ಕಾರ್ಕಳದ ಬಗ್ಗೆ

ಬರಹ: #ರಾಮಚಂದ್ರ #ಬರೆಪ್ಪಾಡಿ

ಕಾರ್ಕಳ… ಹೇಳಿ ಕೇಳಿ ಪುಟ್ಟ ಪುಟ್ಟ ಹಳ್ಳಿಗಳ ಗೊಂಚಿಲು. ಪಶ್ಚಿಮಘಟ್ಟದ ಪ್ರಶಾಂತ ವಸುಂಧರೆಯ ಸೊಬಗಿನ ತಪ್ಪಲು. ಐತಿಹಾಸಿಕ, ಸಾಂಸ್ಕೃತಿಕ, ಶೈಕ್ಷಣಿಕತೆಯ ತೊಟ್ಟಿಲು. ಕರಾವಳಿಯ ಕೊನೆಯಂತಿರುವ, ಮಲೆನಾಡಿನ ಮೊನೆಯಂತಿರುವ ಕರಿಕಲ್ಲಿನ ಊರು ಈ ನಾಡು. ಕಲ್ಲನ್ನೇ ಹೊದ್ದುಕೊಂಡಂತಿರುವ ಸರ್ವಧರ್ಮೀಯರ ಸಾಮರಸ್ಯ, ಸೌಹಾರ್ದತೆಯ ಸಮೃದ್ಧ ನೆಲೆವೀಡು. ವಿದ್ಯಾವಂತ, ವಿನಯವಂತರ ಗೂಡು, ಸದ್ದಿಲ್ಲದೇ ಶೈಕ್ಷಣಿಕ ಕ್ರಾಂತಿ, ಆರ್ಥಿಕ ಸ್ವಾವಲಂಬನೆ ಸಾಧಿಸುತ್ತಿರುವ ಅಪ್ಪಟ ತುಳುನಾಡು. ಸಾಹಿತ್ಯ, ಶಿಲ್ಪಕಲೆ, ಕ್ರೀಡಾ ಕ್ಷೇತ್ರಕ್ಕೆ ಅಗ್ರಮಾನ್ಯರನ್ನು ನೀಡಿದ ತವರೂರು. ಸಾಹಿತ್ಯ, ಸಾಂಸ್ಕೃತಿಕ ಕ್ಷೇತ್ರಕ್ಕಂತೂ ಕಾರ್ಲದ ಕೊಡುಗೆ ಅನನ್ಯ, ಅನುಪಮ. ಗೇರು ಉದ್ದಿಮೆಗೆ ಇಲ್ಲಿನ ಕಾಣಿಕೆ ಅಪಾರ.

ಕರಿಕಲ್ಲಿನಿಂದಲೇ ಆವೃತ್ತ ಕಾರ್ಕಳಕ್ಕೆ ಶಿಲ್ಪಕಲೆಯೇ ಜೀವಾಳ. ಕೃಷಿ ಇಲ್ಲಿನ ಮೂಲ ಕಸುಬು. ಕಂಬಳಕ್ಕೂ ಕಾರ್ಕಳದ ಬೆಂಬಲ ಸ್ಮರಣೀಯ. ಹಳ್ಳಿ ಸೊಗಡು, ಸೊಬಗನ್ನೇ ಮೈದಳೆದಿರುವ ಕಾರ್ಕಳ ಆಧುನಿಕತೆಗೆ ನಿಧಾನವಾಗಿ ತೆರೆದುಕೊಳ್ಳುತ್ತಿರುವ ಪರಿಣಾಮ ಬಹುತೇಕ ಭಾಗವಿನ್ನೂ ಗದ್ದೆಗಳ ಪಚ್ಚೆ ಪೈರಿನಿಂದ ನಳನಳಿಸುತ್ತಿದೆ. ಹಚ್ಚಹಸುರಿನ ಈ ನೆಲ ಉಡುಪಿ ಜಿಲ್ಲೆಯಲ್ಲೇ ಅತಿ ಹೆಚ್ಚು ಮಳೆಯಾಗುವ ಸ್ಥಳ (ಕಾರ್ ಅಂದರೆ ಮಳೆ, ಕಳ ಅಂದರೆ ಪ್ರದೇಶ).

ಸಾಮರಸ್ಯ -ಶಾಂತಿಯ ನೆಲ

ಕಾರ್ಕಳ ಶಾಂತಿ, ಸಾಮರಸ್ಯಕ್ಕೆ ಹೆಸರಾದ ಊರು. ಕೋಮು, ರಾಜಕೀಯ ಕಾರಣಗಳಿಗಾಗಿ ಎಂದೂ ತತ್ತರಿಸದ ಶಾಂತಿಯ ಬೀಡು. ಹಿಂದೂ, ಮುಸ್ಲಿಂ, ಕ್ರೈಸ್ತ, ಜೈನ ಹೀಗೆ ಎಲ್ಲ ಧರ್ಮಿಯರೂ ಅತ್ಯಂತ ಅನ್ಯೋನ್ಯತೆ, ಸೌಹಾರ್ದತೆಯಿಂದಿರುವುದು ಕಾರ್ಕಳದ ಹೆಗ್ಗಳಿಕೆ.

ಮಲೆನಾಡ ಐಸಿರಿ

ಕಾರ್ಕಳದಿಂದ ಬಜಗೋಳಿ (೧೧ ಕಿ.ಮೀ) ಅಲ್ಲಿಂದ ಮಾಳ ದಾಟಿದರೆ (೭ ಕಿ.ಮೀ.) ದಟ್ಟಾರಣ್ಯ, ಕಾಶ್ಮೀರ, ಮಡಿಕೇರಿಯಂತಿರುವ ಇಲ್ಲಿನ ತಾಣ, ಗಿರಿಶಿಖರಗಳು ಚಾರಣಿಗರ ಪಾಲಿನ ‘ಲೋಕದ ಸ್ವರ್ಗವೇ ಸರಿ. ಇಲ್ಲಿನ ಪ್ರಶಾಂತ ಪರಿಸರ, ಹಕ್ಕಿಗಳ ಚಿಲಿಪಿಲಿ, ಹಾಲ್ನೊರೆಯಂತೆ ಹರಿಯುವ ಜರಿ, ಮುಗಿಲೆತ್ತರದ ಗಿರಿ, ತಣ್ಣನೆಯ ವಾತಾವರಣ ಎಂಥವರನ್ನೂ ಮಂತ್ರಮುಗ್ದಗೊಳಿಸದೇ ಇರದು. ಕಾರ್ಕಳದ ಗಡಿಪ್ರದೇಶ ಮಾಳದಿಂದಲೇ ಮಲೆನಾಡ ವೈಭವ ಸವಿಯಬಹುದಾಗಿದೆ.

