ಕುಮಾರ ಕೃಪಾ ಹೆಸರು ಬದಲಾವಣೆ: ಸಿಎಂ ವಿರುದ್ಧ ವಾಟಾಳ್ ನಾಗರಾಜ್ ಆಕ್ರೋಶ

ಕರ್ನಾಟಕ ಬಂದ್ ಮಾಡುವ ಎಚ್ಚರಿಕೆ

ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಗಳ ಅಧಿಕೃತ ನಿವಾಸ ಕುಮಾರ ಕೃಪಾ‌ದ ಮರುನಾಮಕರಣ ಗಂಗಾ ಎಂದು ಮಾಡಿರುವ ಹಿನ್ನೆಲೆ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರು ಆ ನಿವಾಸದ ಎದುರೇ ಕಪ್ಪು ಪಟ್ಟಿ ಪ್ರದರ್ಶಿಸಿ ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ.

ಸಿ ಎಂ ತಮ್ಮ ನಿವಾಸದಲ್ಲಿ ಆಪ್ತರಿಗೆ ಔತಣಕೂಟ ನೆರವೇರಿಸಿದ್ದು, ಆಗಲೇ ವಾಟಾಳ್ ಅವರು ಮರುನಾಮಕರಣ ವಿರುದ್ಧ ಪ್ರತಿಭಟಿಸಿ ಆಕ್ರೋಶ ವಿಯಕ್ತಪಡಿಸಿರುವುದಾಗಿದೆ.

ಕುಮಾರಕೃಪಾ ಅತಿಥಿ ಗೃಹಕ್ಕೆ ನೂರಾರು ವರ್ಷಗಳ ಭವ್ಯ ಇತಿಹಾಸವಿದೆ. ಮಹಾತ್ಮಗಾಂಧೀಜಿ, ದಲೈಲಾಮಾ ಅವರಂತಹ ಮಹನೀಯರು ಇಲ್ಲಿಗೆ ಭೇಟಿ ನೀಡಿದ್ದರು. ಇಷ್ಟು ವರ್ಷಗಳಲ್ಲಿ ಯಾರೊಬ್ಬರೂ ಇಲ್ಲಿನ ಒಂದು ಕಲ್ಲನ್ನೂ ಬದಲಾಯಿಸಿರಲಿಲ್ಲ. ಆದರೆ, ಈಗ ಡಿ.ಕೆ. ಶಿವಕುಮಾ‌ರ್ ಅವರು ಇದರ ಹೆಸರನ್ನು ಬದಲಾಯಿಸಿ ನವೀಕರಣ ಮಾಡಿರುವುದು ಸರಿಯಲ್ಲ ಎಂದು ವಾಟಾಳ್ ಕಿಡಿ ಕಾರಿದ್ದಾರೆ.

ಮುಖ್ಯಮಂತ್ರಿಗಳಿಗೆ ಈಗಾಗಲೇ ಸದಾಶಿವನಗರದಲ್ಲಿ ಸ್ವಂತ ಮನೆಯಿದೆ. ಹೀಗಿರುವಾಗ ಐತಿಹಾಸಿಕ ಗೆಸ್ಟ್ ಹೌಸ್ ಅನ್ನು ನವೀಕರಿಸಿ ಇಲ್ಲಿಗೆ ಬಂದಿರುವುದು ತಪ್ಪು ನಡೆ. ಕುಮಾರಕೃಪಾ ಗೆಸ್ಟ್ ಹೌಸ್ ಅಸ್ತಿತ್ವವನ್ನು ಉಳಿಸಿಕೊಳ್ಳಲು ರಾಜ್ಯಾದ್ಯಂತ ಉಗ್ರ ಹೋರಾಟ ರೂಪಿಸಲಾಗುವುದು ಮತ್ತು ಅಗತ್ಯಬಿದ್ದರೆ ಕರ್ನಾಟಕ ಬಂದ್‌ಗೂ ಕರೆ ನೀಡಲಾಗುವುದು ಎಂದು ಎಚ್ಚರಿಸಿದ್ದಾರೆ.

























































































































error: Content is protected !!
Scroll to Top