೆ ಎಂದು ಅವರು ಅಭಿಪ್ರಾಯಿಸಿದರು.

ಮುಖ್ಯ ಅತಿಥಿಯಾಗಿ ಕಡ್ತಲ ಅರುಣ್ ಹೆಗ್ಡೆ, ದೇವಿದಾಸ್ ಶೆಟ್ಟಿ ರವರು ಉಪಸ್ಥಿತರಿದ್ದರು.

ಸಂಪನ್ಮೂಲ ವ್ಯಕ್ತಿಗಾಳಗಿ 3 ಎಫ್. ಆಯಿಲ್ ಪಾಮ್ ಪ್ರೈ. ಲಿ ನ ಸಂಶೋಧನೆ & ಅಭಿವೃದ್ಧಿ ವಿಭಾಗದ ವ್ಯವಸ್ಥಾಪಕರಾದ ಶ್ರೀಕಾಂತ್ ಕುಮಾರ್ ತಾಳೆ ಬೆಳೆ ಬೇಸಾಯ ಕುರಿತು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಶ್ರೀನಿವಾಸ ಬಿ.ವಿ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಸ್ವಾಗತಿಸಿದರು.

ಶ್ರೀ ಕೃಷ್ಣ ವೈ. ಬಿ, ವಿಸ್ತರಣಾ ವ್ಯವಸ್ಥಾಪಕರು, 3 ಎಫ್. ಆಯಿಲ್ ಪಾಮ್ ಪ್ರೈ. ಲಿ. ಅವರು ನಿರ್ವಹಿಸಿದರು.



























































































































error: Content is protected !!
Scroll to Top