ಪ್ರಸಿದ್ಧ ಶ್ರದ್ಧಾಕೇಂದ್ರ

೧೩ನೇ ಶತಮಾನದಲ್ಲಿ ಜೈನ ಆಳ್ವಿಕೆಗೆ ಒಳಪಟ್ಟ ಪೌರಾಣಿಕ ನೆಲೆ, ಐತಿಹಾಸಿಕ ಸ್ಥಳಗಳನ್ನು ತನ್ನ ಗರ್ಭದಲ್ಲಿರಿಸಿಕೊಂಡಿದ್ದು, ಇಲ್ಲಿನ ಭಗವಾನ್ ಶ್ರೀ ಬಾಹುಬಲಿ ವಿಗ್ರಹ, ಪಡುತಿರುಪತಿ ಖ್ಯಾತಿಯ ಶ್ರೀ ವೆಂಕಟರಮಣ ದೇಗುಲ, ಅತ್ತೂರು ಬಸಿಲಿಕಾ ಚರ್ಚ್, ಪುರಾತನ ಪ್ರಸಿದ್ಧ ಶ್ರೀ ಅನಂತಶಯನ ದೇವಸ್ಥಾನ, ಅತಿ ಎತ್ತರದ ಮಾನಸ್ತಂಭ ಹೊಂದಿರುವ ಹಿರಿಯಂಗಡಿ ಬಸದಿ, ವಿಶಿಷ್ಟ ವಿನ್ಯಾಸದಿಂದ ಕೂಡಿರುವ ನಲ್ಲೂರು ಬಸದಿ, ಸತ್ಯನಾಪುರದ ತುಳುನಾಡಿನ ಸಿರಿ ಕ್ಷೇತ್ರ ನಂದಳಿಕೆ, ಜಾಮೀಯಾ ಮಸೀದಿ, ನಯನ ಮನೋಹರ ವರಂಗ ಕೆರೆಬಸದಿ ಇಲ್ಲಿನ ಪ್ರಸಿದ್ಧ ಯಾತ್ರಾ ಹಾಗೂ ಪುಣ್ಯಕ್ಷೇತ್ರಗಳು.

ಶ್ರೀ ಬಾಹುಬಲಿ ವಿಗ್ರಹ

೧೪೩೨ರ ಸಂದರ್ಭ ಅರಸ ವೀರಪಾಂಡ್ಯನ ಕಾಲದಲ್ಲಿ ಶ್ರೀ ಭಗವಾನ್ ಬಾಹುಬಲಿ ವಿಗ್ರಹ ಕಾರ್ಕಳ ಸಮೀಪದ ಶಿಲಾಬೆಟ್ಟದಲ್ಲಿ ಸ್ಥಾಪನೆಯಾಯಿತು. ಏಕಶಿಲೆಯಲ್ಲಿ ನಿರ್ಮಾಣವಾದ ೪೨ ಅಡಿ ಎತ್ತರದ ಈ ವಿಶ್ವ ವಿಖ್ಯಾತ ವಿಗ್ರಹವನ್ನು ಕಣ್ತುಂಬಿಕೊಳ್ಳಲು ದೇಶ ವಿದೇಶದಿಂದ ಲಕ್ಷಾಂತರ ಜನರು ಆಗಮಿಸುತ್ತಾರೆ. ಸಮುದ್ರ ಮಟ್ಟದಿಂದ ಸುಮಾರು ೨೬೧ ಅಡಿ ಎತ್ತರದ ಈ ಪ್ರಶಾಂತ ಪರಿಸರ ಪ್ರವಾಸಿಗರ ನೆಚ್ಚಿನ ತಾಣ. ಅತ್ಯಂತ ಆಕರ್ಷಣೀಯವಾಗಿರುವ ಈ ಬೆಟ್ಟದ ಮೇಲಿಂದ ಇಡೀ ಕಾರ್ಕಳದ ಸೌಂದರ್ಯ ಸವಿಯಬಹುದಾಗಿದೆ.

ಮಹಾಮಸ್ತಕಾಭಿಷೇಕ

ಪ್ರತಿ ೧೨ ವರ್ಷಕ್ಕೊಮ್ಮೆ ಇಲ್ಲಿ ಮಹಾಮಸ್ತಕಾಷೇಕ ನಡೆಯುವುದು ಸಂಪ್ರದಾಯ. ಅತ್ಯಂತ ವೈಭವ, ವಿಜೃಂಭಣೆಯಿಂದ ನಡೆಯುವ ಮಹಾಮಸ್ತಕಾಭಿಷೇಕದಲ್ಲಿ ಸಾವಿರಾರು ಭಕ್ತರು ಪಾಲ್ಗೊಳ್ಳುತ್ತಾರೆ. ಅಂದು ಗೋಮಟೇಶ್ವರ ಮೂರ್ತಿಗೆ ಶ್ರದ್ಧಾಭಕ್ತಿಯಿಂದ ಜಲ, ಎಳನೀರು, ಹಾಲು, ಕಬ್ಬಿನ ಹಾಲು, ಅರಶಿನ, ಕಲ್ಕಚೂರ್ಣ, ಕಷಾಯ, ಗಂಧ, ಚಂದನ, ಇತ್ಯಾದಿಗಳಿಂದ ವಿಧಿವತ್ತಾಗಿ ಅಭಿಷೇಕ ಜರಗುವುದು. ಇತ್ತೀಚೆಗೆ ಅಂದರೆ ೨೦೧೫ರಲ್ಲಿ ಕಾರ್ಕಳದ ಗೊಮ್ಮಟ ಮೂರ್ತಿಗೆ ಮಹಾಮಸ್ತಕಾಭಿಷೇಕ ನಡೆದಿತ್ತು. ಈ ವೇಳೆ ಕ್ಷೇತ್ರದ ಮತ್ತು ಕಾರ್ಕಳದ ಸಾಕಷ್ಟು ಅಭಿವೃದ್ಧಿ ಕಾರ್ಯಗಳಾಗಿರುವುದು ಉಲ್ಲೇಖರ್ಹ.
ಸಂಪರ್ಕ: ೯೭೩೧೯೨೦೬೦೬
ನಗರ ಕೇಂದ್ರದಿಂದ ದೂರ: ೧ ಕಿ.ಮೀ.
ಕಾರ್ಕಳ ನಗರದಲ್ಲಿಯೇ ಸುಮಾರು ೧೮ ಬಸದಿಗಳಿದ್ದು, ಬಾಹುಬಲಿ ಎದುರಿನ ಬೆಟ್ಟದಲ್ಲಿರುವ ಚತುರ್ಮುಖ ಬಸದಿ, ಕೆರೆ ಬಸದಿ, ಹಿರಿಯಂಗಡಿ ಬಸದಿ ಪ್ರಮುಖವಾದವುಗಳು. ಪ್ರಾಚೀನ ದಾನಶಾಲಾ ಮಠವಿದ್ದು, ಸ್ವಸ್ತಿ ಶ್ರೀ ಲಲಿತಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರು ಪೀಠಾಧೀಶರಾಗಿದ್ದಾರೆ.

