ತಾಳೆ ಬೆಳೆ ಮಾಹಿತಿ ಕಾರ್ಯಕ್ರಮ

ಕಾರ್ಕಳ: ಕರಾವಳಿ ಭಾಗದಲ್ಲಿ ಅಡಿಕೆ ಬೆಳೆಗೆ ಸೂಕ್ತ ಪರ್ಯಾಯ ಬೆಳೆಗಳಲ್ಲಿ ಒಂದಾಗಿ ಇತ್ತೀಚಿನ ವರ್ಷಗಳಲ್ಲಿ ಹೆಚ್ಚು ಪ್ರಚಲಿತದಲ್ಲಿರುವ ಬೆಳೆಯಾದ ತಾಳೆ ಬೆಳೆ ಕುರಿತು ಮಾಹಿತಿ ಕಾರ್ಯಕ್ರಮವನ್ನು ತೋಟಗಾರಿಕೆ ಇಲಾಖೆ, ಕಾರ್ಕಳ, 3 ಎಫ್ ಆಯಿಲ್ ಪಾಮ್ ಪ್ರೈ. ಲಿ ಹಾಗೂ ಶ್ರೀ ಭಾರತಿ ಎಣ್ಣೆ ತಾಳೆ ಬೆಳೆಗಾರರ ಸಹಕಾರಿ ಸಂಘ ನಿ. ಕಾರ್ಕಳ ಇವರ ಸಂಯುಕ್ತ ಆಶ್ರಯದಲ್ಲಿ ನ. 20 ರಂದು ಪೂರ್ವಾಹ್ನ: 10:00 ಗಂಟೆ ಅರುಣ್ ಹೆಗ್ಡೆ, ಕಡ್ತಲ, ಕಾರ್ಕಳ ತಾಲ್ಲೂಕು ರವರ ತಾಳೆ ತೋಟದಲ್ಲಿ ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮದಲ್ಲಿ ಎಣ್ಣೆ ತಾಳೆ ಕೃಷಿಯಿಂದ ರೈತರಿಗೆ ಆಗುವ ಪ್ರಯೋಜನಗಳು ಹಾಗೂ ಬೆಳೆ ನಿರ್ವಹಣೆ ಕುರಿತು ಮಾಹಿತಿಯನ್ನು ನೀಡಲಾಗುವುದು.

ಸಂಪನ್ಮೂಲ ವ್ಯಕ್ತಿಗಳಾಗಿ ಶ್ರೀಕಾಂತ ಕುಮಾರ್ , ವ್ಯವಸ್ಥಾಪಕರು (ಸಂಶೋಧನೆ & ಅಭಿವೃದ್ಧಿ) 3 ಎಫ್ ಆಯಿಲ್ ಪಾಮ್ ಪ್ರೈ. ಲಿ ರವರು ಅಗಮಿಸಲಿದ್ದಾರೆ.

ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮದ ಸದುಪಯೋಗ ಪಡೆಯಲು ಕೋರಿದೆ. ತಾಳೆ ಬೆಳೆ ಕೈಗೊಳ್ಳುವ ರೈತರಿಗೆ ತೋಟಗಾರಿಕೆ ಇಲಾಖೆ ವತಿಯಿಂದ ನಾಟಿ ಹಾಗೂ ನಿರ್ವಹಣೆಯನ್ನು ಸೇರಿದಂತೆ ವಿವಿಧ ಚಟುವಟಿಕೆಗಳಿಗೆ ಸಹಾಯಧನ ಲಭ್ಯವಿದೆ.

























































































































error: Content is protected !!
Scroll to Top