ಪಡುತಿರುಪತಿ

ನಗರದ ಮುಖ್ಯರಸ್ತೆಗೆ ಹೊಂದಿಕೊಂಡಂತಿರುವ ಪಡುತಿರುಪತಿ ಶ್ರೀ ವೆಂಕಟರಮಣ ದೇವಸ್ಥಾನ ಕಾರ್ಕಳದಲ್ಲಿನ ಪುರಾತನ ದೇಗುಲಗಳಲ್ಲೊಂದು. ೧೫೩೭ರಲ್ಲಿ ದೇವಳ ನಿರ್ಮಾಣವಾಯಿತೆಂಬ ಪ್ರತೀತಿ ಇದೆ. ಇಲ್ಲಿನ ಪಟ್ಟದ ದೇವರು ಚಪ್ಪರ ಶ್ರೀನಿವಾಸ. ಉತ್ಸವ ದೇವರು ಶ್ರೀ ವೆಂಕಟರಮಣ. ಇಲ್ಲಿ ಕಾರ್ತಿಕ ಮಾಸದಲ್ಲಿ ಜರಗುವ ವಿಶ್ವರೂಪ ದರ್ಶನ ಹಾಗೂ ಲಕ್ಷ ದೀಪೋತ್ಸವ, ಲಕ್ಷದೀಪೋತ್ಸವಂದು ನಡೆಯುವ ವನಭೋಜನ, ವೈಶಾಖ ಮಾಸದಲ್ಲಿ ನಡೆಯುವ ರಥೋತ್ಸವ ಅತ್ಯಂತ ವೈಭವದಿಂದ ಜರಗುವುದು. ಜಿಎಸ್‌ಬಿಯವರ ಆಡಳಿತಕ್ಕೊಳಪಟ್ಟ ಈ ದೇಗುಲಕ್ಕೆ ದೇಶದ ಎಲ್ಲೆಡೆಯಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ, ದೇವರ ದರ್ಶನ ಪಡೆದು ಪುನೀತರಾಗುವರು. ಶ್ರಾವಣ ಮಾಸದ ಪ್ರತಿ ಶನಿವಾರ ಊರ-ಪರವೂರ ವೃತಧಾರಿಗಳು ಶ್ರದ್ಧಾಭಕ್ತಿಯಿಂದ ಶ್ರೀ ಕ್ಷೇತ್ರಕ್ಕೆ ಭೇಟಿ ನೀಡಿ ಕೃತಾರ್ಥರಾಗುವರು.
ಸಂಪರ್ಕ: ೦೮೨೫೮-೨೩೦೩

ಹತ್ತೂರಲ್ಲಿ ಪ್ರಸಿದ್ಧ ಅತ್ತೂರು

ಹತ್ತೂರಲ್ಲೂ ಪ್ರಸಿದ್ಧ ಅತ್ತೂರು ಬಸಿಲಿಕಾ ಚರ್ಚ್
೧೭೫೯ರಲ್ಲಿ ನಿಟ್ಟೆ ಗ್ರಾಮದ ಅತ್ತೂರಿನಲ್ಲಿ ಸೈಂಟ್ ಲಾರೆನ್ಸ್ ಚರ್ಚ್ ನಿರ್ಮಾಣವಾಯಿತು. ಕಾರ್ಕಳ ನಗರದಿಂದ ೫ ಕಿ.ಮೀ. ದೂರದಲ್ಲಿರುವ ಸರ್ವಧರ್ಮೀಯರ ಪುಣ್ಯ ಕ್ಷೇತ್ರ ಅತ್ತೂರಿನಲ್ಲಿ ಪ್ರತಿ ವರ್ಷ ಜನವರಿ ತಿಂಗಳ ಕೊನೆಯ ವಾರ ಅತ್ತೂರು ಜಾತ್ರೆಯೆಂದೇ ಪ್ರಖ್ಯಾತಿ ಪಡೆದಿರುವ ಸಾಂತ್ ಮಾರಿ ಅತ್ಯಂತ ಅದ್ಧೂರಿಯಾಗಿ ನಡೆಯುವುದು ಇಲ್ಲಿನ ಪರಂಪರೆ.
ಕರ್ನಾಟಕದ ಎರಡನೇ ಬಸಿಲಿಕಾವಾಗಿರುವ ಅತ್ತೂರು ಜಾತ್ರೆಗೆ ಪ್ರತಿವರ್ಷ ಲಕ್ಷಾಂತರ ಮಂದಿ ಆಗಮಿಸಿ ಕಾಣಿಕೆ ಅರ್ಪಿಸುವರು. ಚರ್ಚ್ ಗೋಪುರದ ವಿನ್ಯಾಸ ಮೂರು ಧರ್ಮಗಳ ವಾಸ್ತುಶೈಲಿಯಿಂದ ಕೂಡಿದೆ. ಹಿಂದೂ ದೇವಾಲಯದಲ್ಲಿ ಇದ್ದಂತೆ ಪುಷ್ಕರಿಣಿ ಇರುವ ಕರ್ನಾಟಕದ ಏಕೈಕ ಚರ್ಚ್ ಅತ್ತೂರು ಎಂಬ ಹಿರಿಮೆಗೆ ಪಾತ್ರವಾಗಿದೆ. ಇದೀಗ ಇಲ್ಲಿ ೧೫ ಅಡಿ ಎತ್ತರದ ಸಂತ ಲಾರೆನ್ಸ್ ರ ಏಕಶಿಲಾ ವಿಗ್ರಹವೂ ಸ್ಥಾಪನೆಗೊಂಡಿದೆ.
ಸಂಪರ್ಕ: ೦೮೨೫೮-೨೩೦೩೨೨
ನಗರ ಕೇಂದ್ರದಿಂದ ದೂರ: ೫ ಕಿ.ಮೀ.

ಶ್ರೀ ಅನಂತಪದ್ಮನಾಭ ದೇಗುಲ

ಶೃಂಗೇರಿ ಶ್ರೀ ನರಸಿಂಹಮೂರ್ತಿ ಸ್ವಾಮೀಜಿಯವರು ದಿಗ್ವಿಜಯಕ್ಕೆ ಕಾರ್ಕಳ ಮಾರ್ಗವಾಗಿ ಸಾಗುತ್ತಿದ್ದಾಗ ಜೈನರಸ ಭೈರವರಸರು ಶ್ರೀಗಳನ್ನು ಕಾರ್ಕಳದಲ್ಲಿ ತಂಗುವಂತೆ ವಿನಂತಿಸಿದಾಗ, ದೇವಳವಿಲ್ಲದ ಜಾಗದಲ್ಲಿ ತಾನು ತಂಗಲಾರೆನು ಎಂದು ಶ್ರೀಗಳು ತಿಳಿಸಿದರು. ತತ್‌ಕ್ಷಣ ಅರಸರು ನೆಲ್ಲಿಕಾರು ಗ್ರಾಮದ ಕೆರೆಯಲ್ಲಿ ಶ್ರೀ ಅನಂತಪದ್ಮನಾಭ ದೇವರ ಸುಂದರ ಶಿಲಾಪ್ರತಿಮೆ ಇರುವುದನ್ನರಿತು ಅದನ್ನು ಕಾರ್ಕಳಕ್ಕೆ ತರಿಸಿದರು. ಬಳಿಕ ಪ್ರತಿಮೆಯನ್ನು ಜೈನ ಬಸದಿಗಾಗಿ ನಿರ್ಮಿಸಿದ್ದ ಸ್ಥಳದಲ್ಲಿ ಶ್ರೀಗಳಿಂದಲೇ ಪ್ರತಿಷ್ಠಾಪನೆಗೊಳಿಸಿದ ಐತಿಹ್ಯವಿದೆ. ಇದೀಗ ಈ ದೇಗುಲ ಭಾರತೀಯ ಪುರಾತತ್ವ ಇಲಾಖೆಗೊಳಪಟ್ಟಿದ್ದು, ಶ್ರೀ ಅನಂತಪದ್ಮನಾಭ ದೇವಸ್ಥಾನವೆಂದು ಖ್ಯಾತಿಪಡೆದಿದೆ.
ನಗರಕೇಂದ್ರ ದೂರ: ಅರ್ಧ ಕಿ.ಮೀ.

ಕಾಂತೇಶ್ವರ ದೇಗುಲದ ವೈಶಿಷ್ಟ್ಯ

ಕಾಂತಾವರದ ಶ್ರೀ ಕಾಂತೇಶ್ವರ ದೇವಸ್ಥಾನ ಪುರಾತನ ಹಾಗೂ ಕಾರಣಿಕ ಕ್ಷೇತ್ರಗಳಲ್ಲೊಂದು. ಇತಿಹಾಸಕಾರರ ಪ್ರಕಾರ ಈ ದೇವಸ್ಥಾನ ೭ನೇ ಶತಮಾನದಲ್ಲಿ ನಿರ್ಮಾಣವಾಗಿದೆ. ಈ ದೇಗುಲದ ಉದ್ಭವಲಿಂಗ ದಿನದಲ್ಲಿ ಮೂರು ಬಣ್ಣಕ್ಕೆ ಬದಲಾಗುವುದು ಕ್ಷೇತ್ರದ ವಿಶೇಷ. ಬೆಳಗ್ಗೆ ಚಿನ್ನ, ಬಳಿಕ ಬೆಳ್ಳಿ, ಸಂಜೆ ವೇಳೆ ತಾಮ್ರದ ಬಣ್ಣಕ್ಕೆ ಹೊರಳುವುದು ಅಪೂರ್ವ ಹಾಗೂ ಬಲು ಅಪರೂಪದ ವಿದ್ಯಮಾನ. ಕಾಂತಾವರದ ಪ್ರಕೃತಿ ರಮಣೀಯ ಪ್ರದೇಶದಲ್ಲಿ ಕಾಂತೇಶ್ವರ ದೇಗುಲ ಕಂಗೊಳಿಸುತ್ತಿದೆ.
ದೇವಸ್ಥಾನದ ಪರಿಸರದಲ್ಲಿ ಅಂಬರೀಷ ಗುಹೆಯಿದೆ. ಅಂಬರೀಷ ಮುನಿ ಇಲ್ಲಿ ತಪಸ್ಸು ಮಾಡಿದ ಹಿನ್ನೆಲೆಯಲ್ಲಿ ಇಲ್ಲಿನ ಗುಹೆಯೂ ಅಂಬರೀಶ್ ಹೆಸರಲ್ಲೇ ಪ್ರಸಿದ್ಧಿಗೆ ಬಂತು.
ಈ ಗುಹೆಗೆ ಹೂ ಅರ್ಪಿಸಿದಲ್ಲಿ ಅದು ದೇವಸ್ಥಾನದ ಸಮೀಪದಲ್ಲಿನ ಕೆರೆಗೆ ಬಂದು ಬೀಳುವುದು ಎಂಬ ನಂಬಿಕೆ ಇತ್ತು. ೧೯೮೫, ೧೯೯೭, ೨೦೦೯ರಲ್ಲಿ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ನಡೆದಿದೆ. ಮುಂದೆ ೨೦೨೧ರಲ್ಲಿ ಬ್ರಹ್ಮಕಲಶೋತ್ಸವ ಜರಗಲಿದೆ ಎಂದು ದೇವಸ್ಥಾನದ ಅನುವಂಶಿಕ ಮೊಕ್ತೇಸರರಾದ ಬಾರಾಡಿ ಬೀಡು ಡಾ| ಜೀವಂದರ್ ಬಲ್ಲಾಳ್ ಹೇಳುತ್ತಾರೆ.
ಸಂಪರ್ಕ: ೯೦೦೮೫೧೪೫೪೫
ನಗರ ಕೇಂದ್ರದಿಂದ ದೂರ: ೧೦ ಕಿ.ಮೀ.

ಗರಡಿ

ಕಾರ್ಕಳ ತಾಲೂಕಿನಾದ್ಯಂತ ಸುಮಾರು ೭೮ ಬ್ರಹ್ಮ ಬೈದರ್ಕಳ ಗರಡಿಗಳಿವೆ. ಹೆಬ್ರಿಯ ತಿಂಗಳೆ ಗರಡಿ, ಮೂಜೂರು ಹಾಡಿ ಗರಡಿ, ಆನೆಕೆರೆ ಸಮೀಪ ಆನೆಕಲ್ಲು ಬೈಲಡ್ಕ ಗರಡಿ ಇವುಗಳಲ್ಲಿ ಪ್ರಮುಖವಾದವು. ಕೋಟಿ ಚೆನ್ನಯರ ಊರು ಪುತ್ತೂರಾಗಿದ್ದರೂ ಅತಿ ಹೆಚ್ಚು ಗರಡಿಗಳು ಕಾರ್ಕಳದಲ್ಲಿವೆ. ಗರಡಿಗಳಲ್ಲಿ ವರ್ಷಕ್ಕೊಮ್ಮೆ ನೇಮೋತ್ಸವ ಜರಗುವುದು.

ಜಾಮೀಯಾ ಮಸೀದಿ

ಕಾರ್ಕಳ ನಗರದಲ್ಲಿ ಮುಖ್ಯ ರಸ್ತೆಗೆ ಹೊಂದಿಕೊಂಡಂತೆ ಮುಸ್ಲೀಂ ಧರ್ಮೀಯರ ಪ್ರಾರ್ಥನಾ ಕೇಂದ್ರ ಜಾಮೀಯಾ ಮಸೀದಿಯಿದೆ.
ನಗರ ಕೇಂದ್ರದಿಂದ ದೂರ : ಅ‘ ಕಿ.ಮೀ.

ವರಂಗ ಬಸದಿ

ಹೆಬ್ರಿ ತಾಲೂಕಿನ ವರಂಗ ಬಸದಿ ಪ್ರವಾಸಿಗರನ್ನು ಆಕರ್ಷಿಸುವ ಕಾರ್ಕಳದ ಪ್ರಮುಖ ಧಾರ್ಮಿಕ ಕೇಂದ್ರಗಳಲ್ಲೊಂದು. ೧೦ ಎಕರೆ ವಿಸ್ತಾರವಾಗಿರುವ ಕೆರೆಯ ಮಧ್ಯದಲ್ಲಿ ಬಸದಿ ನಿರ್ಮಾಣವಾಗಿದ್ದು ಬಸದಿ ಸಂಪರ್ಕಿಸಲು ದೋಣಿಯನ್ನೇ ಅವಲಂಬಿಸಬೇಕಾಗಿದೆ. ವರಂಗ ರಾಜನ ಆಳ್ವಿಕೆಯಲ್ಲಿ ನಿರ್ಮಾಣವಾದ ಈ ಸ್ಥಳದಲ್ಲಿ ಹಿರೆ ಬಸದಿ, ಕೆರೆ ಬಸದಿ, ಮಠದ ಬಸದಿಗಳಿವೆ. ಪಾರ್ಶ್ವನಾಥ ತೀರ್ಥಂಕರ, ಪದ್ಮಾವತಿ ದೇವಿಯ ಮೂಲ ವಿಗ್ರಹವಿದೆ. ಚರ್ಮ ಸಂಬಂಧಿ ಕಾಯಿಲೆಗಳ ನಿವಾರಣೆಗೆ ಹುರುಳಿ ಮತ್ತು ಅಕ್ಕಿ ಸೇವೆ ಹರಕೆ ಸಲ್ಲಿಸುವುದು ಇಲ್ಲಿನ ವಿಶೇಷ. ಈ ಪುಣ್ಯ ಕ್ಷೇತ್ರದಲ್ಲಿ ತ್ರಿಕಾಲ ಪೂಜೆ ನಡೆಯುತ್ತಿದ್ದು, ಕರ್ನಾಟಕ ಮಾತ್ರವಲ್ಲದೇ ವಿವಿಧ ರಾಜ್ಯಗಳಿಂದ ಭಕ್ತರು, ಪ್ರವಾಸಿಗರು ಇಲ್ಲಿಗಾಗಮಿಸುತ್ತಾರೆ. ಹೊಂಬುಜ ಮಠದ ಅಧೀನಕ್ಕೊಳಪಡುವ ಈ ಕ್ಷೇತ್ರ, ಶ್ರವಣಬೆಳಗೊಳದ ಈಗೀನ ಪೀಠಾಧೀಶರ ಹುಟ್ಟೂರು. ವರಂಗದಲ್ಲಿ ಬ್ರವರಿ ಹಸ್ತ ನಕ್ಷತ್ರದಲ್ಲಿ ವಾರ್ಷಿಕ ರಥೋತ್ಸವ ಜರಗುವುದು.
ಸಂಪರ್ಕ ಸಂಖ್ಯೆ:

ಕಾರ್ಕಳ ನಗರಕೇಂದ್ರದಿಂದ ದೂರ: ೨೫ ಕಿ.ಮೀ.

ಕಾರ್ಕಳದಿಂದ ಹೆಬ್ರಿಗೆ ೩೧ ಕಿ.ಮೀ., ಅಲ್ಲಿಂದ ಆಗುಂಬೆಗೆ ೧೯ ಕಿ.ಮೀ., ಆಗುಂಬೆಯಿಂದ ತೀರ್ಥಹಳ್ಳಿಗೆ ೩೨ ಕಿ.ಮೀ. ದೂರವಿದೆ. ಕಾರ್ಕಳದಿಂದ ಉಡುಪಿಗೆ ೩೮ ಕಿ.ಮೀ., ಮಂಗಳೂರಿಗೆ ೫೨ ಕಿ.ಮೀ., ಧರ್ಮಸ್ಥಳಕ್ಕೆ ೬೩ ಕಿ.ಮೀ., ಕಾರ್ಕಳದಿಂದ ಕಳಸಕ್ಕೆ ೭೧ ಕಿ.ಮೀ., ಕುದುರೆಮುಖ ೫೨ ಕೀ.ಮೀ. ದೂರವಿದೆ.

ಚಿತ್ರ : ದ್ವಾರಕಾ ನಿರಂಜನ್‌
ಭಗವಾನ್ ಬಾಹುಬಲಿ ವಿಗ್ರಹ

ಪಡುತಿರುಪತಿ

ನಗರದ ಮುಖ್ಯರಸ್ತೆಗೆ ಹೊಂದಿಕೊಂಡಂತಿರುವ ಪಡುತಿರುಪತಿ ಶ್ರೀ ವೆಂಕಟರಮಣ ದೇವಸ್ಥಾನ ಕಾರ್ಕಳದಲ್ಲಿನ ಪುರಾತನ ದೇಗುಲಗಳಲ್ಲೊಂದು. ೧೫೩೭ರಲ್ಲಿ ದೇವಳ ನಿರ್ಮಾಣವಾಯಿತೆಂಬ ಪ್ರತೀತಿ ಇದೆ. ಇಲ್ಲಿನ ಪಟ್ಟದ ದೇವರು ಚಪ್ಪರ ಶ್ರೀನಿವಾಸ. ಉತ್ಸವ ದೇವರು ಶ್ರೀ ವೆಂಕಟರಮಣ. ಇಲ್ಲಿ ಕಾರ್ತಿಕ ಮಾಸದಲ್ಲಿ ಜರಗುವ ವಿಶ್ವರೂಪ ದರ್ಶನ ಹಾಗೂ ಲಕ್ಷ ದೀಪೋತ್ಸವ, ಲಕ್ಷದೀಪೋತ್ಸವಂದು ನಡೆಯುವ ವನಭೋಜನ, ವೈಶಾಖ ಮಾಸದಲ್ಲಿ ನಡೆಯುವ ರಥೋತ್ಸವ ಅತ್ಯಂತ ವೈಭವದಿಂದ ಜರಗುವುದು. ಜಿಎಸ್‌ಬಿಯವರ ಆಡಳಿತಕ್ಕೊಳಪಟ್ಟ ಈ ದೇಗುಲಕ್ಕೆ ದೇಶದ ಎಲ್ಲೆಡೆಯಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ, ದೇವರ ದರ್ಶನ ಪಡೆದು ಪುನೀತರಾಗುವರು. ಶ್ರಾವಣ ಮಾಸದ ಪ್ರತಿ ಶನಿವಾರ ಊರ-ಪರವೂರ ವೃತಧಾರಿಗಳು ಶ್ರದ್ಧಾಭಕ್ತಿಯಿಂದ ಶ್ರೀ ಕ್ಷೇತ್ರಕ್ಕೆ ಭೇಟಿ ನೀಡಿ ಕೃತಾರ್ಥರಾಗುವರು. ಸಂಪರ್ಕ: ೦೮೨೫೮-೨೩೦೩

ಚಿತ್ರ : ದ್ವಾರಕಾ ನಿರಂಜನ್
ಪಡುತಿರುಪತಿ ಶ್ರೀ ವೆಂಕಟರಮಣ ದೇವಸ್ಥಾನ

ಹತ್ತೂರಲ್ಲಿ ಪ್ರಸಿದ್ಧ ಅತ್ತೂರು

ಹತ್ತೂರಲ್ಲೂ ಪ್ರಸಿದ್ಧ ಅತ್ತೂರು ಬಸಿಲಿಕಾ ಚರ್ಚ್೧೭೫೯ರಲ್ಲಿ ನಿಟ್ಟೆ ಗ್ರಾಮದ ಅತ್ತೂರಿನಲ್ಲಿ ಸೈಂಟ್ ಲಾರೆನ್ಸ್ ಚರ್ಚ್ ನಿರ್ಮಾಣವಾಯಿತು. ಕಾರ್ಕಳ ನಗರದಿಂದ ೫ ಕಿ.ಮೀ. ದೂರದಲ್ಲಿರುವ ಸರ್ವಧರ್ಮೀಯರ ಪುಣ್ಯ ಕ್ಷೇತ್ರ ಅತ್ತೂರಿನಲ್ಲಿ ಪ್ರತಿ ವರ್ಷ ಜನವರಿ ತಿಂಗಳ ಕೊನೆಯ ವಾರ ಅತ್ತೂರು ಜಾತ್ರೆಯೆಂದೇ ಪ್ರಖ್ಯಾತಿ ಪಡೆದಿರುವ ಸಾಂತ್ ಮಾರಿ ಅತ್ಯಂತ ಅದ್ಧೂರಿಯಾಗಿ ನಡೆಯುವುದು ಇಲ್ಲಿನ ಪರಂಪರೆ. ಕರ್ನಾಟಕದ ಎರಡನೇ ಬಸಿಲಿಕಾವಾಗಿರುವ ಅತ್ತೂರು ಜಾತ್ರೆಗೆ ಪ್ರತಿವರ್ಷ ಲಕ್ಷಾಂತರ ಮಂದಿ ಆಗಮಿಸಿ ಕಾಣಿಕೆ ಅರ್ಪಿಸುವರು. ಚರ್ಚ್ ಗೋಪುರದ ವಿನ್ಯಾಸ ಮೂರು ಧರ್ಮಗಳ ವಾಸ್ತುಶೈಲಿಯಿಂದ ಕೂಡಿದೆ. ಹಿಂದೂ ದೇವಾಲಯದಲ್ಲಿ ಇದ್ದಂತೆ ಪುಷ್ಕರಿಣಿ ಇರುವ ಕರ್ನಾಟಕದ ಏಕೈಕ ಚರ್ಚ್ ಅತ್ತೂರು ಎಂಬ ಹಿರಿಮೆಗೆ ಪಾತ್ರವಾಗಿದೆ. ಇದೀಗ ಇಲ್ಲಿ ೧೫ ಅಡಿ ಎತ್ತರದ ಸಂತ ಲಾರೆನ್ಸ್ ರ ಏಕಶಿಲಾ ವಿಗ್ರಹವೂ ಸ್ಥಾಪನೆಗೊಂಡಿದೆ. ಸಂಪರ್ಕ: ೦೮೨೫೮-೨೩೦೩೨೨ನಗರ ಕೇಂದ್ರದಿಂದ ದೂರ: ೫ ಕಿ.ಮೀ.

ಚಿತ್ರ : ಆಶಾ ಸ್ಟುಡಿಯೋ
ಅತ್ತೂರು ಚರ್ಚ್‌

ಶ್ರೀ ಅನಂತಪದ್ಮನಾಭ ದೇಗುಲ

ಶೃಂಗೇರಿ ಶ್ರೀ ನರಸಿಂಹಮೂರ್ತಿ ಸ್ವಾಮೀಜಿ ದಿಗ್ವಿಜಯಕ್ಕೆ ಕಾರ್ಕಳ ಮಾರ್ಗವಾಗಿ ಸಾಗುತ್ತಿದ್ದಾಗ ಜೈನರಸ ಭೈರವರಸರು ಶ್ರೀಗಳನ್ನು ಕಾರ್ಕಳದಲ್ಲಿ ತಂಗುವಂತೆ ವಿನಂತಿಸಿದಾಗ, ದೇವಳವಿಲ್ಲದ ಜಾಗದಲ್ಲಿ ತಾನು ತಂಗಲಾರೆನು ಎಂದು ಶ್ರೀಗಳು ತಿಳಿಸಿದರು. ತತ್‌ಕ್ಷಣ ಅರಸರು ನೆಲ್ಲಿಕಾರು ಗ್ರಾಮದ ಕೆರೆಯಲ್ಲಿ ಶ್ರೀ ಅನಂತಪದ್ಮನಾಭ ದೇವರ ಸುಂದರ ಶಿಲಾಪ್ರತಿಮೆ ಇರುವುದನ್ನರಿತು ಅದನ್ನು ಕಾರ್ಕಳಕ್ಕೆ ತರಿಸಿದರು. ಬಳಿಕ ಪ್ರತಿಮೆಯನ್ನು ಜೈನ ಬಸದಿಗಾಗಿ ನಿರ್ಮಿಸಿದ್ದ ಸ್ಥಳದಲ್ಲಿ ಶ್ರೀಗಳಿಂದಲೇ ಪ್ರತಿಷ್ಠಾಪನೆಗೊಳಿಸಿದ ಐತಿಹ್ಯವಿದೆ. ಇದೀಗ ಈ ದೇಗುಲ ಭಾರತೀಯ ಪುರಾತತ್ವ ಇಲಾಖೆಗೊಳಪಟ್ಟಿದ್ದು, ಶ್ರೀ ಅನಂತಪದ್ಮನಾಭ ದೇವಸ್ಥಾನವೆಂದು ಖ್ಯಾತಿಪಡೆದಿದೆ. ನಗರಕೇಂದ್ರ ದೂರ: ಅ‘ ಕಿ.ಮೀ.

ಚಿತ್ರ : ದ್ವಾರಕಾ ನಿರಂಜನ್
ಅನಂತಪದ್ಮನಾಭ ದೇವರು

ಕಾಂತೇಶ್ವರ ದೇಗುಲದ ವೈಶಿಷ್ಟ್ಯ

ಕಾಂತಾವರದ ಶ್ರೀ ಕಾಂತೇಶ್ವರ ದೇವಸ್ಥಾನ ಪುರಾತನ ಹಾಗೂ ಕಾರಣಿಕ ಕ್ಷೇತ್ರಗಳಲ್ಲೊಂದು. ಇತಿಹಾಸಕಾರರ ಪ್ರಕಾರ ಈ ದೇವಸ್ಥಾನ ೭ನೇ ಶತಮಾನದಲ್ಲಿ ನಿರ್ಮಾಣವಾಗಿದೆ. ಈ ದೇಗುಲದ ಉದ್ಭವಲಿಂಗ ದಿನದಲ್ಲಿ ಮೂರು ಬಣ್ಣಕ್ಕೆ ಬದಲಾಗುವುದು ಕ್ಷೇತ್ರದ ವಿಶೇಷ. ಬೆಳಗ್ಗೆ ಚಿನ್ನ, ಬಳಿಕ ಬೆಳ್ಳಿ, ಸಂಜೆ ವೇಳೆ ತಾಮ್ರದ ಬಣ್ಣಕ್ಕೆ ಹೊರಳುವುದು ಅಪೂರ್ವ ಹಾಗೂ ಬಲು ಅಪರೂಪದ ವಿದ್ಯಮಾನ. ಕಾಂತಾವರದ ಪ್ರಕೃತಿ ರಮಣೀಯ ಪ್ರದೇಶದಲ್ಲಿ ಕಾಂತೇಶ್ವರ ದೇಗುಲ ಕಂಗೊಳಿಸುತ್ತಿದೆ. ದೇವಸ್ಥಾನದ ಪರಿಸರದಲ್ಲಿ ಅಂಬರೀಷ ಗುಹೆಯಿದೆ. ಅಂಬರೀಷ ಮುನಿ ಇಲ್ಲಿ ತಪಸ್ಸು ಮಾಡಿದ ಹಿನ್ನೆಲೆಯಲ್ಲಿ ಇಲ್ಲಿನ ಗುಹೆಯೂ ಅಂಬರೀಶ್ ಹೆಸರಲ್ಲೇ ಪ್ರಸಿದ್ಧಿಗೆ ಬಂತು. ಈ ಗುಹೆಗೆ ಹೂ ಅರ್ಪಿಸಿದಲ್ಲಿ ಅದು ದೇವಸ್ಥಾನದ ಸಮೀಪದಲ್ಲಿನ ಕೆರೆಗೆ ಬಂದು ಬೀಳುವುದು ಎಂಬ ನಂಬಿಕೆ ಇತ್ತು. ೧೯೮೫, ೧೯೯೭, ೨೦೦೯ರಲ್ಲಿ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ನಡೆದಿದೆ. ಮುಂದೆ ೨೦೨೧ರಲ್ಲಿ ಬ್ರಹ್ಮಕಲಶೋತ್ಸವ ಜರಗಲಿದೆ ಎಂದು ದೇವಸ್ಥಾನದ ಅನುವಂಶೀಕ ಮೊಕ್ತೇಸರರಾದ ಬಾರಾಡಿ ಬೀಡು ಡಾ| ಜೀವಂದರ್ ಬಲ್ಲಾಳ್ ಹೇಳುತ್ತಾರೆ. ಸಂಪರ್ಕ: ೯೦೦೮೫೧೪೫೪೫ನಗರ ಕೇಂದ್ರದಿಂದ ದೂರ: ೧೦ ಕಿ.ಮೀ.

ಕಾಂತೇಶ್ವರ ದೇಗುಲ

ಗರಡಿ

ಕಾರ್ಕಳ ತಾಲೂಕಿನಾದ್ಯಂತ ಸುಮಾರು ೭೮ ಬ್ರಹ್ಮ ಬೈದರ್ಕಳ ಗರಡಿಗಳಿವೆ. ಹೆಬ್ರಿಯ ತಿಂಗಳೆ ಗರಡಿ, ಮೂಜೂರು ಹಾಡಿ ಗರಡಿ, ಆನೆಕೆರೆ ಸಮೀಪ ಆನೆಕಲ್ಲು ಬೈಲಡ್ಕ ಗರಡಿ ಇವುಗಳಲ್ಲಿ ಪ್ರಮುಖವಾದವು. ಕೋಟಿ ಚೆನ್ನಯರ ಊರು ಪುತ್ತೂರಾಗಿದ್ದರೂ ಅತಿ ಹೆಚ್ಚು ಗರಡಿಗಳು ಕಾರ್ಕಳದಲ್ಲಿವೆ. ಗರಡಿಗಳಲ್ಲಿ ವರ್ಷಕ್ಕೊಮ್ಮೆ ನೇಮೋತ್ಸವ ಜರಗುವುದು.

ಜಾಮೀಯಾ

ಮಸೀದಿ ಕಾರ್ಕಳ ನಗರದಲ್ಲಿ ಮುಖ್ಯ ರಸ್ತೆಗೆ ಹೊಂದಿಕೊಂಡಂತೆ ಮುಸ್ಲೀಂ ಧರ್ಮೀಯರ ಪ್ರಾರ್ಥನಾ ಕೇಂದ್ರ ಜಾಮೀಯಾ ಮಸೀದಿಯಿದೆ. ನಗರ ಕೇಂದ್ರದಿಂದ ದೂರ : ಅರ್ಧ ಕಿ.ಮೀ.

ವರಂಗ ಬಸದಿ

ಹೆಬ್ರಿ ತಾಲೂಕಿನ ವರಂಗ ಬಸದಿ ಪ್ರವಾಸಿಗರನ್ನು ಆಕರ್ಷಿಸುವ ಕಾರ್ಕಳದ ಪ್ರಮುಖ ಧಾರ್ಮಿಕ ಕೇಂದ್ರಗಳಲ್ಲೊಂದು. ೧೦ ಎಕರೆ ವಿಸ್ತಾರವಾಗಿರುವ ಕೆರೆಯ ಮಧ್ಯದಲ್ಲಿ ಬಸದಿ ನಿರ್ಮಾಣವಾಗಿದ್ದು ಬಸದಿ ಸಂಪರ್ಕಿಸಲು ದೋಣಿಯನ್ನೇ ಅವಲಂಬಿಸಬೇಕಾಗಿದೆ. ವರಂಗ ರಾಜನ ಆಳ್ವಿಕೆಯಲ್ಲಿ ನಿರ್ಮಾಣವಾದ ಈ ಸ್ಥಳದಲ್ಲಿ ಹಿರೆ ಬಸದಿ, ಕೆರೆ ಬಸದಿ, ಮಠದ ಬಸದಿಗಳಿವೆ. ಪಾರ್ಶ್ವನಾಥ ತೀರ್ಥಕರ, ಪದ್ಮಾವತಿ ದೇವಿಯ ಮೂಲ ವಿಗ್ರಹವಿದೆ. ಚರ್ಮ ಸಂಬಂಧಿ ಕಾಯಿಲೆಗಳ ನಿವಾರಣೆಗೆ ಹುರುಳಿ ಮತ್ತು ಅಕ್ಕಿ ಸೇವೆ ಹರಕೆ ಸಲ್ಲಿಸುವುದು ಇಲ್ಲಿನ ವಿಶೇಷ. ಈ ಪುಣ್ಯ ಕ್ಷೇತ್ರದಲ್ಲಿ ತ್ರಿಕಾಲ ಪೂಜೆ ನಡೆಯುತ್ತಿದ್ದು, ಕರ್ನಾಟಕ ಮಾತ್ರವಲ್ಲದೇ ವಿವಿಧ ರಾಜ್ಯಗಳಿಂದ ‘ಕ್ತರು, ಪ್ರವಾಸಿಗರು ಇಲ್ಲಿಗಾಗಮಿಸುತ್ತಾರೆ. ಹೊಂಬುಜ ಮಠದ ಅಧೀನಕ್ಕೊಳಪಡುವ ಈ ಕ್ಷೇತ್ರ, ಶ್ರವಣಬೆಳಗೊಳದ ಈಗೀನ ಪೀಠಾಧೀಶರ ಹುಟ್ಟೂರು. ವರಂಗದಲ್ಲಿ ಬ್ರವರಿ ಹಸ್ತ ನಕ್ಷತ್ರದಲ್ಲಿ ವಾರ್ಷಿಕ ರಥೋತ್ಸವ ಜರಗುವುದು. ಸಂಪರ್ಕ ಸಂಖ್ಯೆ:

ಕಾರ್ಕಳ ನಗರಕೇಂದ್ರದಿಂದ ದೂರ: ೨೫ ಕಿ.ಮೀ. ಕಾರ್ಕಳದಿಂದ ಹೆಬ್ರಿಗೆ ೩೧ ಕಿ.ಮೀ., ಅಲ್ಲಿಂದ ಆಗುಂಬೆಗೆ ೧೯ ಕಿ.ಮೀ., ಆಗುಂಬೆಯಿಂದ ತೀರ್ಥಹಳ್ಳಿಗೆ ೩೨ ಕಿ.ಮೀ. ದೂರವಿದೆ. ಕಾರ್ಕಳದಿಂದ ಉಡುಪಿಗೆ ೩೮ ಕಿ.ಮೀ., ಮಂಗಳೂರಿಗೆ ೫೨ ಕಿ.ಮೀ., ಧರ್ಮಸ್ಥಳಕ್ಕೆ ೬೩ ಕಿ.ಮೀ., ಕಾರ್ಕಳದಿಂದ ಕಳಸಕ್ಕೆ ೭೧ ಕಿ.ಮೀ., ಕುದುರೆಮುಖ ೫೨ ಕೀ.ಮೀ. ದೂರವಿದೆ.

ಚಿತ್ರ : ದ್ವಾರಕಾ ನಿರಂಜನ್‌, ಪದ್ಮಪ್ರಸಾದ್‌ ಜೈನ್‌

ರಾಮಸಮುದ್ರ : ಚಿತ್ರ :ದ್ವಾರಕಾ ನಿರಂಜನ್

error: Content is protected !!
Scroll to Top